Friday, 22nd November 2024

ಅಷ್ಟಕ್ಕೂ ಗಡ್ಡ ಕೆರೆಯಲು ಹೋಗಿ ತಲೆ ಕೆರೆದರಾ ?

ನೂರೆಂಟು ವಿಶ್ವ

Winning is like shaving-you do it every day or you wind up looking like a bum. . ಈ ಮಾತನ್ನು ಹೇಳಿದವನು ಜಾಕ್ ಫ್ರೆಂಚ್ ಕೆಂಪ್. ಮೂಲತಃ ಈತ ಅಮೆರಿಕದ ಫುಟ್ಬಾಲ್ ಆಟಗಾರ. ತನ್ನ ಫುಟ್ಬಾಲ್ ಖ್ಯಾತಿಯನ್ನೇ ರಾಜಕಾರಣಕ್ಕೆ ಬಳಸಿಕೊಂಡು ಅಲ್ಲಿಯೂ ಹೆಸರು ಮಾಡಿದವನು. ನನಗೆ ಈತನ ಬಗ್ಗೆ ಮೂವತ್ನಾಲ್ಕು ವರ್ಷಗಳ ಹಿಂದೆ ಹೇಳಿದವರು ಅರಣ್ಯಅಧಿಕಾರಿ ನಾರಾವಿ ಗೋಪಾಲ ಪೂಜಾರಿ. ಅಂದು ನಾನು ಅವರ ಜತೆ ಬಿಳಿಗಿರಿರಂಗನ ಬೆಟ್ಟದ ಸನಿಹದಲ್ಲಿರುವ ಕೆ.ಗುಡಿಯಲ್ಲಿದ್ದೆ.

ಬೆಳಗ್ಗೆ ನಾವು ಸಫಾರಿಗೆ ಹೋಗಬೇಕಿತ್ತು. ಬೆಳಗ್ಗೆ ಆರು ಗಂಟೆಗೆ ಪೂಜಾರಿಯವರು ನೀಟಾಗಿ ಗಡ್ಡ (ಶೇವ್) ಮಾಡಿ ಹೊರಡಲು ಸಿದ್ಧರಾಗಿದ್ದರು. ಆ ದಿನಗಳಲ್ಲಿ ನಾನು ಗಡ್ಡ ಬಿಟ್ಟಿದ್ದೆ. ಬೆಳಗ್ಗೆ ನನ್ನನ್ನು ನೋಡಿದವರೇ, ‘ಭಟ್ರೇ, ನೀವು ಪತ್ರಕರ್ತರು. ದಿನವೂ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡು
ತ್ತೀರಿ. ನೀವು ಚೆನ್ನಾಗಿ ಕಾಣಬೇಕು. ಯಾವತ್ತೂ ನೀಟಾಗಿ ಇರಬೇಕು. ನೀಟಾಗಿ ಕಾಣುವ ಮೊದಲ ಹೆಜ್ಜೆಯೆಂದರೆ, ಪ್ರತಿದಿನ ಬೆಳಗ್ಗೆ ಏಳುತ್ತಿದ್ದಂತೆ ಶೇವ್ ಮಾಡುವುದು.

ಜಾಕ್ ಕೆಂಪ್ಎಂಬ ಅಮೆರಿಕದ ಫುಟ್ಬಾಲ್ ಆಟಗಾರ ಮತ್ತು ರಾಜಕಾರಣಿ ಶೇವ್ ಮಾಡದೇ ಬೇರೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಹಲ್ಲುಜ್ಜುವ ಮುನ್ನ ಶೇವ್ ಮಾಡಿಕೊಳ್ಳುತ್ತಿದ್ದ. ಆತ ಶೇವ್ ಮಾಡದ ದಿನವೇ ಇರಲಿಲ್ಲ. ಜೀವನದಲ್ಲಿ ಗೆಲ್ಲುವುದು ಅಂದ್ರೆ ಶೇವ್ ಮಾಡಿಕೊಳ್ಳುವುದು. ಒಂದೇ ಕೆಲಸವನ್ನು ಆಸ್ಥೆಯಿಂದ ನಿತ್ಯವೂ ಮಾಡುತ್ತಲೇ ಇರಬೇಕು, ಇಲ್ಲದಿದ್ದರೆ ಕೆಟ್ಟದಾಗಿ ಕಾಣುತ್ತೇವೆ ಅಥವಾ ಸೋಲುತ್ತೇವೆ. ಗೆಲುವು ಸುಲಭವಾಗಿ
ದಕ್ಕುವುದಿಲ್ಲ. ಒಂದೇ ಕೆಲಸವನ್ನು ಮಾಡುತ್ತಾ ಮಾಡುತ್ತಾ ಅದರಲ್ಲಿ ಪಾಂಗಿತರಾಗಬೇಕು. ಪ್ರತಿದಿನ ಶೇವಿಂಗ್ ಮಾಡುವಾಗ ಜಾಕ್ ಕೆಂಪ್ ಹೇಳಿದ ಮಾತನ್ನು ನೆನಪಿಸಿಕೊಳ್ಳಿ. ನೀವು ಶೇವ್ ಮಾಡದೇ ಇರಲು ಸಾಧ್ಯವೇ ಇಲ್ಲ.’ ಎಂದು ಹೇಳಿದ್ದರು.

