Sunday, 15th December 2024

ಜ.6 ರಿಂದ ವಿಮಾನ ಹಾರಾಟ ಆರಂಭ: ಡಿ.30 ರಂದು ಪ್ರಧಾನಿ ಉದ್ಘಾಟನೆ

ವದೆಹಲಿ: ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಜ.6 ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಅಯೋಧ್ಯೆ ವಿಮಾನ ನಿಲ್ದಾಣನಲ್ಲಿ ಡಿ.22ರಂದು ಭಾರತೀಯ ವಾಯುಪಡೆಯ ಏರ್‍ಬಸ್ ಎ320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದು, ಮುಂದಿನ ವರ್ಷ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮುಂಚಿತವಾಗಿ ವಿಮಾನ ಪ್ರಯಾಣದ ಕೇಂದ್ರವಾಗಲು ಸಜ್ಜಾಗುತ್ತಿರುವಂತೆ ಅಯೋಧ್ಯಾ ಹೊಸ ಯುಗಕ್ಕೆ ನಾಂದಿ ಹಾಡಿದೆ.

ಏರ್‍ಲೈನ್ಸ್ ಕಂಪನಿ ಇಂಡಿಗೋ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ವಿಮಾನಗಳನ್ನು ಒದಗಿಸಲಿದೆ.

ರಾಜ್ಯ ಸರ್ಕಾರದಿಂದ 821 ಎಕರೆ ಭೂಮಿಯನ್ನು ಒದಗಿಸಿದ ನಂತರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೊಸ ವಿಮಾನ ನಿಲ್ದಾಣವನ್ನು ಯುದ್ಧದ ಆಧಾರದ ಮೇಲೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಹೊಸ ವಿಮಾನ ನಿಲ್ದಾಣವು ಡಿ.15 ರೊಳಗೆ ಸಿದ್ಧವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಆದ್ದರಿಂದ ಅಯೋಧ್ಯೆಯ ವಿಮಾನ ನಿಲ್ದಾಣವು ಮತ್ತೊಂದು ವಿಮಾನ ನಿಲ್ದಾಣವಾಗಬಾರದು. ನಾವು ಅಯೋಧ್ಯೆಯ ಸಂಸ್ಕೃತಿಯನ್ನು ಅದರ ವಿಮಾನ ನಿಲ್ದಾಣದಲ್ಲಿ ಅಳವಡಿಸಲು ಪ್ರಯತ್ನಿಸಿದ್ದೇವೆ ಎಂದು ಸಿಂಧಿಯಾ ಹೇಳಿದರು.

6500 ಚದರ ಮೀಟರ್ ವಿಮಾನ ನಿಲ್ದಾಣವು ಒಂದು ಗಂಟೆಯಲ್ಲಿ ಎರಡರಿಂದ ಮೂರು ವಿಮಾನಗಳನ್ನು ಇಳಿಸಬಹುದು.