ಇಂಡಿ: ಕರ್ನಾಟಕ ಭೂ ಕಂದಾಯ ಅಧಿನೀಯಮ ೧೯೬೪ರ ಪ್ರಕರಣ ೯೪ ಎ (೦೧) ದಲ್ಲಿ ಪ್ರದತ್ತವಾದ ಅಧಿಕಾರದ ಪ್ರಕಾರ ವಿಜಯಪೂರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮೀತಿಯನ್ನು ರಾಜ್ಯದ ಕಂದಾಯ ಇಲಾಖೆ ಸಮೀತಿಯನ್ನು ರಚಿಸಿದ್ದು, ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಇಂಡಿ ಮತಕ್ಷೇತ್ರದ ಈರಣ್ಣಾ ಶ್ರೀಶೈಲಪ್ಪ ವಾಲಿ ಸಾ .ಬಳ್ಳೋಳ್ಳಿ ಸದಸ್ಯರಾಗಿ ( ಸಾಮಾನ್ಯ), ಸೋಮಶೇಖರ ಗೋಲ್ಲಾಳಪ್ಪ ಮ್ಯಾಕೇರಿ ಸಾ.ನಾದ ಬಿ.ಕೆ ಸದಸ್ಯರಾಗಿ (ಪ.ಜಾ) , ಶ್ರೀಮತಿ ಶೈಲಶ್ರೀ ರಾಠೋಡ (ಮಹಿಳೆ) ಸದಸ್ಯರಾಗಿ ನೇಮಕ ಮಾಡಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ ಜಗದೀಶ .ಕೆ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.