Sunday, 15th December 2024

ಬೆಂಗಳೂರಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಅಳವಡಿಕೆಯ ಸಂಶೋಧನಾ ಸಂಸ್ಥೆ ವಿಜ್ಹಿಯ ನೂತನ ಕಚೇರಿ ಉದ್ಘಾಟನೆ

– ಆರೋಗ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನದ ಸಂಶೋಧನೆಗಾಗಿ ಐಐಟಿಬಿ ಹಾಗೂ ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಹೂಡಿಕೆ ಮಾಡಿರುವ ಸಂಸ್ಥೆ
– ಕೃಷ್ಣ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಭಾಸ್ಕರ್‌ ರಾವ್‌ ಬೊಲ್ಲಿನೇನಿ ಹಾಗೂ ಅಮೇರಿಕಾದ ಪಿಟ್ಸ್‌ಬರ್ಗ್‌ ವೈದ್ಯಕೀಯ ವಿಶ್ವವಿದ್ಯಾಲಯದ ಹಿರಿಯ ಉಪಕುಲಪತಿ ಡಾ. ಅನಂತ ಶೇಖರ್‌ ಭಾಗಿ

ಬೆಂಗಳೂರು: ಜೀವನಶೈಲಿ ರೋಗಗಳ ನಿರ್ವಹಣೆ ಮತ್ತು ವೈಯಕ್ತಿಕ ಚಿಕಿತ್ಸಾ ವಿಧಾನವನ್ನ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಬಹಳಷ್ಟು ಮಹತ್ವದ ಪಾತ್ರವಹಿಸಲಿದೆ. ಈ ಬಗ್ಗೆ ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ ಮುಂಬಯಿ ಸೇರಿದಂತೆ ಅಮೇರಿಕಾದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹೂಡಿಕೆ ಮಾಡಲಾಗಿದೆ ಎಂದು ವಿಜ್ಹಿ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿಷ್ಣುವರ್ಧನ್‌ ತಿಳಿಸಿದರು.

ಇಂದು ನೂತನ ಕಚೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೃತಕ ಬುದ್ದಿಮತ್ತೆಯನ್ನ ಬಳಸಿಕೊಂಡು ಜೀವನಶೈಲಿ ಹಾಗೂ ವೈಯಕ್ತಿಕ ಚಿಕಿತ್ಸಾ ವಿಧಾನವನ್ನ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳು ಹಾಗೂ ಜಾಗತಿಕ ಪ್ರಯತ್ನದ ಅನ್ವೇಷಣೆಯ ಪ್ರಮುಖ ಭಾಗವಾಗುವ ಹಿನ್ನಲೆಯಲ್ಲಿ ನಮ್ಮ ಸಂಸ್ಥೆ ವಿಜ್ಹಿ ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ ಮುಂಬಯಿ ಸೇರಿದಂತೆ ಅಮೇರಿಕಾದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಹೂಡಿಕೆ ಮಾಡಿದೆ. ಮೂಲತಃ ಬಳ್ಳಾರಿಯವರಾಗಿರುವ ನಾವುಗಳ ರಾಜ್ಯದಲ್ಲಿ ಉದ್ಯೋಗಾವ ಕಾಶಗಳನ್ನ ಹೆಚ್ಚಿಸುವ ನಿಟ್ಟಿನಲ್ಲಿ ಹೂಡಿಕೆಯನ್ನ ಮಾಡಿದ್ದು ಇಂದು ಬೆಂಗಳೂರಿನಲ್ಲಿ ನೂತನ ಕಚೇರಿಯನ್ನ ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ 500 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನ ಸೃಷ್ಟಿಸಲಿದ್ದೇವೆ. ಅಯೋಧ್ಯೆ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಶುಭ ಸಂಧರ್ಭದಲ್ಲಿ ನೂತನ ಕಚೇರಿಯನ್ನು ಪ್ರಾರಂಭಿಸುವುದು ಬಹಳ ಸಂತಸದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಕೃಷ್ಣ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಭಾಸ್ಕರ್‌ ರಾವ್‌ ಬೊಲ್ಲಿನೇನಿ ಹಾಗೂ ಅಮೇರಿಕಾದ ಪಿಟ್ಸ್‌ಬರ್ಗ್‌ ವೈದ್ಯಕೀಯ ವಿಶ್ವವಿದ್ಯಾಲಯದ ಹಿರಿಯ ಉಪಕುಲಪತಿ ಡಾ. ಅನಂತ ಶೇಖರ್‌ ಭಾಗಿಯಾಗಿದ್ದರು.