Sunday, 15th December 2024

ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ 

ತುಮಕೂರು: ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಅಧಿಕಾರದಿಂದ ಇಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ವಾಗಿದೆ. ಅಲ್ಲದೆ ಪಕ್ಷದ ಸೋಲಿಗೆ ಯತ್ನಾಳ್ ನಿರಂತರವಾಗಿ ಮಾತನಾಡಿದ್ದೂ ಒಂದು ಕಾರಣ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ  ವಾಗ್ದಾಳಿ ನಡೆಸಿದ್ದಾರೆ.
 ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಮೇಲೂ. ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಹಾದಿ-ಬೀದಿಯಲ್ಲಿ ಮಾತನಾಡಿದ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ಗೆದ್ರೆ ದೊಡ್ಡ ನಾಯಕನಾಗಿ ಹೊರಹೊಮ್ಮುತ್ತಾರೆ ಎಂದು ವಿಜಯೇಂದ್ರ ಅವರನ್ನು ಸೋಲಿಸಲು ಷಡ್ಯಂತ್ರ ಮಾಡಿದ್ರ. ಸೋಮಣ್ಣ ಅವರ ಸೋಲಿಗೆ ಯಡಿಯೂರಪ್ಪ ವಿಜಯೇಂದ್ರ ಕಾರಣರಲ್ಲ ಎಂದರು.
ಗೋವಿಂದರಾಜ ನಗರ ಕ್ಷೇತ್ರದಲ್ಲಿ ಫಲಿತಾಂಶ ತದ್ವಿರುದ್ಧ ಆಗಲಿದೆ ಎಂದು ತಿಳಿದು.ಸ್ವತಹ ಸೋಮಣ್ಣ ಅವರೇ, ಮೈಸೂರಿಗೆ ಹೋದರು. ಲಿಂಗಾಯತ ನಾಯಕ ರಾಗಬೇಕು ಮತ್ತು ಸಿಎಂ ಆಗಬೇಕೆಂದು ಹಗಲುಗನಸುಗಳ ಕಂಡು ಅಲ್ಲಿಗೆ ಹೋದರು ಎಂದು ಹೇಳಿದರು.
ಸೋಮಣ್ಣ ಅವರು ಕಾಂಗ್ರೆಸ್ ನಿಂದ ಬಂದಿದ್ದಾರೆ. ಯಡಿಯೂರಪ್ಪ ಕಟ್ಟಿ ಬೆಳೆಸಿದ ಬಿಜೆಪಿ ಬಗ್ಗೆ ಮಾತಾಡ್ಲಿಕ್ಕೆ ನಿಮಗೆ ಯಾವ ನೈತಿಕತೆ ಇದೆ.
ಸೋಮಣ್ಣ ನೀವು ಮೂಲ ಕಾಂಗ್ರೆಸ್ಸಿಗರು ನೀವೇನು ಹೋರಾಟ ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ರಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ತೊಲಗಬೇಕು, ಅಲ್ಲಿಯವರೆಗೆ ದೊಡ್ಡ ಹೋರಾಟ ಮಾಡ್ತಿವಿ. ಇದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ. ಜನಸಾಮಾನ್ಯರು ದಿನನಿತ್ಯ ಬಳಸುವ ವಸ್ತುಗಳ ದರ ಗಗನಕ್ಕೆರಿದೆ ಎಂದರು.
ನಿಮ್ಮ ಸರ್ಕಾರಕ್ಕೆ ಯಾವ ನೈತಿಕ ಹಕ್ಕು ಇದೆ. ಸರ್ಕಾರ ರಚನೆಯಾಗಿ 6 ತಿಂಗಳಾಗಿದೆ. ಇನ್ನು ಸರಕಾರ ಟೇಕ್ ಅಪ್ ಆಗಿಲ್ಲ ಎಂದು ಟೀಕಿಸಿದರು.
ಈ ವೇಳೆ ಮುಖಂಡ ಸದಾಶಿವಯ್ಯ ಇದ್ದರು.