Sunday, 15th December 2024

ಸುಭದ್ರ ಸಂಪತ್ತುಗಳಲ್ಲಿ ಆರೋಗ್ಯಕರ ಬೆಳವಣಿಗೆ, CASA; ಪ್ರಬಲವಾದ ಫ್ರಾಂಚೈಸ್‌ಗೆ ಕಾರಣ

Q3FY24/9MFY24ಗಾಗಿ ವಿತರಣೆ ವ/ವಕ್ಕೆ 17%/ 19%ಗೆ ಏರಿಕೆವ್ ; ನಿವ್ವಳ ಸಾಲ ಪುಸ್ತಕ ವ/ವಕ್ಕೆ 27% ಏರಿಕೆ ;

ಸೆಪ್ಟಂಬರ್’23ದಲ್ಲಿ ಇದ್ದ 27.5%ಗೆ ಹೋಲಿಸಿದರೆ ಡಿಸಂಬರ್’23ದಂದು ಸುಭದ್ರಿತ ಪುಸ್ತಕ 28.3%ದಲ್ಲಿ;

GNPA/NNPA 2.1%/0.16% ದಲ್ಲೂ PAR 3.6% ನಲ್ಲೂ ಇದ್ದು ಸಂಪತ್ತಿನ ಗುಣಮಟ್ಟ ಆರೋಗ್ಯಕರವಾಗಿಯೇ ಉಳಿದಿದೆ ;

ವ/ವಕ್ಕೆ ಠೇವಣಿಗಳು ₹29,669 ಕೋಟಿಯಲ್ಲಿ 28% ಏರಿಕೆ; CASA ವ/ವಕ್ಕೆ 24% ಏರಿಕೆ; CASA ಅನುಪಾತ 25.5%ದಲ್ಲಿ;

Q3FY24 ಗಾಗಿ RoA /RoE 3.1% /24.2% ನಲ್ಲಿ

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ.,[BSE: 542904; NSE: UJJIVANSFB], ಡಿಸಂಬರ್ 31, 2023ಕ್ಕೆ ಅಂತ್ಯಗೊಂಡ ಒಂಭತ್ತು ತಿಂಗಳು ಮತ್ತು ತ್ರೈಮಾಸಿಕಕ್ಕೆ ತನ್ನ ಹಣಕಾಸು ಕಾರ್ಯಕ್ಷಮತೆಯನ್ನು ಇಂದು ಘೋಷಿಸಿತು.

*Q3FY24 ಮತ್ತು 9MFY24ಗಾಗಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವ್ಯವಹಾರ ಕಾರ್ಯಕ್ಷಮತೆಯ ಸಾರಾಂಶ *

ಸಂಪತ್ತುಗಳು
• Q3FY24/9MFY24 ದಲ್ಲಿ ವಿತರಣೆಗಳು ₹ 5,675 crore/ ₹ 16,708 ಕೋಟಿಯಲ್ಲಿದ್ದು ವ/ವಕ್ಕೆ 17%/19%ಹೆಚ್ಚಳ
• Q3FY24/9MFY24ದಲ್ಲಿ ₹ 595 crore/ ₹ 1,554 ಕೋಟಿ ವಿತರಿಸಲಾದ ಕೈಗೆಟುಕುವ ಗೃಹ(Affordable Housing$) ಸಾಲ ವ/ವಕ್ಕೆ 73%/63% ಹೆಚ್ಚಳ
• ₹27,743* ಕೋಟಿಯಲ್ಲಿ ನಿವ್ವಳ ಸಾಲ ಪುಸ್ತಕ YoY/QoQ ಕ್ಕೆ27%/4% ಹೆಚ್ಚಳ
• ಸೆಪ್ಟಂಬರ್’23ದಲ್ಲಿ ಇದ್ದ 27.5%ಗೆ ಹೋಲಿಸಿದರೆ ಡಿಸಂಬರ್’23ದಂದು ಸುಭದ್ರಿತ ಪುಸ್ತಕ 28.3%ದಲ್ಲಿ ಇತ್ತು

ಸಂಗ್ರಹ ಮತ್ತು ಸಂಪತ್ತಿನ ಗುಣಮಟ್ಟ
• ಡಿಸಂಬರ್’23ದಲ್ಲಿ~99% ಸಾಮರ್ಥ್ಯದೊಂದಿಗೆ ಸಂಗ್ರಹಗಳ ಮುಂದುವರಿದ ಏರಿಕೆ; NDA ಸಂಗ್ರಹ ನಿರಂತರವಾಗಿ ~100%ದಲ್ಲಿ
• ಡಿಸಂಬರ್’23ರಂದು ಇದ್ದಂತೆ, ಅಪಾಯದಲ್ಲಿದ್ದ ಪೋರ್ಟ್‌ಫೋಲಿಯೋ* 3.6%ನಲ್ಲಿ; ಸೆಪ್ಟೆಂಬರ್’23ದಲ್ಲಿ ಇದ್ದ 2.2%ಗೆ ಹೋಲಿಸಿದರೆ, ಡಿಸಂಬರ್’23ದಲ್ಲಿ GNPA* 2.1%ಗೆ ಕುಸಿದಿತ್ತು; ಡಿಸಂಬರ್’23ರಂದು NNPA* ನಿಕೃಷ್ಟ 0.16%ನಲ್ಲೇ ಇತ್ತು
• Q3FY24 ರೈಟ್‌ಆಫ್₹ 93 ಕೋಟಿಯಲ್ಲಿ; ಡಿಸಂಬರ್’23ರಂದು ಇದ್ದಂತೆ, ಪ್ರಾವಿಶನ್ ಕವರೇಜ್ ಅನುಪಾತ 92%# ನಲ್ಲಿ

ಠೇವಣಿಗಳು
• ಡಿಸಂಬರ್’23ರಂದು ಠೇವಣಿಗಳು ₹ 29,669 ಕೋಟಿಯಲ್ಲಿ; YoY/QoQ ಕ್ಕೆ 28%/2% ಏರಿಕೆ
• CASA ₹ 7,556 ಕೋಟಿಯಲ್ಲಿ YoY/QoQ ಕ್ಕೆ 24%/8%ಏರಿಕೆ; ಸೆಪ್ಟೆಂಬರ್’23ರಲ್ಲಿ ಇದ್ದ 24.1%ಗೆ ಹೋಲಿಸಿದರೆ CASA ಅನುಪಾತ ಡಿಸಂಬರ್’23ದಲ್ಲಿ 25.5% ಇತ್ತು
• YoY/QoQ ಕ್ಕೆ ರೀಟೇಲ್ TD^ 40%/9% ಬೆಳವಣಿಗೆ

ಹಣಕಾಸು
• Q3FY24 NII ₹ 860 ಕೋಟಿಯಲ್ಲಿವ/ವಕ್ಕೆ 23% ಏರಿಕೆ; Q2FY24ದಲ್ಲಿ 8.8% ಇದ್ದ NIM Q3FY24ದಲ್ಲೂ 8.8%ನಲ್ಲಿತ್ತು
• Q3FY23ದಲ್ಲಿ 53% ಇದ್ದ ಕಾಸ್ಟ್ ಟು ಇನ್ಕಮ್ ಅನುಪಾತಕ್ಕೆ ಹೋಲಿಸಿದರೆ Q3FY24ದಲ್ಲಿ ಅದು 56% ಇತ್ತು
• Q3FY24 PPoP ₹ 457ಕೋಟಿಯಲ್ಲಿ ವ/ವಕ್ಕೆ 18% ಹೆಚ್ಚಳ; PAT ₹ 300 ಕೋಟಿಯಲ್ಲಿ ವ/ವಕ್ಕೆ 2% ಏರಿಕೆ

