ನವದೆಹಲಿ: ಜಾಗತಿಕ ಉಗ್ರ, ಕುಖ್ಯಾತ ಪಾತಕಿ, ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ.
ಭವಲ್ಪುರ ಮಸೀದಿ ಮುಂಭಾಗದಲ್ಲಿ ತನ್ನ ಕಾರ್‌ನ ಬಲ ಬಾಗಿಲಿನ ಸಮೀಪ ಬಾಂಬ್ ಸ್ಫೋಟಗೊಂಡಿದ್ದು, ಈ ವೇಳೆ ಅಲ್ಲೇ ಇದ್ದ ಮೌಲಾನಾ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮಸೂದ್ ಅಜರ್ ಕಾರ್‌ನಲ್ಲಿ ‘ಅಪರಿಚಿತ’ ದುಷ್ಕರ್ಮಿಗಳು ಬಾಂಬ್ ಅಳವಡಿಸಿ ಸ್ಫೋಟ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಮುಂಜಾನೆ ಐದು ಗಂಟೆಗೆ ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ ಭವಲ್ಪುರ ಮಸೀದಿಯಿಂದ ವಾಪಸ್ ತನ್ನ ನಿವಾಸಕ್ಕೆ ತೆರಳುತ್ತಿದ್ದ. ಅಪರಿಚಿತ ದುಷ್ಕರ್ಮಿಗಳು ಆತ ಕಾರ್ ಬಳಿ ಬರುತ್ತಿದ್ದಂತೆ ಅದಾಗಲೇ ಅಳವಡಿಸಲಾಗಿದ್ದ ಬಾಂಬ್ ಅನ್ನು ಸ್ಫೋಟಗೊಳಿಸಿದ್ದಾರೆ ಎಂದು ಅನಾಮ ಧೇಯ ಮಾಹಿತಿಗಳು ತಿಳಿಸಿವೆ.
1999ರ ಡಿಸೆಂಬರ್ 24ರಂದು ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸುತ್ತಿದ್ದ 176 ಪ್ರಯಾಣಿಕರಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ IC 814 ವಿಮಾನದ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ ಆಗಿದ್ದಾನೆ.