ಮುಂಬೈ: ಬಾಲಿವುಡ್‌ನ ಡ್ರೀಲ್ ಗರ್ಲ್ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ತಮ್ಮ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ.
ಸ್ವತ: ಇಶಾ ಡಿಯೋಲ್ ಅವರೇ ಅಧಿಕೃತವಾಗಿ ಸ್ಪಷ್ಟ ಪಡಿಸಿದ್ದಾರೆ. ವಿಚ್ಛೇದನದ ವಿಷಯವನ್ನು ಅನೌನ್ಸ್ ಮಾಡುತ್ತಿದ್ದಂತೆ ಬಾಲಿವುಡ್‌ನಲ್ಲಿ ಈ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಇಶಾ ಡಿಯೋಲ್ ಬಾಲಿವುಡ್ ಸ್ಟಾರ್ ದಂಪತಿಯ ಮಗಳು. ಲೆಜೆಂಡ್ ಧರ್ಮೇಂದ್ರ ಹಾಗೂ ಡ್ರೀಮ್ ಗರ್ಲ್ ಹೇಮಾ ಮಾಲಿನಿಯ ಹಿರಿಯ ಪುತ್ರಿ. ತಂದೆ ತಾಯಿಯಂತೆಯೇ ಇಶಾ ಡಿಯೋಲ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಯಶ್ ರಾಜ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದ್ದ ‘ಧೂಮ್’ ಸೀರಿಸ್‌ನಲ್ಲಿ ನಟಿಸಿದ್ದರು. ಅದು ಬಿಟ್ಟರೆ, ನೆನಪಿನಲ್ಲಿ ಉಳಿಯುವಂತಹ ಬೇರೆ ಯಾವುದೇ 2012ರಲ್ಲಿ ಭರತ್ ತಖ್ತಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕ ಮೂರು ವರ್ಷಗಳ ಕಾಲ ಸಿನಿಮಾದಿಂದ ದೂರವೇ ಉಳಿದಿದ್ದರು. ಈ ವೇಳೆ ಇಶಾ ಡಿಯೋಲ್ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿಯೊಂದಿಗೆ ಅನ್ಯೋನ್ಯವಾಗಿದ್ದ ಇಶಾ ಡಿಯೋಲ್ ದಿಢೀರನೇ ವಿಚ್ಚೇದನ ಘೋಷಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಕಳೆದ ವರ್ಷವಷ್ಟೇ ಇಬ್ಬರ ಫೋಟೊಗಳನ್ನು ಶೇರ್ ಮಾಡಿಕೊಂಡು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದರು. ಅಲ್ಲದೆ ಕೊನೆಯ ಪೋಸ್ಟ್ ಕೂಡ ಪತಿಯೊಂದಿಗೆ ಹಂಚಿಕೊಂಡಿದ್ದಾರೆ.
2020ರಲ್ಲಿ ‘ಮಾಮ ಮಿಯಾ’ ಪ್ರೆಗ್ನೆನ್ಸಿ ಬಗ್ಗೆ ಪುಸ್ತಕ ಬರೆದಿದ್ದರು. ಅದರಲ್ಲಿ ಎರಡನೇ ಮಗುವಿನ ವೇಳೆ ಪತಿ ಭರತ್ ತಖ್ತಾನಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸಿತ್ತು ಎಂದು ಬರೆದುಕೊಂಡಿದ್ದರು.