ಬಂಡವಾಳ ಮತ್ತು ದ್ರವೀಯತೆ
• ದರ್ಜೆ-1 ಬಂಡವಾಳ 21.97%ದೊಂದಿಗೆ ಬಂಡವಾಳ ಸಮರ್ಪಕತೆ ಅನುಪಾತ(Capital adequacy ratio) 24.37%ದಲ್ಲಿ
• ತ್ರೈಮಾಸಿಕದಲ್ಲಿ ಇನ್ನಷ್ಟು ದುರ್ಬಲಗೊಳಿಸಲಾದ ಹೆಚ್ಚುವರಿ ಸಿಸ್ಟಮ್ ದ್ರವೀಯತೆ(Excess system liquidity)
• 30, ಸೆಪ್ಟೆಂಬರ್’23ದಲ್ಲಿ 158% ಇದ್ದ ಪ್ರಾವಿಶನಲ್ ಡೈಲಿ LCR 31,ಡಿಸಂಬರ್’23ದಲ್ಲಿ 137%ನಲ್ಲಿತ್ತು

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಮ್‌ಡಿ ಮತ್ತು ಸಿಇಒ ಶ್ರೀ ಇಟ್ಟಿರ ಡೇವಿಸ್, “ಪ್ರಬಲವಾದ CASAಬೆಳವಣಿಗೆಯ ಬೆಂಬಲದೊಂದಿಗೆ ಆರೋಗ್ಯಕರವಾದ ವಿತರಣೆಗಳು ಹಾಗೂ ಅಧಿಕ ಠೇವಣಿ ಬೆಳವಣಿಗೆಯೊಂದಿಗೆ Q3FY24 , ಮತ್ತೊಂದು ಒಳ್ಳೆಯ ತ್ರೈಮಾಸಿಕವಾಗಿತ್ತು. ನಮ್ಮ ಭದ್ರತೆಯುಳ್ಳ ಪುಸ್ತಕಗಳ ಮೇಲಿನ ಸುಧಾರಿಸುವೆಡೆಗಿನ ಗಮನಕೇಂದ್ರೀಕರಣ ಮುಂದುವರಿದು, ಕಳೆದ ತ್ರೈಮಾಸಿಕದಲ್ಲಿ 27.5% ಇದ್ದ ಅದು ಈ ತ್ರೈಮಾಸಿಕದಲ್ಲಿ 28.3%ಗೆ ಏರಿತ್ತು. ಈ ತ್ರೈಮಾಸಿಕದಲ್ಲಿ ವಿತರಣೆಗಳು ₹ 5,675 ಕೋಟಿಯಲ್ಲಿದ್ದವು.ಕೈಗೆಟುಕುವ ಗೃಹ ಸಾಲ (ಮೈಕ್ರೊ-ಅಡಮಾನಗಳು ಸೇರಿದಂತೆ) ಪ್ರಬಲವಾದ ಮೂಲ ಬೇಡಿಕೆಯೊಂದಿಗೆ ಬೆಳವಣಿಗೆ ಮುಂದುವರಿಸಿ ತ್ರೈಮಾಸಿಕದಿಂದ ತ್ರೈಮಾಸಿಕಕದ ವ್ಯಾಪಾರ ಉತ್ಪಾದಕತೆಯನ್ನು ಸುಧಾರಿಸಿತು; ತ್ರೈಮಾಸಿಕದ ವಿತರಣೆ ₹ 595 ಕೋಟಿ ಆಗಿ ವ/ವಕ್ಕೆ 73% ಹೆಚ್ಚಾಯಿತು. ಮೇಲಾಗಿ, ಕ್ಷಿಪ್ರ ವ್ಯಾಪಾರ ತೀರ್ಮಾನಗಳಿಗೆ ನೆರವಾಗುವಂತೆ ನಮ್ಮ ಗೃಹಸಾಲ ಮತ್ತು MSME ವ್ಯಾಪಾರಕ್ಕಾಗಿ ನಾವು ಹಬ್ ಮತ್ತು ಸ್ಪೋಕ್ ಮಾಡಲ್‌ಗೆ ಬದಲಾಗುತ್ತಿದ್ದೇವೆ ಎಂದು ನಾವು ಈ ಮೊದಲು ತಿಳಿಸಿದ್ದೆವು. TATದಲ್ಲಿ ಮಹತ್ತರವಾದ ಇಳಿಕೆಯನ್ನೂ ವ್ಯಾಪಾರ ಉತ್ಪಾದಕತೆಯಲ್ಲಿ ಹೆಚ್ಚಳಿಕೆಯನ್ನೂ ನಾವು ಕಾಣುತ್ತಿದ್ದೇವೆ. ಇಂತಹ ಕಾರ್ಯಾಚರಣೆ ಸಾಮರ್ಥ್ಯಗಳ ಪ್ರಯೋಜನಗಳನ್ನು ಪಡೆದುಕೊಂಡು, ಡಿಸಂಬರ್’23ರಂದು ಇದ್ದಂತೆ ಪ್ರಸ್ತುತ ನಾವು ಒಟ್ಟೂ 13 ಸಕ್ರಿಯ ಹಬ್‌ಗಳನ್ನು ಹೊಂದಿದ್ದೇವೆ. ನಮ್ಮ ಪುಸ್ತಕವನ್ನು ವೈವಿಧ್ಯಗೊಳಿಸಿ, ಬ್ಯಾಂಕ್ ಒದಗಿಸುವ ಉತ್ಪನ್ನ ಪೋರ್ಟ್‌ಫೋಲಿಯೋವನ್ನು ವರ್ಧಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತಾ ನಾವು ಬಂಗಾರ ಸಾಲಗಳು ಹಾಗೂ ದ್ವಿಚಕ್ರ ಸಾಲಗಳು ಮುಂತಾದ ಇತರ ಅಧಿಕ ಲಾಭ ತರುವ ವ್ಯಾಪಾರ ಕ್ಷೇತ್ರಗಳ ಅಭಿವೃದ್ಧಿಯನ್ನು ಮುಂದುವರಿಸಲಿದ್ದೇವೆ. ಪ್ರಸ್ತುತ ಇವೆರೆಡೂ ಬಹಳ ಚಿಕ್ಕದಾಗಿದ್ದು, ಮುಂಬರುವ ತ್ರೈಮಾಸಿಕಗಳಲ್ಲಿ ಕ್ಷಿಪ್ರ ಬೆಳವಣಿಗೆ ಕಂಡ, ಭದ್ರತೆಯಿರುವ ಪುಸ್ತಕದ ಬೆಳವಣಿಗೆಗೆ ಸೇರ್ಪಡೆಯಾಗಲಿವೆ ಎಂದು ನಿರೀಕ್ಷಿಸುತ್ತಿದ್ದೇವೆ. ಹೆಚ್ಚುವರಿಯಾಗಿ, ನಾವು ಕೆಲವು Fintechsಗಳೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದ್ದೇವೆ ಹಾಗೂ MSME ವ್ಯಾಪಾರದಡಿ ವಿತರಣೆಗಳನ್ನು ಆರಂಭಿಸಿದ್ದು, ಇದು ನಾವು ಮುಂದುವರಿದಂತೆಲ್ಲಾ ನಮ್ಮ ಉತ್ಪನ್ನಗಳ ಕೊಡುಗೆಯನ್ನು ಸುಧಾರಿಸುವಂತಹ ಸಹಕ್ರಿಯೆಯನ್ನು ಒದಗಿಸಲಿದೆ ಎಂದು ನಾವು ನಂಬಿದ್ದೇವೆ. ಠೇವಣಿಗಳ ವಿಷಯದಲ್ಲಿ, ಬಲ್ಕ್ ಠೇವಣಿಗಳ ಮೇಲಿನ ಅವಲಂಬನೆಯನ್ನು ನಾವು ಗಣನೀಯವಾಗಿ ಕಡಿಮೆ ಮಾಡಿದ್ದು, ರೀಟೇಲ್ ಠೇವಣಿಗಳನ್ನು ಯಶಸ್ವಿಯಾಗಿ ಬೆಳೆಸುತ್ತಿದ್ದೇವೆ. ರಾಷ್ಟ್ರ ವ್ಯಾಪಿ ಬ್ರ್ಯಾಂಡ್ ಪ್ರಚಾರ ಹಾಗೂ ಮೌಲ್ಯವರ್ಧನೆ ಸಾಲ ಉತ್ಪನ್ನಗಳ ಪರಿಚಯ ಮುಂತಾದ ಯೋಜನೆಗಳು ಅರ್ಥಪೂರ್ಣವಾಗಿ ಕೊಡುಗೆ ಸಲ್ಲಿಸಲಾರಂಭಿಸಿವೆ. ಇದು, QoQದಲ್ಲಿ CASA ಪುಸ್ತಕ 8% ಹೆಚ್ಚು ಬೆಳೆಯುವುದ್ಕೆ ಕಾರಣವಾಗಿ, ಕಠಿಣವಾದ ಮಾರುಕಟ್ಟೆ ಸ್ಪರ್ಧೆ ಇದ್ದ ಹೊರತಾಗಿಯೂ ಈ ತ್ರೈಮಾಸಿಕದಲ್ಲಿ ₹ 500 ಕೋಟಿಗಿಂತ ಹೆಚ್ಚಿನ ಸೋರ್ಸಿಂಗ್‌ಗೆ ಕಾರಣವಾಗಿದೆ. CASA ಅನುಪಾತ ಕೂಡ ಸುಧಾರಣೆಗೊಂಡು, ಕಳೆದ ತ್ರೈಮಾಸಿಕದ್ಲ 24.1% ಇದ್ದದ್ದು, ಈ ತ್ರೈಮಾಸಿಕದಲ್ಲಿ 25.5%ಗೆ ಸುಧಾರಿಸಿತ್ತು. ಇದರ ಜೊತೆಗೆ, ಪರ್ಯಾಯ ಡಿಜಿಟಲ್ ವಾಹಿನಿಗಳ ಮೂಲಕ ನಾವು ನಮ್ಮ SA & TDಉತ್ಪನ್ನಗಳ ಕೊಡುಗೆಯನ್ನೂ ಆರಂಭಿಸಿದ್ದೇವೆ. ಇದು ನಮ್ಮ ಸಾಲದ(ಬಾಧ್ಯತೆ) ಪುಸ್ತಕಕ್ಕೆ ಇನ್ನಷ್ಟು ಸಣ್ಣ ತುಣುಕುಗಳನ್ನು ಸೇರಿಸುತ್ತದೆ. ಸಿಸ್ಟಮ್‌ನಲ್ಲಿರುವ ಹೆಚ್ಚುವರಿ ದ್ರವೀಯತೆಯನ್ನು ಕಡಿಮೆ ಮಾಡುವುದರ ಮೇಲಿನ ನಮ್ಮ ಗಮನ ಕೇಂದ್ರೀಕರಣವು ಮುಂದುವರಿದಿದ್ದು ಡಿಸಂಬರ್’23 ಅಂತ್ಯದಲ್ಲಿ ನಮ್ಮ ದಿನನಿತ್ಯದ LCR ಅನ್ನು 137%ಗೆ ಕಡಿಮೆ ಮಾಡಿತ್ತು. ಇದರಿಂದ ಮಾರ್ಜಿನ್‌ಗಳಿಂದ ಬರುತ್ತಿದ್ದ ಒತ್ತಡವನ್ನು ಸರಳಗೊಳಿಸಲು ನೆರವಾಯಿತು. ನಮ್ಮ NII ವ/ವಕ್ಕೆ 23% ಹಾಗೂ QoQಕ್ಕೆ 4%ವರೆಗೆ ಬೆಳೆಯುವ ಮೂಲಕ ₹ 457 ಕೋಟಿ PPoP ವರದಿ ಮಾಡುವುದಕ್ಕೆವ್ ಬೆಂಬಲ ಒದಗಿಸಿತು. ಸಾಲವೆಚ್ಚಗಳು ಸ್ಥಿರಗೊಳ್ಳುತ್ತಲ್ಲಿದ್ದು ನಾವು ಮುಂದುವರಿದಂತೆಲ್ಲಾ ಸಾಮಾನ್ಯ ಮಟ್ಟಗಳ ಕಡೆಗೆ ಚಲಿಸುತ್ತದೆ. ಈ ತ್ರೈಮಾಸಿಕದ PAT ₹ 300 ಕೋಟಿ ಆಗಿತ್ತು. ಕಳೆದ ಸತತವಾದ ಎಂಟು ತ್ರೈಮಾಸಿಕಗಳಿಂದ ಉಜ್ಜೀವನ್‌ನ ಪ್ರಬಲವಾದ ವ್ಯಾಪಾರ ಮ್ತು ಹಣಕಾಸು ಕಾರ್ಯಕ್ಷಮತೆಯು Q3FY24ಗೆ ಕ್ರಮವಾಗಿ, 3.1% /24.2% ದಲ್ಲಿ ಆರೋಗ್ಯಕರವಾದ RoA /RoE ಪ್ರದರ್ಶಿಸಲು ಕಾರಣವಾಗಿ ಉದ್ಯಮದಲ್ಲೇ ಅತ್ಯುತ್ತಮವಾದವುಗಳ ಪೈಕಿ ಒಂದೆಂದು ಸ್ಥಾನ ಪಡೆದುಕೊಂಡದೆ.

