ಶ್ವೇತಪತ್ರ
shwethabc@gmail.com
ಮನುಷ್ಯನನ್ನು ಅತ್ಯಂತ ಸಂಕಟಕ್ಕೆ, ಭಯಕ್ಕೆ ಈಡುಮಾಡುವ ಸಂಗತಿ ಎಂದರೆ ಅದು ಪ್ರೀತಿಯ ಗೈರು. ಪ್ರೀತಿಯೊಂದು ಗೈರು ಹಾಜರಾದರೆ ಅದು ನಮ್ಮ ಸಂತೋಷವನ್ನು ಅಷ್ಟೇ ಏಕೆ ಆರೋಗ್ಯವನ್ನು ಕಸಿದುಕೊಂಡುಬಿಡುತ್ತದೆ.
ನಮ್ಮ ಬದುಕುಳಿಯುವಿಕೆಗಾಗಿ ನಾವು ಹುಟ್ಟಿದ ದಿನದಿಂದಲೂ ಪ್ರೀತಿ ಅತ್ಯಗತ್ಯ. ಪ್ರೀತಿಯ ಅಗತ್ಯತೆ ಎಷ್ಟು ಸಾರ್ವತ್ರಿಕವೆಂದರೆ ಅದು ಸಸ್ಯಕಾಶಿಗೂ ಅನ್ವಯಿಸಲ್ಪಡುತ್ತದೆ. ಯೂನಿವರ್ಸಿಟಿ ಆ- ಅಯೋವಾದಲ್ಲಿ ನಡೆಸಲಾದ ಸಂಶೋಧನೆ ಒಂದರಲ್ಲಿ ಪ್ರೀತಿಯ ಮಾತುಗಳಿಗೆ ಮರ- ಗಿಡಗಳು ಪ್ರತಿಕ್ರಿಯಿಸುತ್ತಾ ಸಕಾರಾತ್ಮಕವಾಗಿ ಬೆಳೆದದ್ದು ದಾಖಲಾಗಿದೆ. ತಾಯಿ ಕುಂತಿಯ ಪ್ರೀತಿಗೆ ವಿಧೇಯರಾಗಿ ಪಾಂಡವರು ದ್ರೌಪದಿಯನ್ನು ವರಿಸಿದ್ದು, ತಂದೆಗಾಗಿ ದೇವವ್ರತ ತನ್ನ ಗದ್ದುಗೆಯನ್ನು ಹಾಗೂ ಮದುವೆಯ ಸುಖವನ್ನು ತ್ಯಾಗ ಮಾಡಿ ಭೀಷ್ಮನಾದದ್ದು ಇದೇ ಪ್ರೀತಿಗಾಗಿ.
ಒಂದು ಹುಡುಗ ಮತ್ತು ಹುಡುಗಿ ಸ್ನೇಹಿತರಾಗಿದ್ದು ಕೊಂಡೆ ಪ್ರೀತಿಯನ್ನು ಸವಿಭಾವಿಸಬಹುದೆನ್ನುವುದಕ್ಕೆ ಕೃಷ್ಣ ಹಾಗೂ ದ್ರೌಪದಿಯ ಷರತ್ತು ಮೀರಿದ ಪ್ರೀತಿ ದ್ಯೋತಕ. ಇದು ನಮ್ಮ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಅವರಿಬ್ಬರೂ ಒಬ್ಬರಿಗೊಬ್ಬರು ವಿಶ್ವಾಸಾರ್ಹರಾಗಿದ್ದರು, ಆಪ್ತ ಸಲಹೆಗಾರ ರಾಗಿದ್ದರು, ರಕ್ಷಕರಾಗಿದ್ದರು. ಒಮ್ಮೆ ಶಿಶುಪಾಲನ ಜತೆಗಿನ ಜಗಳದಲ್ಲಿ ಕೃಷ್ಣನ ಕೈ ಬೆರಳು ಕೊಯ್ದು ರಕ್ತ ಒಸರುತ್ತಿದ್ದಾಗ ದ್ರೌಪದಿ ತನ್ನ ಸೀರೆಯ
ಅಂಚನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ ಬ್ಯಾಂಡೇಜ್ ರೂಪದಲ್ಲಿ.
ಮುಂದೆ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ಈ ದಯೆಯನ್ನು, ಪ್ರೀತಿಯನ್ನು ಕೃಷ್ಣ ಹಿಂತಿರುಗಿ ನೀಡುತ್ತಾನೆ. ಹೇಗೆಂದರೆ ಎಷ್ಟೇ ಎಳೆದರೂ ಕೊನೆಯಿಲ್ಲದ ಸೀರೆಯ ರೂಪದಲ್ಲಿ. ಇದೇ ಮಹಾಭಾರತದಲ್ಲಿ ಸಹಿಷ್ಣುತೆಯ ಪ್ರೀತಿಯನ್ನು ನಮಗೆ ತಿಳಿಸಿಕೊಡುವುದು ನಳ- ದಮಯಂತಿ ಯರು. ಜೂಜಿನಲ್ಲಿ ಎಲ್ಲವನ್ನು ಸೋತ ನಳ ಕಾಡಿಗೆ ಹೊರಡುತ್ತಾನೆ, ಅವನನ್ನು ಹಿಂಬಾಲಿಸುವ ಸತಿ ದಮಯಂತಿಯನ್ನು ತನ್ನ ಅಪರಾಽ ಮನೋ
ಭಾವದಿಂದ ಕಾಡಿನ ಮಧ್ಯದಲ್ಲಿಯೇ ಕೈಬಿಡುತ್ತಾನೆ.
ಏಕೆಂದರೆ ಆಕೆ ತನ್ನ ತಂದೆಯ ರಾಜ್ಯಕ್ಕೆ ಮರಳಿ ನೆಮ್ಮದಿಯಿಂದ ಯಾವ ನೋವುಗಳು ಇಲ್ಲದೆ ಬದುಕಲಿ ಎಂದು. ಇಷ್ಟಾಗಿಯೂ ನಳನೆಡೆಗಿನ ಪ್ರೀತಿ ದಮಯಂತಿಯನ್ನು ಮತ್ತೆ ತನ್ನ ತಂದೆಯ ರಾಜ್ಯಕ್ಕೆ ಹೋಗಲು ಬಿಡುವುದಿಲ್ಲ. ಆಕೆ ಕಾಡಿನಲ್ಲಿ ನಳನನ್ನು ಹುಡುಕುತ್ತಲೇ ಇರುತ್ತಾಳೆ. ಬೇರೆಯಾದ ಅನೇಕ ವರುಷಗಳ ನಂತರ ಆಕೆಯ ಪ್ರೀತಿ ಮತ್ತು ದೃಢತೆ ಅವಳನ್ನು ಪುನಃ ನಳನನ್ನು ಸೇರುವಂತೆ ಮಾಡುತ್ತದೆ. ಇನ್ನೊಂದು ವರುಷದಲ್ಲಿ ತನ್ನ
ಗಂಡ ಸಾಯುತ್ತಾನೆಂದು ಗೊತ್ತಿದ್ದರೂ ರಾಣಿ ಸಾವಿತ್ರಿ ಸತ್ಯವಾನನನ್ನು ಮದುವೆಯಾಗುತ್ತಾಳೆ. ಮುಂದೆ ಯಮಸತ್ಯವಾನನನ್ನು ಎಳೆದೊಯ್ಯುವಾಗ ಸಾವಿತ್ರಿ ಯಮನನ್ನು ಹಿಂಬಾಲಿಸಿ ತನ್ನ ಪ್ರೀತಿ, ಬುದ್ಧಿಶಕ್ತಿಯಿಂದ ಯಮನನ್ನು ಗೆದ್ದು ಅವನನ್ನು ಹಿಂಪಡೆಯುತ್ತಾಳೆ.
ಪ್ರೀತಿಯದು ವಿಶಾಲವಾದ ಆಯಾಮ, ಅದಮ್ಯವಾದ ಶಕ್ತಿ, ಮಾಂತ್ರಿಕ ಸೆಳೆತ. ಅದಕ್ಕೇ ಜಿಎಸ್ ಶಿವರುದ್ರಪ್ಪನವರು ಹೇಳಿದ್ದು: ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ? ಪ್ರೀತಿ ಇಲ್ಲದ ಮೇಲೆ ಮಾತಿಗೆ
ಮಾತು ಕೂಡೀತು ಹೇಗೆ? ಅರ್ಥ ಹುಟ್ಟೀತು ಹೇಗೆ? ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?’ ಎಂದು.
