Friday, 22nd November 2024

ಪಾಕ್‍‍ಗೆ ಉರಿ ತಂದ ಕೊಲ್ಲಿ ಒಪ್ಪಂದ

ಅವಲೋಕನ
ಸೌಮ್ಯ ಗಾಯತ್ರಿ, ಲೇಖಕಿ, ಸಂಶೋಧನಾ ವಿದ್ಯಾರ್ಥಿನಿ

ಎಲ್ಲಾದರೊಂದು ಹುಚ್ಚುತನದ ಹೇಳಿಕೆ, ಇಲ್ಲವೇ ಮೊಂಡುವಾದವನ್ನು ಎತ್ತಿ ಹಿಡಿಯುತ್ತಾ ಪ್ರಪಂಚದ ರಾಜಕೀಯ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಮತ್ತೊಂದು ವಿಷಯದಲ್ಲಿ ಸುದ್ದಿಯಲ್ಲಿದೆ. ಇತ್ತೀಚಿಗೆ ಸಂಯುಕ್ತ ಅರಬ್ ರಾಷ್ಟ್ರ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ನಡೆದ ಶಾಂತಿ ಒಪ್ಪಂದದ ನಂತರ ಇಕ್ಕಟ್ಟಿಗೆ ಸಿಲುಕಿ ಕೈಲಾಗದವ ಮೈ ಪರಿಚಿಕೊಂಡ ಸ್ಥಿತಿಯಲ್ಲಿದೆ ನಮ್ಮ ನೆರೆ ರಾಷ್ಟ್ರ.

ಗಾಪಾಕಿಸ್ತಾನ ರಾಜತಾಂತ್ರಿಕತೆಯಲ್ಲಿ ಎಷ್ಟು ಮೇಧಾವಿ ಎಂಬುದು ತಿಳಿದಿರುವ ವಿಚಾರವೇ ಅಲ್ಲವೇ? ಇಂಗ್ಲಿಷ್‌ನಲ್ಲಿ Empty vessel makes more noise ಎಂಬ ಗಾದೆಗೆ ಸರಿಯಾದ ಹೊಂದಾಣಿಕೆ ಕಂಡುಬರುವುದು ಈ ದೇಶದ ನಾಯಕರ ಬಳಿಯೇ. ತಲೆ
ಬುಡ ಇಲ್ಲದ ಹೇಳಿಕೆಗಳು, ಚಿತ್ರ ವಿಚಿತ್ರ ಘಟನೆಗಳು, ಹುರುಳು ತಿರುಳಿಲ್ಲದ ವಾದಗಳು, ಇವೆಲ್ಲ ಕಾಣಸಿಗುವುದು ಪಾಕಿಸ್ತಾನದ ಆಡಳಿತ ವರ್ಗದ ನಾಯಕರಲ್ಲಿ ಮಾತ್ರವೇ.

ತಮ್ಮನ್ನು ತಾವೇ ನಗೆಪಾಟಲಿಗೆ ಗುರಿಮಾಡಿಕೊಳ್ಳುವ ಏಕೈಕ ಮಾನವೀಯ ಜನಾಂಗ ಅಂದರೆ ಅವರೇ. ಎಲ್ಲಾದರೊಂದು ಹುಚ್ಚುತನದ ಹೇಳಿಕೆ ಇಲ್ಲವೇ ಮೊಂಡುವಾದವನ್ನು ಎತ್ತಿಹಿಡಿಯುತ್ತಾ ಪ್ರಪಂಚದ ರಾಜಕೀಯ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಮತ್ತೊಂದು ವಿಷಯದಲ್ಲಿ ಸುದ್ದಿಯಲ್ಲಿದೆ.

