Thursday, 12th December 2024

ಇಂಡಿ ಜಿಲ್ಲೆಯಾಗಿಸಲು ಇಡೀ ಮಠಾಧೀಶರ ಒಕ್ಕೊರಲಿನ ಅಭಿಪ್ರಾಯ

ಇಂಡಿ: ಮಠಾಧೀಶರೆಂದರೆ ಕೇವಲ ಪೂಜೆ ಪುನಸ್ಕಾರ ಮಾಡುವುದು ಅಷ್ಠೇ ಅಲ್ಲ. ರೈತರ ,ಸಾರ್ವಜನಿಕರ ,ಒಳ್ಳೇಯ ಜನೋಪಕಾರಿ ಜನಹಿತ ಕಾಯಕ ದಲ್ಲಿ ತೊಡಗುವುದಾಗಿದೆ. ವಿಜಯಪೂರ ಜಿಲ್ಲೆಯಿಂದ ಇಂಡಿಯನ್ನು ಪ್ರತೇಕಿಸಿ ಇಂಡಿ ಜಿಲ್ಲಾ ಕೇಂದ್ರಮಾಡುವುದಕ್ಕೆ ಇಂಡಿ ಉಪವಿಭಾಗವನ್ನು ಸಂವಿಧಾನದ ೩೭೧ (ಜೆ) ವಿಧಿಗೆ ಸೇರ್ಪಡೆ ಮಾಡಬೇಕು ಎಂದು ಇಡೀ ನಮ್ಮ ಭಾಗದ ಮಠಾಧೀಶರ ಒಕ್ಕೊರಲಿನ ಅಭಿಪ್ರಾಯವಾಗಿದೆ ಎಂದು ಬಂಥನಾಳದ ಶ್ರೀ ವೃಷಭಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಇಂಡಿ ತಾಲೂಕಾ ಮಠಾಧೀಶರು ಕರೇದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತ ನಾಡಿದ ಅವರು ಮಠಾಧೀಶರು ಕೇವಲ ಧರ್ಮ ,ಆಚರಣೆ ಮಾಡುವುದು ಸೀಮಿತವಲ್ಲ ಇಡೀ ಮನುಷ್ಯ ಕುಲಕೋಟಿಗೆ ಒಳ್ಳೇಯದನ್ನು ಬಯಸುವ ಉದ್ದೇಶವಾಗಿದೆ. ಇಂದು ಇಂಡಿ ಜಿಲ್ಲೆಯಾಗಿಸಬೇಕು ಎಂಬ ಹೋರಾಟ ಇಡೀ ರಾಜ್ಯವ್ಯಾಪಿ ಮನವಿ ಹೋರಾಟ ನಡೇದಿವೆ ಇದರಲ್ಲಿ ಇಡೀ ಮಠಾಧೀಶರ ಸಹಮ್ಮತ ಕೂಡಾ ಇದೆ. ಜಿಲ್ಲೆಯಾಗಿಸಲು ಪ್ರತಿ ಹಂತದಲ್ಲಿ ಯಾವುದೇ ಹೋರಾಟ ರೂಪರೇಷ ಮಾಡಿದರೂ ನಾವು ಬದ್ದರಾಗಿದ್ದೇವೆ. ಇದರಲ್ಲಿ ಪಕ್ಷ- ಭೇದ ಯಾವುದೇ ಭಿನ್ನಾಭಿಪ್ರಾಯವಿಲ್ಲ ಸ್ವಾಮಿಜೀಗಳ ಕೂಗು ಜಿಲ್ಲಾ ಕೂಗು ಒಕ್ಕೋರಲಿನಿಂದ ಹೋರಾಟ ಮಾಡುವ ಭರವಸೆ ನೀಡಿದರು.

ತಡವಲಗಾಶ್ರೀಮಠದ ರಾಚೋಟೇಶ್ವರ ಮಹಾಸ್ವಾಮಿಗಳು ಮಾತನಾಡಿ ಈ ಭಾಗ ಶೈಕ್ಷಣಿಕ, ನೀರಾವರಿ,ಸಾರಿಗೆ, ಉದ್ಯೋಗ ಹೀಗೆ ಪ್ರತಿ ಹಂತದಲ್ಲಿ ಸಾಕಷ್ಟು ಹಿಂದುಳಿದಿದೆ ಮಲತಾಯಿ ಧೋರಣೆ ತೋರುತ್ತಿದೆ.ಜನರ,ರೈತರ, ಮುಂಬರುವ ಯುವಪಿಳಿಗೆಯ ಭವಿಷ್ಯ ಮುಖ್ಯ, ರಾಜ್ಯದ ಕೊನೆಯ ತಾಲೂಕು ಆಗಿರುವುದರಿಂದ ಸರಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಇಂಡಿ ಜಿಲ್ಲೆಯಾದರೆ ಸರ್ವವಿಧದಲ್ಲಿ ಪ್ರಗತಿ ಕಾಣಲಿದೆ. ಹೀಗಾಗಿ ಇಡೀ ಮಠಾಧೀಶರು ಜಿಲ್ಲಾ ಹೋರಾಟಕ್ಕೆ ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಚಂದ್ರಶೇಖರ ಶಿವಾರ್ಚಾರು, ಹತ್ತಳ್ಳಿ ಗುರುಪಾದೇಶ್ವರ ಮಹಾಸ್ವಾಮಿಗಳು ಇಂಡಿ ಜಿಲ್ಲಾ ಮಾಡುವಂತೆ ಸರಕಾರದ ಮೇಲೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ಹೇರುವದರೊಂದಿಗೆ ಪ್ರತಿ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಜಿಲ್ಲೆ ಮಾಡುವದರಿಂದ ಆಗುವ ಲಾಭಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮಾಡಿ ಒಟ್ಟಾರೆ ಜಿಲ್ಲಾ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.