ನಮ್ಮ ಉಪಯುಕ್ತತೆಯನ್ನು ನಮಗೆ ತಿಳಿಸಿಕೊಡುವ ಸಾಧನ ಪ್ರೀತಿ. ಅದು ನಮ್ಮ ಆತ್ಮಗೌರವವನ್ನು ಆತ್ಮವಿಶ್ವಾಸವನ್ನು ಪೋಷಿಸುತ್ತದೆ. ನಮ್ಮನ್ನು ಯಾರೋ ಪ್ರೀತಿಸುತ್ತಾರೆ ಎನ್ನುವ ಸಂವೇದನೆ ನಮ್ಮಿಂದ ಅತ್ಯುತ್ತಮವಾದುದನ್ನು ಹೊರಹೊಮ್ಮಿಸುತ್ತದೆ. ಆರ್ಥಿಕವಾಗಿ ಅತ್ಯಂತ ಯಶಸ್ಸನ್ನು ಪಡೆದಿರುವ ಗಂಡಸಿಗೆ ತನ್ನ ಹೆಂಡತಿ ತನ್ನನ್ನು ತೊರೆದು ಹೋಗುತ್ತಿದ್ದಾಳೆ ಎಂಬುದು ತಿಳಿಯುತ್ತದೆ. ಅಲ್ಲಿಯವರೆಗೂ ಆಕೆಯ ಪ್ರೀತಿಯನ್ನು ಎಂದಿಗೂ ಗೌರವಿಸದ, ಕೃತಜ್ಞತೆಯಿಂದ ನೋಡದ ಅವನ ಮನೋಭಾವವೆಂದರೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ತಾನು ಕಟ್ಟಿರುವ ವ್ಯವಹಾರದ ಕೋಟೆಯೊಂದೇ ಸಾಕು ಎಂದು ಆತ ನಂಬಿರುತ್ತಾನೆ. ಇದ್ದಕ್ಕಿದ್ದ ಹಾಗೆ ಆ ನಂಬಿಕೆ ಮುರಿದು ಬೀಳುತ್ತದೆ.
ಪ್ರೀತಿ ಇಲ್ಲದ ಅವನಿಗೆ ನಿದ್ರೆ ಹತ್ತುತ್ತಿಲ್ಲ, ಊಟ ರುಚಿಸುತ್ತಿಲ್ಲ, ಆಲೋಚಿಸುವುದಕ್ಕೂ ಸಾಧ್ಯವಾಗುತ್ತಿಲ್ಲ, ಕೆಲಸ ಮಾಡಲಾಗುತ್ತಿಲ್ಲ. ಪ್ರೀತಿಯ ಹಿಂಪಡೆತ
ದೇಹ ಮನಸುಗಳೆರಡೂ ಕಾರ್ಯನಿರ್ವಹಿಸದಂತೆ ಕಟ್ಟಿ ಹಾಕಿಬಿಡುತ್ತದೆ. ಅತ್ಯುತ್ತಮವಾದ ಸಾಧನೆಗೆ ಅತ್ಯುತ್ತಮವಾದ ಪ್ರೀತಿಯೇ ಪೋಷಣೆ. ಪ್ರತಿದಿನವೂ ನಮ್ಮನ್ನು ಪ್ರೀತಿಸುವವರು ಇದ್ದಾರೆ ಎಂಬ ಮರುಭರವಸೆ ನಮ್ಮಲ್ಲೊಂದು ಮೌಲ್ಯವನ್ನು ಮೂಡಿಸುತ್ತ ನಮ್ಮ ಆತ್ಮಗೌರವವನ್ನು
ಹೆಚ್ಚಿಸುತ್ತದೆ. ಪ್ರೀತಿಯನ್ನು ಪಡೆಯುವ ಒಂದು ಮಾರ್ಗ ವೆಂದರೆ ಅದನ್ನು ಹಂಚುವುದು. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ ‘ಅ ಟoಠಿ ಟmmಟ್ಟಠ್ಠ್ಞಿಜಿಠಿqs ಠಿಟ ಜಜಿqಛಿ ಟqಛಿ ಜಿo Z ಟoಠಿ ಟmmಟ್ಟಠ್ಠ್ಞಿಜಿಠಿqs ಠಿಟ ಛ್ಚಿಜಿಛಿqಛಿ ಟqಛಿ’.
