ನವದೆಹಲಿ: ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಮತ್ತು ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ ಆಗಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಉಜ್ಜೀವನ್ ಎಸ್‌ಎಫ್‌ಬಿ), ಜೀವ ವಿಮಾ ಉತ್ಪನ್ನಗಳ ವಿತರಣೆಗಾಗಿ ಬ್ಯಾಂಕಶ್ಯೂರೆನ್ಸ್ ಪಾಲುದಾರಿಕೆಯನ್ನು ಘೋಷಿಸಿವೆ.
ಈ ಸಹಭಾಗಿತ್ವದ ಅಡಿಯಲ್ಲಿ, ಉಜ್ಜೀವನ್ ಎಸ್‌ಎಫ್‌ಬಿ, ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್‌ನ ಗ್ರಾಹಕ-ಸ್ನೇಹಿ ರಕ್ಷಣೆ, ದೀರ್ಘಾವಧಿಯ ಉಳಿತಾಯ ಮತ್ತು ನಿವೃತ್ತಿ ಉತ್ಪನ್ನಗಳ ಸಂಪೂರ್ಣ ಪ್ಯಾಕ್ ಅನ್ನು ತನ್ನ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 700ಕ್ಕೂ ಹೆಚ್ಚು ಶಾಖೆಗಳ ವ್ಯಾಪಕ ಜಾಲದ ಮೂಲಕ ಗ್ರಾಹಕರಿಗೆ ತಲುಪಿಸುತ್ತದೆ. ಜೀವ ವಿಮೆಯು ಯಾವುದೇ ಹಣಕಾಸು ಯೋಜನೆಯ ನಿರ್ಣಾಯಕ ಅಂಶವಾಗಿದೆ. ಆದ್ದರಿಂದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಗ್ರಾಹಕರ ವಿವಿಧ ಜೀವನ-ಹಂತದ ಅವಶ್ಯಕತೆಗಳಿಗೆ ಸರಿಹೊಂದುವಂತೆ ಉತ್ಪನ್ನಗಳ ಗುಂಪನ್ನು ಅಭಿವೃದ್ಧಿಪಡಿಸಿದೆ.
ದುಡಿದು ತರುವ ವ್ಯಕ್ತಿಯನ್ನು ಕಳೆದುಕೊಂಡ ನಷ್ಟದ ಸಂದರ್ಭದಲ್ಲಿ ಸಂರಕ್ಷಣಾ ಉತ್ಪನ್ನಗಳು ಬದಲಿ ಆದಾಯವಾಗಿ ಕಾರ್ಯನಿರ್ವಹಿಸಬಹುದು. ದೀರ್ಘಾವಧಿಯ ಉಳಿತಾಯ ಉತ್ಪನ್ನಗಳು ಗ್ರಾಹಕರಿಗೆ ಉಳಿತಾಯ ಸಂಗ್ರಹ ನಿರ್ಮಿಸಲು ಅಥವಾ ಆದಾಯದ ಪೂರಕ ಮೂಲವನ್ನು ಸೃಷ್ಟಿಸಲು ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿವೃತ್ತಿ ಯೋಜನೆ ಉತ್ಪನ್ನಗಳು ಗ್ರಾಹಕರು ಆರ್ಥಿಕವಾಗಿ ಸ್ವತಂತ್ರ ನಿವೃತ್ತ ಜೀವನ ವನ್ನು ನಡೆಸಲು ಖಾತರಿಪಡಿಸಿದ ಜೀವಿತಾವಧಿಯ ಆದಾಯ ಪಡೆಯುವುದನ್ನು ಖಚಿತಪಡಿಸುತ್ತದೆ.
