ಪಣಜಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ನಾಳೆಯಿಂದ ಮೂರು ದಿನಗಳ ಕಾಲ ಗೋವಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ರಾಜ್ಯ ಮುಖ್ಯಸ್ಥ ಅಮಿತ್ ಪಾಲೇಕರ್ ತಿಳಿಸಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಮತ್ತು ಸಂಸದರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ರೊಂದಿಗೆ ಕೇಜ್ರಿವಾಲ್ ಜ.18 ರಿಂದ 20 ರವರೆಗೆ ಕರಾವಳಿ ರಾಜ್ಯದಲ್ಲಿ ಇರಲಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ಬರುವ ತಮ್ಮ ಭೇಟಿಯ ಸಂದರ್ಭದಲ್ಲಿ ಪಕ್ಷದ ಗೋವಾ ಶಾಸಕರು ಮತ್ತು ಇತರ ರಾಜ್ಯದ ಪದಾಧಿಕಾರಿಗಳು ಮತ್ತು ಸ್ವಯಂಸೇವಕರನ್ನು ಹಿರಿಯ ಎಎಪಿ ನಾಯಕರು ಭೇಟಿಯಾಗಲಿದ್ದಾರೆ ಎಂದು ಪಾಲೇಕರ್ ಹೇಳಿದರು.
ಗೋವಾ ವಿಧಾನಸಭೆಯಲ್ಲಿ ಎಎಪಿ ಇಬ್ಬರು ಶಾಸಕರನ್ನು ಹೊಂದಿದೆ – ವೆಂಜಿ ವಿಗಾಸ್ (ಬೆನೌಲಿಮ) ಮತ್ತು ಕ್ರೂಜ್ ಸಿಲ್ವಾ (ವೆಲಿಮ) ಅವರು ಆಪ್ ಶಾಸಕರಾಗಿದ್ದಾರೆ. ಕಾರ್ಯಕ್ರಮದ ವಿವರವಾದ ವೇಳಾಪಟ್ಟಿಯನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ಪಾಳೇಕರ್ ಹೇಳಿದರು.