Friday, 22nd November 2024

ಸಿಎಂ ಸಿದ್ದರಾಮಯ್ಯರಿಂದ ನಾಳೆ ಬಜೆಟ್ ಮಂಡನೆ

ಬೆಂಗಳೂರು : ಲೋಕಸಭೆ ಚುನಾವಣೆಗೆ ಮುನ್ನವೇ ಸಿಎಂ ಸಿದ್ದರಾಮಯ್ಯ ನಾಳೆ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಜನರನ್ನು ಸೆಳೆಯಲು ಬಂಪರ್ ಗಿಫ್ಟ್ ಘೋಷಿಸುವ ಸಾಧ್ಯತೆಯಿದೆ.

ಹೆಚ್ಚು ಬಜೆಟ್ ಮಂಡಿಸಿರುವ ಸಿಎಂ ಎಂಬ ದಾಖಲೆಯೊಂದಿಗೆ ಸಿದ್ದರಾಮಯ್ಯ 15 ನೇ ಬಜೆಟ್ ಮಂಡಿಸಲಿದ್ದಾರೆ.

ಫೆ.16 ರಂದು ಅಂದರೆ ನಾಳೆ 10.15 ಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ.
ಫೆಬ್ರವರಿ 16ರಂದು ಬೆಳಿಗ್ಗೆ ನಡೆಯುವಂತ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ಗೆ ಅನುಮೋದನೆಯನ್ನು ಪಡೆಯಲಿದ್ದಾರೆ. ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದು, ನಾಳೆ ಬೆಳಗ್ಗೆ 10:15ಕ್ಕೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.

2023-24ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3 ಲಕ್ಷದ 27 ಸಾವಿರದ 747 ಕೋಟಿ. ಶುಕ್ರವಾರದ ಬಜೆಟ್ ಗಾತ್ರ ಹೆಚ್ಚೂ ಕಮ್ಮಿ ಮೂರುವರೆ ಲಕ್ಷ ಕೋಟಿ ಆಸುಪಾಸಲ್ಲೇ ಇರುತ್ತದೆ ಎನ್ನಲಾಗಿದೆ. ಈಗಾಗಲೇ ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ಹಲವು ಯೋಜನೆಗಳಿಗೆ ಅನುದಾನ ನೀಡುವ ಸಾಧ್ಯತೆಯಿದೆ. ಅಲ್ಲದೇ ಲೋಕಸಭೆ ಚುನಾವಣೆಯ ದೃಷ್ಟಿಯಲ್ಲಿ ಹಲವು ಬಂಪರ್ ಗಿಫ್ಟ್ ಘೋಷಿಸುವ ಸಾಧ್ಯತೆಯಿದೆ.

ಬಜೆಟ್ ನಲ್ಲಿ ನಗರದ ಸಂಚಾರ ದಟ್ಟಣೆನ್ನು ತಗ್ಗಿಸುವ ಕ್ರಮವಾಗಿ ಸುರಂಗ ಮಾರ್ಗಗಳ ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ. ಬೆಂಗಳೂರಿಗೆ ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದ್ದು, ರೈತರು ಹಾಗೂ ಮಧ್ಯಮವರ್ಗದ ಜನ ರಾಜ್ಯ ಸರ್ಕಾರದ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದೆ.