Sunday, 15th December 2024

ಬಸವಚೇತನ ಚಂದ್ರಕಾಂತ ಬೆಲ್ಲದ ಅವರಿಗೆ ಜನ್ಮದಿನದ ಸಂಭ್ರಮ

ತನ್ನಿಮಿತ್ತ

ಸಿದ್ದಣ್ಣ ಲಂಗೋಟಿ

೧೯೭೨ರಲ್ಲಿ ನಾನು ಧಾರವಾಡಕ್ಕೆ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಬಂದೆ. ಬರಗಾಲದ ಜಿಯಾದ ವಿಜಾಪುರ ಜಿಲ್ಲೆಯಿಂದ ಬಂದ ನನಗೆ ಧಾರವಾಡ ಅದ್ಭುತ ವಾಗಿ ಕಂಡಿತು. ವಿದ್ಯಾರ್ಥಿ ಜೀವನದಲ್ಲಿ ವಿಜಾಪುರ ಜ್ಞಾನಯೋಗಾಶ್ರಮದಲ್ಲಿದ್ದು ಬಿ.ಎಸ್.ಸಿ ಓದುತ್ತಿರುವಾಗ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಆಗಾಗ ಪ್ರವಚನಕ್ಕೆ ಬಂದು ಹೋಗುತ್ತಿದ್ದ ನವಕಲ್ಯಾಣ ಮಠದ ತಪೋವನ ತಪಸ್ವಿ ಶ್ರೀ ಕುಮಾರ ಸ್ವಾಮಿಗಳು, ಕ್ರಾಂತಿಕಾರಿ ಬಸವತತ್ವ ಪ್ರವಚನ ಕಾರ ಶ್ರೀ ಲಿಂಗಾನಂದ ಸ್ವಾಮಿಗಳು ಮುಂತಾದವರ ಜ್ಞಾನ-ತತ್ವಜ್ಞಾನ ವಿಚಾರಗಳ ಚಿಂತನದೊಂದಿಗೆ ಬೆಳೆದೆ.

ವಿಜ್ಞಾನ ಪದವಿ ಪಡೆದು ತತ್ವಜ್ಞಾನ ಓದಲು ಧಾರವಾಡಕ್ಕೆ ಬಂದಾಗ, ಇಲ್ಲಿಯ ಕವಿಗಳು, ಸಾಹಿತಿಗಳ ದರ್ಶನ, ವಿಚಾರಧಾರೆಯ ಅವಕಾಶ ದೊರೆ ಯಿತು. ಬಸವತತ್ವಜ್ಞಾನವು ಭಾರತೀಯ ಪಾಶ್ಚಿಮಾತ್ಯ ತತ್ವeನಗಳಿಗಿಂತ ಶ್ರೇಷ್ಠವಾಗಿದೆ ಎಂಬ ಮನವರಿಕೆಯಾಯಿತು. ಇದು ಭಾರತೀಯ ದಾರ್ಶನಿಕ ಪರಂಪರೆಯ ಪರಮೋತ್ಕೃಷ್ಟ ಕೆನೆ (ಛಿZಞ) ಎಂದು ಅರಿವಾಯಿತು.

