ಅಭಿಪ್ರಾಯ
ರಾಸುಮ ಭಟ್
ಅತಿಯಾದ ಆಧುನಿಕ ಜೀವನದಿಂದಾಗಿ ನಡೆದಾಡುವ ಅಭ್ಯಾಸವನ್ನು ಮರೆತಿರುವ ಜನರು ವಾಹನಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ೧೯ನೇ ಶತಮಾನದಲ್ಲಿ ಆರಂಭವಾದ ಕೈಗಾರಿಕೀಕರಣದಿಂದಾಗಿ ಹೊಸ ಹೊಸ ಆವಿಷ್ಕಾರಗಳಿಂದಾಗಿ ರೈಲು, ವಿಮಾನ ಮುಂತಾದವುಗಳ ಜನನ ವಾಯಿತು.
ಕಚ್ಚಾ ವಸ್ತುವಿನ ಭಾಗವಾದ ಪೆಟ್ರೋಲ್‌ನ್ನು ೧೮೯೩ರಲ್ಲಿ ಅಲ್ಟಾರಮನ್ ಕಾರ್ಲೋಸ್ ಕಂಡು ಹಿಡಿದ ನಂತರ ಹೆಬೆಯಿಂದ ಕಲ್ಲಿದ್ದಲನಿಂದ ಓಡುವ ಯಂತ್ರಗಳು ಕಡಿಮೆಯಾಗಿ ಪೆಟ್ರೋಲ್ ಮತ್ತು ಡೀಸಲ್ ವಾಹನಗಳ ಬಳಕೆ ಹೆಚ್ಚಾಯಿತು. ೨೦ನೇ ಶತಮಾನದ ಆರಂಭದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರ ಗಳಲ್ಲಿ ದೊಡ್ಡ ಪ್ರಮಾಣದ ಕಚ್ಚಾ ತೈಲ ನಿಕ್ಷೇಪಗಳು ಪತ್ತೆಯಾದ ಮೇಲೆ ಪೆಟ್ರೋಲ್‌ಗೆ ಚಿನ್ನದ ಬೆಲೆ ಬಂದು, ವಾಹನ ತಯಾರಿಕಾ ಕಾರ್ಖಾನೆಗಳು ಪ್ರಗತಿಗೆ ಬಂದವು ಮತ್ತು ಲಕ್ಷಾಂತರ ಜನಗಳಿಗೆ ಉದ್ಯೋಗ ಕೂಡ ದೊರಕಿತು. ಪ್ರಸ್ತುತ ವಾಹನಗಳ ತಯಾರಿಕಾ ಕಂಪನಿ ಗಳು ಜಗತ್ತಿನ ಜಿಡಿಪಿಗೆ ದೊಡ್ಡ ಕೊಡುಗೆ ನೀಡುತ್ತಿವೆ.
ಇಂದು ಕಚ್ಚಾ ತೈಲ ವ್ಯಾಪಾರ ತುಂಬಾ ಲಾಭದಾಯಕವಾಗಿದ್ದು, ಹಲವಾರು ರಾಷ್ಟಗಳು ತೈಲ ವ್ಯಾಪಾರದಿಂದ ಟ್ರಿಲಿಯನ್ ನಷ್ಟು ಹಣ ಸಂಪಾದಿಸಿ ಬೇರೆ ರಾಷ್ಟಗಳನ್ನು ನಿಯಂತ್ರಣ ಮಾಡುವ ಹಂತಕ್ಕೆ ಬೆಳೆದು ನಿಂತಿವೆ. ಮೊದಲು ಅರಬ್ ರಾಷ್ಟಗಳು ಕಚ್ಚಾ ತೈಲದ ಮೇಲೆ ಏಕಸ್ವಾಮ್ಯವನ್ನು ಸಾಧಿಸಿ ದ್ದವು, ನಂತರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅತಿದೊಡ್ಡ ತೈಲ ನಿಕ್ಷೇಪ ಪತ್ತೆಯಾಯಿತು ಮತ್ತು ಅಮೆರಿಕ ತನ್ನ ಆರ್ಥಿಕ ಹಾಗೂ ಮಿಲಿಟರಿ ಬಲದಿಂದ ಅರಬ್ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸಿದರ ಪರಿಣಾಮ ಇಂದು ಅಮೆರಿಕ ಅಂತರರಾಷ್ಟ್ರೀಯ ಕಚ್ಚಾ ಬೆಲೆಯನ್ನು ನಿಯಂತ್ರಣ ಮಾಡುತ್ತದೆ.
ಭಾರತದ ಅಭಿವೃದ್ಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ಜಗತ್ತಿನಲ್ಲಿ ಭಾರತ ಮೂರನೆ ಅತಿ ಹೆಚ್ಚು ಕಚ್ಚಾ ತೈಲ ಉಪಯೋಗಿಸುವ ರಾಷ್ಟವಾಗಿದ್ದು, ದಿನಕ್ಕೆ ೪೪,೮೯೦೦೦ ಬ್ಯಾರಲ್‌ನಷ್ಟು ಕಚ್ಚಾ ತೈಲ ಭಾರತದಲ್ಲಿ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ತೈಲ ಬೆಲೆ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸರಕಾರಗಳು ಕಚ್ಚಾತೈಲವನ್ನು ಅವಲಂಬಿಸಿವೆ.
ಭಾರತದಲ್ಲಿ ಕಚ್ಚಾ ತೈಲಗಳ ಬೆಲೆ ನಿಯಂತ್ರಣ ಮಾಡಿದರೆ ಅಭಿವೃದ್ಧಿಗೆ ಪೂರಕವಾಗಿದ್ದು, ದಿನ ನಿತ್ಯದ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ ೭೫ ಡಾಲರ್ ಗಳಿಗಿಂತ ಕಡಿಮೆಯಿರುವ ಕಾರಣ ಭಾರತದಲ್ಲಿ ಸಹ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಇಳಿಕೆ ಮಾಡಬಹುದಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಕೆಯಾದರೆ ಸಾಗಣೆ ವೆಚ್ಚ , ಬಸ್‌ಗಳ ದರ ಕಡಿಮೆಯಾಗಿ ವಸ್ತುಗಳ ಬೆಲೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ.ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಚ್ಚಾ ತೈಲದ ಮೇಲೆ ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಕಡಿಮೆಗೊಳಿಸಬಹುದಾಗಿದ್ದು, ಅದಷ್ಟು ಬೇಗ ಕೇಂದ್ರ ಸರಕಾರ ಕಚ್ಚಾ ತೈಲದ ಬೆಲೆಯನ್ನು ಕಡಿಮೆ ಮಾಡಬೇಕೆಂದು
ಅಗ್ರಹಿಸೋಣ.