Monday, 25th November 2024

ಭೀಮಾ ಕೋರೆಗಾಂವ್ ಆಯೋಗದ ಗಡುವು ವಿಸ್ತರಣೆ

ಡಿ.31ರ ಮುನ್ನ ವರದಿ ಸಲ್ಲಿಸಲು ಸೂಚನೆ

ಮುಂಬೈ: ಭೀಮಾ ಕೋರೆಗಾಂವ್ ಜಾತಿ ಸಂಘರ್ಷದ ಪ್ರಕರಣದ ತನಿಖೆ ಪೂರ್ಣಗೊಳಿಸಲು ಭೀಮಾ ಕೋರೆಗಾಂವ್ ಆಯೋಗಕ್ಕೆ ನೀಡಲಾಗಿದ್ದ ಅಂತಿಮ ಗಡುವನ್ನು ಮಹಾರಾಷ್ಟ್ರ ಗೃಹ ಇಲಾಖೆ ವಿಸ್ತರಿಸಿದ್ದು, ಡಿಸೆಂಬರ್ 31ರ ಮುನ್ನ ವರದಿ ಸಲ್ಲಿಸುವಂತೆ ಸೂಚಿಸಿದೆ.

2018 ಜನವರಿ 1ರಂದು ಪುಣೆ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿ ಸಂಭವಿಸಿದ ಜಾತಿ ಸಂಘರ್ಷದ ತನಿಖೆ ನಡೆಸುತ್ತಿರುವ ಇಬ್ಬರು ಸದಸ್ಯರ ಈ ಆಯೋಗಕ್ಕೆ ಈ ಹಿಂದಿನ ಗಡು ವಿಸ್ತರಣೆ ಎಪ್ರಿಲ್ 8ಕ್ಕೆ ಅಂತ್ಯಗೊಂಡಿತ್ತು. ಸರಕಾರದ ಆದೇಶದ ಮೂಲಕ ಆಯೋಗಕ್ಕೆ 7ನೇ ಹಾಗೂ ಕೊನೆಯ ಬಾರಿ ಗಡುವನ್ನು 2020 ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.

ಗಡು ವಿಸ್ತರಣೆಯ ಅವಧಿಯ ಒಳಗೆ ವರದಿ ಸಲ್ಲಿಸಬೇಕು ಎಂದು ಗೃಹ ಇಲಾಖೆಯ ಉಪ ಕಾರ್ಯದರ್ಶಿ ವಿ.ಎಂ. ಭಟ್ ಆದೇಶಿಸಿದ್ದಾರೆ.