ಸಾಲ ಮತ್ತು ಠೇವಣಿ ಪುಸ್ತಕ ಬೆಳವಣಿಗೆಯ ಮೇಲಿನ ನಮ್ಮ ಮಾರ್ಗದರ್ಶನವು ಯಥಾವತ್ ಇದೆ. ನಮ್ಮ ಈ ಹಿಂದಿನ ಮಾರ್ಗದರ್ಶನದ ಪ್ರಕಾರ, ಸಾಲವೆಚ್ಚವು sub 100 bps ಒಳಗೇ ಇರಲಿದೆ. ನಮ್ಮ ತಂತ್ರಗಾರಿಕೆಗೆ ಅನುಗುಣವಾಗಿ, ದೇಶಾದ್ಯಂತ ನಾವು ನಮ್ಮ ಭೌತಿಕ ಅಸ್ತಿತ್ವವನ್ನು ವಿಸ್ತರಿಸುತ್ತಲೇ ಇರುತ್ತೇವೆ. ಈ ತ್ರೈಮಾಸಿಕದಲ್ಲಿ 29 ಹೊಸ ಶಾಖೆಗಳನ್ನು ತೆರೆಯಲಾಯಿತು ಮತ್ತು ಇದು ನಮ್ಮ ಒಟ್ಟೂ ಶಾಖೆಗಳ ಸಂಖ್ಯೆಯನ್ನು 729ಕ್ಕೆ ಏರಿಸಿದೆ. Q4ದಲ್ಲಿ ನಾವು ಇನ್ನೂ ~23 ಶಾಖೆಗಳನ್ನು ಸೇರಿಸಲಿದ್ದೇವೆ.

ಅಷ್ಟೇ ಅಲ್ಲದೆ, 30 ಜನವರಿ’24 ರಂದು ಸನ್ಮಾನ್ಯ NCLT ದಿಂದ ಹಿಯರಿಂಗ್ ಇರುವುದರಿಂದ ಮತ್ತು ಫಲಿತಾಂಶವು ಧನಾತ್ಮಕವಾಗಿರಬಹುದು ಎಂದು ಹಿನಿಕ್ಷಿಸುತ್ತಿರುವುದರಿಂದ, ನಾವು ನಮ್ಮ ಹೋಲ್ಡಿಂಗ್ ಸಂಸ್ಥೆಯೊಂದಿಗಿನ ವಿಲೀನದ ಅಂತಿಮ ಹಂತದಲ್ಲಿದ್ದೇವೆ. ಅಂದರೆ, ಬಹುಶಃ ಈ ಹಣಕಾಸು ವರ್ಷದೊಳಗೇ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.” ಎಂದು ಹೇಳಿದರು.