Friday, 22nd November 2024

ಇಪ್ಪತ್ತು ವರ್ಷ, ನೂರಾರು ಹರ್ಷ

ತಮಗೆ ತಾವೇ ಸವಾಲು ಹಾಕಿಕೊಂಡು ಅವಿರತ ಶ್ರಮಪಡುವುದು ಮೋದಿ ಗುಣ 

ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಅಕ್ಟೋಬರ್ 7, 2001. ಭಾರತದ ಇತಿಹಾಸದಲ್ಲಿ ಹೊಸದೊಂದು ನಾಯಕತ್ವ ಉದಯಿಸಿದ ದಿನ.

ಅದು ದೂರದೃಷ್ಠಿತ, ಛಲ ಮತ್ತು ಬೃಹತ್ ಆಕಾಂಕ್ಷೆಯ ನಾಯಕ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸುದಿನ. ಅಂದಿನಿಂದಲೂ ಇಂದಿನ ದಿನದವರೆಗೂ ಸರಕಾರದ ಮುಖ್ಯಸ್ಥರಾಗಿ ತಾವು ಎದುರಿಸಿರುವ ಯಾವ ಚುನಾವಣೆಯಲ್ಲೂ ಸೋಲದೇ, ಸತತ ಇಪ್ಪತ್ತು ವರ್ಷ ಅಧಿಕಾರದಲ್ಲಿ ಇರುವವರು ಒಬ್ಬರೇ, ಅದು ನೆರೇಂದ್ರ ಭಾಯಿ ಮೋದಿ. ಇದೊಂದೇ ವಿಚಾರ ಸಾಕು, ಮೋದಿಯವರು ಜನರ ಬಗ್ಗೆ ಇಟ್ಟಿರುವ ಪ್ರೀತಿ, ಜನರು ಮೋದಿಯವರ ಮೇಲಿಟ್ಟಿರುವ ಅಪಾರವಾದ ನಂಬಿಕೆಯ ಆಳ ಅರಿಯಲು.

ಜನಪ್ರಿಯತೆ ಮತ್ತು ಚುನಾವಣೆಗಳ ದೊಡ್ಡ ಗೆಲುವುಗಳೇ ಸದಾ ವರ್ಣರಂಜಿತವಾಗಿ ಹುಬ್ಬೇರಿಸುವುದು ಸಹಜವೇ. ಆದರೆ ಜನರ ನಂಬಿಕೆಯ ಸೌಧ ಕೆಡವದಂತೆ ಇಪ್ಪತ್ತು ವರ್ಷಗಳವರೆಗೂ ಕಾಪಾಡಿಕೊಳ್ಳುವು ಅಷ್ಟು ಸುಲಭದ ಮಾತಲ್ಲ. ಭಾರತದ ಮೂಲೆ ಮೂಲೆಯಲ್ಲೂ ಮೋದಿಯ ವರ ಬಗ್ಗೆ ಅಪಾರ ಗಳಿಸಿರಬೇಕಾದರೆ, ಎಷ್ಟೋ ವರ್ಷದಿಂದ ಮೋದಿಯವರು ಭಾರತದ ಕುರಿತು ಕಂಡಿರುವ ಕನಸುಗಳು ಮತ್ತು ಅದರ ಸಾಕಾರಕ್ಕಾಗಿ ಅವರು ಹಾಕುತ್ತಿರುವ ಪರಿಶ್ರಮ ಪ್ರಮಾಣ ತುಂಬಾ ದೊಡ್ಡದಿದೆ. ಅದೇ ನಮಗೆಲ್ಲ ಪ್ರೇರಣೆಯೂ ಆಗಿದೆ. ಮೋದಿ ತಾವು ಮುಖ್ಯಮಂತ್ರಿ ಆದಾಗಿನಿಂದಲೂ ಎಲ್ಲ ನಾಯಕರಿಗಿಂತ ವಿಶೇಷವಾಗಿ ಗುರುತಿಸಿ ಕೊಂಡರು.

