Thursday, 12th December 2024

ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳು

ಜ್ಞಾನ ಭಂಡಾರ

ಕೆ.ಶಾಂತಕುಮಾರಿ

ಗ್ರಂಥಾಲಯ ಚಳವಳಿ ಪ್ರತಿ ಹಳ್ಳಿಗೂ ತಲುಪಬೇಕಿದೆ. ಇದು ಯಶಸ್ವಿಯಾಗಲು ಸಂಘ-ಸಂಸ್ಥೆಗಳ ಸಹಕಾರ, ಮುಖ್ಯವಾಗಿ ಹಳ್ಳಿಗರ ಬೆಂಬಲ ಅಗತ್ಯ ವಾಗಿದೆ. ಈ ಚಳವಳಿಯ ಮಹತ್ವವನ್ನರಿತು ಸರಕಾರವು ಹೆಚ್ಚಿನ ರೀತಿಯಲ್ಲಿ ಸಂಪನ್ಮೂಲ ಬಿಡುಗಡೆಗೊಳಿಸಲು ಕಾರ್ಯೋನ್ಮುಖ ವಾಗಬೇಕಿದೆ. ಜಿಲ್ಲಾ ಮಟ್ಟದಲ್ಲಿ ಅಽವೇಶನಗಳನ್ನು ನಡೆಸಿ ಚರ್ಚಿಸಿದಾಗ ಮಾತ್ರ ಗ್ರಂಥಾಲಯ ವಲಯದಲ್ಲಿರುವ ತೊಡಕುಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವ ವಿದ್ಯಾಲಯವಿದ್ದಂತೆ. ಪುಸ್ತಕಗಳು ಆಯಾ ಕಾಲದ ಜನರ ಸಂಸ್ಕೃತಿಯ ಪ್ರತೀಕಗಳು. ಮೊಬೈಲ್‌ನಿಂದಾಗಿ ಜಗತ್ತು ಅಂಗೈಯಲ್ಲೇ ದೊರಕುತ್ತಿರುವ ಹಿನ್ನೆಲೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಆತಂಕವು ಇಂದಿನ ಸಮಾಜವನ್ನು ಕಾಡುತ್ತಿರುವ ಪ್ರಶ್ನೆ
ಯಾಗಿದೆ. ವಿದ್ಯಾರ್ಥಿಗಳ ತಪಸ್ಸು ಫಲದಾಯಕವಾಗ ಬೇಕಾದರೆ ಸಮರ್ಥವಾದ ಗ್ರಂಥಾಲಯಗಳು ಇರಬೇಕು.

ಇಂಥ ಗ್ರಂಥಾಲಯಗಳನ್ನು ಹಳ್ಳಿಹಳ್ಳಿಗೆ ತಲುಪಿಸುವ ಮಟ್ಟಕ್ಕೆ ಗ್ರಂಥಾಲಯ ಚಳವಳಿ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇರಳ ಸರಕಾರವು ೨೦೨೩ ಜನವರಿ ೧ರಿಂದ ೩ವರೆಗೆ ಕಣ್ಣೂರಿನಲ್ಲಿ ಭಾರತ ಗ್ರಂಥಾಲಯ ಕಾಂಗ್ರೆಸ್ ಮೂಲಕ ಗ್ರಂಥಾಲಯ ಚಳವಳಿಯನ್ನು ಆರಂಭಿಸಿತು. ಬದಲಾಗುತ್ತಿರುವ ಜಾಗತೀ ಕರಣ ಮಟ್ಟದಲ್ಲಿ ಡಿಜಿಟಲ್ ಗ್ರಂಥಾಲಯವು ಇಂದು ಬಹುಬೇಗ ಶ್ರೀಸಾಮಾನ್ಯನನ್ನು ತಲುಪುತ್ತಿದೆ. ಈ ಪ್ರಯೋಗ ಹಳ್ಳಿ ಹಳ್ಳಿಯಲ್ಲೂ ಆರಂಭವಾದರೆ ಜನರಲ್ಲಿ ಸರ್ವತೋಮುಖ ವೈಚಾರಿಕ ಪ್ರe ಮೂಡಲು ಸಹಕಾರಿಯಾಗುತ್ತದೆ.

