ಗುಜರಾತ್: ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಸಬ್ ಜೈಲಿನಲ್ಲಿ ಶರಣಾದರು. ಗಡುವು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಎಲ್ಲ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಅಪರಾಧಿಗಳು ತಡರಾತ್ರಿ ಎರಡು ಖಾಸಗಿ ವಾಹನಗಳಲ್ಲಿ ಸಿಂಗ್ವಾಡ್ ರಂಧಿಕ್ಪುರದಿಂದ 11:30 ಕ್ಕೆ ಗೋಧ್ರಾ ಸಬ್ ಜೈಲಿಗೆ ಬಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ” ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಎನ್ಎಲ್ ದೇಸಾಯಿ ತಿಳಿಸಿದ್ದಾರೆ.
ಜನವರಿ 8 ರಂದು, 2002 ರ ಗೋಧ್ರಾ ನಂತರದ ಗಲಭೆಯ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ನೀಡಿದ್ದ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು, ಅಲ್ಲದೆ ಕೂಡಲೇ ಅಪರಾಧಿಗಳು ಜನವರಿ 22 ರ ಮೊದಲು ಜೈಲು ಅಧಿಕಾರಿಗಳಿಗೆ ಶರಣಾಗು ವಂತೆ ಹೇಳಿತ್ತು.