ವಿದ್ಯುತ್ ಪೂರೈಕೆ ವಿಚಾರದಲ್ಲಿ ಎಷ್ಟೋ ನಾಯಕರ ರಾಜಕೀಯ ಭವಿಷ್ಯ ಕಮರಿದಾಗ, ಮೋದಿ ರೈತರ ವಿಶ್ವಾಸ ಗಳಿಸಿ ಕೊಂಡರು. ಗುಜರಾತ್ ದೇಶಕ್ಕೇ ವಿದ್ಯುತ್ ಪೂರೈಕೆ ಮಾಡವಂತಹ ರಾಜ್ಯವನ್ನಾಗಿ ಪರಿವರ್ತನೆ ತಂದರು. ಈಗ ಪ್ರಧಾನಿಯಾಗಿ ದೇಶದ ಹಳ್ಳಿಹಳ್ಳಿಯ ಮನೆಗಳಲ್ಲೂ ವಿದ್ಯುತ್ ದೀಪಗಳಿರಬೇಕು ಎಂಬುದನ್ನೂ ಸಾಕಾರ ಮಾಡಿತೋರಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ಉದ್ಯಮದಾರರ ಸಭೆ-ಸಮಾರಂಭಗಳೂ ನಡೆಯುವುದೇ ಅಪರೂಪ ಎಂಬ ದಿನಗಳಲ್ಲೇ, 2003ರಲ್ಲಿ ”ವೈಬ್ರೆಂಟ್ ಗುಜರಾತ್’ ಎಂಬ ಉದ್ಯಮಿದಾರರ ಸಭೆ ಆಯೋಜಿಸಿ, ಗುಜರಾತ್‌ಗಿರುವ ಸಾಧನಾ ಸಾಮರ್ಥ ವನ್ನು ಜಗತ್ತಿಗೇ ಪರಿಚಯಿಸಿದರು. ಪ್ರಧಾನಿಯಾದ ನಂತರ ದೇಶಕ್ಕೆ ದಾಖಲೆ ಪ್ರಮಾಣದಲ್ಲಿ ಎಫ್‌ಡಿಐ ಹರಿದು ಬರುವಲ್ಲಿ ಅವರ ದೂರದೃಷ್ಠಿ ಯೇ ಕಾರಣ.

‘ಗುಜರಾತ್ ಮಾಡೆಲ್’ ಅಭಿವೃದ್ಧಿ ಬಗ್ಗೆ ಹೊಸದಾಗಿ ಹೇಳುವುದೇನು ಇಲ್ಲ. ಅದು ಭಾರತಕ್ಕೇ ಮಾದರಿಯಾದ ಅಭಿವೃದ್ಧಿ ಪರ್ವ. ಕೃಷಿ ಕ್ಷೇತ್ರದಲ್ಲಿ ಹಲವು ವೈಪರೀತ್ಯಗಳ ನಡುವೆಯೂ ಬಂಪರ್ ಬೆಳೆ ಬರುವಂತಹ ಕ್ರಮಗಳು, ಮೂಲಸೌಕಯಗಳ ಅಭಿವೃದ್ಧಿ ಉತ್ತುಂಗದಲ್ಲಿದ್ದವು. ಪ್ರಧಾನಿಯಾದ ನಂತರವೂ ಭಾರತದ ರೈತರು ಸ್ವತಂತ್ರರಾಗಿ ಬಾಳಬೇಕು ಎಂದು ಹಲವು ದಿಟ್ಟ ಕ್ರಮಗಳು ಮೋದಿಯ ವರಿಂದ ಮೂಡಿಬಂದವು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಾರಿಗೆ ತಂದ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ ವು ವಿಶ್ವದಲ್ಲಿಯೇ ಅತ್ಯಂತ ಮನ್ನಣೆ ಪಡೆಯಿತು. ಹಾಗೆ ನೋಡಿದರೆ, ಈ ಅಭಿಯಾನವು ಗುಜರಾತ್‌ನಲ್ಲಿ ಮೋದಿಯವರಿದ್ದಾಗ ತಂದ ‘ಕನ್ಯಾ ಕೆಲವಾಣಿ’ ಯೋಜನೆಯ ಮುಂದುವರಿದ ಭಾಗವೆನ್ನಬಹುದು.

