ಬೆನ್ನಲ್ಲೇ ಮುಂಬರುವ ಟಿ20 ವಿಶ್ವಕಪ್ನಲ್ಲೂ ಆಸ್ಟ್ರೇಲಿಯಾ ತಂಡವನ್ನು ಮಾರ್ಷ್ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಈ ಬಳಗದಲ್ಲಿ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ಒಂದು ವೇಳೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಹಾಗೂ ಐಪಿಎಲ್ನಲ್ಲಿ ಮಿಂಚಿದರೆ ಟಿ20 ವಿಶ್ವಕಪ್ ತಂಡದಲ್ಲೂ ಡೇವಿಡ್ ವಾರ್ನರ್ ಕಾಣಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಸ್ಟೀವ್ ಸ್ಮಿತ್ ಕೂಡ ಈ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.
ಏಕದಿನ ಸರಣಿಯಿಂದ ಹೊರಗುಳಿದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾ – ವೆಸ್ಟ್ ಇಂಡೀಸ್ ನಡುವಣ ಫೆಬ್ರವರಿ 2 ರಿಂದ ಆರಂಭವಾಗಲಿದೆ. ಸರಣಿಯಲ್ಲಿ ಮೊದಲು 3 ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಬಳಿಕ ಟಿ20 ಸರಣಿ ಶುರುವಾಗಲಿದೆ.
ಏಕದಿನ ಸರಣಿ ವೇಳಾಪಟ್ಟಿ:-
- ಫೆಬ್ರವರಿ 2- ಮೊದಲ ಏಕದಿನ ಪಂದ್ಯ (ಮೆಲ್ಬೋರ್ನ್)
- ಫೆಬ್ರವರಿ 4- ಎರಡನೇ ಏಕದಿನ ಪಂದ್ಯ (ಸಿಡ್ನಿ)
- ಫೆಬ್ರವರಿ 6- ಮೂರನೇ ಏಕದಿನ ಪಂದ್ಯ (ಕ್ಯಾನ್ಬೆರ)
ಟಿ20 ಸರಣಿ ವೇಳಾಪಟ್ಟಿ:-
- ಫೆಬ್ರವರಿ 9- ಮೊದಲ ಟಿ20 ಪಂದ್ಯ (ಹೊಬರ್ಟ್)
- ಫೆಬ್ರವರಿ 11- ಎರಡನೇ ಟಿ20 ಪಂದ್ಯ (ಅಡಿಲೇಡ್)
- ಫೆಬ್ರವರಿ 13- ಮೂರನೇ ಟಿ20 ಪಂದ್ಯ (ಪರ್ತ್)
ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಜೇಸನ್ ಬೆಹ್ರೆಂಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ, ವೇಡ್, ಆಯಡಂ ಝಂಪಾ.
ಏಕದಿನ ತಂಡ: ಸ್ಟೀವನ್ ಸ್ಮಿತ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಶೇನ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಲ್ಯಾನ್ಸ್ ಮೋರಿಸ್, ಮ್ಯಾಟ್ ಶಾರ್ಟ್, ಆಯಡಂ ಝಂಪಾ.