ನವದೆಹಲಿ: ಲಕ್ಷದ್ವೀಪವನ್ನ ಅಂತರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಯನ್ನು ಭಾರತ ಸರ್ಕಾರ ರೂಪಿಸಿದ ಬೆನ್ನಲ್ಲೇ ಲಕ್ಷದ್ವೀಪದ ಮಿನಿ ಕಾಯ್ ದ್ವೀಪದಲ್ಲಿ ಜಾಯಿಂಟ್ ವಾಯುನೆಲೆ ಸಿದ್ಧಪಡಿಸುವ ತಯಾರಿ ನಡೆಸಿದೆ.
ಲಕ್ಷದ್ವೀಪ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಪೋಸ್ಟ್ಗೆ ಮಾಲ್ಡೀವ್ಸ್ ಸಚಿವರು ಆಕ್ಷೇಪಾರ್ಹ ಕಮೆಂಟ್ ಮಾಡಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆ ಈಗ ಮಾಲ್ಡೀವ್ಸ್ ಬಿಟ್ಟು ಪ್ರವಾಸಿಗರ ಚಿತ್ತ ಲಕ್ಷದ್ವೀಪದತ್ತ ನೆಟ್ಟಿದೆ. ಹೀಗಾಗಿ, ಲಕ್ಷದ್ವೀಪಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಬಗ್ಗೆಯೂ ಸಾಕಷ್ಟು ಆಗ್ರಹ ಕೇಳಿ ಬಂದಿದೆ. ಈಗ ಭಾರತ ಸರ್ಕಾರ ಪ್ರತ್ಯೇಕ ವಾಯು ನೆಲೆ ನಿರ್ಮಾಣ ಮಾಡಿ ಈ ಏರ್ಬೇಸ್ನ್ನು ಕಮರ್ಷಿಯಲ್ ಹಾಗೂ ಮಿಲಿಟರಿ ವಿಮಾನಗಳ ಸೇವೆ ಉಪಯೋಗಿಸಿಕೊಳ್ಳುವ ಯೋಜನೆ ಹೊಂದಿದೆ.
ಇಲ್ಲಿ ಮಿಲಿಟರಿ ಏರ್ ಬೇಸ್ ನಿರ್ಮಾಣದಿಂದ ಅರೇಬಿಯನ್ ಸಮುದ್ರ ಹಾಗೂ ಹಿಂದೂ ಮಹಾಸಾಗರ ಪ್ರದೇಶದ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ.
ಭಾರತೀಯ ಕರಾವಳಿ ಪಡೆ ಈ ಯೋಜನೆಯನ್ನು ಮೊದಲು ಮುಂದಿಟ್ಟಿತ್ತು ಕೂಡ ಈಗ ಮಿನಿಕಾಯ್ ದ್ವೀಪದಿಂದ ಭಾರತೀಯ ವಾಯು ಸೇನೆ ಕಾರ್ಯ ನಡೆಸಲಿದೆ ಎಂದು ಹೇಳಲಾಗಿದೆ. ಈಗಾಗಲೇ ಅಗಟ್ಟಿ ಪ್ರದೇಶದಲ್ಲಿ ಒಂದು ವಾಯುನೆಲೆ ಇದ್ದರೂ ಅದು ಎಲ್ಲಾ ರೀತಿಯ ವಿಮಾನಗಳ ಸೇವೆಗೆ ಯೋಗ್ಯವಾಗಿಲ್ಲ. ಹೀಗಾಗಿ, ಹೊಸ ವಾಯು ನೆಲೆ ನಿರ್ಮಾಣದಿಂದ ಮಿಲಿಟರಿ ಹಾಗೂ ಕಮರ್ಷಿಯಲ್ ವಿಮಾನ ಸೇವೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.