ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆಯಾಗಿದೆ.
ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಇದೇ ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗಲ್ರಾನಿ, ಅಲ್ಲಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ.
ಅಕ್ಟೋಬರ್ 10 ರಂದು ಶನಿವಾರ ಆಕೆಯ ಹುಟ್ಟುಹಬ್ಬವಿದ್ದು, ಸಲ ಕೃಷ್ಣನ ಜನ್ಮಸ್ಥಾನದಲ್ಲೇ ಹುಟ್ಟುಹಬ್ಬವನ್ನು ಆಚರಿಸುವ ಸ್ಥಿತಿ ಎದುರಾಗಿದೆ.