Thursday, 21st November 2024

ಮಹಿಳೆಯರಿಗಾಗಿ ಲಖ್ಪತಿ ದೀದಿ ಯೋಜನೆ: ನಿರ್ಮಲಾ ಸೀತಾರಾಮನ್

ವದೆಹಲಿ: ದೇಶದ 3 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿ ದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರದ 2ನೇ ಆಡಳಿತಾವಧಿಯ ಕೊನೆಯ ಬಜೆಟ್‌ ಅನ್ನು ಮಂಡಿಸಿದರು. ಈ ವೇಳೆ, ಬಜೆಟ್ ಮಂಡನೆ ವೇಳೆ 10 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2023ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲಖ್ಪತಿ ದೀದಿ ಯೋಜನೆಯನ್ನು ಪ್ರಾರಂಭಿ ಸುವುದಾಗಿ ಘೋಷಿಸಿದ್ದರು. ಆಗ ಅವರು ದೇಶದಲ್ಲಿ ಎರಡು ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದರು. ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಗುರಿಯನ್ನು 3 ಕೋಟಿಗೆ ಹೆಚ್ಚಿಸಿದ್ದಾರೆ. ಆ ಮೂಲಕ ಈ ಯೋಜನೆಯಿಂದ 9 ಕೋಟಿ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಯೋಜನೆಯ ಉದ್ದೇಶವು ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡ ಲಾಗುತ್ತಿದ್ದು, ಇದರಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ವರ್ಷಕ್ಕೆ 1 ಲಕ್ಷ ರೂಪಾಯಿ ಸಹಾಯಧನ ನೀಡಿ ಈ ಯೋಜನೆಯನ್ನು ಜಾರಿ ಗೊಳಿಸುವ ಉದ್ದೇಶ ಹೊಂದಲಾಗಿದೆ. ಲಖ್ಪತಿ ದೀದಿ ಆಗಲು ಮಹಿಳೆಯರಿಗೆ ವಿವಿಧ ರೀತಿಯ ತರಬೇತಿ ನೀಡಲಾಗುವುದು.

ಡ್ರೋನ್‌ಗಳು ಮಹಿಳೆಯರ ಭವಿಷ್ಯವನ್ನೇ ಬದಲಿಸಲಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಮಿತಿಯು ಲಕ್ಷಪತಿ ದೀದಿ ಯೋಜನೆಯಡಿ 1261 ಕೋಟಿ ರೂ.ಗಳನ್ನು ವ್ಯಯಿಸಿ 15,000 ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್‌ಗಳನ್ನು ನೀಡಲು ನಿರ್ಧರಿಸಿತ್ತು.