Sunday, 15th December 2024

ನನ್ನ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಸೈನಾ ನೆಹ್ವಾಲ್

ವದೆಹಲಿ: “ಇದು ನಮ್ಮೆಲ್ಲರಿಗೂ ಬಹಳ ಮಹತ್ವದ ದಿನ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಅದೃಷ್ಟ. ನಾವು ಇಂದು ರಾಮನ ದರ್ಶನ ಪಡೆಯುತ್ತೇವೆ. ಆದ್ದರಿಂದ, ನಾವು ಆ ಕ್ಷಣಕ್ಕಾಗಿ ಕಾಯುತ್ತಿದ್ದೇವೆ … ನನ್ನ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ಭಾರತದ ಸ್ಟಾರ್ ಬ್ಯಾಡ್ಮಿಂಟನ್ಆ ಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ.

ಭಾರತದ ಸ್ಟಾರ್ ಬ್ಯಾಡ್ಮಿಂಟನ್ಆ ಟಗಾರ್ತಿ ಸೈನಾ ನೆಹ್ವಾಲ್ ಸೋಮವಾರ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಅಯೋಧ್ಯೆಗೆ ಆಗಮಿಸಿದ್ದಾರೆ.

ಪ್ರತಿಷ್ಠಾಪನಾ ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ ಸೈನಾ ದೇವಾಲಯ ಪಟ್ಟಣವನ್ನು ತಲುಪಿದರು.

ಅಯೋಧ್ಯೆಗೆ ಆಗಮಿಸಿ ರಾಮಮಂದಿರದ ದರ್ಶನ ಪಡೆಯುವುದು ನನಗೆ ಸಿಕ್ಕ ಅದೃಷ್ಟವಾಗಿದೆ. ಪವಿತ್ರ ದೇವಾಲಯದಲ್ಲಿ ಭಗವಾನ್ ರಾಮನ ದರ್ಶನವನ್ನು ಪಡೆಯುತ್ತೇನೆ ಎಂದು ಹೇಳಿದ್ದಾರೆ. ನನ್ನ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.