Friday, 18th October 2024

ಹೆಲಿಕಾಪ್ಟರ್ ಅಪಘಾತ: ಆಕ್ಸೆಸ್ ಬ್ಯಾಂಕ್ ಗ್ರೂಪಿನ ಸಿಇಒ ಸಾವು

ಕ್ಯಾಲಿಫೋರ್ನಿಯಾ: ಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನೈಜೀರಿಯಾದ ಆಕ್ಸೆಸ್ ಬ್ಯಾಂಕ್ ಗ್ರೂಪಿನ ಸಿಇಒ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಮೊಹಾವಿ ಮರುಭೂಮಿಯಲ್ಲಿ ಘಟನೆ ನಡೆದಿದೆ. ನೈಜೀರಿಯಾದ ಆಕ್ಸೆಸ್ ಬ್ಯಾಂಕ್ ಗ್ರೂಪ್ನ ಸಿಇಒ, ಅವರ ಪತ್ನಿ ಮತ್ತು ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಆರು ಜನರಲ್ಲಿ ಆಕ್ಸೆಸ್ ಬ್ಯಾಂಕ್ ಸಿಇಒ ಹರ್ಬರ್ಟ್ ವಿಗ್ವೇ (57) ಕೂಡ ಇದ್ದರು. ನೈಜೀರಿಯಾದ ಸ್ಟಾಕ್ ಎಕ್ಸ್ಚೇಂಜ್ ಎನ್ಜಿಎಕ್ಸ್ ಗ್ರೂಪಿನ ಮಾಜಿ ಅಧ್ಯಕ್ಷ ಬಾಮೊಫಿನ್ ಅಬಿಂಬೋಲಾ ಒಗುನ್ಬಾಂಜೊ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದು, ನೈಜೀರಿಯಾದ ಮಾಜಿ ಹಣಕಾಸು ಸಚಿವ ಎನ್ಗೊಜಿ ಅಕೊಂಜೊ-ಇವೆಲಾ ಇದನ್ನು ದೃಢಪಡಿಸಿದ್ದಾರೆ

ಎನ್ಗೊಜಿ ಇವೆಲಾ ಈಗ ಡಬ್ಲ್ಯುಟಿಒದ ಮಹಾನಿರ್ದೇಶಕರಾಗಿದ್ದಾರೆ. ಅಪಘಾತದಲ್ಲಿ ಶ್ರೀ ಹರ್ಬರ್ಟ್ ವಿಗ್ವೆ, ಅವರ ಪತ್ನಿ ಮತ್ತು ಮಗ ಮತ್ತು ಒಗುನ್ಬಾಂಜೊ ಅವರ ದುರಂತ ಸಾವಿನ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ” ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.