ಬೆಂಗಳೂರು: ಸಿಲಿಕಾನ್ ಸಿಟಿಯ ‘ಕೇಕ್ ಶೋ’ ಇಂದಿನಿಂದ ಜನವರಿ 1, ೨೦೨೪ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಕೇಕ್ ಶೋ ಆಯೋಜಕ ಜಿ.ಮನೀಶ್ ತಿಳಿಸಿದ್ದಾರೆ.
ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದೆ.
‘ಕೇಕ್ ಶೋ’ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಕೆಯ ಕೆಲಸಗಳನ್ನು ನಡೆಸಲಾಗಿದೆ. ಪ್ರಾರಂಭದಲ್ಲಿ ಯಾವ ಥೀಮ್‌ನಲ್ಲಿ ಮಾಡಬೇಕು ಎನ್ನುವು ದರ ಬಗ್ಗೆೆ ಚಿಂತನೆ ನಡೆಸಿ, ಕೊನೆಯಲ್ಲಿ 3ಡಿ ಸಕ್ಕರೆ – ಕೇಕ್ ರಚನೆಗೆ ಒಂದು ಆಕಾರ ನೀಡಲಾಗುತ್ತದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಇದಕ್ಕಾಗಿ, ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್ – ಸಕ್ಕರೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
‘ಕೇಕ್ ಶೋ’ಕೇಕ್ ಪ್ರದರ್ಶನದಲ್ಲಿ ಸಂಸತ್ತಿನ ಸೊಬಗು, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ, ದಿ ನೇಕೆಡ್ ರೆಡ್ ವೆಲ್ವೆಟ್, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ, ಬದಲಾಗುತ್ತಿರುವ ಡಾಲ್ ಕೇಕ್, ಮೊಸಳೆ, ಬೀಚ್, ಬಸ್ ಮಾದರಿ ಸೇರಿದಂತೆ ಹಲವು ರೀತಿಯ ಕೇಕ್‌ಗಳು ಶೋ ನಲ್ಲಿ ಇರಲಿವೆ ಎಂದು ಹೇಳಿದ್ದಾರೆ.
ಸಂಜೆ ವೇಳೆ ತಂಪಾದ ವಾತಾವರಣ ಇರುತ್ತದೆ. ಈ ವೇಳೆ ಕೇಕ್‌ಗಳು ಕರಗದಂತೆ ಎಚ್ಚರ ವಹಿಸಲಾಗುತ್ತದೆ. ಅದಕ್ಕಾಗಿ ದಿನದ 24 ಗಂಟೆಗಳ ಕಾಲ ವಿದ್ಯುತ್ ದೀಪಗಳು ಬೆಳಗಲಿದೆ. ಇದರಿಂದ ಸಕ್ಕರೆ ಲೇಪವು ಕರಗುವುದಿಲ್ಲ. ದೀಪದಿಂದ ಬರುವ ಬಿಸಿಗೆ ಸಕ್ಕರೆ ಗಟ್ಟಿಯಾಗುತ್ತದೆ. ನಿತ್ಯ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 18 ದಿನ ಕೇಕ್ ಶೋ ಇರಲಿದೆ.