ಇಂಡಿಯನ್ ಲೈಬ್ರರಿ ಕಾಂಗ್ರೆಸ್‌ನ ೨ನೇ ಮಹಾಧಿವೇಶನವು ಕರ್ನಾಟಕದಲ್ಲಿ ಫೆಬ್ರವರಿ ೧೦ ಮತ್ತು ೧೧ರಂದು ನಡೆಯಲಿದೆ. ರಾಜ್ಯದಲ್ಲಿ ಈಗಾಗಲೇ ೧೩೩೧ ಗ್ರಂಥಾಲಯ ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಾಧಕ-ಬಾಧಕಗಳ ಬಗ್ಗೆ ೭ ಗೋಷ್ಠಿಗಳಲ್ಲಿ ಚರ್ಚೆಯಾಗಲಿದೆ. ಈ ಗೋಷ್ಠಿಗಳಲ್ಲಿ ರಾಜ್ಯ ಸರಕಾರದ ಬಹುತೇಕ ಮಂತ್ರಿಗಳು ವಿಜ್ಞಾನಿಗಳು, ಉಪನ್ಯಾಸಕರು, ಗ್ರಂಥಪಾಲಕರು, ಲೇಖಕರು, ಪ್ರಕಾಶಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳ ಲಿದ್ದಾರೆ. ಈ ವೇಳೆ ಉತ್ತಮ ಗ್ರಂಥಪಾಲಕರ ಸೇವೆಯನ್ನು ಸ್ಮರಿಸಲಾಗುತ್ತದೆ. ರಾಜ್ಯ ಗ್ರಂಥಾಲಯವು ೨೦೧೯ರಲ್ಲಿ ಡಿಜಿಟಲ್ ಗ್ರಂಥಾಲಯವಾಗಿ ಆರಂಭ ವಾಗಿದೆ.

ಶೈಕ್ಷಣಿಕ ಕಲಿಕೆಗೆ ಬೇಕಾದ ಎಲ್ಲಾ ವಿಭಾಗಗಳಲ್ಲಿನ ವಿಷಯಗಳಿಗೆ ಸಂಬಂಧಿಸಿ ಆಧುನಿಕ ತಂತ್ರಜ್ಞಾನ ಹೊಂದಿದ ಗ್ರಂಥಾಲಯಗಳಲ್ಲಿ ಡಿಜಿಟಲ್
ಮತ್ತು ಇ-ಕಂಟೆಂಟ್‌ಗಳನ್ನು ಅಳವಡಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಾಠಗಳನ್ನು, ಡಿಜಿಟಲ್ ರೂಪದಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ. ೨೦೨೪ರ ಜನವರಿ ೩೧ರ ವೇಳೆಗೆ ೩,೭೯,೫೧,೨೦೬ ಮಂದಿ ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ. ೨೪,೧೦,೭೦೫ ಇ-ಕಂಟೆಂಟ್‌ಗಳನ್ನು ಸಾರ್ವಜನಿಕರು ಉಪಯೋಗಿಸಿರುವುದನ್ನು ನೋಡಿದರೆ ಗ್ರಂಥಾಲಯದ ಸಾಧನೆ ಬಗ್ಗೆ ಹೆಮ್ಮೆಪಡುವಂತಾಗಿದೆ. ಒಟ್ಟು ೩೭೨ ಗ್ರಂಥಾಲಯಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ.

ಆದ್ದರಿಂದಲೇ ರಾಜ್ಯದ ಡಿಜಿಟಲ್ ಯೋಜನೆ ಭಾರತ ದಲ್ಲಿಯೇ ಪ್ರಶಂಸೆಗೆ ಪಾತ್ರವಾಗಿದೆ. ಈ ಯೋಜನೆಗಳನ್ನು ಇತರೆ ರಾಜ್ಯಗಳು ಅನುಸರಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ಕರ್ನಾಟಕದ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಸಾಧನೆಯನ್ನು ಪರಿಗಣಿಸಿ, ೨೦೨೨ರಲ್ಲಿ ವರ್ಲ್ಡ್ ಬುಕ್ ಆಫ್
ರೆಕಾರ್ಡ್ ಲಂಡನ್‌ನಲ್ಲಿ ಅದನ್ನು ದಾಖಲಿಸಿರುವುದು ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಶ್ರಮಿಸಿದ ಗ್ರಂಥಾಲಯದ ಎಲ್ಲಾ ಗ್ರಂಥಪಾಲಕರು ಹಾಗೂ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿಯವರ ಪಾತ್ರ ಮೆಚ್ಚುವಂಥದ್ದಾಗಿದೆ.

