ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
2014ರ ನಂತರ ಭಾರತದಲ್ಲಿ ಅಸಹಿಷ್ಣುತೆಯೆಂಬ ಪದವು ಆಗಾಗ್ಗೆ ಮುಸಲ್ಮಾನ್ ನಾಯಕರುಗಳ ಬಾಯಲ್ಲಿ ಬರುತ್ತಿರುತ್ತದೆ, ಮೋದಿ ಹಾಗು ಅಮಿತ್ ಶಾ ರನ್ನು ಟೀಕಿಸಬೇಕೆಂದರೆ ಮೊಟ್ಟಮೊದಲು ನೆನೆಪಾಗುವ ಪದವಿದು. ಸ್ವಾತಂತ್ರ್ಯ ಬಂದು 68 ವರ್ಷಗಳ ಕಾಲ ಇಲ್ಲದ ಅಸಹಿಷ್ಣುತೆ 2014ರಿಂದ ಇವರಿಗೆ ಶುರುವಾಗಿದೆ. ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಿಂದ ಮುಸಲ್ಮಾ ನರು ಭಾರತದಲ್ಲಿ ಅನುಭವಿಸಿದಷ್ಟು ಸವಲತ್ತುಗಳನ್ನು ಬೇರೆ ಯಾವ ಧರ್ಮದವರೂ ಅನುಭವಿಸಿಲ್ಲ, ಆದರೂ ಇವರಿಗೆ ಭಾರತದಲ್ಲಿ ಅಭದ್ರತೆ ಎದ್ದು ಕಾಣುತ್ತಿದೆಯಂತೆ.
ಹಳೆಯ ಕಾಲದ ಮಾರಕವಾದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಕಿತ್ತುಹಾಕಿದ್ದು ಇವರಿಗೆ ತಪ್ಪಾಗಿ ಕಾಣುತ್ತಿದೆ, ಹೊರದೇಶ ದಲ್ಲಿರುವ ಹಿಂದೂ ಅಲ್ಪಸಂಖ್ಯಾತರನ್ನು ನಮ್ಮ ದೇಶಕ್ಕೆ ಪುನಃ ವಾಪಾಸ್ ಕರೆಸಿಕೊಂಡರೆ ಇವರಿಗೆ ತಪ್ಪಾಗಿ ಕಾಣುತ್ತದೆ, ಕಾಶ್ಮೀರ ವನ್ನು ಬಂಧಮುಕ್ತಗೊಳಿಸಿದ್ದು ಇವರಿಗೆ ತಪ್ಪಾಗಿ ಕಾಣುತ್ತದೆ. ಹಾಗಾದರೆ ಭಾರತದ ಪಕ್ಕದ ದೇಶ ಚೀನಾ ಮುಸಲ್ಮಾನ ರನ್ನು ಹೇಗೆ ನೋಡಿಕೊಳ್ಳುತ್ತಿದೆಯೆಂಬ ಅರಿವೇನಾದರೂ ಇವರಿಗಿದೆಯಾ? ಭಾರತದಲ್ಲಿ ಸಿಗುವ ಸ್ವಾತಂತ್ರ್ಯ ಚೀನಾ ದೇಶದಲ್ಲಿ ಇವರಿಗೆ ಸಿಗುತ್ತದೆಯೇ? ಭಾರತವನ್ನು ಸುಳ್ಳು ಸುಳ್ಳಾಗಿ ಅಸಹಿಷ್ಣುತೆ ದೇಶವೆನ್ನುವ ಇವರಿಗೆ ಚೀನಾ ದೇಶದಲ್ಲಿ ಹೋಗಿ ಒಂದೇ ಒಂದು ವಾರ ತಮಗಿಷ್ಟಬಂದಂತೆ ಬದುಕಲು ಸಾಧ್ಯವೇ ? ಪ್ರತಿ ಶುಕ್ರವಾರದಂದು ಭಾರತದ ಬೀದಿ ಬೀದಿಗಳಲ್ಲಿ ಟ್ರಾಫಿಕ್ ಜಾಮ್ ಮಾಡಿ ನಮಾಜ್ ಮಾಡುವ ಮುಸಲ್ಮಾನರಿಗೆ ಚೀನಾ ದೇಶದಲ್ಲಿ ಅಪ್ಪಿ ತಪ್ಪಿ ಹೀಗೆ ಮಾಡಿದರೆ ಏನಾಗುತ್ತದೆಯೆಂಬ ಅರಿವಿದೆಯೇ? ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರುವವರಿಗೆ ಚೀನಾ ದೇಶದಲ್ಲಿರುವ ಕಠಿಣ ಕಾನೂನಿನ ಬಗ್ಗೆ ಅರಿವಿದೆಯೇ? ಪ್ರತಿದಿನ ಮುಂಜಾನೆ ಆಜಾನ್ ಕೂಗುವಂತೆ ಚೀನಾ ದೇಶದಲ್ಲಿ ಇವರಿಗೆ ಕೂಗಲು ಸಾಧ್ಯವೇ? ನೋ ಚಾನ್ಸ್ ಅಪ್ಪಿ ತಪ್ಪಿ ಹೀಗೆಲ್ಲ ಮಾಡಿದರೆ ಅಲ್ಲಿಯೇ ಕಠಿಣ ಶಿಕ್ಷೆಯನ್ನು ನೀಡಿ ಜೀವನವನ್ನೇ ಹಾಳುಮಾಡಿಬಿಡುತ್ತಾರೆ.