ಗೋಪಾಲ ಪೂಜಾರಿ ಅವರ ಮಾತು ನನ್ನ ತಲೆಯೊಳಗೆ ಹೇಗೆ ಹೋಗಿ ಕುಳಿತುಕೊಂಡಿತೆಂದರೆ, ಇಂದಿಗೂ ಅದು ಅಲ್ಲಿಯೇ ಮನೆ ಮಾಡಿಬಿಟ್ಟಿದೆ. ಕಳೆದ  ಮೂವತ್ನಾಲ್ಕು ವರ್ಷಗಳಿಂದ ನಿತ್ಯವೂ ಶೇವ್ ಮಾಡುತ್ತಿದ್ದೇನೆ. ಒಂದು ದಿನವೂ ತಪ್ಪಿಸಿಲ್ಲ. ಕೋವಿಡ್ ಸಂದರ್ಭದಲ್ಲಿ ನನಗೇ ಆಶ್ಚರ್ಯವನ್ನುಂಟು ಮಾಡಿಕೊಳ್ಳಲು ಇಪ್ಪತ್ತು ದಿನ ಶೇವ್ ಮಾಡಿರಲಿಲ್ಲ. ಅದನ್ನು ಬಿಟ್ಟರೆ, ಒಂದು ದಿನವೂ ಶೇವ್ ಮಾಡದ ದಿನಗಳೇ ಇರಲಿಕ್ಕಿಲ್ಲ. ಅದು ಸೌಂದರ್ಯಕ್ಕಿಂತ ಹೆಚ್ಚಾಗಿ ನನಗೆ ಒಂದು ಶಿಸ್ತನ್ನು ಕಲಿಸಿದೆ. ದಿನವೂ ಜಾಕ್ ಕೆಂಪ್ ಮಾತು ನೆನಪಾಗುತ್ತದೆ. ನನಗೆ ಗಡ್ಡ ಮಾಡಿಕೊಳ್ಳುವುದು ಒಂದು ಕೆಲಸ, ನಿತ್ಯ ಚಾಕರಿ, ಯಾರು ಮಾಡಿಕೊಳ್ತಾರಪ್ಪ ಎಂಬ ಒಂದು ಆಲಸ್ಯದ, ವರಾತದ ಕಸುಬಾಗದೇ, ಪ್ರೀತಿಯ ಕೈಂಕರ್ಯವಾಗಿದೆ.

ಪ್ರತಿ ದಿನ ಬೆಳಗ್ಗೆ ಶೇವ್ ಮಾಡಿಕೊಳ್ಳುವ ಎಂಟು-ಹತ್ತು ನಿಮಿಷ ಅದು ನನ್ನ ಧ್ಯಾನಕ್ಕೆ ಸಮ. ಅಷ್ಟು ಹೊತ್ತು ನನ್ನದು. ಅದು ನನ್ನ ಚಿಂತನೆಗೆ ಮೀಸಲು. ಇಂದು ಏನೇನು ಮಾಡಬೇಕು ಎಂದು ನಿರ್ಧರಿಸುವ ದಿನಚರಿ, ಪ್ಲಾನರ್. ಆ ಹತ್ತು ನಿಮಿಷ ನನ್ನ ಇಡೀ ದಿನವನ್ನು ನಿರ್ಧರಿಸುವ, ನಿರ್ದೇಶಿಸುವ, ನಿರ್ಮಿ ಸುವ ಅಮೂಲ್ಯ ಸಮಯ. ನನ್ನ ಮುಖವನ್ನು ನನಗೆ ದಿಟ್ಟಿಸಿ ನೋಡಿಕೊಳ್ಳಲು ಸಿಗುವ ಸಮಯವೂ ಹೌದು. ‘ಮುಖವೇ ಮನಸ್ಸಿನ ಕನ್ನಡಿ’ ಎಂಬು ದನ್ನು ಅರ್ಥ ಮಾಡಿಕೊಂಡರೆ ಶೇವಿಂಗ್ ಅದೆಂಥ ನಿತ್ಯನೂತನ ಕಾಯಕ ಎಂಬುದು ಗೊತ್ತಾಗುತ್ತದೆ.