ಸಂಪನ್ಮೂಲಗಳ ಕೊರತೆ: ರಾಜ್ಯ ಸರಕಾರಗಳಿಗೆ ಜನ ಸಾಮಾನ್ಯರಿಂದ ತೆರಿಗೆಗಳ ರೂಪದಲ್ಲಿ ಹಣವು ವಿಪುಲವಾಗಿ ಹರಿದು ಬರುತ್ತಿದೆ. ಅದು ಸರಿಯಾದ ರೀತಿಯಲ್ಲಿ ಆಯಾ ರಂಗಗಳಿಗೆ ಸದ್ಬಳಕೆಯಾಗುತ್ತಿಲ್ಲ ಎನ್ನುವುದಕ್ಕೆ ಈ ಗ್ರಂಥಾಲಯಗಳ ದುಸ್ಥಿತಿಯೇ ಸಾಕ್ಷಿ. ಸಾರ್ವಜನಿಕ ಗ್ರಂಥಾಲಯ ಕಾಯ್ದೆ ೧೯೬೫ ನಿಯಮ ೩೦-೩೧ರನ್ವಯ, ಆಸ್ತಿ ತೆರಿಗೆ ಮೇಲೆ ಶೇ.೬ರಷ್ಟು ಹಣವನ್ನು ಗ್ರಂಥಾಲಯಗಳಿಗೆ ಮೀಸಲಿಡಬೇಕೆಂದು ನಿಯಮವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಶೇ.೬ರಷ್ಟು ಸೆಸ್ ಹಣವನ್ನು ಗ್ರಂಥಾಲಯಗಳಿಗೆ ಖರ್ಚು ಮಾಡದ ಇರುವುದು ದುರದೃಷ್ಟಕರ.

ಬಹುತೇಕ ಜನ ಪ್ರತಿನಿಧಿಗಳಿಗೂ ಈ ಬಗ್ಗೆ ಕಾಳಜಿಯಿಲ್ಲ. ಈ ಶ.೬ರಷ್ಟು ಹಣವನ್ನು ಆಯಾ ಪ್ರದೇಶಗಳಿಗೆ ಖರ್ಚು ಮಾಡಿದರೆ ಪ್ರತಿ ಹಳ್ಳಿಗೂ ಈ ಗ್ರಂಥಾಲಯಗಳು ತಲುಪಬಹುದಾಗಿದೆ. ಬಹುತೇಕ ಗ್ರಂಥಾಲಯಗಳ ಗ್ರಂಥಪಾಲಕರ ಸಂಬಳ ಅಥವಾ ಗೌರವಧನ ನಿಗದಿತ ಸಮಯಕ್ಕೆ ಸಂದಾಯ
ವಾಗುತ್ತಿಲ್ಲ. ಪ್ರಕಾಶಕರ ಸಮಸ್ಯೆ: ಜನಸಾಮಾನ್ಯರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲೆಂದು ಪ್ರಕಾಶಕರ ಸಂಘ-ಸಂಸ್ಥೆಗಳು ಶ್ರಮಿಸುತ್ತಿವೆ. ಲೇಖಕರು ಬರೆದ ಪುಸ್ತಕಗಳನ್ನು ಸಾವಿರಾರು ರು. ಖರ್ಚುಮಾಡಿ ಪ್ರಕಟಿಸಿದರೆ ಅವನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯ ಸಾರ್ವಜನಿಕ ಗ್ರಂಥಾ
ಲಯವು ಪ್ರಕಾಶಕರು ಪ್ರಕಟಿಸಿದ ಹಲವು ರೀತಿಯ ಪುಸ್ತಕಗಳನ್ನು ಕೊಳ್ಳುವ ಮೂಲಕ ಪ್ರೋತ್ಸಾಹಿಸುತ್ತಿದೆ. ಆದರೆ ಕೊಂಡ ಪುಸ್ತಕಗಳ ಹಣ ಪಾವತಿ ಸಲು ಸಾಧ್ಯವಾಗದ ಸ್ಥಿತಿಯಿದೆ.