ಕರ್ನಾಟಕ ಕಾಲೇಜಿನಲ್ಲಿ ತತ್ವಶಾಸ ವಿಭಾಗದಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಆಗಾಗ ಲಿಂಗಾಯತ ಟೌನ್ಹಾಲ, ಕರ್ನಾಟಕ ವಿದ್ಯಾವರ್ಧಕ ಸಂಘ, ಸತ್ಯಾನ್ವೇಷಣ ಮಂದಿರ, ನವಕಲ್ಯಾಣ ಮಠಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಭಾಗವಹಿಸತೊಡಗಿದೆ. ಬಸವತತ್ವ ಜ್ಞಾನ ವನ್ನು ಸಂಪ್ರದಾಯವಾದಿ ಮಠಾಧೀಶರ ಹಾಗೂ ಕರ್ಮಠ ಪುರೋಹಿತ ಶಾಹಿಗಳ ಕಪಿಮುಷ್ಠಿಯಿಂದ ಹೊರತಂದು ದೇಶ-ವಿದೇಶಗಳಲ್ಲಿ ಪ್ರಸಾರಗೊಳ್ಳು ವಂತೆ ಮಾಡಬೇಕೆಂಬ ಅಂತಃಪ್ರೇರಣೆ ಪ್ರಬಲಗೊಂಡಾಗ ೧೯೭೭ ರಲ್ಲಿ ನವಕಲ್ಯಾಣಮಠದಲ್ಲಿ ಬಸವತತ್ವ ಪ್ರಚಾರ ಸಮಿತಿ ಪ್ರಾರಂಭಿಸಿ ಬಸವಗುರುಪ್ರಾರ್ಥನೆ, ವಚನ ಚಿಂತನ ಪ್ರಾರಂಭಿಸಿದೆವು.

ಪ್ರೊ.ಎಸ್.ವಿ. ಪಾಟೀಲ, ಟಿ. ಎಸ್. ಪಾಟೀಲರೊಂದಿಗೆ ಚರ್ಚಿಸಿದೆ. ಮುಂದುವರೆಯಲು ಪ್ರೋತ್ಸಾಹ ದೊರೆಯಿತು. ಹಿರಿಯರಾಗಿದ್ದ ಎಸ್.ವೈ. ಗಿಡ್ಡಣ್ಣವರ, ಪರ್ವತ ಗೌಡ ಪಾಟೀಲ, ಜಿ.ಎಂ. ಪಾಟೀಲ, ಹ.ದೇ. ಚಂದನ ಗೌಡರ, ಎನ್.ಪಿ. ಕಲಿವಾಳ, ಎಸ್.ಕೆ. ಚರಂತಿಮಠ, ಎಂ.ಟಿ. ಹಡಲಗಿ, ಕೆ.ವೈ. ಲಟ್ಟಿ, ಮಾರ್ಕಂಡೇಯ ದೊಡಮನಿ, ಎಸ್.ಎಂ. ವಿರಕ್ತಮಠ, ಎಸ್.ಎಂ. ಅಂಗಡಿ, ಸಂಗಣ್ಣ ಕುಪ್ಪಸ್ತ, ಎಸ್.ಟಿ. ಬ್ಯಾಹಟ್ಟಿ, ಎಸ್.ಬಿ. ಹಳಕಟ್ಟಿ,
ಎಸ್.ಎಸ್. ಭೂಸರಡ್ಡಿ, ಅಶೋಕ ಉಳ್ಳಾಗಡ್ಡಿ, ಪ್ರಕಾಶ ಅಂಗಡಿ, ಕೆ. ಯೋಗೇಶನ್ ಮುಂತಾದವರೊಂದಿಗೆ ಚರ್ಚಿಸಿ, ೧೯೭೯ರಲ್ಲಿ ನವಕಲ್ಯಾಣ ಮಠ ದಿಂದ ಲಿಂಗಾಯತ ಟೌನ್‌ಹಾಲ್‌ಗೆ ನಮ್ಮ ಸಂಸ್ಥೆಯ ಕಾರ್ಯಕಲಾಪಗಳನ್ನು ಸ್ಥಳಾಂತರಿಸಿದೆವು ‘ಬಸವತತ್ವ ಪ್ರಸಾರ ಸಂಸ್ಥೆ’ ರಜಿಸ್ಟರ್ ಮಾಡಿಸ ಲಾಯಿತು. ‘ವಚನಚಿಂತನ ಪ್ರಾರಂಭವಾಯಿತು.