ಅನೇಕ ವರ್ಷಗಳ ಕಾಲ ನಾನು ನನ್ನ ತಂದೆಯವರು ಬಳಸುತ್ತಿದ್ದ ರೇಜರನ್ನು ಬಳಸುತ್ತಿದ್ದೆ. ಅವರ ನಿಧನದ ಬಳಿಕ ಅವರ ನೆನಪಿನಲ್ಲಿ ಅದನ್ನು ಉಪಯೋಗಿಸುತ್ತಿದ್ದೆ. ಅದು ಭಾರತದ ಪ್ರಪ್ರಥಮ ರೇಜರ್ ತಯಾರಿಕೆ ಸಂಸ್ಥೆ – ಮಲ್ಹೋತ್ರಾ ಕಂಪನಿಯದ್ದಾಗಿತ್ತು. ಆ ಕಾಲದಲ್ಲಿ ಮಲ್ಹೋತ್ರಾ ರೇಜರ್
ಅಂದ್ರೆ ಬಹಳ ಪ್ರಸಿದ್ಧ. ನಂತರ ಆ ಕಂಪನಿಯನ್ನು ವಿಲ್ಟೆಕ್ ಕಂಪನಿ ಖರೀದಿಸಿದ್ದು ಬೇರೆ ಕತೆ. ನಂತರ ‘ಭಾರತ ಬ್ಲೇಡ್ ಕಂಪನಿ’ ರೇಜರನ್ನು ತಯಾರಿಸ ಲಾರಂಭಿಸಿತು. ಅದು ಸಹ ಸಾಕಷ್ಟು ಜನಪ್ರಿಯವಾಯಿತು. ನಂತರ ಅದು ಭಾರತದಲ್ಲಿ ಶೇ.ಎಪ್ಪತ್ತರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿದ್ದು ಇನ್ನೊಂದು ಕತೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನಾನು ಶಿವಮೊಗ್ಗಕ್ಕೆ ಹೋದಾಗ, ಆ ರೇಜರನ್ನು ಹೋಟೆಲಿನಲ್ಲಿ ಮರೆತುಬಿಟ್ಟು ಬಂದೆ.

ಕೊನೆಗೂ ಅದು ಸಿಗಲೇ ಇಲ್ಲ. ತಂದೆಯವರು ಬಳಸುತ್ತಿದ್ದ ರೇಜರ್ ಎಂಬ ಭಾವನಾತ್ಮಕ ಅಂಶ ಅಡಕವಾಗಿದ್ದರಿಂದ ಅದು ಕಳೆದು ಹೋದಾಗ ಬಹಳ ಬೇಸರವಾಗಿತ್ತು. ಅದು ಗೋಲ್ಡ್ ಪ್ಲೇಟೆಡ್ ರೇಜರ್ ಆಗಿತ್ತು. ಅವರು ಸುಮಾರು ನಲವತ್ತು ವರ್ಷ ಬಳಸಿದ್ದರೂ ಅದರ ಹೊಳಪು ಮಸುಕಾಗಿರಲಿಲ್ಲ. ಅದೇ ದಿನವೇ ನಾನು ಹೊಸ ರೇಜರನ್ನು ಖರೀದಿಸಿದ್ದು. ಇಂದಿಗೂ ಆ ರೇಜರ್ ನನ್ನ ನೆನಪಿನಲ್ಲಿ ಹರಿತ(ಶಾರ್ಪ್)ವಾಗಿದೆ.

ಕೆಲವರಿಗೆ ಬೆಳಗ್ಗೆ ಶೇವ್ ಮಾಡದಿದ್ದರೆ ಉಪಾಹಾರ, ಊಟ ಸೇರುವುದಿಲ್ಲ. ಇಡೀ ದಿನ ನಿರರ್ಥಕವಾಗಿ ಕಳೆದುಕೊಂಡ ಅನುಭವ. ಹಲ್ಲುಜ್ಜದ, ಕೂದಲು ಬಾಚಿಕೊಳ್ಳದ ಭಾವ ಕಾಡಿದಂತೆ ಚಡಪಡಿಸುತ್ತಾರೆ. ಇಲ್ಲಿ ನನಗೆ ನೆನಪಾಗುವವರು ಪಾಕಿಸ್ತಾನದ ಪ್ರಧಾನಿಯಾಗಿದ್ದ ಝುಲಿಕರ್ ಅಲಿ ಭುಟ್ಟೋ. ಆತ
ನಿತ್ಯವೂ ಕ್ಲೀನ್ ಆಗಿ ಶೇವ್ ಮಾಡುತ್ತಿದ್ದ. ದಿನಕ್ಕೆ ಎರಡು ಸಲ ಶೇವ್ ಮಾಡದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಮಧ್ಯಾಹ್ನ ಊಟವಾದ ಬಳಿಕ ಕಡ್ಡಾಯವಾಗಿ ಹಲ್ಲುಜ್ಜಿ, ಶೇವ್ ಮಾಡಿಕೊಳ್ಳುತ್ತಿದ್ದ. ರಾತ್ರಿ ವಿಶೇಷ ಕಾರ್ಯಕ್ರಮ ಅಥವಾ ಔತಣಕೂಟಗಳಿದ್ದರೆ ಮತ್ತೊಮ್ಮೆ ಶೇವ್ ಮಾಡುತ್ತಿದ್ದ.