ಇಂತಹ ಚೀನಾ ದೇಶದ ಪರವಾಗಿ ಹಲವು ಮುಸಲ್ಮಾನ್ ನಾಯಕರು ನಿಲ್ಲುವುದು ಭಾರತದ ಬಹುದೊಡ್ಡ ವಿಪರ್ಯಾಸವೇ ಸರಿ.
ವಾಯುವ್ಯ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಸಲ್ಮಾನರನ್ನು ಎಷ್ಟು ಹೀನಾಯವಾಗಿ ನೋಡಿಕೊಳ್ಳಲಾಗುತ್ತಿದೆ ಯೆಂದರೆ, ಮುಸಲ್ಮಾನರು ಎದುರಿಗೆ ಸಿಕ್ಕಾಗ ತಮ್ಮಬಾಂಧವರಿಗೆ ಶುಭಾಶಯ ಕೋರುವ ಸಲುವಾಗಿ ಹೇಳುವ ಸಲಾಂ ಮಲಿಕ್ಕುಂ ಎಂದರೆ ಸಾಕು ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ, ಮುಸಲ್ಮಾನರ ಪವಿತ್ರ ಗ್ರಂಥ ಖುರಾನ್ ಸಿಕ್ಕರೆ ಸಾಕು ಹಲವೆಡೆ ಮುಟ್ಟುಗೋಲು
ಹಾಕಿಕೊಳ್ಳುತ್ತಾರೆ, ಮಸೀದಿ ಗಳಲ್ಲಿ ಪ್ರವಚನ ಮಾಡುವಂತಿಲ್ಲ, ಮಾಡಿದರೆ ಕ್ಷಣಾರ್ಧದಲ್ಲಿ ಚೀನಾ ಪೊಲೀಸರು ಹಾಜರಾಗಿ
ಎಲ್ಲರನ್ನು ಬಂಽಸಿ ಠಾಣೆಗೆ ಕರೆದೊಯುತ್ತಾರೆ.
ಕಾಶ್ಮೀರದಲ್ಲಿ ಮುಸಲ್ಮಾನರನ್ನು ಓಲೈಸುವ ಸಲುವಾಗಿ ನೆಹರು ಅವರದ್ದೇ ಸಂವಿಧಾನವನ್ನು ನೀಡಿದ್ದರೂ ಸಹ ಅಲ್ಲಿನ ಮುಸಲ್ಮಾನರಿಗೆ ಪಾಕಿಸ್ತಾನದ ಮೇಲೆ ಹೆಚ್ಚಿನ ಪ್ರೀತಿ, ಬೇರೆ ರಾಜ್ಯಗಳಿಗಿಲ್ಲದ ಸವಲತ್ತು ಗಳನ್ನು ಕಾಶ್ಮೀರಕ್ಕೆ ನೀಡಿದರೂ ಸಹ ಅಲ್ಲಿನ ಬಹುತೇಕ ಮುಸಲ್ಮಾನರಿಗೆ ಭಾರತ ಮಾತೃಭೂಮಿ ಎಂದೆನಿಸಿಲ್ಲ, ಆದರೆ ಚೀನಾ ದೇಶದಲ್ಲಿ ಮುಸಲ್ಮಾನರನ್ನು ಹೀನಾಯವಾಗಿ ನೋಡಿಕೊಂಡರೂ ಸಹ ಭಾರತದಲ್ಲಿನ ಮುಸಲ್ಮಾನ್ ನಾಯಕರುಗಳು ಅಲ್ಲಿ ಅಸಹಿಷ್ಣುತೆ ಕಾಡುತ್ತಿದೆಯೆಂದು
ಹೇಳುವುದಿಲ್ಲ, ಒಮ್ಮೆ ಯೋಚಿಸಿ ನೋಡಿ ಬೆಂಗಳೂರಿನಲ್ಲಿ ಅಪ್ಪಿ ತಪ್ಪಿ ಏನಾದರೂ ಮುಸಲ್ಮಾನರಿಗೆ ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲವೆಂಬ ನಿಯಮವನ್ನು ತರಲಾಗುವುದೆಂದು ಗಾಳಿ ಸುದ್ದಿ ಹಬ್ಬಿಸಿದರೆ ಇಡೀ ಮುಸ್ಲಿಂ ಸಮುದಾಯವೇ ಸರಕಾರದ ವಿರುದ್ಧ ಬೀದಿಗಿಳಿದು ಬಿಡುತ್ತದೆ.
