Sunday, 15th December 2024

ಕರ್ತವ್ಯ ಲೋಪ: ನಿಲ್ದಾಣಾಧಿಕಾರಿ ಅಮಾನತು

ತುಮಕೂರು: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣಾಧಿಕಾರಿ ಶಿವಕುಮಾರ್ ಕೆ .,  ಅಮಾನತುಗೊಂಡಿದ್ದಾರೆ.
ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಲ್ದಾಣಾಧಿಕಾರಿಯಾಗಿದ್ದ ಶಿವಕುಮಾರ್ ,  ಕೆಳ ಹಂತದ ಸಿಬ್ಬಂದಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಸೇರಿದಂತೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಹಲವು ದೂರು, ಆರೋಪಗಳು ಕೇಳಿ ಬಂದಿದ್ದವು. ಆದರೆ ಈವರೆಗೆ ಯಾವುದೇ ದೂರುಗಳು ದಾಖ ಲಾಗಿರಲಿಲ್ಲ.
ಆದರೆ ಈ ಬಾರಿ ವಿಡಿಯೋ ರೆಕಾರ್ಡ್ ದಾಖಲೆ ಸಮೇತವಾಗಿ ಸಿಬ್ಬಂದಿಗಳಿಂದ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ  ವಿಭಾಗೀಯ ನಿಯಂತ್ರಣಾ ಧಿಕಾರಿ ಕೆ.ಚಂದ್ರಶೇಖರ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.