ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ. 10, 11ರಂದು “ವಿಶ್ವಕೊಂಕಣಿ ಸಮಾರೋಹ’ ಸಾಹಿತ್ಯ ಕಲೋತ್ಸವ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ, ಎಂಆರ್‌ಪಿಎಲ್ ಸಿಜಿಎಂ (ಫೈನಾನ್ಸ್) ಯು.ಎಸ್. ಸುರೇಂದ್ರ ನಾಯಕ್ ಉದ್ಘಾಟಿಸುವರು.
ವಿವಿಧ ಗೋಷ್ಠಿಗಳಿ ದ್ದು, ಜಾನ್ ಎಂ. ಪೆರ್ಮನ್ನೂರು, ಗೌರೀಶ ಪ್ರಭು, ಡಾ| ಕಸ್ತೂರಿ ಮೋಹನ ಪೈ, ಡಾ| ಕಿರಣ್ ಬುಡುRಳೆ, ಕಿಶೂ ಬಾರ್ಕೂರ್, ಗೋಕುಲ್‌ದಾಸ್ ಪ್ರಭು ನಡೆಸಿ ಕೊಡುವರು ಎಂದರು.
ಫೆ. 11ರಂದು 10.45ಕ್ಕೆ ವಿವಿಧ ಕ್ಷೇತ್ರದ ಸಾಧಕರಿಗೆ ಮಂಗಳೂರು ವಿ.ವಿ. ಕುಲಪತಿ ಪ್ರೊ| ಜಯರಾಜ್ ಅಮೀನ್ ಪುರಸ್ಕಾರ ಪ್ರದಾನ ಮಾಡುವರು.
“ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ’ವನ್ನು ಗೋವಾದ ಡಾ| ಪ್ರಕಾಶ್ ಪರಿಯೆಂಕಾರ ಅವರ “ಪೂರಣ್’ ಪುಸ್ತಕಕ್ಕೆ, “ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ’ವನ್ನು ಕೇರಳದ ಆರ್.ಎಸ್. ಭಾಸ್ಕರ್ ಅವರ “ಚೈತ್ರ ಕವಿತಾ’ ಪುಸ್ತಕಕ್ಕೆ, “ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿ’ ಯನ್ನು ಗೋವಾದ ಕಲಾವಿದ ರಮಾ ನಂದ ರಾಯ್ಕರ್‌ಗೆ, “ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ’ವನ್ನು ಮೆಟಮೋಫೇಸ್ ಸೇವಾ ಸಂಸ್ಥೆಯ ಶಕುಂತಲಾ ಎ. ಭಂಡಾರ್‌ಕಾರ್ ಮತ್ತು ಮಂಜೇಶ್ವರದ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ನ ಜೋಸೆಫ್ ಕ್ರಾಸ್ತಾಗೆ, “ಡಾ| ಪಿ. ದಯಾ ನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ’ವನ್ನು ಗೋವಾದ ರಮೇಶ ಲಾಡ್ ಹಾಗೂ “ಡಾ| ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ’ವನ್ನು ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಅವರಿಗೆ ನೀಡಲಾಗುವುದು. ಪ್ರಶಸ್ತಿ ತಲಾ 1 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿರುತ್ತದೆ ಎಂದರು.
ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯುವ ನಾಟಕೋತ್ಸದಲ್ಲಿ ಫೆ. 10ರ ಸಂಜೆ 5ರಿಂದ 8ರ ವರೆಗೆ ಕೊಚ್ಚಿ ಸೇವಾ ಕ್ಷೇತ್ರ ಗೋಶ್ರೀಪುರ ತಂಡದಿಂದ “ಜಗಲೇವೈಲೋ ಹನು ಮಂತು’, ಗೋವಾದ ಫೋರ್ಥ್ ವಾಲ್ ಥಿಯೇ ಟರ್ ತಂಡದಿಂದ “ಅಸ್ಥಿಪಂಜರ ಮಹಿಳೆ’, ಫೆ. 11ರ ಸಂಜೆ 5ರಿಂದ 8ರ ವರೆಗೆ ಮುಂಬಯಿಯ ಕೊಂಕಣಿ ತ್ರಿವೇಣಿ ಕಲಾ ಸಂಗಮ ತಂಡದಿಂದ “ಆವಸು ಆನಂದಾಚೊ ಪಾವಸು’ ಮತ್ತು ರಂಗಚಿನ್ನಾರಿ ಕಾಸರಗೋಡು ತಂಡ ದಿಂದ “ಎಕಲೋ ಆನೆಕಲೋ’ ಪ್ರದರ್ಶನ ಗೊಳ್ಳಲಿದೆ ಎಂದರು.