ಇವರ ಮೇಲಿನ ಹೆದರಿಕೆಯಿಂದ ಸರಕಾರಗಳು ಇಂತಹ ನಿಯಮವನ್ನು ತರುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಒಂದೆಡೆ ಹೆದರಿಕೆ ಮತ್ತೊಂದೆಡೆ ಓಲೈಕೆಯ ರಾಜಕಾರಣ, ಮುಸಲ್ಮಾನರು ಹಿಂದೂಗಳ ರೀತಿಯಲ್ಲಿ ಚುನಾವಣೆ ಯಂದು ಮನೆಯಲ್ಲಿ ಕೂರುವು ದಿಲ್ಲ ಗುಂಪು ಗುಂಪಾಗಿ ಬಂದು ತಮ್ಮನ್ನು ಓಲೈಸುವ ನಾಯಕನ ಪರವಾಗಿ ಓಟು ಹಾಕುತ್ತಾರೆ. ಮಸೀದಿಯಲ್ಲಿನ ಮೌಲ್ವಿ ಹೇಳುವ ನಾಯಕನಿಗೆ ವೋಟು ಬೀಳುವುದು ಪಕ್ಕ, ಅಷ್ಟೊಂದು ಕರಾರುವಕ್ಕಾಗಿ ವೋಟು ಹಾಕುವ ಸಮುದಾಯವನ್ನು ಎದುರು ಹಾಕಿಕೊಳ್ಳಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ತಯಾರಿಲ್ಲ.
ಹಾಗಾಗಿ, ಮುಸಲ್ಮಾನರು ಏನೇ ಮಾಡಿದರೂ ಸಹ ಸಹಿಸಿಕೊಂಡು ತಮ್ಮ ರಾಜಕೀಯ ಮಾಡುತ್ತಿರುತ್ತಾರೆ. ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಸುಮಾರು 13 ಮಿಲಿಯನ್‌ನಷ್ಟು ಉಯಿಘರ್ಸ್ ಹಾಗೂ ಟರ್ಕಿಯ ಮುಸಲ್ಮಾನ ರಿzರೆ, ಅಲ್ಲಿನ ಮುಸಲ್ಮಾನರನ್ನು ಓಲೈಸುವ ರಾಜಕಾರಣವನ್ನು ಚೀನಾ ಎಂದೂ ಸಹ ಮಾಡಿಲ್ಲ. ಚೀನಾ ದೇಶದ ಸರಕಾರವು ಹೇಳಿದಂತೆಯೇ ಈ ಮುಸಲ್ಮಾನರು ಕೇಳಬೇಕು. ಅಲ್ಲಿನ ರಾಜಕೀಯ ನಾಯಕರು ಏನು ಹೇಳುತ್ತಾರೋ ಅದನ್ನೇ ಮಾಡಬೇಕು, ಮಾಡಲಿಲ್ಲವೆಂದರೆ ಬಲವಂತವಾಗಿ ಮಾಡಿಸುತ್ತಾರೆ. ಬಲವಂತವಾಗಿ ಮಾಡಲಿಲ್ಲ ವೆಂದರೆ ಎಲ್ಲರಿಗೂ ಸಾಮೂಹಿಕ ಶಿಕ್ಷೆ ನೀಡುವುದರಲ್ಲಿ ಚೀನಾ ದೇಶವು ಮುಲಾಜೇ ನೋಡುವುದಿಲ್ಲ.
ಭಾರತದಲ್ಲಿ ಮಾನವ ಹಕ್ಕುಗಳ ಆಯೋಗ ಹಾಗೂ ಪ್ರಾಣಿ ದಯಾ ಸಂಘಗಳು ಮಾತೆತ್ತಿದರೆ ಸಾಕು ಮುಸಲ್ಮಾನರ ರಕ್ಷಣೆಗೆ ನಿಂತಿರುತ್ತವೆ. ಯಾರಾದರೂ ಮುಸಲ್ಮಾನರ ಆಚರಣೆಗಳ ವಿರುದ್ಧ ಮಾತನಾಡಿದರೆ ಸಾಕು ಅವರ ವಿರುದ್ಧ ಮುಗಿಬೀಳುತ್ತವೆ. ಇದೇ ಸಂಘಗಳು ಹಿಂದೂ ಆಚರಣೆಗಳ ವಿರುದ್ಧ ಮಾತನಾಡುವವರ ವಿರುದ್ಧ ತುಟಿ ಬಿಚ್ಚುವುದಿಲ್ಲ, ದೀಪಾವಳಿಯಂದು ಪಟಾಕಿ ಹೊಡೆದರೆ ವಾಯುಮಾಲಿನ್ಯ ವಾಗುತ್ತದೆ ಎನ್ನುವ ಸಂಘಗಳು ಬಕ್ರೀದ್ ಸಮಯದಲ್ಲಿ ಆಗುವ ಮಾಲಿನ್ಯಗಳ ಬಗ್ಗೆ
ಮಾತನಾಡುವುದೇ ಇಲ್ಲ. ಆದರೆ ಚೀನಾ ದೇಶದಲ್ಲಿ ಹಾಗಲ್ಲ.
ಯಾವ ಮಾನವ ಹಕ್ಕುಗಳ ಆಯೋಗ, ಪ್ರಾಣಿ ದಯಾ ಸಂಘಕ್ಕೂ ಮರ್ಯಾದೆಯೇ ಇಲ್ಲ, ಅವರು ಅಪ್ಪಿ ತಪ್ಪಿಯೂ ಅಲ್ಲಿನ
ಸರಕಾರವು ಮುಸಲ್ಮಾನರ ತೆಗೆದುಕೊಳ್ಳುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಪ್ರಶ್ನಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಕೈ ಹಾಕಿದರೆ
ಅವರಿಗೂ ಸಹ ಮುಲಾಜಿಲ್ಲದೇ ಅಲ್ಲಿನ ಸರಕಾರ ಶಿಕ್ಷೆ ನೀಡುತ್ತದೆ. ಚೀನಾ ದೇಶದಲ್ಲಿ ಮುಸಲ್ಮಾನರ ಮೇಲೆ ನಡೆಯುತ್ತಿರುವ
ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಒಂದಿಂಚೂ ಮಾಹಿತಿಯನ್ನು ಹಂಚಿಕೊಳ್ಳಲು ಚೀನಾ ಬಿಡುವುದಿಲ್ಲ, ಜಗತ್ತಿನ ಇತರ ರಾಷ್ಟ್ರಗಳ ಗುಪ್ತಚರ ಇಲಾಖೆ ಗಳು ಚೀನಾ ದೇಶದೊಳಗೆ ನಡೆಯುತ್ತಿರುವ ದೌರ್ಜನ್ಯಗಳನ್ನು ಜಗತ್ತಿನ ಮುಂದೆ ಇಡುತ್ತಿವೆ.