*

ಇಂಡಿ ಜಿಲ್ಲೆಯಾಗುವ ಎಲ್ಲಾ ಮಾನದಂಡುಗಳು ತಾಲೂಕಿನಲ್ಲಿವೆ. ಕಂದಾಯ ಉಪವಿಭಾಗ ,ಭೋಗೋಳಿಕ ಪ್ರದೇಶ, ರಾಷ್ಟಿçÃಯ ಹೆದ್ದಾರಿ, ರೈಲ್ವೇ ನಿಲ್ದಾಣ, ಲಿಂಬೆ ಅಭಿವೃದ್ದಿ ಮಂಡಳಿ, ಕೃಷಿ ವಿಜ್ಞಾನ ಕೆಂದ್ರ. ಹತ್ತಾರು ಅಂಶಗಳು ಗಣನಿಗೆ ತಗೆದುಕೊಂಡರೂ ಇಂಡಿ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಡೀ ಮಠಾಧೀಶರ ಬೆಂಬಲವಿದೆ ಈ ಹೋರಾಟ ಪಕ್ಷಾತೀತ ಯಾವುದೇ ರೀತಿಯಿಂದಲ್ಲ ನಮ್ಮ ಗುರಿ ಒಂದೇ ಇಂಡಿ ಜಿಲ್ಲೆಯಾಗಿಸುವುದು .ಜನಹಿತ ಮುಂದಿನ ಪಿಳಿಗೆ ಭವಿಷ್ಯ ಮುಖ್ಯ ಈ ಭಾಗ ಹಿಂದುಳಿದಿದೆ ಜಿಲ್ಲೆಯಾದರೆ ಸರ್ವವಿಧದಲ್ಲಿ ಅಭಿವೃದ್ದಿಯಾಗುತ್ತದೆ ಇದಕ್ಕೆ ಯಾವ ತ್ಯಾಗಕ್ಕೂ ಸಿದ್ದ ಹೋರಾಟಕ್ಕೂ ಸೈ ಎಂದು ಶಿರಶ್ಯಾಡ ಶ್ರೀಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ನುಡಿದರು.

ಭಂಥನಾಳದ ಶ್ರೀವೃಷಭಲಿಂಗ ಮಹಾಸ್ವಾಮಿಗಳು, ಶಿರಶ್ಯಾಡ ಶ್ರೀಮಠದ ಮರುಘೇಂದ್ರ ಶಿವಾಚಾರ್ಯರು, ತಡವಲಗಾ ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುರುಪಾದೇಶ್ವರ ಮಹಾಸ್ವಾಮಿಗಳು, ಅಭಿನವ ಪುಂಡಲಿAಗ ಮಹಾಸ್ವಾಮಿಗಳು, ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಪ್ರಭುಲಿಂಗ ಮಹಾಸ್ವಾಮಿಗಳು, ಮುರುಘೇಂದ್ರ ಶಿವಾಚಾರ್ಯರು ಅಥರ್ಗಾ, ಷಡಕ್ಷರಿ ಮಹಾಸ್ವಾಮಿಗಳು ವಿರಕ್ತಮಠ ಚಡಚಣ, ರೇಣುಕಾ ಶಿವಾಚಾರ್ಯರು ಜೈನಾಪೂರ, ರುದ್ರಮುನಿ ದೇವರು ಇಂಚಗೇರಿ , ವಿಜಯಮಹಾಂತೇಶ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ಮಾತೋಶ್ರೀ ಸುಗಲಾತಾಯಿ ಹಿರೇರೂಗಿ ಶ್ರೀಮಠ, ಶಿವಾನಂದ ಶಿವಾರ್ಯರು, ಸಂಗನಬಸವ ಶಿವಾಚಾರ್ಯರು ಸೇರಿದಂತೆ ತಾಲೂಕಿನ ಅನೇಕ ಮಠಾಧೀ ಶರರು. ಮಹೇಶ ಹೊನ್ನಬಿಂದಗಿ, ಸಂತೋಷ ಪರಶೇನವರ್, ಪುಂಡಲಿAಗ ಹೂಗಾರ ,ಹಣಮಂತ ಅರವತ್ತು ಪತ್ರಿಕಾಗೋಷ್ಠಿಯಲ್ಲಿದ್ದರು.