ಗ್ರಂಥಪಾಲಕರ ವೇತನ ಸಮಸ್ಯೆ ಹಾಗೂ ಸಿಬ್ಬಂದಿಯ ಇತರೆ ಸಮಸ್ಯೆಗಳು ಬಗೆಹರಿಯದಂತಾಗಿವೆ. ಇವೆಲ್ಲವುಗಳ ಮಧ್ಯೆ ನಿಜವಾಗಿ ನಲುಗುತ್ತಿರುವವರು ಲೇಖಕರು. ಈ ಹಿಂದೆ ಲೇಖಕರಿಗೆ ಪ್ರಕಾಶನ ಸಂಸ್ಥೆಗಳು ರಾಯಲ್ಟಿ ಹೆಸರಿನಲ್ಲಿ ಶೇ.೫ರಿಂದ ೧೦ರಷ್ಟು ಹಣ ನೀಡಿ ಪ್ರಕಟಿತ ೧೦೦ ಕೃತಿಗಳನ್ನು
ಲೇಖಕ ರಿಗೆ ನೀಡುವ ಪದ್ಧತಿಯಿತ್ತು. ಈಗ ಲೇಖಕರಿಗೆ ಯಾವುದೇ ಸಂಭಾವನೆ ನೀಡದೆ, ೫೦ ಪ್ರತಿಗಳನ್ನು ನೀಡಿ ಕೈತೊಳೆದುಕೊಳ್ಳುತ್ತಾರೆ. ಆದ್ದರಿಂದ ಬರಹಗಾರರಲ್ಲಿ ಆಸಕ್ತಿ ಕುಂದುತ್ತಿದೆ. ಈ ಎಲ್ಲ ಸಮಸ್ಯೆಗಳೆಡೆಗೆ ಸರಕಾರ ಗಮನ ಹರಿಸಿ, ಕಾಲಕಾಲಕ್ಕೆ ಶೇ.೬ರಷ್ಟು ಸೆಸ್ ಹಣ ಬಿಡುಗಡೆ ಮಾಡಿದರೆ ಗ್ರಂಥಾಲಯಗಳು ಆರ್ಥಿಕವಾಗಿ ಯಾವ ಅಡೆತಡೆಯಿಲ್ಲದೆ ಸಾಗಬಹುದಾಗಿದೆ.

ಫೆ.೧೦-೧೧ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಲೈಬ್ರರಿಯ ೨ನೇ ಮಹಾಧಿವೇಶನವು ರಾಜ್ಯದ ಸಮಸ್ತ ಜನರನ್ನು ಒಳಗೊಂಡಂತೆ ಚರ್ಚೆ ನಡೆಸಲಿದೆ. ಈ ಸಂದರ್ಭದಲ್ಲಿ ಪಕ್ಕದ ರಾಜ್ಯದ ಆಸಕ್ತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ೩ನೇ ಮಹಾಧಿವೇಶನವು ತೆಲಂಗಾಣದಲ್ಲಿ ಚಳವಳಿ ಯಾಗಿ ಮುಂದುವರಿಯುತ್ತದೆ. ನಂತರ ಆಂಧ್ರ ಪ್ರದೇಶದಲ್ಲೂ ನಡೆಯಲಿರುವ ಈ ಚಳವಳಿಗೆ ವೇದಿಕೆ ಈಗಾಗಲೇ ಸಿದ್ಧವಾಗಿದೆ. ಒಟ್ಟಾರೆ, ಗ್ರಂಥಾಲ ಯಗಳ ಈ ಚಳವಳಿ ಪ್ರತಿ ಹಳ್ಳಿಗೂ ತಲುಪುವ ನಿಟ್ಟಿನಲ್ಲಿ ಈ ಸಮಾವೇಶ ಚಾಲನೆ ನೀಡಲಿದೆ.