ಆತನಿಗೆ ಅದೊಂದು ವ್ಯಸನವಾಗಿತ್ತು. ತನ್ನ ಸೌಂದರ್ಯಕ್ಕೆ ಶೇವಿಂಗ್ ಕೂಡ ಒಂದು ಕಾರಣ ಎಂದು ಬಲವಾಗಿ ನಂಬಿದ್ದ. ಆತನ ಬಳಿ ಬಂಗಾರದ ಹಲವು ರೇಜರ್‌ಗಳಿದ್ದವು. ಭುಟ್ಟೋ ವಿದೇಶಗಳಿಗೆ ಹೋದಾಗ ಅಲ್ಲಿನ ಗಣ್ಯರು ಬಂಗಾರದ ಶೇವಿಂಗ್ ಕಿಟ್ ಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದರು. ಆತನ ಸೈಡ್ ಲಾಕ್ ಪ್ರಸಿದ್ಧವಾಗಿತ್ತು. ಅದನ್ನು ಕತ್ತರಿಸಿಕೊಳ್ಳಲು ಆತ ಬಂಗಾರದ ಕತ್ತರಿಗಳನ್ನು ಬಳಸುತ್ತಿದ್ದ.

ಅದಿರಲಿ. ೧೯೭೯ ರಲ್ಲಿ ಭುಟ್ಟೋ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ರಾವಲಪಿಂಡಿ ಜೈಲಿನಲ್ಲಿ ಎರಡು ವರ್ಷ ಕೈದಿಯಾಗಿದ್ದ. ಜೈಲಿನಲ್ಲಿದ್ದಾಗಲೂ ಪ್ರತಿದಿನ ಎರಡು ಸಲ ಶೇವ್ ಮಾಡಿಕೊಳ್ಳುತ್ತಿದ್ದ. ಪಾಕಿಸ್ತಾನದ ಅಧ್ಯಕ್ಷ ಮತ್ತು ಭುಟ್ಟೋ ಕಡುವೈರಿ ಜನರಲ್ ಜಿಯಾ ಉಲ್ ಹಕ್ ಆದೇಶದ ಮೇರೆಗೆ
ಭುಟ್ಟೋನ ಶೇವಿಂಗ್ ಸೆಟ್ ಅನ್ನು ಕಸಿದುಕೊಳ್ಳಲಾಗಿತ್ತು. ಆದರೆ ಕೋರ್ಟಿನಿಂದ ಅನುಮತಿ ಪಡೆದು ಶೇವಿಂಗ್ ಸೆಟ್ ಬಳಸಲಾರಂಭಿಸಿದ್ದ. ಗಲ್ಲಿಗೇರಿ ಸುವ ದಿನ ಬಂದಿತು. ಆ ದಿನ ಬೆಳಗ್ಗೆ ಭುಟ್ಟೋ ಶೇವ್ ಮಾಡಲು ರೇಜರಿಗಾಗಿ ತಡಕಾಡಿದರೆ, ಇಲ್ಲ. ಜೈಲು ಅಧಿಕಾರಿಗಳಿಗೆ ರೇಜರ್ ನೀಡುವಂತೆ ಪರಿಪರಿಯಾಗಿ ಕೋರಿದ.

ಗಲ್ಲಿಗೇರುವ ದಿನ ಶೇವ್ ಮಾಡಿಯೇ ಸಾಯಬೇಕೆಂಬುದು ಆತನ ಆಸೆಯಾಗಿತ್ತು. ಇಂಥ ಸಂದರ್ಭ ದಲ್ಲಿ ಸಾಮಾನ್ಯವಾಗಿ ಗಲ್ಲಿಗೇರುವವರ ಆಸೆಗಳನ್ನು ಈಡೇರಿಸುತ್ತಾರೆ. ಆದರೆ ಭುಟ್ಟೋಗೆ ಅದಕ್ಕೂ ಅವಕಾಶ ನೀಡಲಿಲ್ಲ. ಜಿಯಾ ಉಲ್ ಹಕ್‌ಗೆ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೆ ಆತ ಮನ್ನಿಸುತ್ತಿದ್ದನೋ ಏನೋ. ಆದರೆ ಹಠಮಾರಿ ಭುಟ್ಟೋ ಜಿಯಾ ಮುಂದೆ ಪ್ರಾಣಭಿಕ್ಷೆ ಬಿಡಬಾರದು ಎಂದು ನಿರ್ಧರಿಸಿದ. ಆದರೆ ಗಲ್ಲಿಗೇರುವ ದಿನ, ‘ದಯವಿಟ್ಟು ರೇಜರ್
ಕೊಡಿ, ಶೇವ್ ಮಾಡಿಕೊಂಡಾದರೂ ಸಾಯ್ತೀನಿ’ ಎಂದು ಕಣ್ಣೀರು ಹಾಕಿದ. ಕೊನೆಗೂ ಆತನ ಆಸೆ ಈಡೇರಲಿಲ್ಲ.