ಇಷ್ಟು ದೀರ್ಘಕಾಲ ಒಬ್ಬ ಜನನಾಯಕನಾಗಿ ಮೋದಿ ಯವರು ಇಂದಿಗೂ ಉಳಿದಿಕೊಂಡರಲು ಕಾರಣ ಅವರ ವ್ಯಕ್ತಿತ್ವ. ತಮ್ಮನ್ನು ತಾವೇ ಪರೀಕ್ಷೆಗೆ ಒಡ್ಡಿಕೊಳ್ಳುವುದು, ಪ್ರತಿದಿನವೂ ತಮಗೆ ತಾವೇ ಹೊಸಹೊಸ ಸವಾಲು ಹಾಕಿಕೊಂಡು ಅದರ ಸಾಕಾರಕ್ಕೆ ಎಲ್ಲಿಯೂ ವಿಚಲಿತರಾಗದೇ ಮುನ್ನುಗ್ಗುವ ಗುಣವೇ ಕಾರಣ. ಸವಾಲುಗಳನ್ನು ಸಾರ್ವಜನಿಕವಾಗಿ ಘೋಷಿಸಿ, ಅದನ್ನು ನಿಜ ಮಾಡಲು ತಮ್ಮ ಇಡೀ ತಂಡಕ್ಕೆ ಒಂದಷ್ಟು ಹುರುಪು ತುಂಬಿ, ಅಂದುಕೊಂಡದ್ದನ್ನು ಮಾಡಿಯೇ ತೀರುವ ಅವರ ಛಾತಿ ಅವರೇ ಸರಿಸಾಠಿ. ಆಡಳಿತ ಯಂತ್ರವೇ ಜಡ್ಡುಗಟ್ಟಿದ ಸಮಯದಲ್ಲಿ ಅಧಿಕಾರಕ್ಕೆ ಬಂದು ಕೆಲ ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೊಸ ವೇಗ ನೀಡಿದ್ದಾರೆ.

ದ್ವೇಷ ಕಾರುವವರಿಗೂ ಘನತೆಯಿಂದ ಮಾತನಾಡು ಎಂದು ಹೇಳಿಕೊಡುವ ಭಾರತದ ಗುಣವು ಮೋದಿಯವರಲ್ಲಿದೆ. ಸತ್ಯನಿಷ್ಠೆೆ ಯಿಂದ ನಮ್ಮ ಕೆಲಸ ಮಾಡಿದರೆ ನಮ್ಮ ಸುತ್ತಲಿನ ನಕಾರಾತ್ಮಕ ಅಂಶಗಳನ್ನು ನಾವು ಹೊಡೆದೋಡಿಸಬಹುದು ಎಂಬುದನ್ನು ಮೋದಿಯವರನ್ನು ನೋಡಿ ಕಲಿಯಬಹುದು. ಒಂದು ಸಣ್ಣ ತಪ್ಪನ್ನೇ ಹಿಡಿದು, ದೊಡ್ಡದು ಮಾಡಿ ರಾಜಕೀಯ ಜೀವನವನ್ನೇ ನಾಶ ಮಾಡುವ ಇಂದಿನ ದಿನಗಳಲ್ಲಿ, ಮೋದಿಯವರು ಎರಡು ದಶಕಗಳಿಂದ ತಮ್ಮ ಪ್ರಾಮಾಣಿಕತೆಯಿಂದ ಪ್ರಜ್ವಲಿಸುತ್ತಲೇ ಇದ್ದಾರೆ. ತಮ್ಮ ದೂರದೃಷ್ಠಿ, ಛಲ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಸಂತೃಪ್ತರಾಗಿ ಬಾಳುವಂತಹ ಭಾರತದ ಕಟ್ಟಬೇಕು ಎಂಬ ಏಕೈಕ ಕನಸಿನೊಂದಿಗೆ ಮೋದಿ ಮುನ್ನಡೆಯುತ್ತಿದ್ದಾರೆ. ಕೆಲವೊಂದು ದೊಡ್ಡ ದೊಡ್ಡ ಹೆಸರಿನ, ಮನೆತನ ದವರು ಕೇವಲ ದೊಡ್ಡ ಭಾಷಣ ಮಾಡಿ, ಕೆಲಸ ಮಾಡಲಾಗದೇ ಕೈಚೆಲ್ಲುತ್ತಾರೆ.

