Sunday, 15th December 2024

ಲೋಕಸಭಾ ಚುನಾವಣೆಗೆ ಪಿ.ಚಿದಂಬರಂ ನೇತೃತ್ವದ ಸಮಿತಿ

ವದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಪಿ.ಚಿದಂಬರಂ ನೇತೃತ್ವದ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ. 16 ಸದಸ್ಯರ ಸಮಿತಿ ಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರೂ ಇದೆ.

ಸಮಿತಿಯಲ್ಲಿ ಛತ್ತೀಸಗಢದ ಟಿ.ಎಸ್.ಸಿಂಗ್ ದೇವ್ ಸಂಚಾಲಕರಾಗಿದ್ದಾರೆ. ಆನಂದ ಶರ್ಮಾ, ಜೈರಾಮ್ ರಮೇಶ್ ಹಾಗೂ ಶಶಿ ತರೂರ್‌ ಸಮಿತಿ ಯಲ್ಲಿರುವ ಪ್ರಮುಖರು.

ಪಕ್ಷದ ಹಿರಿಯ ಮುಖಂಡರಾದ ಮಣಿಪುರದ ಗೈಖಂಗಮ್‌, ಗೌರವ್ ಗೊಗೊಯಿ, ಪ್ರವೀಣ್ ಚಕ್ರವರ್ತಿ, ಇಮ್ರಾನ್ ಪ್ರತಾಪಗರಿ, ಕೆ.ರಾಜು, ಓಂಕಾರ್ ಸಿಂಗ್ ಮಾರ್ಕಮ್‌, ರಂಜೀತ್‌ ರಂಜನ್, ಜಿಗ್ನೇಶ್ ಮೇವಾನಿ, ಗುರದೀಪ್ ಸಪ್ಪಲ್‌ ಸಮಿತಿಯಲ್ಲಿರುವ ಇತರರು.