ಹಾವೇರಿ, ಬ್ಯಾಡಗಿ, ಬೆಳಗಾವಿ, ಕೂಡಲಸಂಗಮ, ಜಮಖಂಡಿ ಮುಂತಾದಡೆ ಸಂಸ್ಥೆಯನ್ನು ಸ್ಥಾಪಿಸಿ ಕಾರ್ಯ ಪ್ರಾರಂಭಗೊಂಡಿತು. ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಬಿಡುವಿನ ಸಮಯವನ್ನು ಮೀಸಲಿಟ್ಟೆವು. ೧೯೮೦ ರಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿಯವರ
ಶತಮಾನೋತ್ಸವ ಅದ್ದೂರಿಯಾಗಿ ಆಚರಿಸುವ ಯೋಜನೆ ರೂಪಿಸಿದೆವು. ಆಗ ನಮಗೆ ಕ್ರಿಯಾಶೀಲ ವ್ಯಕ್ತಿತ್ವದ ಚಂದ್ರಕಾಂತ ಬೆಲ್ಲದ ಅವರು ದೊರೆತರು. ಶ್ರೀಯುತರನ್ನು ಸಂಸ್ಥೆಯ ಕಾರ್ಯಾಧ್ಯಕ್ಷರು ಪಾಟೀಲ, ಎನ್.ಪಿ.ಕಲಿವಾಳರು ಅಧ್ಯಕ್ಷರಾಗಿ ಇನ್ನಿತರ ಹಿರಿಯರ ಸಹಕಾರದಿಂದ ರಾಜ್ಯಾದ್ಯಂತ ಪ್ರವಾಸ ಯೋಜನೆ ರೂಪಿಸಲಾಯಿತು.

ವ್ಯಾಪಾರಿ ರಂಗದಲ್ಲಿ ಸಾಧನೆ ಮಾಡುತ್ತಿದ್ದ ಚಂದ್ರಕಾಂತ ಬೆಲ್ಲದ ಬಸವತತ್ವ ಪ್ರಸಾರ ಸಂಸ್ಥೆಗೆ ಕಾರ್ಯಾಧ್ಯಕ್ಷರಾಗಿ ಬಂದ ಮೇಲೆ ಕಾರ್ಯಕ್ರಮಗಳು ತೀವ್ರಗೊಂಡವು. ಧಾರವಾಡ ಕೇಂದ್ರವಾಗಿಸಿಕೊಂಡು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲ ಶ್ರೀಯುತರ ಜೀಪ್‌ದಲ್ಲಿ ಸಂಚಾರ ಪ್ರಾರಂಭವಾಯಿತು.
ಇವರ ನಿಕಟ ಪರಿಚಯ, ಅವರ ಮನೆತನದ ಇತಿಹಾಸ, ಕಾಯಕ ಮಾಡಿ ದುಡಿಯುತ್ತ ಬೆಳೆದದ್ದು ಎಲ್ಲ ವಿವರ ಹೇಳಿದರು. ಮೂಲತಃ ಕೊಕಟನೂರು ದೇಸಾಯಿಯವರ ಮನೆತನದ ಹಿನ್ನೆಲೆ ಉಳ್ಳವರು. ಇವರರ ಮುತ್ತಜ್ಜ ಸಂಗನ ಬಸಪ್ಪಜ್ಜನವರು ದೇಸಾಯಿ ಇವರು ಊರು ತೊರೆದು (ಬ್ರಿಟಿಷರ ಕಾಲದಲ್ಲಿ) ಸವದತ್ತಿಗೆ (ಪರಸಗಡ) ಬಂದು ಬೆಲ್ಲದ ವ್ಯಾಪಾರವನ್ನೇ ಕಾಯಕವಾಗಿಸಿಕೊಂಡದ್ದರಿಂದ ‘ಬೆಲ್ಲದ’ ಎಂಬ ಹೆಸರು ಬೆಳೆದು ಬಂದಿತು.