ಇದು ಯಶಸ್ವಿಯಾಗಲು ಸಂಘ-ಸಂಸ್ಥೆ ಗಳ ಸಹಕಾರ, ಮುಖ್ಯವಾಗಿ ಹಳ್ಳಿಗರ ಬೆಂಬಲವು ಅಗತ್ಯ ವಾಗಿದೆ. ಈ ಚಳವಳಿಯ ಮಹತ್ವವನ್ನರಿತು ಸರಕಾರವು
ಹೆಚ್ಚಿನ ರೀತಿಯಲ್ಲಿ ಸಂಪನ್ಮೂಲ ಬಿಡುಗಡೆಗೊಳಿಸಲು ಕಾರ್ಯೋನ್ಮುಖವಾಗಬೇಕಿದೆ. ಈ ಚಳವಳಿಯು ಮುಂದುವರಿದು ಜಿಲ್ಲಾ ಮಟ್ಟದಲ್ಲಿ ಅಧಿವೇಶನಗಳನ್ನು ನಡೆಸಿದಾಗ ಮಾತ್ರ ಗ್ರಂಥಾಲಯ ವಲಯದಲ್ಲಿರುವ ತೊಡಕುಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಗ್ರಂಥಾಲಯದ ಉಗಮ: ಭಾರತದಲ್ಲಿ ಆದಿಮಾನವನ ಕಾಲದಿಂದಲೂ ಗುಹೆಗಳಲ್ಲಿ ತಮಗೆ ಅನಿಸಿದ ಭಾವನೆಗಳನ್ನು ಚಿತ್ರಗಳ ರೂಪದಲ್ಲಿ ಬಣ್ಣದಲ್ಲಿ ಬರೆಯುತ್ತಿ
ದ್ದರು. ಈ ಚಿತ್ರಗಳೇ ಅಂದಿನ ಜೀವನದ ಸ್ಥಿತಿಯನ್ನು ತಿಳಿಯುವಂತೆ ಮಾಡಿದವು.

ಬಹುಶಃ ಇವುಗಳೇ ಮುಂದೆ ಬರವಣಿಗೆ ಯಾಗಿ ರೂಪುಗೊಂಡಿರಬೇಕು. ಚಿತ್ರಗಳ ಮೂಲಕ ಆರಂಭವಾಗಿ ಬರವಣಿಗೆ ರೂಪ ಕಾಣಲು ಸಾವಿರಾರು ವರ್ಷಗಳೇ ಕಳೆದಿರಬೇಕು. ಅಂದಿನಿಂದ ಹಿಡಿದು ಇಂದಿನವರೆಗೆ ವೈಜ್ಞಾನಿಕ ಡಿಜಿಟಲ್, ಇ-ಕಂಟೆಂಟ್‌ವರೆಗೆ ಗ್ರಂಥಾಲಯಗಳು ಆಯಾ ಕಾಲಕ್ಕೆ ಅಭಿವೃದ್ಧಿ ಹೊಂದುತ್ತಾ ಬಂದಿವೆ. ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಆಡಳಿತ ನಡೆಸಿದ ಸಂದರ್ಭ ೧೮೨೯ರಲ್ಲಿ ಕೇರಳ ಟ್ರಾವಂಕೂರ್‌ನಲ್ಲಿ ಮೊಟ್ಟಮೊದಲ ಗ್ರಂಥಾಲಯ ಆರಂಭವಾಯಿತು. ನಂತರ ೧೮೩೬ರಲ್ಲಿ ಕಲ್ಕತ್ತಾದಲ್ಲಿ ಗ್ರಂಥಾಲಯವನ್ನು ಬ್ರಿಟಿಷರು ಆರಂಭಿಸಿ ‘ಇಂಪೀರಿಯಲ್
ಲೈಬ್ರರಿ’ ಎಂದು ಕರೆದರು. ೧೯೩೦ರಲ್ಲಿ ಇದರ ಜವಾಬ್ದಾರಿ ಯನ್ನು ಆಶುತೋಷ ಮುಖರ್ಜಿಯವರಿಗೆ ವಹಿಸಲಾಯಿತು.

ಇವರು ವೈಯಕ್ತಿಕವಾಗಿ ೮೦,೦೦೦ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ನೀಡಿದರು. ರಾಜ್ಯದಲ್ಲಿ ಗ್ರಂಥಾಲಯಗಳು ಹಳ್ಳಿಗಳಿಗೆ ತಲುಪಬೇಕಾದರೆ ಜಿಲ್ಲಾ ಮಟ್ಟದ ಗ್ರಂಥಾಲಯ ಚಳವಳಿಯನ್ನು ಆರಂಭಿಸಬೇಕಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಇದೀಗ ಚಳವಳಿ ಆರಂಭವಾಗಿದೆ. ಬರಹಗಾರರಿಂದ ಹಿಡಿದು
ಶ್ರೀಸಾಮಾನ್ಯರವರೆಗೆ ಹಲವರ ಜ್ಞಾನದ ಹಸಿವನ್ನು ನೀಗಿಸುವ ಈ ವೈಚಾರಿಕ ಗ್ರಂಥ ಭಂಡಾರದ ಚಳವಳಿಗೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ನವರು ರಾಜ್ಯದಲ್ಲಿ ಚಾಲನೆ ನೀಡಿದ್ದಾರೆ. ಎಲ್ಲಾ ಸಂಘಟನೆಗಳು ಇದರಲ್ಲಿ ಭಾಗಿಯಾದರೆ ಮಾತ್ರ ಈ ಚಳವಳಿ, ಈ ಡಿಜಿಟಲ್ ಗ್ರಂಥಾಲಯ ಚಳವಳಿಯು ಯಶಸ್ವಿಯಾಗಬಲ್ಲದು.

