ಬೆಂಗಳೂರು: ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಎಸ್ಕಾಂಗಳಿಂದ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗ ಒಪ್ಪಿದರೆ ಏಪ್ರಿಲ್ 1ರಿಂದ ದರ ಹೆಚ್ಚಳ ಆಗಲಿದೆ.
ಬೆಸ್ಕಾಂ ಸೇರಿದಂತೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ.
ಡಿಸೆಂಬರ್ ಕೊನೆಯ ವಾರ ಬೆಸ್ಕಾಂನಿಂದ ಯುನಿಟ್ ಗೆ 49 ಪೈಸೆ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಬೆಸ್ಕಾಂ ಮತ್ತು ಗ್ರಾಹಕರಿಗೆ ಹೊರೆಯಾಗದ ರೀತಿ ದರ ಪರಿಷ್ಕರಣೆ ಮಾಡಲು ಕೆಇಆರ್‌ಸಿ ಮುಂದಾಗಿದೆ.
ಅದೇ ರೀತಿ ಮೆಸ್ಕಾಂ, ಸೆಸ್ಕ್, ಹೆಸ್ಕಾಂ, ಚೆಸ್ಕಾಂ ಕೂಡ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆ ದರ ಪರಿಷ್ಕರಣೆಗೆ ಮನವಿ ಮಾಡಿವೆ ಎಂದು ಹೇಳಲಾಗಿದೆ. ಕಲ್ಲಿದ್ದಲು, ವಿದ್ಯುತ್ ಖರೀದಿ, ಸರಬರಾಜು ವೆಚ್ಚ ಮೊದಲಾದ ಕಾರಣಗಳಿಂದ ನಿರ್ವಹಣೆ ಹೊರೆಯಾಗುತ್ತಿದ್ದು, ನಷ್ಟ ಸರಿದೂಗಿಸಲು 2024 -25 ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆಗೆ ಮನವಿ ಮಾಡಲಾಗಿದೆ.