ಜೋಹಾನ್ಸ್ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ-20 ಸರಣಿ 1-1 ರಿಂದ ಸಮಬಲಗೊಂಡಿದೆ. ಎರಡನೇ ಪಂದ್ಯ ದಲ್ಲಿ ಹೀನಾಯವಾಗಿ ಸೋತು ಹಿನ್ನಡೆಯಲ್ಲಿದ್ದ ಭಾರತ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ್ದು, ನಾಯಕ ಸೂರ್ಯ ಕುಮಾರ್ ಮತ್ತು ಕುಲದೀಪ್ ಯಾದವ್ ಭರ್ಜರಿ ಪ್ರದರ್ಶನದಿಂದ 106 ರನ್ಗಳ ಗೆಲುವು ದಾಖಲಿಸಿದೆ.
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿ ದರು. ಪಂದ್ಯ ಆರಂಭದಲ್ಲಿ ಭಾರತ ಸ್ಪೋಟಕ ಪ್ರದರ್ಶನ ನೀಡಿತ್ತು. ಆರಂಭಿಕ ಜೋಡಿಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಕೇವಲ 2.1 ಓವರ್ನಲ್ಲಿ 29 ರನ್ಗಳನ್ನು ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದ್ದರು. ಆದರೆ, ಮೂರನೇ ಓವರ್ನಲ್ಲಿ ಕೇಶವ್ ಮಹಾರಾಜ್ ಸತತ ಎರಡು ಎಸೆತಗಳಲ್ಲಿ ಶುಭಮನ್ ಗಿಲ್ ಮತ್ತು ತಿಲಕ್ ವರ್ಮಾರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ನಲ್ಲೂ ಭಾರತ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ಸಿರಾಜ್ ಮೊದಲ ಓವರ್ ಮೇಡನ್ ಮಾಡಿದರೆ, ಎರಡನೇ ಓವರ್ನಲ್ಲಿ ವೇಗಿ ಮುಖೇಶ್ ಕುಮಾರ್, ಮ್ಯಾಥ್ಯೂ ಬ್ರಿಟ್ಜ್ ವಿಕೆಟ್ ಉರುಳಿಸಿದರು. 10 ಓವರ್ ವೇಳೆಗೆ ದಕ್ಷಿಣ ಆಫ್ರಿಕಾ 75 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಕುಲದೀಪ್ ಹಾಗೂ ಜಡೇಜಾ ಬೌಲಿಂಗ್ ದಾಳಿಗೆ ಉಳಿದ 5 ವಿಕೆಟ್ಗಳು 20 ರನ್ಗಳ ಅಂತರದಲ್ಲಿ ಪತನಗೊಂಡವು.
ನಾಯಕ ಐಡನ್ ಮಾರ್ಕ್ರಾಮ್ (25) ಮತ್ತು ಡೇವಿಡ್ ಮಿಲ್ಲರ್ (35) ಹೊರತು ಪಡಿಸಿ ಉಳಿದ ಆಟಗಾರರು ಎರಡಂಕಿಗಳಿಸಲು ಸಾಧ್ಯವಾಗಲಿಲ್ಲ.