ಇನ್ನು ಕೆಲವರು ಸವಾಲುಗಳನ್ನು ಹಾಕಿಕೊಂಡು, ಅದನ್ನು ಜಾರಿ ಮಾಡುವಾಗ ಅದರ ಗಾತ್ರ ಅರಿಯದೇ ಕೆಲಸ ಕೈಚೆಲ್ಲಿ ಬಿಡುತ್ತಾರೆ. ಆದರೆ, ಮೋದಿ ಇವರಿಬ್ಬರ ಕೆಲಸವನ್ನೂ ಮಾಡುವಂತವರು. ದೊಡ್ಡ ಯೋಚನೆಗಳು, ಅಷ್ಟೇ ದೊಡ್ಡ ಯೋಜನೆ ಗಳನ್ನು ತಂದು, ಅದನ್ನು ಮೋದಿ ಸಾಧಿಸಿಬಿಡುತ್ತಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕಳಂಕ ರಹಿತ ಜನನಾಯಕಾರಿ, ಜನಸೇವಕ ರಾಗಿ ಮುನ್ನಡೆಯುತ್ತಿರುವ ನರೇಂದ್ರ ಮೋದಿ ಅವರಿಂದ ಇನ್ನಷ್ಟು ಅತ್ತ್ಯುತ್ತಮ ಕೆಲಸಗಳು ಮೂಡಿಬರಲಿವೆ. ಆತ್ಮನಿರ್ಭರ ಭಾರತಕ್ಕಾಗಿ ಅವರು ಕೈಗೊಂಡಿರುವ ಎಲ್ಲ ಯೋಜನೆಗಳು ಸಾಕಾರವಾಗಿ ಭಾರತವು ವಿಶ್ವದಲ್ಲೇ ಅಭಿವೃದ್ಧಿ ಹೊಂದಿದ ರಾಷ್ಟ್ರ ವಾಗುವ ಎಲ್ಲ ದಿನಗಳೂ ಮುಂದೆ ನಾವು ಕಾಣಲಿದ್ದೇವೆ.

ಐತಿಹಾಸಿಕ ಗೆಲುವು ಎಲ್ಲದಕ್ಕೂ ಸಬ್ಸಿಡಿ ಕೊಟ್ಟು ಕಣ್ಣೊರೆಸುವ ತಂತ್ರ ಅನುಸರಿಸುವ ಇತರ ಸರಕಾರಗಳ ಮಧ್ಯೆ, ಮೋದಿಯ ವರು ಜನರಿಗೇ ತಾವೇ ಎಲ್‌ಪಿಜಿ ಸಬ್ಸಿಡಿ ಹಣ ಕೈಬಿಡಿ ಎಂದಾಗ ಸಾರ್ವಜನಿಕರ ಪ್ರತಿಕ್ರಿಯೆ ನೀಡಿದ ರೀತಿ ಸದಾ ಸ್ಮರಣೀಯ. ಸ್ವಚ್ಛ ಭಾರತಕ್ಕೆ ಕರೆ ಕೊಟ್ಟಾಗ, ಇಡೀ ದೇಶವೇ ಒಂದಾಗಿ ಕೈಗೂಡಿಸಿದ್ದು ಮರೆಯಲಾರದ ಘಟನೆ. ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಮೂಲಮಂತ್ರವು ಮತ್ತೆ ಸಾಬೀತಾ ಗಿದ್ದು, ಒಬ್ಬ ಗುಜರಾತಿಯಾದರೂ ಉತ್ತರಪ್ರದೇಶದ ಕ್ಷೇತ್ರದಲ್ಲಿ ಜಾತಿ, ಸಮುದಾ ಯದ ಬೆಂಬಲವೂ ಇಲ್ಲದೇ ದೊಡ್ಡ ಅಂತರದಲ್ಲಿ ಆಯ್ಕೆಯಾದದ್ದೂ ಇತಿಹಾಸ. ಜನಪ್ರೀತಿಯೇ ಸೋಜಿಗ ರಾಜ್ಯ-ರಾಷ್ಟ್ರ ರಾಜಕಾರದಲ್ಲಿ ಮೋದಿಯವರ ಆಡಳಿತವನ್ನು ‘ಪರಿಣಾಮಕಾರಿ, ದಕ್ಷ, ಸುಧಾರಣೆಯ’ ಅವಧಿ ಎಂದೇ ಹೇಳಬೇಕು.

ಆಡಳಿತ ಮತ್ತು ರಾಜಕೀಯಕ್ಕೂ ಮಿಗಿಲಾಗಿ ಮೋದಿಯವರ ಬಗ್ಗೆ ಹೆಮ್ಮೆ ಪಡಲು ಸಾಕಷ್ಟು ಸಕಾರಣಗಳು ನಮಗಿವೆ. ಭಾರತದ ಜನರೊಂದಿಗೆ ಅವರು ಬೆರೆತಿರುವ ರೀತಿ, ಅವರು ಕರೆಕೊಟ್ಟರೆ ಇಡೀ ದೇಶವೇ ಅವರ ಜತೆ ನಿಲ್ಲುವ ರೀತಿ ಸೋಜಿಗವೇ ಸರಿ. ಬ್ಬ ರಾಜಕಾರಣಿ ಎನ್ನುವುದಕ್ಕಿಂತ ಅವರೊಬ್ಬ ರಾಜಕೀಯ ಸಂತ.