ಸಂಗನಬಸಪ್ಪನವರ ಮಗ ಚೆನ್ನಬಸವಪ್ಪನವರು ಇವರು ಶಂಭುಲಿಂಗನ ಬೆಟ್ಟದಲ್ಲಿ ಸಾಧನೆಗೈದು ಲಿಂಗೈಕ್ಯರಾದರು. ಇವರ ಮಗ ಗುರಪ್ಪನವರು ಧಾರವಾಡಕ್ಕೆ ಬಂದು ಅಡತಿ ಅಂಗಡಿ ಪ್ರಾರಂಭಿಸಿ, ಮೇಲೆ ಬಂದರು. ಗುರಪ್ಪನವರಿಗೆ ಚಂದ್ರಕಾಂತ ಹಾಗೂ ಶಿವಣ್ಣ (ಶಿವಪುತ್ರ) ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರು ಜನಿಸಿದರು. ಹಿರಿಮಗನಾದ ಚಂದ್ರಕಾಂತ ಪ್ರಾಥಮಿಕ ಶಾಲೆ ಬಾಸೆಲ್ ಮಿಶನ್, ಪ್ರಾಥಮಿಕ ಶಾಲೆ ನಂತರ ಆರ್‌ಎಲ್ಎಸ್
ಹೈಸ್ಕೂಲಿನಲ್ಲಿ ಓದಿ, ೯ನೆಯ ವರ್ಗಕ್ಕೆ ಶಾಲೆ ಬಿಟ್ಟು, ತಂದೆಯವರೊಂದಿಗೆ ದಲ್ಲಾಳಿ ಅಂಗಡಿ ಕಾಯಕದಲ್ಲಿ ನಿರತ ರಾದರು. ಯೌವನದಲ್ಲಿ ಅವರು ಪಟ್ಟ ಪರಿಶ್ರಮ, ಕಾಯಕ ನಿಷ್ಠೆ ಅವರನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಿತು.

ಧಾರವಾಡದ ಪ್ರಸಿದ್ಧ ಮೆಣಸಿನಕಾಯಿ ಮನೆತನದ ತಾಯಿ ಗೌರಮ್ಮಳ ಮಾತೃವಾತ್ಸಲ್ಯ ತಂದೆ ಗುರಪ್ಪನವರ ಪಿತೃ ವಾತ್ಸಲ್ಯ, ಗುರುಹಿರಿಯರ ಬಗೆಗಿನ ಗೌರವ ಬಸವಶರಣರ ಮೇಲಿನ ಭಕ್ತಿ ಅವರ ಸಾಧನೆಗೆ ಬೆನ್ನೆಲುಬಾಗಿದ್ದವು. ೧೯೬೩ರಲ್ಲಿಯೇ ಹಸಿರು ಕ್ರಾಂತಿಗೆ ಆದ್ಯತೆ ನೀಡಿ ‘ಬೆಲ್ಲದ ಆಂಡ್ ಕಂಪನಿ’ ಹೆಸರು ಮಾಡಿತು. ‘ಕಾಯಕವೇ ಕೈಲಾಸ’ ಎಂಬ ಬಸವ ವಾಣಿಯು ಮಂತ್ರವಾಯಿತು. ನಾಡಿನ ಕೃಷಿಕರ ಗಮನ ಸೆಳೆದರು.

ಮನ ಶುದ್ಧವಿಲ್ಲದವರಿಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮೀತಾನೇ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ|| ಶರಣೆ ಲಕ್ಕಮ್ಮಳ ವಚನದ ಆದರ್ಶ ಇವರ ಬದುಕಿನಲ್ಲಿ ಸಾರ್ಥಕವಾಯಿತು. ಕಾಯಕ ಜೀವನದೊಂದಿಗೆ ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡರು. ಧಾರವಾಡ ಹುಬ್ಬಳ್ಳಿಯ ಸಂಘ-ಸಂಸ್ಥೆಗಳಲ್ಲಿ ಸೇವೆ, ರಾಜ್ಯಮಟ್ಟದ ಸಂಘಟನೆಗಳಲ್ಲಿ
ಕ್ರಿಯಾಶೀಲರಾಗಿ ದುಡಿದರು. ನಮ್ಮ ಬಸವತತ್ವ ಪ್ರಸಾರ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಶತಮಾನೋತ್ಸವ ರಾಷ್ಟ್ರಮಟ್ಟದಲ್ಲಿ ಹೆಸರಾಗುವಂತೆ ಆಚರಿಸಲು ಶಕ್ತಿಯಾಗಿ ದುಡಿದರು.

ಸಮಾಜೋ ಧಾರ್ಮಿಕ ಸೇವೆಯ ಫಲವಾಗಿ, ಧಾರವಾಡದ ವಿದ್ಯಾವಂತ ಪ್ರಜ್ಞಾವಂತ ಜನರ ಮನಗೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಶಾಸಕರಾಗಿ ೧೯೮೪ರಲ್ಲಿ ಆರಿಸಿ ಬಂದರು. ಇಂದು ಬಿಜೆಪಿಯ ಹಿರಿಯ ಉಪಾಧ್ಯಕ್ಷರಾಗಿ, ಶಾಸಕರಾಗಿ, ಗಡಿನಾಡು ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷರಾಗಿ, ಶಾಸಕರಾಗಿ
ಕ್ರಿಯಾಶೀಲ ಸೇವೆ ಮಾಡಿ ಈಗ ಕ.ವಿ.ವಿ. ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರಾಗಿದ್ದಾಗಲೇ ಕನ್ನಡ ನಾಡು-ನುಡಿಯ ಅಭಿಮಾನ, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಗೋಕಾಕ ಚಳುವಳಿಯ ಹೋರಾಟದಲ್ಲಿ ಡಾ|| ಪಾಟೀಲ ಪುಟ್ಟಪ್ಪನವರು, ಪ್ರೊ. ಚಂದ್ರಶೇಖರ ಪಾಟೀಲ, ರಾಮ ಜಾಧವ, ಚೆನ್ನವೀರ ಕಣವಿ, ಚಿತ್ರನಟ ರಾಜಕುಮಾರ ಮುಂತಾದವರೊಂದಿಗೆ ದುಡಿದರು. ನಾಡಿನಾದ್ಯಂತ ಶಾಸಕನಾದ ನಂತರದಲ್ಲಿ ಬಸವತತ್ವ ಸಮ್ಮೇಳನಗಳು ರಾಜಧಾನಿ ಬೆಂಗಳೂರಿನಲ್ಲಿ ಬಸವಜಯಂತಿ ಶರಣರ ಕ್ಷೇತ್ರ ಗಳಲ್ಲಿ ವಚನ ಸಂಗೀತೋತ್ಸವ, ಕಲಾಸಮ್ಮೇಳನಗಳು ಅದ್ದೂರಿಯಾಗಿ ಜರುಗುವಂತೆ ಕ್ರಿಯಾಚೇತನರಾಗಿ ದುಡಿದರು. ಇಂದಿಗೂ ದುಡಿಯುತ್ತಿದ್ದಾರೆ.

‘ಮಾಡಿದೆನೆಂಬುದ ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ಎಂಬ ಬಸವವಾಣಿಯಂತೆ ಕಿಂಕರ ಭಾವದಿಂದ ಸಮಾಜ ಶಿವನ ಸೇವೆಯಲ್ಲಿ ನಿರತರಾಗಿದ್ದಾರೆ. ಪತ್ನಿ ಲೀಲಕ್ಕನವರು ಬೆಲ್ಲದ ಅವರ ಧಿಃಶಕ್ತಿಯಾಗಿದ್ದಾರೆ.  ಬಸವತತ್ವ ಆಧಾರಿತವಾಗಿ ಮಕ್ಕಳ ಕಲ್ಯಾಣಮಹೋತ್ಸವ ನೆರವೇರಿಸಿ ದ್ದಾರೆ. (ಪೂಜ್ಯ ಚಿತ್ತರಗಿ ಇಳಕಲ್ ಮಹಾಂತ ಸ್ವಾಮಿಗಳ ನೇತೃತ್ವದಲ್ಲಿ) ೮೫ ವರುಷ ಪೂರೈಸಿ, ಶತಮಾನೋತ್ಸವದತ್ತ ಮುನ್ನಡೆಯುತ್ತಿರುವ ಬೆಲ್ಲದ ಅವರು ನಮ್ಮ ನಾಡಿನ ಬಸವಚೇತನವಾಗಿದ್ದಾರೆ.