ಶುದ್ಧ ರಕ್ಷಣೆಯ ಉತ್ಪನ್ನಗಳಲ್ಲಿ, ಐಸಿಐಸಿಐ ಪ್ರುಯಿಪ್ರೊಟೆಕ್ಟ್ ಸ್ಮಾರ್ಟ್ ಮತ್ತು ಐಸಿಐಸಿಐ ಪ್ರುಯಿಪ್ರೊಟೆಕ್ಟ್‌ರಿಟರ್ನ್ ಪ್ರೀಮಿಯಂಗಳು ಲಭ್ಯವಿರುತ್ತದೆ. ಅದರಿಂದ ಗ್ರಾಹಕರು ಅನುಕೂಲಕರವಾಗಿ ಐಸಿಐಸಿಐ ಪ್ರು ಗಿಫ್ಟ್ ಪ್ರೋ, ಐಸಿಐಸಿಐ ಪ್ರು ಗೋಲ್ಡ್ ಮತ್ತು ಐಸಿಐಸಿಐ ಪ್ರು ಸಿಗ್ನೇಚರ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ. ಇವುಗಳು ದೀರ್ಘಾವಧಿಯಲ್ಲಿ ಉಳಿತಾಯದ ಸಂಗ್ರಹವನ್ನು ನಿರ್ಮಿಸಲು ಅನುವು ಮಾಡಿಕೊಡುವ ಉತ್ಪನ್ನಗಳಾಗಿವೆ. ಜೊತೆಗೆ, ಐಸಿಐಸಿಐ ಪ್ರು ಖಾತರಿ ಪಿಂಚಣಿ ಯೋಜನೆ ಫ್ಲೆಕ್ಸಿ ಉತ್ಪನ್ನವು ಉಜ್ಜೀವನ್ ಎಸ್‌ಎಫ್‌ಬಿ ಗ್ರಾಹಕರಿಗೆ ತಮ್ಮ ನಿವೃತ್ತಿಗಾಗಿ ವ್ಯವಸ್ಥಿತವಾಗಿ ಯೋಜನೆ ರೂಪಿಸಲು ಸಹಾಯ ಮಾಡುತ್ತದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಂಡಿ ಮತ್ತು ಸಿಇಓ ಶ್ರೀ ಇಟ್ಟಿರಾ ಡೇವಿಸ್ ಮಾತನಾಡುತ್ತಾ, “ಭಾರತದ ಪ್ರಮುಖ ಜೀವ ವಿಮಾ ಕಂಪನಿಯಾದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಮಹತ್ವಾಕಾಂಕ್ಷೆಯುಳ್ಳ ಮಧ್ಯಮ ವರ್ಗದವರಿಗೆ ವಿಮಾ ಪರಿಹಾರಗಳ ಲಭ್ಯತೆಯನ್ನು ಹೆಚ್ಚಿಸುವುದು, ಅವರ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಅನುವು ಮಾಡಿ ಕೊಡುವುದು ನಮ್ಮ ಗುರಿಯಾಗಿದೆ. ನಮ್ಮ ವಿಶಾಲ ನೆಟ್‌ವರ್ಕ್, ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್‌ನ ಸಮಗ್ರ ಪರಿಹಾರಗಳೊಂದಿಗೆ ವಿಮಾ ಸೇವೆಗಳ ಬೇಡಿಕೆಯ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ಗ್ರಾಹಕರಿಗೆ ವಿಮಾ ಪರಿಹಾರಗಳನ್ನು ನೀಡುವಲ್ಲಿ ನಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ.
ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್, ನಿರ್ದೇಶಕ ಮತ್ತು ಸಿಇಓ, ಶ್ರೀ ಅನುಪ್ ಬಾಗ್ಚಿ, “ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ ಮತ್ತು ಈ ಪಾಲುದಾರಿಕೆಯು ಬ್ಯಾಂಕಿನ ಗ್ರಾಹಕರ ಜೀವ ವಿಮಾ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಗ್ರಾಹಕ-ಸ್ನೇಹಿ ಉತ್ಪನ್ನಗಳ ಗುಂಪು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಕೊಡುಗೆಗಳಿಗೆ ಪೂರಕವಾಗಿವೆ ಮತ್ತು ಅದರ ಗ್ರಾಹಕರು ತಮ್ಮ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡುತ್ತಾ ಅವರು, “ಜೀವ ವಿಮೆಯು ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಮೂಲಕ ಸಮಾಜದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾದ ಗ್ರಾಹಕರಿಗೆ ಸರಿಯಾದ ಬೆಲೆಗೆ ಸರಿಯಾದ ಉತ್ಪನ್ನ ಒದಗಿಸುವ ನಮ್ಮ ಗುರಿಯನ್ನು ಸಾಧಿಸಲು ನಾವು ಐಸಿಐಸಿಐ ಪ್ರು ಸ್ಟಾಕ್ ಅನ್ನು ಪರಿಚಯಿಸಿದ್ದೇವೆ, ಇದು ಡಿಜಿಟಲ್ ಸಾಮರ್ಥ್ಯಗಳನ್ನು ಹೊಂದಿರುವ ಉತ್ಪನ್ನವಾಗಿದೆ. ಇದು ನಮ್ಮ ವಿತರಣಾ ಪಾಲುದಾರರನ್ನು ಗ್ರಾಹಕರ ವಿಭಾಗ, ಪ್ರಮುಖ ಉತ್ಪಾದನೆ, ಗ್ರಾಹಕರ ಅಗತ್ಯಗಳ ಉತ್ತಮ ತಿಳುವಳಿಕೆ, ಸೂಕ್ತವಾದ ಉತ್ಪನ್ನ ಪ್ರತಿಪಾದನೆಗಳೊಂದಿಗೆ ಶಕ್ತಗೊಳಿಸುತ್ತದೆ ಮತ್ತು ಹೆಚ್ಚಿನ ದಕ್ಷತೆ ಮತ್ತು ಉತ್ಪಾದಕತೆಗೆ ಕಾರಣವಾಗುವ ಸಂತೋಷಕರ ಸಂಪೂರ್ಣ ಡಿಜಿಟಲ್ ನಿರ್ವಹಣೆಯ ಪ್ರಯಾಣವನ್ನು ಒದಗಿಸುತ್ತದೆ” ಎಂದು ತಿಳಿಸಿದ್ದಾರೆ.
“ಐಸಿಐಸಿ ಪ್ರು ಸ್ಟಾಕ್ ಚುರುಕಿನ ಗ್ರಾಹಕರ ವಿಭಾಗವನ್ನು ಜಾಗೃತಗೊಳಿಸಲು ಮತ್ತು ಗ್ರಾಹಕರಿಗೆ ಟರ್ಮ್ ಬೈ ಇನ್ವೈಟ್ (ಅವಧಿಯ ವಿಮಾ ಉತ್ಪನ್ನಗಳು) ಮತ್ತು ಇನ್ಶೂರೆನ್ಸ್ ಬೈ ಇನ್ವೈಟ್ (ದೀರ್ಘಾವಧಿಯ ಉಳಿತಾಯ ಉತ್ಪನ್ನಗಳು) ಕೊಡುಗೆಗಳನ್ನು ವಿಸ್ತರಿಸಲು ನಮಗೆ ಸಾಧ್ಯವಾಗಿಸಿದೆ.
ಗಮನಾರ್ಹವಾಗಿ, ಸ್ಟಾಕ್ ಗ್ರಾಹಕರಿಗೆ ವಾಸ್ತವಿಕವಾಗಿ ಪೇಪರ್‌ಲೆಸ್ ಖರೀದಿ ಅವಕಾಶ ಒದಗಿಸುತ್ತದೆ ಮತ್ತು ನಾವು ಈಗ ವ್ಯಾಪಾರದ ಉಳಿತಾಯದ ಮಾರ್ಗಕ್ಕಾಗಿ ಅದೇ ದಿನ ಪಾಲಿಸಿಗಳನ್ನು ನೀಡಬಹುದಾಗಿದೆ” ಎಂದು ಅವರು ಹೇಳಿದ್ದಾರೆ.
“ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಂತಹ ಸಣ್ಣ ಹಣಕಾಸು ಬ್ಯಾಂಕ್‌ಗಳು ದೇಶದಲ್ಲಿ ಜೀವ ವಿಮೆ ಸಂಪೂರ್ಣ ವ್ಯಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೀವ ವಿಮಾ ಉತ್ಪನ್ನಗಳ ಲಭ್ಯತೆಯನ್ನು ವಿಸ್ತರಿಸುವ ಮೂಲಕ ಸಣ್ಣ ಹಣಕಾಸು ಬ್ಯಾಂಕುಗಳು, ವ್ಯಕ್ತಿಗಳು ಮತ್ತು ಕುಟುಂಬಗಳನ್ನು ಆರ್ಥಿಕ ಭದ್ರತೆ ಮೂಲಕ ಸಬಲಗೊಳಿಸಬಹುದಾಗಿದೆ” ಎಂದು ಅವರು ಹೇಳಿದ್ದಾರೆ.