ಇತ್ತೀಚೆಗೆ ನನ್ನ ಮೋಟಿವೇಷನಲ್ ಸ್ಪೀಚ್ ಕೇಳಿದ ಸ್ಟೂಡೆಂಟ್ ಒಬ್ಬರಿಂದ ಮೇಲ್ ಬಂದಿತ್ತು- ‘ನಾನು ನಿಮಗೆ ಕೊಡುತ್ತಿರುವ ಈ ಪ್ರೀತಿ ಸೆಕೆಂಡ್ ಹ್ಯಾಂಡ್; ಏಕೆಂದರೆ ನಿಮ್ಮಿಂದ ಪ್ರೀತಿಯನ್ನು ನಾನು ಅದಾಗಲೇ ಅನುಭವಿಸಿದ್ದೇನೆ’ ಅಂತ. ಎಷ್ಟು ಚಂದಕ್ಕೆ ಪ್ರೀತಿಯನ್ನು ಅಭಿವ್ಯಕ್ತಿಸಿದ್ದ ಆ ಹುಡುಗ.
ರೋಗವನ್ನು ಪ್ರೀತಿಯಿಂದ ಗುಣಪಡಿಸುವುದಕ್ಕೆ ಮದರ್ ತೆರೆಸಾಗಿಂತ ಉತ್ತಮ ಉದಾಹರಣೆ ನಮ್ಮೆದುರಿಗಿಲ್ಲ. ಸೋತ ಕೈಗಳನ್ನು ಹಿಡಿದು ಆಕೆ ತೋರಿದ್ದು ದಯೆ, ತಬ್ಬಿ ಒರೆಸಿದ್ದು ಕಂಬನಿಯನ್ನು, ಅನಾರೋಗ್ಯವನ್ನು. ನಮ್ಮ ಸಂಪೂರ್ಣವಾದ ಯೋಗ ಕ್ಷೇಮದ ಮೂಲ ಅಂಶ ಪ್ರೀತಿ. ಅದು ನಮಗೆ ಸಹಕಾರಿ ಮತ್ತು ಉತ್ತೇಜಕ. ಬದುಕು ಬ್ಯಾಲೆನ್ಸ್ ಕಾಣುವುದು ಪ್ರೀತಿಯಲ್ಲೇ ತಾನೇ? ಪ್ರೀತಿಯೊಂದಿಗೆ ಅರಳಬೇಕಾದದ್ದು ಪಾಸಿಟಿವಿಟಿ.
ಪ್ರೀತಿಗೆ ಎರಡು ಮುಖ- ಒಂದು ಭೂಮಿಯೆಡೆಗೆ ತಿರುಗಿದ್ದರೆ ಮತ್ತೊಂದು ಆಕಾಶದೆಡೆಗೆ ಮುಖ ಮಾಡಿರುತ್ತದೆ. ಪ್ರೀತಿ ಅದೊಂದು ಸಮನ್ವಯ. ಕೆಸರಲ್ಲಿ ಅರಳಿದ ತಾವರೆಯಂತೆ. ಪ್ರೀತಿ ಹಾಗೆಂದರೇನು? ನಮ್ಮನ್ನೆಲ್ಲಾ ಸೆಳೆಯುವ ಒಂದು ದೊಡ್ಡ ಮಾಂತ್ರಿಕತೆ. ಅದರೊಳಗೊಂದು ಆಯಸ್ಕಾಂತದ
ಸೆಳೆತವಿದೆ, ಅದಕ್ಕೇ Zಜ್ಞಿಜ ಜ್ಞಿ ಟqಛಿ ಎನ್ನುವುದು. ಪ್ರೀತಿಯ ಸೆಳೆತದಿಂದ ತಪ್ಪಿಸಿಕೊಳ್ಳಲು ಯಾರಿಗಾದರೂ ಸಾಧ್ಯವೇ? ಪ್ರೀತಿಯ ಸೆಳೆತದ ಆಕರ್ಷಣೆಯೇ ಅಂಥದ್ದು. ಅದು ನಮ್ಮನ್ನು ತನ್ನೆಡೆಗೆ ಕರೆಸಿಕೊಳ್ಳುತ್ತದೆ. ಪ್ರೀತಿ ಅದೊಂದು ದೊಡ್ಡ ಪವಾಡ, ಅದು ನಮ್ಮಲ್ಲಿ ಮೂಡಿದ ಮರುಗಳಿಗೆ ನಾವು ಸಾಮಾನ್ಯರಾಗಿ ಉಳಿಯುವುದಿಲ್ಲ, ನಮ್ಮ ಪ್ರeಯೊಳಗೊಂದು ಅದ್ಭುತ ಬದಲಾವಣೆ ಮೂಡುತ್ತದೆ.