ಭಾರತದಲ್ಲಿ ತ್ರಿವಳಿ ತಲಾಕ್ ಪದ್ಧತಿಯನ್ನು ರದ್ಧತಿ ಮಾಡಿದ ಸಲುವಾಗಿ ಪ್ರತಿಭಟನೆಗಳು ನಡೆದಿದ್ದವು, ಹಲವು ಮುಸಲ್ಮಾನ್ ನಾಯಕರು ಬಹಿರಂಗವಾಗಿ ಇದನ್ನು ವಿರೋಧಿಸಿದ್ದರು. ಆದರೆ ಚೀನಾ ದೇಶದಲ್ಲಿ ಜನಸಂಖ್ಯಾ ನಿಯಂತ್ರಣವನ್ನು ಬಹಿರಂಗ ವಾಗಿ ಎಲ್ಲರ ಮೇಲೂ ಹೇರಲಾಗುತ್ತಿದೆ. ಭಾರತ ದಲ್ಲಿ ಮುಸ್ಲಿಂ ಕಾನೂನಿನಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗಿ ಎಷ್ಟು ಮಕ್ಕಳನ್ನು ಬೇಕಾದರೂ ಹೆರಬಹುದು, ಆದರೆ ಚೀನಾದಲ್ಲಿ ಮುಸಲ್ಮಾನರಿಗೆ ಇದನ್ನು ಮಾಡಲು ಸಾಧ್ಯವಿಲ್ಲ. ಹಾಗಾದರೆ ಭಾರತ ಹೇಗೆ ಇವರಿಗೆ ಅಸಹಿಷ್ಣುತೆ ಯ ರಾಷ್ಟ್ರವಾಯಿತು? ಇವರ ಮೇಲೇನಾದರೂಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು
ಹೇರಲಾಗಿದೆಯೇ? ಭಾರತದ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಹೇರಲೇಬೇಕಾದಂಥ ಪರಿಸ್ಥಿತಿಯಿದ್ದರೂ ಸಹ ಸರಕಾರವು ಇನ್ನೂ ಸಹ ಅಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಚೀನಾ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಉಲ್ಲಂಘಿಸಿದರೆ, ಸರಕಾರದಿಂದ ಸಿಗುವ ಯಾವ ಸವಲತ್ತು ಗಳೂ ಸಿಗುವುದಿಲ್ಲ. ಆದರೆ ಭಾರತದಲ್ಲಿ ಹಾಗಲ್ಲ ಮುಸಲ್ಮಾನರ ಕುಟುಂಬದಲ್ಲಿ ಎಷ್ಟೇ ಮಕ್ಕಳಿದ್ದರೂ ಸಹ ಸವಲತ್ತುಗಳನ್ನು ನೀಡ ಲಾಗುತ್ತಿದೆ. ಒಂದೆಡೆ ಸರಕಾರವನ್ನು ಬೈದು, ಮತ್ತೊಂದೆಡೆ ಅದೇ ಸರಕಾರದ ಸವಲತ್ತುಗಳಿಗಾಗಿ ಹೆಚ್ಚಾಗಿ ಎಲ್ಲರಿಗಿಂತಲೂ ಮುಂಚೆ ನಿಲ್ಲುವವರು ಮುಸಲ್ಮಾನರೆಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಸಲ್ಮಾನರನ್ನು ರಾಜಕೀಯ ಶಿಬಿರಗಳ್ಳಲಿರಿಸಿ ಬಲವಂತವಾಗಿ ಚೀನಾ ಭಾಷೆಯನ್ನು
ಕಲಿಯುವಂತೆ ಒತ್ತಡ ಹೇರಲಾಗುತ್ತದೆ, ಜೊತೆಗೆ ಚೀನಾ ದೇಶದ ಅಧ್ಯಕ್ಷ ಹಾಗೂ ಕಮ್ಯುನಿಸ್ಟ್ ಸರಕಾರವನ್ನು ಬಲವಂತವಾಗಿ