ಒಂದಷ್ಟು ಇತಿಹಾಸ: ಪುಸ್ತಕಗಳು ಆಯಾ ಕಾಲದ ಜನರ ಸಂಸ್ಕೃತಿಯ ಪ್ರತೀಕ ಎಂದಿದ್ದಾರೆ ಎಮರ್ಸನ್. ಮನುಷ್ಯನ ಹುಟ್ಟು ಮತ್ತು ಬೆಳವಣಿಗೆ ಕುರಿತು ನಮಗೆ ಆಗಾಧವಾದ ಜ್ಞಾನ ಸಂಪತ್ತನ್ನು ಒದಗಿಸುವುದು ಗ್ರಂಥಗಳು. ಇಂಥ ಗ್ರಂಥ ಸಂಗ್ರಹಾಲಯಗಳು ಸಾವಿರಾರು ವರ್ಷಗಳ ಹಿಂದೆಯೇ ತಾಳೆಗರಿ ರೂಪದಲ್ಲಿ ೫೦,೦೦೦ ಗ್ರಂಥಗಳನ್ನು ಸಂಗ್ರಹಿಸಿದ್ದವು. ಆಗ್ನೇಯ ಏಷ್ಯಾಭಾಗದಲ್ಲಿ ಇಂಥ ಪ್ರಯತ್ನಗಳು ನಡೆದಿದ್ದವು ಎಂಬುದು ಸಿರಿಯಾದಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಬೆಳಕಿಗೆ ಬಂತು.

ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಕ್ರಿ.ಪೂ. ೮೫೯ರಲ್ಲಿ ಮೊರಾಕ್ಕೋದಲ್ಲಿ ಗ್ರಂಥಾಲಯವು ಆರಂಭಗೊಂಡಿದ್ದು, ಇದು ಅತ್ಯಂತ ಹಳೆಯ ಗ್ರಂಥಾ ಲಯ ಎನ್ನಲಾಗಿದೆ. ಇದರಲ್ಲಿ ತಾಳೆಗರಿಗಳಲ್ಲಿ ಬರೆಯಲ್ಪಟ್ಟ ಸುಮಾರು ೪೦೦೦ ಗ್ರಂಥಗಳನ್ನು ಸಂಗ್ರಹಿಸಿಡಲಾಗಿತ್ತು. ನಂತರ ೯ನೇ ಶತಮಾನ ದಲ್ಲಿ ಮಹಮ್ಮದೀಯರು ತಾಳೆಗರಿ ರೂಪದಲ್ಲಿ ಕುರಾನ್ ಅನ್ನು ಗ್ರಂಥಾಲಯಗಳಲ್ಲಿ ಸಂಗ್ರಹಿಸಿಟ್ಟಿದ್ದರು. ೧೭೫೩ರಲ್ಲಿ ಲಂಡನ್‌ನಲ್ಲಿ ನ್ಯಾಷನಲ್ ಬ್ರಿಟನ್ ಲೈಬ್ರರಿ ಆರಂಭವಾಯಿತು. ಇದು ಅನೇಕ ಚಿಂತಕರನ್ನು ಬೆಳೆಸಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಈ ಗ್ರಂಥಾಲಯದಲ್ಲಿ ಕೂತು ಗಂಭೀರ ಅಧ್ಯಯನ ಮಾಡಿದ್ದರು. ಕಾರ್ಲ್‌ಮಾರ್ಕ್ಸ್ ತಮ್ಮ ‘ದಾಸ್ ಕ್ಯಾಪಿಟಲ್’ ಗ್ರಂಥ ರಚಿಸಲು ಸಾಧ್ಯವಾಗಿದ್ದು ಈ ಗ್ರಂಥಾಲಯದಲ್ಲೇ.

(ಲೇಖಕಿ ಹಿರಿಯ ಪತ್ರಕರ್ತೆ)