Thursday, 12th December 2024

ಮಾಲ್ಡೀವ್ಸ್‌ ಅಧ್ಯಕ್ಷರ ವೆಬ್‌ಸೈಟ್‌ ಸ್ಥಗಿತ

ಮಾಲೆ: ಮಾಲ್ಡೀವ್ಸ್‌ ಅಧ್ಯಕ್ಷರ ಹಾಗೂ ಪ್ರವಾಸೋಧ್ಯಮ ಸಚಿವಾಲಯದ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದವು.

ಸರ್ಕಾರಿ ವೆಬ್‌ಸೈಟ್‌ಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಂತೆ ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯು ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿ, ಅಧಿಕೃತ ವೆಬ್‌ಸೈಟ್‌ಗಳಿಗೆ ಅನಿರೀಕ್ಷಿತ ಅಡಚಣೆ ಉಂಟಾಗಿದೆ.

ತಾತ್ಕಾಲಿಕ ಅಲಭ್ಯತೆಯ ನಂತರ, ಮಾಲ್ಡೀವಿಯನ್ ಸರ್ಕಾರದ ಉನ್ನತ ವೆಬ್‌ಸೈಟ್‌ಗಳು ಈಗ ಮತ್ತೆ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಲ್ಡೀವ್ಸ್‌ ಸರ್ಕಾರ, ಈ ಕೃತ್ಯದ ಹಿಂದೆ ಕೆಲವು ಅಪರಿಚಿತ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ ಎಂದು ಆರೋಪಿಸಿದೆ.

ಇತ್ತೀಚಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ. ಇವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಹೊಸ ಬದಲಾವಣೆಯಾಗಿದೆ. ಪ್ರವಾಸಿಗರು ಮಾಲ್ಡೀವ್ಸ್‌ ಬದಲಿಗೆ ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ. ಸಹಜವಾಗಿಯೇ ಇದು ಮಾಲ್ಡೀವ್ಸ್‌ ಪ್ರವಾಸೋಧ್ಯಮಕ್ಕೆ ಹೊಡೆತ ನೀಡಿದೆ ಎಂದು ಅಂದಾಜಿಸಲಾಗಿದೆ.