ಇತ್ತೀಚಿಗೆ ಸಂಯುಕ್ತ ಅರಬ್ ರಾಷ್ಟ್ರ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ನಡೆದ ಶಾಂತಿ ಒಪ್ಪಂದದ ನಂತರ ಇಕ್ಕಟ್ಟಿಗೆ ಸಿಲುಕಿ ಕೈಲಾಗದವ ಮೈಪರಚಿಕೊಂಡ ಸ್ಥಿತಿಯಲ್ಲಿದೆ ನಮ್ಮ ನೆರೆ ರಾಷ್ಟ್ರ. ಈ ಶಾಂತಿ ಒಪ್ಪಂದ ಯುಎಇ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸಂಪೂರ್ಣ ಸಾಮಾನ್ಯೀಕರಣಕ್ಕೆ ಅಡಿಗಲ್ಲು. ಇಸ್ರೇಲ್ ಅನ್ನು ಶತ್ರು ರಾಷ್ಟ್ರ ಅಥವಾ ಬದ್ಧ ವೈರಿಯೆಂದು ಕಾಣದೆ ಹೆಚ್ಚು ಪ್ರಾಯೋಗಿಕವಾಗಿ ಚಿಂತನೆ ನಡೆಸಿದ ಅರಬ್ ರಾಷ್ಟ್ರದವರು ಇಸ್ರೇಲ್ ಕಡೆಗೆ ಭಿನ್ನವಾಗಿ
ವರ್ತಿಸಿ ಮಿತ್ರತ್ವ ಸ್ಥಾಪಿಸುವಲ್ಲಿ ಪೂರ್ವಭಾವಿಯಾಗಿ ಸ್ನೇಹಹಸ್ತ ಚಾಚಿದ್ದಾರೆ. ಆದರೆ ಪಿತೂರಿ ಮನಸ್ಥಿತಿಯ ಪಾಕಿಸ್ತಾನವು ಸಂಪೂರ್ಣವಾಗಿ ಇಸ್ರೇಲ್ ವಿರೋಧಿಗಳಾಗಿ ಮುಂದುವರಿದಿದೆ. ಆದರೆ ಅರಬ್ ರಾಷ್ಟ್ರದವರಿಗೆ ಇದರ ಅರಿವಿದ್ದೂ ಪಾಕಿಸ್ತಾನ ವನ್ನು ಕಿಂಚಿತ್ತೂ ಗಣನೆಗೆ ತೆಗೆದುಕೊಳ್ಳದೆ ಕಡೆಗಾಣಿಸಿ ತಮ್ಮ ನಿರ್ಧಾರದೊಂದಿಗೆ ಸಾಗಿರುವುದು ಮತ್ತೊಂದು ಗಮನಾರ್ಹ ಅಂಶ.

ಏನೀ ಶಾಂತಿ ಒಪ್ಪಂದ?

ಐತಿಹಾಸಿಕ ರಾಜತಾಂತ್ರಿಕ ಪ್ರಗತಿ ಎಂದು ಕರೆಯಲಾಗುವ ‘ಅಬ್ರಹಾಂ ಅಕಾರ್ಡ್’ ಎಂಬ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಈ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ಮಧ್ಯಸ್ಥಿಕೆ ವಹಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಈ ಕ್ರಮದಲ್ಲಿ, ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಜತಾಂತ್ರಿಕ ಸಂಬಂಧಗಳನ್ನು ಸಾಮಾನ್ಯಗೊಳಿಸುವುದಾಗಿ ಘೋಷಿಸಿವೆ. ಯುಎಸ್, ಇಸ್ರೇಲ್ ಮತ್ತು ಯುಎಇ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಮೂರು ದೇಶಗಳ ನಾಯಕರು ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸಂಬಂಧಗಳ ಸಂಪೂರ್ಣ ಸಾಮಾನ್ಯೀಕರಣಕ್ಕೆ ಒಪ್ಪಿಕೊಂಡರು. ವೆಸ್ಟ್‌ ಬ್ಯಾಂಕ್‌ನ ಪ್ರದೇಶಗಳಿಗೆ ಸಾರ್ವಭೌಮತ್ವ  ಅನ್ವಯಿಸು ವಿಕೆಯನ್ನು ಅಮಾನತುಗೊಳಿಸಲು ಇಸ್ರೇಲ್ ಒಪ್ಪಿಕೊಂಡಿದೆ.