ಹೊಗಳುವಂತೆ ಒತ್ತಡ ಹೇರಲಾಗುತ್ತದೆ. ಆದರೆ ಬೆಂಗಳೂರಿನಲ್ಲಿರುವ ಮುಸಲ್ಮಾನರಿಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ, ಮುಸ್ಲಿಂ ಪ್ರಾಬಲ್ಯವಿರುವ ಏರಿಯಾಗಳಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯ ಬರಹಗಳು ಇದ್ದೇ ಇರುತ್ತವೆ. ಕನ್ನಡಪರ ಸಂಘಟನೆಗಳು ಇವರ ವಿರುದ್ಧ ಹೊರಡುವ ಸಾಹಸಕ್ಕೆ ಕೈ ಹಾಕುವುದಿಲ್ಲ, ಉರ್ದು ಭಾಷೆಯ ಬರಹಗಳ ಮೇಲೆ ಕಪ್ಪು
ಶಾಹಿಯನ್ನು ಹಾಕುವ ಧೈರ್ಯ ಮಾಡುವುದಿಲ್ಲ. ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯದ್ದಿದರೂ ಸಹ ಮುಸಲ್ಮಾನರಿಗೆ
ಕೊಡಬೇಕಾದ ಸವಲತ್ತುಗಳನ್ನು ಸರಕಾರ ಕೊಡುತ್ತಲಿದೆ, ಇಷ್ಟಾದರೂ ಸಹ ಹಲವು ಮುಸಲ್ಮಾನ್ ನಾಯಕರುಗಳಿಗೆ
ಭಾರತವು ಅಸಹಿಷ್ಣುತೆಯ ದೇಶವಾಗಿ ಕಾಣುತ್ತದೆ. ಇಲ್ಲಿನ ಸರಕಾರವನ್ನು ಹೊಗಳುವುದಿರಲಿ, ಸರಕಾರಕ್ಕೆ ಸಲ್ಲಿಸಬೇಕಾದ
ಗೌರವವನ್ನೂ ಹಲವೆಡೆ ಸಲ್ಲಿಸುವುದಿಲ್ಲ.
ಪಾಕಿಸ್ತಾನವನ್ನು ಸ್ವರ್ಗವೆಂದು ಹೇಳುವವರಿದ್ದರೆ, ಪಾಕಿಸ್ತಾನದ ಧ್ವಜವನ್ನು ಹಾರಿಸುವವರಿದ್ದರೆ, ಪಾಕಿಸ್ತಾನಿ ಸೈನಿಕರನ್ನು ನಮ್ಮ ಸೈನಿಕರು ಕೊಂದುಬಂದರೆ ಸಾಕ್ಷಿ ಕೇಳುವವರಿದ್ದರೆ, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರಿದ್ದರೆ, ದೇಶವನ್ನು ತುಕ್ಡೆ ತುಕ್ಡೆ ಮಾಡುತ್ತೇವೆಂದು ಹೇಳುವವರಿzರೆ. ಇದನೆಲ್ಲವನ್ನೂ ಸಹಿಸಿಕೊಂಡಿರುವ ಭಾರತವು ಜಗತ್ತಿನ ಅತ್ಯಂತ ಸಹಿಷ್ಣುತ ದೇಶವೆನ್ನುವು ದರಲ್ಲಿ ಯಾವುದೇ ಅನುಮಾನವಿಲ್ಲ. ಚೀನಾ ತನ್ನ ದೇಶದ ಮುಸ್ಲಿಮರನ್ನು ಇಷ್ಟೊಂದು ಹೀನಾಯವಾಗಿ ನೋಡಿಕೊಳ್ಳುತ್ತಿ ದ್ದರೂ ಸಹ ಇತರ ಮುಸ್ಲಿಂ ದೇಶಗಳು ಅದರ ವಿರುದ್ಧ ಗಟ್ಟಿಯಾದ ದ್ವನಿ ಎತ್ತುವುದಿಲ್ಲ, ಪಕ್ಕದ ಪಾಕಿಸ್ತಾನ ವಂತೂ ಚೀನಾ ಹಾಕಿದ ಬಿಸ್ಕತ್ ತಿಂದುಕೊಂಡು ತನ್ನ ಧರ್ಮದವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ತಾಕತ್ತನ್ನು ತೋರುತ್ತಿಲ್ಲ.
