Thursday, 12th December 2024

ಪೋಷಕರು ಊರಿನ ಶಾಲೆಗೆ ಮಕ್ಕಳನ್ನು ಸೇರಿಸಿ ಅಭಿಮಾನ ಮೂಡಿಸಬೇಕು

ತಿಪಟೂರು: ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಲು ಸರ್ಕಾರ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ನಮ್ಮ ಊರು ನಮ್ಮ ಶಾಲೆ ಎಂಬ ಅಭಿಯಾನದೊಂದಿಗೆ ಪೋಷಕರು ಊರಿನ ಶಾಲೆಗೆ ಮಕ್ಕಳನ್ನು ಸೇರಿಸಿ ಅಭಿಮಾನ ಮೂಡಿಸಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ ತಿಳಿಸಿದರು.

ಕರಡಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಕ್ಕಳ ಹಿತವಚನ ನೀಡಿ ಮಾತನಾಡಿ ಒಂದು ಶಾಲೆ ಅಭಿವೃದ್ಧಿಯಾಗಬೇಕಾದರೆ ಸರ್ಕಾರ ಲಕ್ಷಾಂತರ ಹಣ ನೀಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ, ಉತ್ತಮ ಶಿಕ್ಷಕರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಗ್ರಾಮೀಣ ಭಾಗದ ಈ ಶಾಲೆ ಉತ್ತಮ ವಿದ್ಯಾರ್ಥಿ ಸಂಖ್ಯಾ ಬಲ ಹೊಂದಿದ್ದು ಶಿಕ್ಷಕರ ಶ್ರಮದ ಜೊತೆಗೆ ಪೋಷಕರು ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾ, ಪಂ. ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಲೆ ಮತ್ತು ಕ್ರೀಡೆ ಹೆಚ್ಚಿನ ಆದ್ಯತೆ ನೀಡಬೇಕು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ವಿದ್ಯಾರ್ಥಿಗಳ ಅಂತರಾಳದ ಅನಾವರಣವಾಗಿರುತ್ತದೆ ಈ ಭಾಗದಲ್ಲಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮುಖ್ಯ ಕೆಲಸ ಮಾಡಬೇಕು ಎಂದರು.

ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಭೆ ಕರೆದು ಅವಶ್ಯಕತೆ ಇರುವ ಉಪಕರಣಗಳ ಬಗ್ಗೆ ಮಾಹಿತಿ ನೀಡಿ ಉಪಯೋಗ ಪಡೆದುಕೊಳ್ಳಬೇಕು ಇತ್ತೀಚೆಗೆ ಶಿಕ್ಷಕರಿಗೆ ಹೆಚ್ಚಿನ ಒತ್ತಡವಿದೆ ಶಿಕ್ಷಕರ ಕೊರತೆ ತುಂಬಿಸುವ ಕೆಲಸ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಶಾಲೆಯ ಆವರಣದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು, ಕರಡಾಳು ಗ್ರಾಮದ ಶಾಲೆಗೆ ವೇದಿಕೆ ನೀಡಿದ ಪಟೇಲ್ ಲೋಕೇಶ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಯೋಗೇಶ್ ಮುದ್ದು ಲಿಂಗೇಗೌಡ, ಅನಿತಾ ಗ್ರಾಮದ ಮುಖಂಡರು ಸನ್ಮಾನಿತರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು.

*

ನಮ್ಮ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಂಡಿದ್ದು ಡಿಜಿಟಲ್ ಗ್ರಂಥಾಲಯ, ಉತ್ತಮ ಪರಿಸರದ ಆಟದ ಮೈದಾನ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪರದೆಯ ಮುಖಾಂತರ ಪ್ರದರ್ಶಿಸಿ ಮಕ್ಕಳಿಗೆ ಉತ್ತೇಜನ ನೀಡುತ್ತೇವೆ ಪ್ರತಿ ಮಗುವಿನ ಆಟೋಟ ಗಮನಿಸಲು ಉತ್ತಮ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಪೋಷಕರು ಮತ್ತು ದಾನಿಗಳು ಸಹಕಾರದಿಂದ ನಮ್ಮ ಶಾಲೆ ಈ ನಗರದ ಶಾಲೆಗಳಿಗೆ ಸಮನಾಗಿ ಉತ್ತಮ ಶಾಲೆ ಎಂದು ಕರೆಯಲ್ಪಡುತ್ತಿದೆ.
ರವೀಶ್. ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಡಾಳು.