Sunday, 15th December 2024

ಬಡ ರೈತನಿಗೆ ಟಿಲ್ಲರ್ ಮತ್ತು ಹನಿ ನೀರಾವರಿ ಸಲಕರಣೆ ವಿತರಣೆ

ರಾಷ್ಟ್ರೀಯ ರೈತ ದಿನಾಚರಣೆ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಕ್ರಾಸ್ ನಲ್ಲಿರುವ ಲಕ್ಷ್ಮಿ ಆಸ್ಪತ್ರೆ ಮಾಲೀಕರು ಮತ್ತು ಹಸಿರೇ ಉಸಿರು ಟ್ರಸ್ಟ್ ನ ಪದಾಧಿಕಾರಿ ಡಾ. ಹೆಚ್.ಪಿ.ಸತ್ಯನಾರಾಯಣರವರು ಹರೀಶ್ ಎಂಬ ಬಡ ರೈತನಿಗೆ ಟಿಲ್ಲರ್ ಮತ್ತು ಹನಿ ನೀರಾವರಿ ಸಲಕರಣೆ ವಿತರಿಸಿದರು.

ಇದೇ ಸಂದರ್ಭದಲ್ಲಿ ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಶ್ರೀನಿವಾಸಮೂರ್ತಿ ಇದ್ದರು.