Saturday, 14th December 2024

ನಾಲ್ವರು ಕ್ರೀಡಾಪಟುಗಳಿಗೆ ಅಭಿನಂದನೆ

ತುಮಕೂರು: ನವೆಂಬರ್ 15ರಿಂದ ಡಿಸೆಂಬರ್ 04ರವರೆಗೆ ದೆಹಲಿಯಲ್ಲಿ ನಡೆದ 66ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್ ಶಿಫ್ ಟೂರ್ನಿಯಲ್ಲಿ ಪದಕ ಪಡೆದು, ರಾಷ್ಟ್ರೀಯ ಆಯ್ಕೆ ತಂಡದ ಶಿಬಿರದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದ ನಾಲ್ವರು ಕ್ರೀಡಾಪಟುಗಳನ್ನು ಮಹಾತ್ಮಗಾಂಧಿ ಕ್ರೀಡಾಂಗಣ ದಲ್ಲಿ ಗೆಳೆಯರ ಬಳಗದವತಿಯಿಂದ ಅಭಿನಂದಿಸಲಾಯಿತು.
ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಇಂದು ಅಭಿನಂದನೆಗೆ ಒಳಗಾಗುತ್ತಿರುವ ಮಕ್ಕಳು ತುಮಕೂರು ಜಿಲ್ಲೆಗಲ್ಲ,ಇಡೀ ನಾಡೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಅವರ ಕ್ರೀಡಾಜೀವನ ಮತ್ತಷ್ಟು ಉಜ್ವಲವಾಗಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ತುಮಕೂರು ಜಿಲ್ಲೆ ಶೈಕ್ಷಣಿಕವಾಗಿ ಅಲ್ಲದೆ,ಕ್ರೀಡಾ ಕ್ಷೇತ್ರದಲ್ಲಿಯೂ ಅದ್ವಿತೀಯ ಸಾಧನೆ ಮಾಡಿದೆ ಎಂದರು.
ಈ ವೇಳೆ ಮುಂಜಾನೆ ಗೆಳೆಯರ ಬಳಗದ ಧನಿಯಕುಮಾರ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಕ್ಕಳ ಸಾಧನೆ ಹಾಗೂ ಮಹಾತ್ಮಗಾಂಧಿ ಕ್ರೀಡಾಂಗ ಣದ ಅವ್ಯವಸ್ಥೆ ಕುರಿತು ಮಾತನಾಡಿದರು.
ಮುಖಂಡರಾದ ನಟರಾಜ ಶೆಟ್ಟಿ, ಮಧು, ಮಹೇಶ್, ಸ್ವಾಮಿ, ವೆಂಕಟೇಶ್, ವಕೀಲರಾದ ವೆಂಕಟಾಚಲ, ವಿವೇಕಾ ನಂದ ಶೂಟಿಂಗ್ ಅಕಾಡೆಮಿಯ ಅನಿಲ್  ಉಪಸ್ಥಿತರಿದ್ದರು.