ಈ ಶಾಂತಿ ಒಪ್ಪಂದ ಏಕೆ ಮುಖ್ಯ ?
ಇಸ್ರೇಲ್ 1979ರಲ್ಲಿ ಈಜಿಪ್ಟ್‌ ಮತ್ತು 1994ರಲ್ಲಿ ಜೋರ್ಡಾನ್ ಜತೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿತ್ತು. ಆದರೆ ಮೊದಲಿ ನಿಂದಲೂ ಇಸ್ರೇಲ್, ಗಲ್ಫ್ ಅರಬ್ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನೇನೂ ಹೊಂದಿಲ್ಲ, ಕಾರಣ ದೀರ್ಘ
ಕಾಲದ ಪ್ಯಾಲೆಸ್ಟೀನಿಯಾದವರೊಂದಿಗಿನ ಸಂಘರ್ಷ. ಕರೋನಾ ವೈರಸ್‌ನ ದಿಢೀರ್ ಹಾವಳಿ, ಭ್ರಷ್ಟಾಚಾರದ ವಿಚಾರಣೆಗಳು, ರಾಷ್ಟ್ರದ ಅನೇಕ ಕಡೆಗಳಲ್ಲಿ ಸಾಮೂಹಿಕ ಪ್ರತಿಭಟನೆಗಳು ಹೀಗೆ ತನ್ನ ದೇಶದಲ್ಲಿ ದಿನೇ ದಿನೇ ಕುಸಿಯುತ್ತಿರುವ ತನ್ನ ಜನಪ್ರಿಯತೆ ಯ ನಡುವೆ ಅಧ್ಯಕ್ಷ ನೆತನ್ಯಾಹು ತನ್ನ ಇಮೇಜ್ ಅನ್ನು ಪುನರುಜ್ಜೀವನಗೊಳಿಸಲು ಈ ಒಪ್ಪಂದದ ಮೇಲೆ ಬಹಳವಾಗಿ ಅವಲಂಬಿತರೇನೋ ಎನಿಸುತ್ತಿದೆ.

ಆದಾಗ್ಯೂ, ವೆಸ್ಟ್‌ ಬ್ಯಾಂಕ್‌ನ ಅನ್ನು ಸ್ವಾಧೀನಪಡಿಸಿಕೊಳ್ಳುವ ತನ್ನ ಯೋಜನೆಗಳನ್ನು ಬೆಂಬಲಿಸಿ, ಮತ ನೀಡಿದ ಅನೇಕ ಮತದಾರರನ್ನು ಎದುರು ಹಾಕಿಕೊಂಡು ಬಹಳ ಪೇಚಾಟಕ್ಕೆ ಸಿಲುಕಿ ತನ್ನ ರಾಜಕೀಯ ಜೀವನವನ್ನೇ ಅಪಾಯಕ್ಕೊಡ್ಡುವ
ಸಾಧ್ಯತೆಗಳು ಬಹಳವೇ. ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಪಶ್ಚಿಮ ದಂಡೆಯ ಕೆಲವು ಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡ ನಂತರ ಈ ಒಪ್ಪಂದವನ್ನು ಈ ಗಲ್ಫ್ ಅರಬ್ ರಾಷ್ಟ್ರಗಳು, ಯುರೋಪ್ ಮತ್ತು ವಿಶ್ವದ ಕೆಲವು ದೇಶಗಳು ಕಟುವಾಗಿ ಟೀಕಿಸಿವೆ. ಮಧ್ಯಪ್ರಾಚ್ಯದ ಪರಿಸ್ಥಿತಿ
ಸಂಕೀರ್ಣ ವಾಗಿದೆ ಮತ್ತು ಕೆಲವರು ಇಸ್ರೇಲ್ ಮತ್ತು ಯುಎಸ್‌ನಲ್ಲಿ ವಿದೇಶೀಯ ರಾಜಕಾರಣಕ್ಕೂ ಈ ಒಪ್ಪಂದಕ್ಕೂ ಎಲ್ಲಿಯೋ ಸ್ವಲ್ಪ ಸಂಬಂಧವಿದೆ ಎಂದು ನಂಬುತ್ತಾರೆ.