ಹೀನಾಯವಾಗಿ ನೋಡಿಕೊಳ್ಳುತ್ತಿರುವ ಚೀನಾದ ವಿರುದ್ಧ ಮಾತನಾಡದ ಪಾಕಿಸ್ತಾನ ಕಾಶ್ಮೀರಿಗಳ ಪರ ವಕಾಲತ್ತು ವಹಿಸಲು ಸದಾ ತಯಾರಾಗಿರುತ್ತದೆ. ಚೀನಾ ದೇಶದ ಮುಸಲ್ಮಾನರಿಗೆ ಸ್ವಾತಂತ್ರ್ಯ ಕೊಡಿಸಲು ಧೈರ್ಯವಿಲ್ಲದ ಪಾಕಿಸ್ತಾನ ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರಿ ಗಳಿಗೆ ಸ್ವಾತಂತ್ರ್ಯ ಕೊಡಿಸುತ್ತೇನೆಂದು ಜಗತ್ತಿನ ಮುಂದೆ ಹೇಳುತ್ತದೆ. ಭಾರತದೊಳಗಿನ ಕೆಲವು ಮುಸಲ್ಮಾನರು ಚೀನಾ ಹಾಗೂ ಪಾಕಿಸ್ತಾನದ ಪರವಾಗಿ ನಿಲ್ಲುತ್ತಾರೆ, ಇಂತಹವರ ಹೋರಾಟವನ್ನು ರಾಜಕೀಯವೆನ್ನದೆ ಏನೆನ್ನಬೇಕು ಹೇಳಿ? ಕ್ಸಿಂಜಿಯಾನ್ ಪ್ರಾಂತ್ಯದ ಮುಸಲ್ಮಾನರು ಸೌದಿ ಅರೇಬಿಯಾ, ಟರ್ಕಿ, ಪಾಕಿಸ್ತಾನ, ಈಜಿ-, ಆಲ್ಜೀರಿಯಾ ದೇಶಗಳಿಗೆ ಹೋಗಿ ಬಂದರೆ ಅಥವಾ ಅಲ್ಲಿನ ಸಂಬಂಧಿಕರ ಜೊತೆ ಸಂಪರ್ಕವಿಟ್ಟುಕೊಂಡಿದ್ದರೆ, ಅಂತಹವರನ್ನು ಕಳ್ಳರಂತೆ ನೋಡಿ ಪ್ರತಿದಿನವೂ ವಿಚಾರಣೆಗೊಳಿಸುತ್ತದೆ. ವಿಚಾರಣೆ ಗೊಳಪಡಿಸಿದ ನಂತರ ಅನುಮಾನ ಬಂದರೆ ಜೈಲಿಗೆ ಹಾಕಿದ ಹಲವು ಪ್ರಕರಣಗಳು ನಡೆದಿವೆ, ಹೊರ ಜಗತ್ತಿನ ಕೆಲವರು ಏನಾದರೂ ಚೀನಾ ದೇಶವನ್ನು ಇದರ ಬಗ್ಗೆ ಕೇಳಿದರೆ, ತನ್ನ ಪ್ರಾಂತ್ಯದಲ್ಲಿ
ಭಯೋತ್ಪಾದನೆ ಹಾಗೂ ಉಗ್ರವಾದವನ್ನು ಹತ್ತಿಕ್ಕಲು ಈ ರೀತಿ ಮಾಡುವುದಾಗಿ ಹೇಳುತ್ತದೆ. ಉಗ್ರವಾದ ವನ್ನು ಹತ್ತಿಕ್ಕಲು ಏನು
ಬೇಕಾದರೂ ಮಾಡಲು ಸಿದ್ಧವಿರುವ ಚೀನಾ ದೇಶದಲ್ಲಿ ಇಲ್ಲದ ಅಸಹಿಷ್ಣುತೆಯು ಅಮೀರ್ ಖಾನ್‌ಗೆ ಭಾರತದಲ್ಲಿ ಯಥೇಚ್ಛವಾಗಿ
ಕಾಣುತ್ತದೆ.
ಇತ್ತೀಚಿಗೆ ಇಸ್ತಾನ್ ಬುಲನಲ್ಲಿ ನಡೆದ ಸಂದರ್ಶನವೊಂದರಲ್ಲಿ ಅಮೀರ್ ಖಾನ್ ಚೀನಾ ದೇಶದ ಕ್ಸಿನ್ಜಿಯಾಂಗ್ ಪ್ರಾಂತ್ಯ ದಲ್ಲಿ ಟರ್ಕಿಯ ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲೇ ಇಲ್ಲ, ಆತನಿಗೆ ಅಲ್ಲಿಯ ಅಸಹಿಷ್ಣುತೆಯು ಕಾಡಲಿಲ್ಲ. ಭಾರತದ ವಿರುದ್ಧ ನಿಂತ ಟರ್ಕಿಯ ಪರವಾಗಿ ಒಂದು ಸಂದರ್ಶನದಲ್ಲಿ ಬಾಗವಹಿಸಿದ್ದ ನೆಂದರೆ ಈತನ ನಾಟಕ ವನ್ನು ನೀವೇ ಅರ್ಥ ಮಾಡಿಕೊಳ್ಳಿ, ತನ್ನ ಹೆಂಡತಿಗೆ ಭಾರತದಲ್ಲಿರಲು ಭಯವಾಗುತ್ತಿದೆ ಎಂದಿದ್ದ ಈತನಿಗೆ ಚೀನಾ ದೇಶವು ಸ್ವರ್ಗದಂತೆ ಕಂಡಿರಬೇಕು!
ಚೀನಾ ದೇಶವು ಕೇವಲ ಮುಸಲ್ಮಾನರನ್ನು ಮಾತ್ರವಲ್ಲ ತನ್ನ ದೇಶದ ಪ್ರಜೆಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಯೆಂಬು ದನ್ನು ಇತ್ತೀಚಿನ ಹಾಂಗ್ ಕಾಂಗ್ ಪ್ರತಿಭಟನೆಯಲ್ಲಿ ಜಗತ್ತು ಕಂಡಿದೆ. ತನ್ನ ದೇಶದ ಪ್ರಜೆಗಳೇ ತನ್ನ ವಿರುದ್ಧ ನಿಂತಾಗ
ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಚೀನಾ, ಇನ್ನು ಜಾಗತಿಕವಾಗಿ ಉಗ್ರವಾದದಲ್ಲಿ ಹೆಚ್ಚಾಗಿ ಕಾಣಸಿಗು ವವರನ್ನು ಸುಮ್ಮನೆ ಬಿಡುತ್ತದೆಯೇ? ಜಗತ್ತಿನ ಇತರೆ ದೇಶಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಕೊಂಚವಾದರೂ ಬೆಳಕಿಗೆ ಬರುತ್ತವೆ. ಆದರೆ ಚೀನಾ ದೇಶದಲ್ಲಿ ನಡೆಯುವ ದೌರ್ಜನ್ಯಗಳು ಅಷ್ಟು ಸುಲಭವಾಗಿ ಬೆಳಕಿಗೆ ಬರುವುದಿಲ್ಲ.