ಇದು ಗಡ್ಡಧಾರಿಗಳಿಗೆ, ವಾರಕ್ಕೊಮ್ಮೆ ಶೇವ್ ಮಾಡಿಕೊಳ್ಳುವವರಿಗೆ ಅರ್ಥವಾಗುವುದಿಲ್ಲ. ಭುಟ್ಟೋ ಅಂದು ಅನುಭವಿಸಿದ ಮಾನಸಿಕ ಯಾತನೆ ಎಂಥದು ಎಂಬುದು ನನ್ನ ಹಾಗೆ ನಿತ್ಯ ಶೇವ್ ಮಾಡಿಕೊಳ್ಳುವವರಿಗೆ ಮಾತ್ರ ಗೊತ್ತಾಗಲು ಸಾಧ್ಯ. ಆದಿ ಮಾನವರು ಶೇವ್ ಮಾಡಿಕೊಳ್ಳಲು ಕತ್ತಿ, ಕೊಡಲಿ
ಯಂಥ ಆಯುಧಗಳನ್ನು ಬಳಸುತ್ತಿದ್ದರಂತೆ. ಈಜಿಪ್ಟಿನ ದೊರೆ ಗಡ್ಡ ಕೆರೆದುಕೊಳ್ಳುವಾಗ ಮೂಗನ್ನು ಕತ್ತರಿಸಿಕೊಂಡಿದ್ದರಿಂದ, ಅವನ ಪತ್ನಿ ಬೇಸರ ಗೊಂಡು ಆತ್ಮಹತ್ಯೆ ಮಾಡಿಕೊಂಡ ಕತೆಯನ್ನು ಕೇಳಿರಬಹುದು. ತನ್ನ ತಾಯಿಯ ಸ್ಥಿತಿ ಮತ್ಯಾರಿಗೂ ಬಾರದಿರಲಿ ಎಂದು ಆಕೆಯ ಮಗ, ಕೈಯಲ್ಲಿ ಸುಲಭವಾಗಿಹಿಡಿದುಕೊಳ್ಳಲು ಸಾಧ್ಯವಾಗುವ ರೇಜರನ್ನು ಕಂಡುಹಿಡಿಯಲು ಮುಂದಾಗಿದ್ದು, ರೇಜರ್ ಹೊಸ ಅವತಾರಕ್ಕೆ ಪ್ರೇರಣೆ ನೀಡಿತಂತೆ.

ಅಂದಿನಿಂದ ಇಂದಿನ ತನಕವೂ ರೇಜರ್ ಅವೆಷ್ಟೋ ರೂಪಾಂತರ, ಮಾರ್ಪಾಟು ಮತ್ತು ಸುಧಾರಣೆಗಳನ್ನು ಕಾಣುತ್ತ ಬಂದಿದೆ. ಐದು ಅಲಗುಗಳಿರುವ ಜಿಲೆಟ್ ಕಂಪನಿ ತಯಾರಿಸಿರುವ ರೇಜರ್ ಬಳಸಿ, ಶೇವ್ ಮಾಡಿಕೊಳ್ಳುವುದೇ ಒಂದು ಅದ್ಭುತ ಅನುಭವ ಎಂದು ಅಂದುಕೊಂಡಿದ್ದು ನನಗೆ, ಫಿಲಿಪ್ಸ್ ಕಂಪನಿ ತಯಾರಿಸಿರುವ ೯೦೦೦ ಸೀರಿಸ್‌ನ ಎಲೆಕ್ಟ್ರಿಕ್ ಶೇವರ್ ಒಂದು ದಿವ್ಯ ಅನುಭವವನ್ನು ನೀಡಲಾರಂಭಿಸಿದ್ದುಸುಳ್ಳಲ್ಲ. ಇದನ್ನು ಹೇಗೆ ಬಳಸಿದರೂ ಗಾಯವಾಗುವುದಿಲ್ಲ. ಬಳಸಿದಷ್ಟೂ ಕೆನ್ನೆ ಬೆಣ್ಣೆಯಂಥ ನುಣುಪನ್ನು ಪಡೆದುಕೊಳ್ಳುತ್ತ ಹೋಗುತ್ತದೆ ಎಂಬುದು ನನ್ನದೊಂದೇ ಅಭಿಪ್ರಾಯವಲ್ಲ.
ನಿತ್ಯ ಶೇವಿಂಗ್‌ನ ಲಾಭಗಳ ಬಗ್ಗೆ ನಾನು ಪ್ರವಚನ ಆರಂಭಿಸಿದಾಗಲೆಲ್ಲ, ‘ನರೇಂದ್ರ ಮೋದಿ, ಸಿದ್ದರಾಮಯ್ಯ, ಸದ್ಗುರು, ಶ್ರೀ ಶ್ರೀ ರವಿಶಂಕರ್ ಸೇರಿದಂತೆ ಇನ್ನೂ ಅನೇಕ ಗಡ್ಡ ಧಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸಿನ ಉತ್ತುಂಗ ವನ್ನೇರಿಲ್ಲವೇ? ಅವರ ಸ್ಟೈಲ್ ಸ್ಟೇಟ್ಮೆಂಟ್ ಅಂದ್ರೆ ಗಡ್ಡ.

