Sunday, 15th December 2024

52ನೇ ವಸಂತಕ್ಕೆ ಕಾಲಿಟ್ಟ ನಟ ಶರಣ್

ಬೆಂಗಳೂರು: ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಶರಣ್ ಮಂಗಳವಾರ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಕಾಮಿಡಿ ಕಲಾವಿದನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1996ರಲ್ಲಿ ತೆರೆ ಕಂಡ ಮಹೇಂದರ್ ನಿರ್ದೇಶನದ ‘ಕರ್ಪೂರದ ಗೊಂಬೆ’ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಣ ಆರಂಭಿಸಿದರು.

ನಂತರ ಹಲವಾರು ವರ್ಷ ಕಾಮಿಡಿ ಕಲಾವಿದರಲ್ಲಿ ಮಿಂಚಿದರು.

‘ರಾಂಬೊ’, ‘ಅಧ್ಯಕ್ಷ’, ‘ಬುಲೆಟ್ ಬಸ್ಯಾ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಕಾಮಿಡಿ ರೋಲ್ ಗೆ ಗುಡ್ ಬೈ ಹೇಳಿದರು. ನಟ ಶರಣ್ ಇತ್ತೀಚೆಗೆ ‘ಕರ್ವ್ವ ನವನೀತ್’, ‘ಚೂಮಂತರ್’ ಸೇರಿದಂತೆ ‘ಅವತಾರ ಪುರುಷ ಭಾಗ – 2’ ಶೂಟಿಂಗಿನಲ್ಲಿ ಬಿಜಿಯಾಗಿದ್ದಾರೆ.

ಇಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ಸಿನಿ ತಾರೆಯರು ನಟ ಶರಣ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.