ಭಾರತದಲ್ಲಿ ದಿನಬೆಳಗಾದರೆ ಸಾಕು ಟ್ವೀಟರ್‌ನಲ್ಲಿ ಯಾವುದಾದರೊಂದು ಟ್ರೆಂಡಿಂಗ್ ವಿಷಯದ ಮೂಲಕ ಸರಕಾರವನ್ನು ಕೆಣಕುವ ಕೆಲಸವನ್ನು ಕಮ್ಯುನಿಸ್ಟರು ಮಾಡುತ್ತಿರುತ್ತಾರೆ. ಆದರೆ ಚೀನಾದಲ್ಲಿ ಇದೆಲ್ಲ ನಡೆಯುವು ದಿಲ್ಲ. ತನ್ನ ದೇಶದಲ್ಲಿ ಗೂಗಲ, ಫೆಸ್ಬುಕ್‌ಗಳ ಮೇಲೆ ನಿರ್ಬಂಧ ಹೇರುವ ಮೂಲಕ ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಂಡಿದೆ. ಯಾವುದೇ ದೇಶದ ಸಂವಿಧಾನವನ್ನು ರಚಿಸುವಾಗ ಅಲ್ಲಿನ ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳ ಲಾಗುತ್ತದೆ, ಮನುಷ್ಯ ಹುಟ್ಟಿದಾಕ್ಷಣ ತನ್ನ ಜೊತೆಯಲ್ಲಿ ಹಲವು ಹಕ್ಕುಗಳನ್ನು ಹೊತ್ತಿಕೊಂಡು ಭೂಮಿಯ ಮೇಲೆ ಬರುತ್ತಾನೆ. ಈ ಹಕ್ಕುಗಳನ್ನು ಹತ್ತಿಕ್ಕಲು ಯಾರಿಗೂ ಸಾಧ್ಯವಿಲ್ಲ, ಹಾಗಾಗಿ ಜಗತ್ತಿನ ಎ ಸಂವಿಧಾನಗಳು ಮನುಷ್ಯನ ಹುಟ್ಟಿನಿಂದ ಬರುವ ಮೂಲಭೂತ ಹಕ್ಕುಗಳನ್ನೇ ಅಳವಡಿಸಿಕೊಂಡಿವೆ.
ಇಂತಹ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುವುದು ಸಹಜ ಪ್ರಕ್ರಿಯೆ. ವಿಪರ್ಯಾಸವೆಂದರೆ ಭಾರತದಲ್ಲಿನ ಮುಸಲ್ಮಾನರಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಹಕ್ಕುಗಳನ್ನು ನೀಡಿದರೂ ಸಹ, ಯಾರೋ ಹೇಳಿದ ಸುಳ್ಳು ವಿಚಾರಗಳನ್ನು ನಂಬಿಕೊಂಡು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಚೀನಾ ದೇಶದಲ್ಲಿನ ಮುಸಲ್ಮಾನರಿಗೆ ತಮ್ಮ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದರೂ ಸಹ ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ, ತಮ್ಮ ಮೇಲೆ ನಡೆಯುತ್ತಿರುವ
ದೌರ್ಜನ್ಯಗಳ ಬಗ್ಗೆ ಹೇಳಲು ಒಂದು ಸಣ್ಣ ವೇದಿಕೆ ಇಲ್ಲ.
ಭಾರತದಲ್ಲಿ ನೋಡಿ ಮುಸಲ್ಮಾನರಿಗೆ ಎಲ್ಲೂ ವೇದಿಕೆಯಿದೆ, ಹೋರಾಟದ ಹೆಸರಿನಲ್ಲಿ ಅವರು ಮಾಡುವ ನಷ್ಟದ ಬಗ್ಗೆ
ಮಾತನಾಡಲು ಯಾರೂ ಸಹ ಮುಂದೆ ಬರುವುದಿಲ್ಲ, ಇಂತಹ ವೇದಿಕೆಯನ್ನು ಕಲ್ಪಿಸಿ ಕೊಟ್ಟ ಭಾರತ ದೇಶದಲ್ಲಿ ಇವರಿಗೆ
ಅಸಹಿಷ್ಣುತೆಯು ಕಾಡುತ್ತಿದೆಯಂತೆ. ಇವರಿಷ್ಟದ ಹಾಗೆ ಹಸಿರು ಬಾವುಟವನ್ನು ಬೀದಿ ಬೀದಿಗಳಲ್ಲಿ ಹಾರಿಸಿಕೊಂಡು
ಓಡಾಡುತ್ತಿರುವಾಗ ಯಾರು ಸಹ ಪ್ರಶ್ನಿಸದಿದ್ದರೆ ಇವರಿಗೆ ಭಾರತವು ಅದ್ಭುತವಾಗಿ ಕಾಣುತ್ತದೆ.
