Sunday, 15th December 2024

ಭಾರತ್ ಜೋಡೊ ನ್ಯಾಯ ಯಾತ್ರೆ: ಧನ್‌ಬಾದ್‌ನಲ್ಲಿ 3ನೇ ದಿನದ ರ್‍ಯಾಲಿ

ನ್‌ಬಾದ್‌: ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಭಾನುವಾರ 3 ನೇ ದಿನದ ರ್‍ಯಾಲಿ ಆರಂಭಿಸಿದೆ.

ಗೋವಿಂದಪುರದಲ್ಲಿ ಯಾತ್ರೆ ಪುನರಾರಂಭವಾಗಿದ್ದು, ಮುಂದಿನ ಪಯಣ ಬೊಕಾರೊದೆಡೆಗೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಎರಡು ಹಂತಗಳಲ್ಲಿ ಎಂಟು ದಿನಗಳ ಕಾಲ ಜಾರ್ಖಂಡ್‌ ರಾಜ್ಯದ 13 ಜಿಲ್ಲೆಗಳಲ್ಲಿ 804 ಕಿ.ಮೀ ಯಾತ್ರೆ ಸಂಚರಿಸಲಿದೆ.

ಭಿಲಾಯ್, ರೂರ್ಕೆಲಾ, ದುರ್ಗಾಪುರ, ಭಾಕ್ರಾ ನಂಗಲ್, ಬೊಕಾರೊ, ಧನ್‌ಬಾದ್‌, ಬರೌನಿ, ಸಿಂದ್ರಿ ಈ ಪ್ರದೇಶಗಳಲ್ಲಿನ ಸ್ಮಾರಕಗಳೆಲ್ಲವೂ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ನಿರ್ಮಿಸಿದ್ದಾಗಿದೆ. ಇವೆಲ್ಲವೂ ಭಾರತದ ಆರ್ಥಿಕ ಅಭಿವೃದ್ಧಿಯ ಸ್ಮಾರಕಗಳಾಗಿವೆ. 70 ವರ್ಷಗಳಲ್ಲಿ ನಾವು (ಕಾಂಗ್ರೆಸ್‌) ಏನು ಮಾಡಿದ್ದೇವೆ ಎನ್ನುವುದಕ್ಕೆ ಉತ್ತರವಿದು ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಯಾತ್ರೆ ಭಾಗವಾಗಿ ರಾಹುಲ್‌ ಗಾಂಧಿ, ಶನಿವಾರ ಬಾಬಾ ಬೈದ್ಯನಾಥ ಧಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.