ಪ್ರೀತಿ ನಮ್ಮನ್ನು ಮಾರ್ಪಡಿಸುತ್ತದೆ. ಬುದ್ಧನ ಪ್ರೀತಿಗೆ ಕರಗಿದ ಡಕಾಯಿತ ಅಂಗುಲಿಮಾಲ ಭಿಕ್ಕುವಾದ ಕಥೆ ನಮ್ಮೆದುರಿಗೆ ಇದೆ. ಅಡಿಪಾಯವನ್ನು
ಎತ್ತರಿಸುವ, ಭೂಮಿ ಆಕಾಶವನ್ನು ಸಂಧಿಸುವ ಶಕ್ತಿ ಪ್ರೀತಿಗಿದೆ. ಪ್ರೀತಿಯು ನಮ್ಮೊಳಗಿನ ಅಧ್ಯಾತ್ಮ. ಪ್ರೀತಿ ಅದೊಂದು ಭಾವಪರವಶತೆ ಮತ್ತು ಪರಿವರ್ತನೆಯ ಶಕ್ತಿ. ಬದುಕು ಮತ್ತು ಬೆಳಕಿನ ನಡುವಿನ ಸೇತುವೆಯೇ ಪ್ರೀತಿ. ವಾಸ್ತವವನ್ನು ಅದಿರುವಂತೆ ಅರ್ಥೈಸುವುದಕ್ಕೆ ಸಾಧ್ಯವಾಗುವುದೇ ಪ್ರೀತಿಯ ಕಣ್ಣುಗಳಿಂದ. ಎಲ್ಲವನ್ನೂ ತರ್ಕದ ಆಧಾರದ ಮೇಲೆ ನೋಡುವುದಾದರೆ ನಮಗೆ ಅರ್ಥವಾಗುವುದು ಕೆಲವು ವಿಚಾರಗಳಷ್ಟೇ.
ಪ್ರೀತಿಯ ಕಣ್ಣುಗಳಿಂದ ನೋಡಿದಾಗ ಗೋಚರವಾಗುವುದು ಇಡೀ ಬ್ರಹ್ಮಾಂಡ. ಮನುಷ್ಯರ ಭಾಷೆಗಳಲ್ಲಿ ಪ್ರೀತಿಯೊಂದು ಮಹತ್ವದ ಪದ. ಏಕೆಂದರೆ ಪ್ರೀತಿ ನಮ್ಮೆಲ್ಲರ ಅಸ್ತಿತ್ವದ ಭಾಷೆ. ಪ್ರೀತಿಯ ಭಾಷೆಯೊಳಗೆ ಲೆಕ್ಕಾಚಾರಗಳಿಗೆ ಜಾಗವಿಲ್ಲ. ಅಲ್ಲಿ ಫಲಿತಾಂಶವನ್ನು ಕಂಡುಹಿಡಿಯಲಾಗುವುದಿಲ್ಲ. ಪ್ರತಿ ಮಗುವು ಅಗಾಧವಾದ ಪ್ರೀತಿಯ ಶಕ್ತಿಯೊಂದಿಗೆ ಜಯಿಸುತ್ತದೆ. ಮಗುವೆಂದರೆ ತುಂಬು ಪ್ರೀತಿ, ನಂಬಿಕೆ. ಇದೇ ಪ್ರೀತಿಯ ನಂಬಿಕೆಯಲ್ಲಿ ಮಗುವೊಂದು
ಹಾವಿನೊಂದಿಗೆ ಆಡಬಲ್ಲದು. ಆದರೆ ಮುಂದೆ ಇದೇ ಮಗುವಿಗೆ ನಾವು ಅನುಮಾನಿಸುವುದನ್ನು ಕಲಿಸುತ್ತೇವೆ.
ತರ್ಕಿಸುವುದು. ಸಂದೇಹಿಸುವುದು, ಎಚ್ಚರವಾಗಿರುವುದು ಹೀಗೆ ಎಲ್ಲವನ್ನೂ ಕಲಿಸುತ್ತೇವೆ. ಆಗ ಪ್ರೀತಿ ನಿಧಾನಕ್ಕೆ ಕಮರಿಬಿಡುತ್ತದೆ. ಇಂದು ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬರನ್ನು ನಂಬದಿರುವುದು ಹೇಗೆ? ಅನುಮಾನಿಸುವುದು ಹೇಗೆ? ಅವಮಾನಿಸುವುದು ಹೇಗೆ? ಎಂಬುದನ್ನು ನಾವೆಲ್ಲ ಕಲಿಯುತ್ತಿದ್ದೇವೆ. ಜತೆಗೆ ಮನುಷ್ಯರಿಗಿಂತ ವಸ್ತುಗಳೊಡನೆ ನಮ್ಮದು ಹೆಚ್ಚಿನ ಬಾಂಧವ್ಯ. ಮನುಷ್ಯರನ್ನು ಪ್ರೀತಿಸುತ್ತೇವೆ, ಆದರೆ ಅವರಿಗೊಂದು ಪಾತ್ರವನ್ನು ನೀಡಿ ಅವರನ್ನು ಕುಗ್ಗಿಸಿಬಿಡುತ್ತೇವೆ. ಪ್ರೀತಿಸುವುದಕ್ಕೆ ಶುರುವಿಟ್ಟ ಮರುಗಳಿಗೆ ಹಿಡಿತ ಸಾಧಿಸಲು ತೊಡಗುತ್ತೇವೆ. ಆಗ ಅಲ್ಲೊಂದು ಘರ್ಷಣೆ ಉದ್ಭವಿಸುತ್ತದೆ.
ಗಂಡ-ಹೆಂಡತಿ, ಅಕ್ಕ-ತಂಗಿ, ಅಪ್ಪ- ಮಗಳು ಇಲ್ಲಿ ನಾನು ಹೇಳಿದಂತೆ ನೀನು ಕೇಳಬೇಕು ಎಂಬ ವ್ಯಾಖ್ಯಾನವೇ ಹೆಚ್ಚು. ಪ್ರೀತಿ ಘಾಸಿಗೊಳ್ಳುವುದೇ ಎರಡು ವಿಚಾರಗಳಿಂದ- ಅದನ್ನು ಕೇವಲ ತರ್ಕದ ಆಧಾರದಲ್ಲಿ ನೋಡುವುದರಿಂದ ಹಾಗೂ ಅದರ ಅಗತ್ಯತೆಗಳನ್ನು ವಸ್ತುಗಳೊಡನೆ ಸಮೀಕರಿಸುವುದರಿಂದ. ನಾವು ಕಳೆದುಹೋಗುವುದೇ ಇಲ್ಲಿ. ಈ ಮರುಭೂಮಿ ಮತ್ತೆಂದೂ ಸಮುದ್ರವನ್ನು ಸೇರಲಾಗದಂತೆ, ಮರುಭೂಮಿಯಲ್ಲಿ ಚದುರಿ ಆವಿಯಾಗಿಬಿಡು
ತ್ತೇವೆ. ಅಲ್ಲಿಗೆ ನಮ್ಮ ಬದುಕೇ ಮುಕ್ತಾಯದ ಹಂತಕ್ಕೆ ಬಂದು ನಿಂತುಬಿಡುತ್ತದೆ. ಇಂದು ಪ್ರೀತಿಯನ್ನು ಕಳೆದುಕೊಂಡು ತರ್ಕಬದ್ಧರಾಗಿದ್ದೇವೆ.
ಜೀವಿಸುವುದನ್ನು ನಿಲ್ಲಿಸಿ ಸ್ಥಿರವಾದ ವಿನ್ಯಾಸಕ್ಕೆ ಅಂಟಿಕೊಂಡು ಪ್ರತಿ ಹೆಜ್ಜೆಯನ್ನು ಯೋಜಿಸುತ್ತಾ, ಯೋಚಿಸುತ್ತಾ ಬದುಕುತ್ತಿದ್ದೇವೆ. ಮಾರುಕಟ್ಟೆ ಯಲ್ಲಿರುವ ಸರಕುಗಳಂತೆ ಬರಿಯೇ ನಿಶ್ಶಬ್ದ. ಸಂಭ್ರಮ ಸೋತ ಬದುಕು ನಮ್ಮದಾಗಿದೆ. ಸರಕುಗಳನ್ನು ಆವರಿಸುತ್ತಾ ಪ್ರೀತಿಸುವುದನ್ನು ನಿಲ್ಲಿಸಿದ್ದೇವೆ. ಅದಕ್ಕೇ ಹೇಳಿದ್ದು, ಪ್ರೀತಿ ಪ್ರಾರ್ಥನೆಯಾಗಲಿ.