‘ಶೇವಿಂಗ್‌ಗೂ, ಯಶಸ್ಸಿಗೂ ಏನು ಸಂಬಂಧ?’ ಎಂದು ಅನೇಕರು ನನ್ನ ಬಳಿ ವಾದಿಸಿದ್ದಿದೆ. ಗಡ್ಡವಿಲ್ಲದಿದ್ದಿದ್ದರೆ ಇವರಾರೂ ಇಷ್ಟು  ಪ್ರಸಿದ್ಧರಾಗು ತ್ತಿರಲಿಲ್ಲ ಎಂದು ವಾದಿಸಿದವರೂ ಇzರೆ. ಕಾರಣ ಗಡ್ಡ ಅವರ ವ್ಯಕ್ತಿತ್ವದ ಒಂದು ಭಾಗವೇ ಆಗಿರುವುದು. ದಿನವೂ ಶೇವ್ ಮಾಡುವುದು ಎಷ್ಟು ಮುಖ್ಯ
ಎಂದು ನೀವು ಭಾವಿಸಿದ್ದೀರೋ, ನಿತ್ಯವೂ ಗಡ್ಡವನ್ನು ಸಂಸ್ಕರಿಸುವುದು, ಪೋಷಣೆ ಮಾಡುವುದು ಅವರಿಗೆ ಮುಖ್ಯ ಎಂದು ನೀವೇಕೆ ಭಾವಿಸಬಾರದು ಎಂದು ಕೇಳುವವರು ಇದ್ದಾರೆ. ಹೌದು. ಈ ಜಗತ್ತು ಗಡ್ಡ ಮಾಡುವವರು ಮತ್ತು ಮಾಡ ದವರು ಎಂದು ಎರಡು ಭಾಗಗಳಾಗಿ ಒಡೆದು ಹೋಗಿವೆ.

ಎರಡೂ ಕಡೆಯವರು ತಮ್ಮ ನಿಲುವೇ ಸರಿ ಎಂದು ವಾದಿಸಿದರೆ, ತೀರ್ಪು ಕೊಡುವವರಲ್ಲೂ ಗಡ್ಡವನ್ನು ಇಷ್ಟಪಡುವ ಮತ್ತು ಇಷ್ಟಪಡದ ಎರಡು ಗುಂಪುಗಳಿವೆ. ಇನ್ನು ಇದನ್ನು ಇತ್ಯರ್ಥಪಡಿಸಲು (ಗಡ್ಡವಿಲ್ಲದ) ಹೆಂಗಸರನ್ನು ಕರೆಯಿಸಬೇಕಾಗಬಹುದು. ಅವರಲ್ಲೂ ಗಡ್ಡಧಾರಿಗಳನ್ನು ಇಷ್ಟ ಪಡುವವರು ಮತ್ತು ಇಷ್ಟಪಡದವರು ಎಂಬ ಎರಡು ಗುಂಪುಗಳಿವೆ. ಅವರು ಏನೇ ತೀರ್ಪು ಕೊಟ್ಟರೂ ಅದು ನಿಷ್ಪಕ್ಷಪಾತತನದಿಂದ ಕೂಡಿರುತ್ತದೆ ಎಂದು ಹೇಳಲಾಗುವುದಿಲ್ಲ. ಕಾರಣ ಎಲ್ಲರೂ ಗಡ್ಡದ ಬಗ್ಗೆ strong likes ಮತ್ತು dislikes ಇರುವವರೇ. ಈ ಎರಡೂ ಗುಂಪುಗಳಿಗೆ ಸೇರುವವರ ಎಲ್ಲರ ಅಭಿಪ್ರಾಯವೂ ರೇಜರ್ ಶಾರ್ಪ್! ಆದರೆ ನನ್ನ ಪಾಲಿಗೆ ನಿತ್ಯ ಶೇವಿಂಗ್ ಎನ್ನುವುದು ಸೌಂದರ್ಯ ಭಾಗಲಬ್ಧ (Beauty Quotient) ಅಲ್ಲವೇ ಅಲ್ಲ. ಅದು ನಮ್ಮ ಶಿಸ್ತು, ಅಚ್ಚುಕಟ್ಟುತನಕ್ಕೆ ಸಂಬಂಧಿಸಿದ್ದು.

ನಿತ್ಯ ಅಭ್ಯಾಸ, ಪಾಲನೆ, ಒಳಗಟ್ಟುತನ, ನಿತ್ಯಕ್ರಮ, ಸಂಸ್ಕಾರ, ಆಚರಣೆ, ಅನುಷ್ಠಾನಕ್ಕೆ ಸಂಬಂಧಿಸಿದ್ದು. ಒಂದೇ ಕೆಲಸವನ್ನು ನಿತ್ಯವೂ ಮಾಡುವು ದರಿಂದ ಅದೊಂದು ಜೀವನಕ್ರಮವಾಗಿ ರೂಢಿಯಾಗುವಂಥದ್ದು. ಈ ಕಾರಣದಿಂದ ನಿತ್ಯ ಶೇವಿಂಗ್ ಸಹ ಒಂದು ಪ್ರಮುಖ ಅಂತರಶಿಸ್ತೀಯ ಆಚರಣೆ ಯೇ. ಇದೇನೇ ಇರಲಿ, ರೇಜರ್ ಕೇವಲ ಗಡ್ಡ ಕೆರೆಯಲು ಅಥವಾ ಶೇವ್ ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದಿದ್ದರೆ ಒಳ್ಳೆಯದಿತ್ತು. ಅದು ನಮ್ಮ ನಿತ್ಯ ಜೀವನದಲ್ಲಿ, ಭಾಷೆಯಲ್ಲಿ, ಬಳಕೆಯಲ್ಲಿ ಸದಾ ಇಣುಕುತ್ತಲೇ ಇರುವುದನ್ನು ಗಮನಿಸಿರಬಹುದು. ಮಹಾಚುರುಕುಮತಿಗೆ ‘ರೇಜರ್ ಶಾರ್ಪ್ ಮೈಂಡ್’ ಅಂತ ಹೇಳುತ್ತೇವೆ. ಹಕ್ಕಿಗಳ ಕೊಕ್ಕಿಗೆ Razor billed ಅಂದ್ರೆ ಕ್ಷೌರಕತ್ತಿಯಾಕಾರದ ಕೊಕ್ಕುಳ್ಳ ಪಕ್ಷಿ ಎಂದು ಹೇಳುತ್ತೇವೆ.

