ಬೆಂಗಳೂರು: ಅಜಯ್ ರಾವ್ ಬುಧವಾರ ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2003 ರಲ್ಲಿ ತೆರೆಕಂಡ ಕಿಚ್ಚ ಸಿನಿಮಾದಲ್ಲಿ ಸುದೀಪ್ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು 2008ರಲ್ಲಿ ಬಿಡುಗಡೆಯಾದ ತಾಜ್ ಮಹಲ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಹೊಸ ದಾಖಲೆ ಬರೆಯಿತು. ಅಜಯ್ ರಾವ್ ಬೆಸ್ಟ್ ಆಕ್ಟರ್ ಎಂಬ ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಆರ್ ಚಂದ್ರು ನಿರ್ದೇಶನದ ಚಿತ್ರದಲ್ಲಿ ಅಜಯರಾವ್‌ಗೆ ಜೋಡಿಯಾಗಿ ಪೂಜಾ ಗಾಂಧಿ ಅಭಿನಯಿಸಿದರು.
‘ಕೃಷ್ಣ ಟಾಕೀಸ್’ ‘ಲವ್ ಯು ರಚ್ಚು’ ಮತ್ತು ‘ಶೋಕಿ ವಾಲಾ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಇತ್ತೀಚಿಗೆ ‘ಯುದ್ಧ ಕಾಂಡ ಚಾಪ್ಟರ್ 2 ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ತಂಡ ಅಜಯ್ ರಾವ್ ಅವರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಇಂದು ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ.