Friday, 22nd November 2024

ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ಬಗ್ಗೆ ಧೋನಿಗೆ ತಿಳಿಸುವುದು ಸೂಕ್ತ: ದೆಹಲಿ ಹೈಕೋರ್ಟ್

ವದೆಹಲಿ: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಯ ಬಗ್ಗೆ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವ ಮೊದಲು ಅವರಿಗೆ ತಿಳಿಸುವುದು ಸೂಕ್ತ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.

ಪ್ರಕರಣದ ಬಗ್ಗೆ ಮಾಜಿ ನಾಯಕನಿಗೆ ಮಾಹಿತಿ ನೀಡುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ನ್ಯಾಯಾಲಯದ ರಿಜಿಸ್ಟ್ರಿ ಮತ್ತು ವಾದಿ ಮಿಹಿರ್ ದಿವಾಕರ್ ಅವರಿಗೆ ನಿರ್ದೇಶನ ನೀಡಿದರು ಮತ್ತು ವಿಚಾರಣೆಯನ್ನ ಜ.29ಕ್ಕೆ ಮುಂದೂಡಿದರು.

2017ರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಜನರು ತಮ್ಮ ವಿರುದ್ಧ ಮಾನಹಾನಿಕರ ಆರೋಪಗಳನ್ನ ಮಾಡದಂತೆ ತಡೆಯುವಂತೆ ಕೋರಿ ದಿವಾಕರ್ ಮತ್ತು ಅವರ ಪತ್ನಿ ಸೌಮ್ಯ ದಾಸ್ (ದೂರುದಾರರು) ಹೈಕೋರ್ಟ್ ಸಂಪರ್ಕಿಸಿದ್ದಾರೆ.

ಧೋನಿ ಮತ್ತು ಅರ್ಜಿದಾರರ ಒಡೆತನದ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತ ಮತ್ತು ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಒಪ್ಪಂದವಾಗಿತ್ತು.