ಬಹು ಎಚ್ಚರಿಕೆಯಿಂದ ವರ್ತಿಸಬೇಕಾದ ವಿಷಮ ಸನ್ನಿವೇಶ, ಸಂದರ್ಭಕ್ಕೆ Razor edge ಎಂಬ ಪದ ಬಳಸುತ್ತೇವೆ. ಹಾಗೆಯೇ Razor fish ಮತ್ತು Razor shell (ಕ್ಷೌರಕತ್ತಿಯ ಹಿಡಿಯಂತಿರುವ ಮೀನು ಅಥವಾ ಚಿಪ್ಪು) ಎನ್ನುತ್ತೇವೆ. ಚೂಪಾಗಿ ಸಾಣೆ ಹಿಡಿಯುವವನಿಗೆ Razor grinder ಅಂತೇವೆ. ಗಡಿಗಳ ಮಧ್ಯೆ ನಿಲ್ಲಿಸುವ ತಂತಿ ಬೇಲಿಗೆ razor fencing ಎಂಬ ಪ್ರಯೋಗವಿದೆ. ಅಮೆರಿಕದ ಅಧ್ಯಕ್ಷ ಕ್ಷೌರಿಕನ ಸಹಾಯದಿಂದ ಶೇವ್ ಮಾಡಿಕೊಳ್ಳಲು ಬಂದರೆ,
keep razor’s distance ಅಂತಾರೆ. ಅಂದರೆ ಸುರಕ್ಷಿತವಾಗಿ ರೇಜರನ್ನು ಬಳಸು ಎಂದರ್ಥ. He is like a Razor Ramon ಎಂದು ಹೇಳುವುದನ್ನು ಕೇಳಿರಬಹುದು.

ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್‌ನ ಅತ್ಯಂತ ವಿವಾದಾತ್ಮಕ ವ್ಯಕ್ತಿ ರೇಜರ್ ರಾಮೋನ್ ಥರ ಎಂದರ್ಥ. ಕಿವಿಗೆ ವಜ್ರದ ಆಭರಣ, ಕೊರಳ ತುಂಬಾ ಬಂಗಾರದ ಸರಗಳನ್ನು ಧರಿಸಿ ಆತ ವ್ರೆಸ್ಲಿಂಗ್ ಕಣಕ್ಕೆ ಬರುವುದನ್ನು ನೋಡಿ He is like a Razor Ramon ಎಂಬ ಪದಪ್ರಯೋಗ ಬಳಕೆಗೆ ಬಂದಿದೆ. ಆತ ಹಿಂದಿ ಚಿತ್ರರಂಗದ ಬಪ್ಪಿ ಲಹರಿ ಇದ್ದಂತೆ. ಇಂಗ್ಲಿಷಿನಲ್ಲಿ ರೇಜರ್‌ಗೆ ಸಂಬಂಧಿಸಿದಂತೆ ಇನ್ನೊಂದು ಪದವಿದೆ. ಅದು Hanlon’s razor. ನೀವು ಯಾವುದಾದರೂ ರಾಜಕಾರಣಿಯನ್ನು ಕುರಿತು ಆತ ಭ್ರಷ್ಟ ಎಂದು ಹೇಳಿದರೆ, ಕೆಲವರು ಆ ಮಾತನ್ನು ಒಪ್ಪುವುದಿಲ್ಲ. ಆತ ಭ್ರಷ್ಟ ಅಂತ ಹೇಗೆ ಹೇಳ್ತೀಯಾ, ನಿನ್ನಲ್ಲಿ ಏನು ಸಾಕ್ಷ್ಯಾಧಾರಗಳಿವೆ ಎಂದು ಪ್ರಶ್ನಿಸುತ್ತಾರೆ. ನೀವು ಯಾರ ಬಗೆಗಾದರೂ ಕೆಡಕನ್ನು ಹೇಳಿದರೆ, ಅದನ್ನು ಪುಷ್ಟೀಕರಿಸುವ ಹೆಚ್ಚಿನ ಮಾಹಿತಿಯನ್ನು ಅವರು ಬಯಸುತ್ತಾರೆ. ಆಗ Hanlon’s razor ಎಂದು ಹೇಳುತ್ತಾರೆ.

ಬೇರೆಯವರಲ್ಲಿರುವ ಒಳ್ಳೆಯದನ್ನು ಮಾತ್ರ ನೋಡಬೇಕು, ಕೆಟ್ಟದನ್ನು ಬಿಡಬೇಕು ಎಂಬ ಅಂಶವನ್ನು ಒತ್ತಿ ಹೇಳುವಾಗ Hanlon’s Razor ಎನ್ನುತ್ತಾರೆ.
Understanding Hanlon’s Razor helps us see the world in a more positive light, stop negative assumptions, and improve relationships. ಹಾಗೆಯೇ ಇಂಗ್ಲಿಷಿನಲ್ಲಿ Hume’s Razor ಎಂಬ ಪದಪ್ರಯೋಗವಿದೆ. ಸ್ಕಾಟಿಷ್ ಫಿಲಾಸ-ರ್ ಡೇವಿಡ್ ಹೂಮ್ ಬಳಸಿದ್ದರಿಂದ ಆತನ ಹೆಸರನ್ನೇ ಇಡಲಾಗಿದೆ. ಏಞಛಿ’o Zಟ್ಟ ಅಂದ್ರೆ ನಡೆದ ಘಟನೆಯನ್ನು ವರ್ಣಿಸಲು ಅಗತ್ಯಕ್ಕಿಂತ ಹೆಚ್ಚು ಪದಗಳನ್ನು ಬಳಸಿ, ಘಟನೆಗಿಂತ ವರ್ಣನೆಯನ್ನೇ ಲಂಬಿಸುವುದು. ಹಾಗೆ ಇನ್ನೊಂದು ರೇಜರ್ ಬಳಕೆಯಲ್ಲಿದೆ.

ಅದು ಏಞಛಿ’o Zಟ್ಟ ಗೆ ಸರಿ ವಿರುದ್ಧವಾದುದು. ಸರಳವಾಗಿ, ನೇರವಾಗಿ ಹೇಳುವುದು. ಯಾವುದೇ ನಿಲುವು ತಾಳದೇ, ವಿಶ್ಲೇಷಣೆಗೆ ಒಳಪಡಿಸದೇ, ನಿರ್ಭಾವುಕವಾಗಿ, ನಿರುದ್ವಿಗ್ನರಾಗಿ ಹೇಳುವುದು. ಅದನ್ನು ಎಜ್ಚಿಛಿ’o Zಟ್ಟ ಎನ್ನುತ್ತಾರೆ. ಏಛಿ ಛ್ಞ್ಚಿಟ್ಠ್ಟZಜಛಿo ಛಿZ, oಠ್ಟಿZಜಿಜeಠ್ಛಿಟ್ಟಡಿZb ಟಞಞ್ಠ್ಞಜ್ಚಿZಠಿಜಿಟ್ಞ ಠಿಟ ಛ್ಞಿoಛಿ ಟ್ಠ್ಟ ಞಛಿooZಜಛಿo Zಛಿ ಛಿZoಜ್ಝಿqs bಛ್ಟಿoಠಿಟಟb Zb ಛಿoo ಜಿhಛ್ಝಿqs ಠಿಟ ಚಿಛಿ ಞಜಿoಜ್ಞಿಠಿಛ್ಟಿmಛಿಠಿಛಿb ಜಿhಛಿ ಎಜ್ಚಿಛಿ’o Zಟ್ಟ ಎಂದು ಹೇಳುವುದನ್ನು ಕೇಳಿರಬಹುದು. ಹಾಗೆಯೇ ಇನ್ನೊಂದು ರೇಜರ್ ಬಳಕೆಯಲ್ಲಿದೆ. ಅದು uZಞ’o Zಟ್ಟ. ಇದನ್ನು ಔZಡಿ ಟ್ಛ mZoಜಿಞಟ್ಞqs ಅಂದರೆ ಮಿತವ್ಯಯದ ನಿಯಮ ಎಂದೂ ಕರೆಯುತ್ತಾರೆ. ತತ್ವಶಾಸದಲ್ಲಿ ಒಂದೇ ವಾದವನ್ನು ಪುಷ್ಟೀಕರಿಸುವ ಹಲವು ವಾದಗಳಿzಗ ಆ ಪೈಕಿ ಅತ್ಯಂತ ಸರಳ ಮತ್ತು ಸುಲಭವಾದುದನ್ನು ಆಯ್ಕೆ ಮಾಡಿಕೊಂಡಾಗ ಐಠಿ ಜಿo ಚಿಛಿಠಿಠಿಛ್ಟಿ ಠಿಟ ಟmಠಿ ಟ್ಟ uZಞ’o Zಟ್ಟ ಎಂದು ಹೇಳುತ್ತಾರೆ.
ಗೆಲ್ಲುವುದೆಂದರೆ ಶೇವ್ ಮಾಡಿಕೊಂಡಂತೆ ಎಂಬಲ್ಲಿಂದ ಆರಂಭವಾದ ಪುರಾಣ ಎಲ್ಲಿಗೋ ಹೋಯಿತು ನೋಡಿ. ಭಟ್ಟರು ಗಡ್ಡ ಕೆರೆಯಲು ಹೋಗಿ ತಲೆ ಕೆರೆದರಲ್ಲ ಅಂತ ಅಂದುಕೊಳ್ಳದಿದ್ದರೆ ಸಾಕು!