ಹುಬ್ಬಳ್ಳಿ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಅವರಿಂದ ಏನೂ ನೀರಿಕ್ಷೆ ಮಾಡಲು ಸಾಧ್ಯ ಇಲ್ಲ. ಹಿಜಾಬ್ ಮತ್ತು ಭುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಅವರು, ಹಿಜಾಬ್ ತಲೆ ಮತ್ತೆ ಎದೆ ಮುಚ್ಚಿಕೊಳ್ಳೋಕೆ ಇರೋದು. ಈಗಾಗಲೇ ಕೆಲವು ಶಾಲಾ ಕಾಲೇಜು ಗಳಲ್ಲಿ ಇದೆ. ಭುರ್ಖಾ ಎನ್ನುವುದು ಸಂಪೂರ್ಣ ದೇಹ ಮುಚ್ಚಿಕೊಳ್ಳಲು. ಹಿಜಾಬ್ ಮತ್ತು ಭುರ್ಖಾ ಮಧ್ಯೆ ವ್ಯತ್ಯಾಸವಿದೆ. ಶಾಲಾ ಕಂಪೌಂಡ್ ವರೆಗೂ ಭುರ್ಖಾ ಆ ನಂತರ ಹಿಜಾಬ್ ಇರಬೇಕು ಅನ್ನೋದು ನನ್ನ ಕಲ್ಪನೆ ಎಂದು ಹೇಳಿದರು.
ಭಾರತೀಯ ಜನತಾ ಪಾರ್ಟಿಯವರು ಸಮಾನತೆ ವಿಚಾರ ಮಾತನಾಡುತ್ತಾರೆ. ಅಹಾರ, ಉಡುಪಿನ ಹಕ್ಕು ಎಲ್ಲರ ವೈಯಕ್ತಿಕ. ಬಿಜೆಪಿಗೆ ರೈತರು, ಮಹಿಳೆ ಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಈ ವಿಚಾರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆ ಮಾಡುತ್ತೀವಿ. ನಮ್ದು ಜ್ಯಾತ್ಯಾತೀತ ರಾಷ್ಟ್ರ, ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು ಎಂದರು. ತುಷ್ಟೀಕರಣ ರಾಜಕಾರಣ ಮಾಡುತ್ತಿರುವುದು ನೀವು ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡುತ್ತಿವುದು ಬಿಜೆಪಿ. ಹಿಂಸೆ ಮತ್ತು ಸುಳ್ಳುಗಳನ್ನು ಪ್ರಚಾರ ಮಾಡುತ್ತಿರುವುದು ಬಿಜೆಪಿ. ಅಲ್ಪ ಸಂಖ್ಯಾತರು, ಮೀಸಲಾತಿ ವಿಚಾರದಲ್ಲಿ ಇವರು ವಿರೋಧ. ನಾಗಪುರದಲ್ಲಿ ಇರೋ ಇವರ ಸೂತ್ರಧಾರರು ಜಾತಿ ಗಣತಿ ವಿರೋಧಿಗಳು ಎಂದು ಪರೋಕ್ಷವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನಾಯಕರ ವಿರುದ್ಧ ಹರಿಪ್ರಸಾದ್ ಹರಿಹಾಯ್ದರು.