ಮಧ್ಯಪ್ರಾಚ್ಯದ ಹಲವಾರು ರಾಷ್ಟ್ರಗಳು ಇರಾನಿನೊಂದಿಗೆ ವಿವಾದಾಸ್ಪದ ಸಂಬಂಧವನ್ನು ಹೊಂದಿವೆ ಮತ್ತು ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧಗಳಲ್ಲಿನ ಈ ಸುಧಾರಣೆಯು ಯುಎಸ್ ಮತ್ತು ಇಸ್ರೇಲ್‌ನ ಹತೋಟಿ ಬಳಸಿಕೊಂಡು ಇತರ ಗಲ್ಫ್ ಅರಬ್ ರಾಷ್ಟ್ರಗಳನ್ನು ಇರಾನ್‌ನಿಂದ ದೂರವಿರಿಸಲು ಒತ್ತಾಯಿಸುವ ಪ್ರಯತ್ನವಾಗಿರಬಹುದು ಎಂಬ ಮತ್ತೊಂದು ವಾದವೂ ಇದೆ. ಯುಎಸ್ ಅಧ್ಯಕ್ಷ ಟ್ರಂಪ್‌ಗೂ ಪರಿಸ್ಥಿತಿ ತುಂಬಾ ಭಿನ್ನವಾಗಿಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಮೂಲೆಗುಂಪಾಗಿರುವುದರಿಂದ, ಟ್ರಂಪ್ ಈ ಒಪ್ಪಂದವನ್ನು ನೀತಿಯ, ನೀತಿ ಯಶಸ್ಸು ಎಂದು ಪರಿಗಣಿಸುತ್ತಿದ್ದಾರೆ.
ಯುಎಇಯ ದೊಡ್ಡ ಪ್ರಮಾಣದ ತೈಲ ನಿಕ್ಷೇಪಗಳು ಈ ರಾಷ್ಟ್ರವನ್ನು ಮಧ್ಯಪ್ರಾಚ್ಯದ ಎರಡನೇ ಅತಿದೊಡ್ಡ ಆರ್ಥಿಕತೆ ಯನ್ನಾಗಿ ಮಾಡಿವೆ.

ಇದರಿಂದ ತನ್ನ ದೇಶದ ಮಿಲಿಟರಿ ಮತ್ತು ಆರ್ಥಿಕತೆಯನ್ನು ಬೆಳೆಸಲು ಅವಕಾಶವುಂಟಾಗಿದ್ದು ಈ ಪ್ರದೇಶದಲ್ಲಿ ಈ ರಾಷ್ಟ್ರವು ಬಹಳ ಪ್ರಭಾವಶಾಲಿ ಎನಿಸಿಕೊಂಡಿದೆ. ಇರಾನ್ ಮತ್ತು ಇಸ್ಲಾಮಿಕ್ ಉಗ್ರಗಾಮಿತ್ವವನ್ನು ನಿಗ್ರಹಿಸುವತ್ತ ಕಳೆದ ಎರಡು ದಶಕಗಳಲ್ಲಿ ಯುಎಇ ಬಹಳಷ್ಟು ಗಮನ ಹರಿಸಿ ಅದರಲ್ಲಿ ಬಹಳ ಸಫಲತೆಯನ್ನೂ ಕಂಡಿದೆ ಎಂದರೆ ತಪ್ಪಾಗಲಾರದು.
ಆದರೆ ಪ್ಯಾಲೆಸ್ತೀನೀಯರು ಈ ಒಪ್ಪಂದವನ್ನು ಟೀಕಿಸಿದ್ದಾರೆ ಮತ್ತು ಪ್ಯಾಲೇಸ್ಟಿನಿಯನ್ ಜನರ ಹಕ್ಕುಗಳ ನಿರಾಕರಣೆ, ತಮ್ಮ ಜನರ ಮೇಲಿನ ದೌರ್ಜನ್ಯ ಮತ್ತು ಕೊನೆಗಾಣದ ಶೋಷಣೆಗೆ ಇದು ಪ್ರೋತ್ಸಾಹಿಸುತ್ತದೆ ಎಂದು ಈ ಒಪ್ಪಂದವನ್ನು ಬಹಿಷ್ಕರಿಸಿ ತಮ್ಮ ಕೋಪವನ್ನು ವ್ಯಕ್ತ ಪಡಿಸಲು ಅನೇಕ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದೂ ಉಂಟು.