ಕ್ಸಿನ್ಜಿಯಾಂಗ್ ಪ್ರಾಂತ್ಯದ ಪೊಲೀಸರಿಗೆ ದಿನಕ್ಕಿಷ್ಟು ಜನರನ್ನು ಮುಸಲ್ಮಾನ್ ಶಿಬಿರಗಳಿಗೆ ಕಳುಹಿಸಬೇಕೆಂಬ ಗುರಿ ಯನ್ನು
ನೀಡಲಾಗುತಿತ್ತಂತೆ. ಭಾರತದನಾದರೂ ಈ ರೀತಿಯ ಗುರಿಯನ್ನು ಪೊಲೀಸರಿಗೆ ನೀಡುವುದನ್ನು ಕಲ್ಪನೆ ಮಾಡಲಿಕ್ಕಾದರೂ ಆಗುತ್ತದೆಯೇ? ಕ್ಸಿನ್ಜಿಯಾಂಗ್ ಪ್ರಾಂತ್ಯವನ್ನು ಹೊಸ ಮುಸಲ್ಮಾನ್ ದೇಶವನ್ನಾಗಿಸಬೇಕೆಂದು 2009 ರಲ್ಲಿ ಅಲ್ಲಿನ
ಮುಸಲ್ಮಾನರು ಹೋರಾಟ ನಡೆಸಿದ್ದರು, ಈ ಹೋರಾಟದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದರು. ಮುಸಲ್ಮಾನರ ಹೋರಾಟದ ಪರಿಯನ್ನು ಅರಿತ ಚೀನಾ ಸರಕಾರವು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಪ್ರಾಂತ್ಯದ ಪ್ರತಿಯೊಬ್ಬ
ಮುಸಲ್ಮಾನನ ಮೇಲೆ ನಿಗಾ ಇಡುವ ಮೂಲಕ ಪ್ರಾಣಿಗಳಿಗಿಂತಲೂ ಹೀನಾಯವಾಗಿ ನೋಡಿಕೊಳ್ಳುತ್ತಿದೆ.
ಭಾರತದಲ್ಲಿ ಅನುಮಾನದ ಮೇಲೆ ಒಬ್ಬ ಉಗ್ರವಾದಿಯ ಮೇಲೆ ನಿಗಾ ಇಟ್ಟರೆ ಸಾಕು, ಗಂಜಿ ಗಿರಾಕಿಗಳು ಬೀದಿಯಲ್ಲಿ ನಿಂತು ಹೋರಾಟಮಾಡುತ್ತಾರೆ. ಇನ್ನೂ ವಿಚಿತ್ರವೆಂದರೆ ಕಮ್ಯುನಿಸ್ಟ್ ರಾಷ್ಟ್ರ ಚೀನಾದ ವಾದಗಳನ್ನು ಬೆಂಬಲಿಸುವ ಭಾರತದ ಕಮ್ಯುನಿಸ್ಟರು ಮುಸಲ್ಮಾನರ ಮೇಲೆ ಚೀನಾದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ, ಆದರೆ ಭಾರತ ದಲ್ಲಿನ ಮುಸಲ್ಮಾನರ ಮೇಲೆ ಕೊಂಚ ನಿಗಾ ಇಟ್ಟರೂ ಬೊಬ್ಬೆಯಿಡುತ್ತಾರೆ. ಚೀನಾ ದೇಶದಲ್ಲಿ ಮುಸಲ್ಮಾನ್ ಆಚರಣೆಗಳನ್ನು ಒಂದು ರೋಗವನ್ನಾಗಿ ನೋಡಲಾಗುತ್ತಿದೆ, ಆಚರಣೆಗಳಿಗೆ ಕೊಂಚವೂ ಗೌರವವಿರುವುದಿಲ್ಲ. ಅವರ ಆಚರಣೆಗಳಿಂದಲೇ ಉಗ್ರವಾದವು ಹೆಚ್ಚಾಗುತ್ತಿದೆಯೆಂದು ಭಾವಿಸಿ ಅವರಿಗಿರುವ ಸರ್ವ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳ ಲಾಗುತ್ತಿದೆ. ಅವರ ಆಚರಣೆ ಗಳನ್ನು ರೋಗದ ರೀತಿಯಲ್ಲಿ ನೋಡುತ್ತಿರುವ ಚೀನಾ ದೇಶವು ತಾನು ರೋಗಕ್ಕೆ ಮದ್ದು ನೀಡುವ ಸಲುವಾಗಿ ಇಷ್ಟೆ ದೌರ್ಜನ್ಯ ವನ್ನು ಮಾಡಲೇ ಬೇಕಾಗಿದೆಯೆಂದು ಹೇಳುತ್ತಿದೆ.
ವಿಪರ್ಯಾಸ ನೋಡಿ ಭಾರತವೆಂಬ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಮುಸಲ್ಮಾನರಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಗೌರವವನ್ನು ನೀಡಿದರೂ ಸಹ ಇಲ್ಲಿನ ಮುಸಲ್ಮಾನರಿಗೆ ಅಸಹಿಷ್ಣುತೆ ಎದ್ದು ಕಾಡುತ್ತಿದೆಯಂತೆ, ಹಾಗಾದರೆ ಇಲ್ಲಿನ ಮುಸಲ್ಮಾನರು ಚೀನಾ ದೇಶಕ್ಕೆ ಹೋಗಿ ಜೀವನ ನಡೆಸಲು ಸಾಧ್ಯವೇ?