ವಾಷಿಂಗ್ಟನ್: ಅಮೆರಿಕದಲ್ಲಿ ಆಯಪಲ್ ವಾಚ್ ಮಾರಾಟ ನಿಷೇಧಿಸುವ ಆದೇಶ ಜಾರಿಯಾಗದಂತೆ ಮಾಡುವ ಆಯಪಲ್ನ ಪ್ರಯತ್ನಗಳು ವಿಫಲ ವಾಗಿವೆ.
ಎರಡು ಆಯಪಲ್ ವಾಚ್ ಮಾದರಿಗಳಾದ ಆಯಪಲ್ ವಾಚ್ ಸೀರಿಸ್ 9 ಮತ್ತು ಆಪಲ್ ವಾಚ್ ಅಲ್ಟ್ರಾ 2 ಅನ್ನು ತನ್ನ ವೆಬ್ಸೈಟ್ನಲ್ಲಿ ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸುವುದಾಗಿ ತಿಳಿಸಿತ್ತು. ಆದರೆ, ಹಳೆಯ ಮಾದರಿಯ ವಾಚ್ಗಳ ಮಾರಾಟವನ್ನು ಮುಂದುವರಿಸಲಿದೆ.
ಆಯಪಲ್ ವಾಚ್ನಲ್ಲಿರುವ ಬ್ಲಡ್ ಆಕ್ಸಿಜನ್ ಸೆನ್ಸರ್ ತಂತ್ರಜ್ಞಾನವು ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆ ತಯಾರಿಸುವ ಕಂಪನಿಯಾದ ಮಾಸಿಮೊದ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂದು ಇಂಟರ್ ನ್ಯಾಷನಲ್ ಟ್ರೇಡ್ ಕಮಿಷನ್ ಆದೇಶಿಸಿದೆ. ಹೀಗಾಗಿ ಅಮೆರಿಕದಲ್ಲಿ ಈ ತಂತ್ರಜ್ಞಾನ ಹೊಂದಿರುವ ಆಯಪಲ್ ವಾಚ್ಗಳ ಮಾರಾಟವನ್ನು ನಿರ್ಬಂಧಿಸಲಾಗುತ್ತಿದೆ.
ಆದೇಶ ಜಾರಿಯಾದಲ್ಲಿ ವರ್ಷಾಂತ್ಯದ ಮಾರಾಟ ಸಮಯದಲ್ಲಿಯೇ ಆಯಪಲ್ ತನ್ನ ಅತ್ಯಂತ ಜನಪ್ರಿಯ ಸಾಧನಗಳನ್ನು ಮಾರಾಟ ಮಾಡಲಾಗದ ಸನ್ನಿವೇಶ ಎದುರಿಸಲಿದೆ.