ಪಾಕಿಸ್ತಾನದ ಪರಮ ಶತ್ರು ಈಗ ಇಸ್ರೇಲ್. ಇತರ ದೇಶಗಳು ಏನೇ ಮಾಡಿದರೂ, ಪ್ಯಾಲೆಸ್ತೀನಿಯಾದವರಿಗೆ ನ್ಯಾಯಯುತವಾದ ಇತ್ಯರ್ಥದ ಹಕ್ಕನ್ನು ನೀಡುವವರೆಗೆ ಪಾಕಿಸ್ತಾನವು ಇಸ್ರೇಲ್ ಅನ್ನು ಎಂದಿಗೂ ಸ್ನೇಹಿತನಂತೆ ಗುರುತಿಸುವುದಿಲ್ಲ ಎಂದು
ಹೇಳಿದ್ದಾರೆ. ಪಾಕಿಸ್ತಾನವು ಇಸ್ರೇಲ್ ಅನ್ನು ಒಪ್ಪಿಕೊಂಡರೆ ಅದೇ ನೀತಿಯನ್ವಯ ಕಾಶ್ಮೀರವನ್ನು ಸಹ ತ್ಯಜಿಸಬೇಕಾಗುತ್ತದೆ. ಏಕೆಂದರೆ ಅದೇ ಪರಿಸ್ಥಿತಿ ಅಲ್ಲಿಯೂ ಅನ್ವಯಿಸುತ್ತದೆ. ಯುಎಇ-ಇಸ್ರೇಲ್ ಒಪ್ಪಂದವು ಬಹುದೊಡ್ಡ ಪರಿಣಾಮಗಳನ್ನು
ಹೊಂದಿರುವ ಬೆಳವಣಿಗೆಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿಕೆ ನೀಡಿದ್ದಾರೆ. ವಿಭಜನೆಯ ನಂತರ, ಪಾಕಿಸ್ತಾನವನ್ನು ಹೊರತು ಪಡಿಸಿ ವಿಶ್ವದ ಏಕೈಕ ಸೈದ್ದಾಂತಿಕ ರಾಜ್ಯವಾಗಿದ್ದರೂ ಸಹ, ಇಸ್ರೇಲ್ ಜೊತೆಗಿನ ಸಂಬಂಧ ಗಳ ಕಲ್ಪನೆಯನ್ನು ಪಾಕಿಸ್ತಾನವು ಸಂಪೂರ್ಣ ವಾಗಿ ವಿರೋಧಿಸಿತು.

ಪಾಕಿಸ್ತಾನವು ಇಸ್ರೇಲ್ ಅನ್ನು ಒಪ್ಪಿಕೊಳ್ಳಬೇಕೆಂದು ಪ್ರತಿಪಾದಿಸುವವರು ಹೆಚ್ಚಾಗಿ ಭಾರತ ಮತ್ತು ಇಸ್ರೇಲ್‌ನ ಸ್ನೇಹ ಸಂಬಂಧಗಳನ್ನು ಸೂಚಿಸುತ್ತಾರೆ. ಅಭಿನಂದನ್ ವರ್ಥಮಾನ್ ಪಾಕಿಸ್ತಾನದಲ್ಲಿ ಬಿದ್ದ ದಿನ ನಮ್ಮ ದೇಶವು ಇಸ್ರೇಲಿ ಪೈಲಟನ್ನು ಬಂಧಿಸಿದೆ ಎಂದು ಪಾಕಿಸ್ತಾನದ ಅರ್ಧದಷ್ಟು ಜನರು ನಂಬಿದ್ದರು. ಉಳಿದ ಅರ್ಧದಷ್ಟು ಜನರು ಇಸ್ರೇಲಿ ಪೈಲಟ್‌ಗಳು ಬಾಲಕೋಟ್‌ನಲ್ಲಿ ಭಾರತದ ವೈಮಾನಿಕ ದಾಳಿಯನ್ನು ಮುನ್ನಡೆಸಿದರು ಎಂದು ನಂಬಿರುವುದೂ ಮತ್ತೊಂದು ಸಂಗತಿ. ಗೊಂದಲದ ಕಾರಣ ಬಾಲಕೋಟ್‌ನಲ್ಲಿ ಇಸ್ರೇಲಿ ಬಾಂಬ್‌ಗಳನ್ನು ಬಳಸಿದ್ದು, ಈ ಕಾರಣಕ್ಕೆ ಭಾರತವನ್ನು ದೂಷಿಸುವುದರಿಂದ ತಡೆಯಲು ಸಾಧ್ಯವೇ ಇಲ್ಲ.

ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಯ ಸಂಸತ್ ಸದಸ್ಯ ಇಸ್ರೇಲ್ ಜೊತೆ ಸಂಬಂಧವನ್ನು ಸೂಚಿಸಿ, ಮುಸ್ಲಿಮರು ಮತ್ತು ಯಹೂದಿಗಳು ಶಾಂತಿಯುತ ಇತ್ಯರ್ಥಕ್ಕೆ ಬರಬೇಕೆಂದು ಒತ್ತಾಯಿಸಿದರು. ಪಿಟಿಐ ಯಹೂದಿ ಕಾರ್ಯಸೂಚಿಯಲ್ಲಿ
ಕಾರ್ಯನಿರ್ವಹಿಸುತ್ತಿದೆ ಎಂದು ಒಂದು ಹೇಳಿಕೆ. ಪಾಕಿಸ್ತಾನದ ವಲಸೆ ಮತ್ತು ಪಾಸ್ಪೋರ್ಟ್ ಕಚೇರಿ ಇಸ್ರೇಲ್ ಅನ್ನು ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಮತಿಸಿದ ದೇಶಗಳಲ್ಲಿ ಪಟ್ಟಿಮಾಡಿ, ನಂತರ ಅದು ತಪ್ಪು ಎಂದು ಸ್ಪಷ್ಟಪಡಿಸಿತ್ತು.
ಪಾಕಿಸ್ತಾನದ ಪಾಸ್ಪೋರ್ಟ್ ಹೀಗೆ ಹೇಳುತ್ತದೆ: ಈ ಪಾಸ್ಪೋರ್ಟ್ ಇಸ್ರೇಲ್ ಹೊರತುಪಡಿಸಿ ವಿಶ್ವದ ಎಲ್ಲಾ ದೇಶಗಳಿಗೆ ಮಾನ್ಯವಾಗಿದೆ. ಆದ್ದರಿಂದ, ಯಹೂದಿ ಅಥವಾ ಕ್ರಿಶ್ಚಿಯನ್ ಪಾಕಿಸ್ತಾನಿಗಳು ಇಸ್ರೇಲ್‌ಗೆ ತೀರ್ಥಯಾತ್ರೆಗೆ ಹೋಗಲು
ಬಯಸಿದರೆ, ಅವರು ಏನು ಮಾಡಬೇಕು? ಅವರಿಗೆ ಯಾತ್ರೆ ಅಸಾಧ್ಯವೇ? ಇಸ್ಲಾಮಾಬಾದ್‌ನಲ್ಲಿ ತನ್ನ ಪಾಕಿಸ್ತಾನದ ಪಾಸ್ಪೋರ್ಟ್ ಹಿಡಿದು ನಾನು ಇಸ್ರೇಲ್‌ಗೆ ಪ್ರಯಾಣಿಸಲು ಬಯಸುತ್ತೇನೆ ಎಂದು ಪ್ರತಿಭಟಿಸಿದ ಪಾಕಿಸ್ತಾನದ ನಾಗರಿಕ ಡೇವಿಡ್
ಏರಿಯಲ್‌ನನ್ನು ಬಂಧಿಸಲಾಯಿತು.

ಭಾರತ 370ನೇ ವಿಧಿಯನ್ನು ರದ್ದುಪಡಿಸಿದ ಮೊದಲ ವಾರ್ಷಿಕೋತ್ಸವದಂದು ಪಾಕಿಸ್ತಾನದ ವಿದೇಶಾಂಗ ಮಂತ್ರಿ ಖುರೇಷಿ ಟಿವಿ ಸಂದರ್ಶನವೊಂದರಲ್ಲಿ ತಮ್ಮ ಸಾಂಪ್ರದಾಯಿಕ ಮಿತ್ರ ಸೌದಿ ಅರೇಬಿಯಾ ತಮ್ಮ ಇಸ್ಲಾಮಿಕ್ ಸಂಘಟನೆಗಳ ಕೂಟವನ್ನು ಕೂಡಿಸುವಲ್ಲಿ ವಿಫಲವಾಯಿತು ಎಂದೂ, ಯುಎಇ ಮತ್ತು ಇಸ್ರೇಲ್ ನಡುವಿನ ಒಪ್ಪಂದದ ಬಗ್ಗೆ ಕೆಲವೊಂದು ಪ್ರತಿಕೂಲ
ಹೇಳಿಕೆಗಳನ್ನು ಕೊಟ್ಟರು.

ಖುರೇಷಿಯ ಈ ಆಕ್ರೋಶವು ರಿಯಾದ್‌ನ ಕೋಪಕ್ಕೆ ಕಾರಣವಾಯಿತು, ಇದು ಪಾಕಿಸ್ತಾನದ ಪಾಲಿಗೆ ಮಾರಕವಾಯಿತು. 1 ಬಿಲಿಯನ್ ಡಾಲರ್ಗಳನ್ನು ಅಕಾಲಿಕವಾಗಿ ಮರುಪಾವತಿಸುವಂತೆ ಒತ್ತಾಯಿಸಿತು. ಪಾಕಿಸ್ತಾನದ ಸೇನಾ ಮುಖ್ಯಸ್ಥ
ಜನರಲ್ ಕರ್ಮ ಜಾವೇದ್ ಬಜ್ವಾ ಅವರು ಖುರೇಷಿಯವರ ಟೀಕೆಗಳಿಂದ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡಲು ಸೌದಿಅರೇಬಿಯಾಕ್ಕೆ ಧಾವಿಸಿದರು. ಆದರೆ, ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಸಭೆ ನಡೆಸಲು ಅವರು ವಿಫಲರಾದರು.

ಪಾಕಿಸ್ತಾನದ ಪ್ರಧಾನ ಮಂತ್ರಿ ಟರ್ಕಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಮುಸ್ಲಿಂ ಪ್ರಪಂಚದ ನಾಯಕರಾಗಿ ಹೊರಹೊಮ್ಮಬೇಕೆಂಬ ಟರ್ಕಿಯ ಅಧ್ಯಕ್ಷರ ಮಹತ್ವಾಕಾಂಕ್ಷೆಗಳು ಎಲ್ಲರಿಗೂ ತಿಳಿದಿರುವುದು ವಾಸ್ತವ. ಆದರೆ ಸೌದಿ ಅರೇಬಿಯಾದೊಂದಿಗೆ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಈ ಪರಿ ಇಸ್ಲಾಮಾಬಾದ್‌ಗೆ
ದುಬಾರಿಯಾಗಲಿದೆ.

ಪಾಕಿಸ್ತಾನವು ಸಾಂಪ್ರದಾಯಿಕವಾಗಿ ಸೌದಿ ಅರೇಬಿಯಾ ಮತ್ತು ಯುಎಇಯನ್ನು ಆರ್ಥಿಕ ಬೇಲ್ಔಟ್‌ಗಾಗಿ ಅವಲಂಬಿಸಿದೆ. ಅನೇಕ ಬಾರಿ ಸೌದಿ ಅರೇಬಿಯಾಯಾದಿಂದ ಹಲವಾರು ಬಿಲಿಯನ್‌ಗಳ ಧನ ಸಹಾಯ ಪಡೆದಿರುವ ಪಾಕಿಸ್ತಾನ ಇತ್ತೀಚಿಗೆ
ತನ್ನ ಮೂರ್ಖ ನಡವಳಿಕೆ, ಅಪಕ್ವ ಹೇಳಿಕೆಗಳಿಂದ ಸೌದಿಯಿಂದ ಪಡೆಯುವ ಅನೇಕ ಆರ್ಥಿಕ ನೆರವಿಗೆ ಕಡಿವಾಣ ಹಾಕುವಂತೆ ತಮ್ಮನ್ನು ತಾವು ಪೇಚಿಗೆ ಸಿಲುಕಿಸಿಕೊಂಡಿದ್ದಾರೆ.

ಈ ರಾಷ್ಟ್ರಕ್ಕೆ ಉತ್ತಮ ರಾಷ್ಟ್ರ ನಾಯಕರು ಚುನಾಯಿತರಾಗಿ ಬಂದು ದೇಶವನ್ನು ಅದರ ಪ್ರಜೆಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಪರಿಪಕ್ವತೆ, ಧುರೀಣತನ, ಉತ್ತಮ ಕಾರ್ಯತಂತ್ರದ ಆಲೋಚನೆಗಳನ್ನು ಭಗವಂತ ಅನುಗ್ರಹಿಸಲಿ ಎಂಬ
ಮನದಾಳದ ಹೆಬ್ಬಯಕೆ.