Sunday, 15th December 2024

ಮಾರ್ಚ್‌ 6ರೊಳಗಾಗಿ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ ವಿವರ ಸಲ್ಲಿಸಿ

supreme court

ನವದೆಹಲಿ: ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದು ಹೇಳಿ ಅದನ್ನು ರದ್ದುಗೊಳಿಸಿ ಗುರುವಾರ ಐತಿಹಾಸಿಕ ತೀರ್ಪು ನೀಡಿದ ಮುಖ್ಯ ನ್ಯಾಯ ಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ಪೀಠ, ಈ ಯೋಜನೆ 2018ರಲ್ಲಿ ಜಾರಿಗೊಂಡಂದಿನಿಂದ ಅದರ ಮೂಲಕ ರಾಜಕೀಯ ಪಕ್ಷಗಳು ನೀಡಿದ ದೇಣಿಗೆಯನ್ನು ಬಹಿರಂಗಪಡಿಸಬೇಕು.

ಈ ವಿವರಗಳಲ್ಲಿ ಬಾಂಡ್‌ ಖರೀದಿಸಿದ ದಿನಾಂಕ, ಖರೀದಿದಾರರ ಹೆಸರು, ಬಾಂಡ್‌ ಮೊತ್ತ ಮತ್ತು ಅವುಗಳನ್ನು ಸ್ವೀಕರಿಸಿದ ಪಕ್ಷದ ವಿವರಗಳು ಸೇರಿರ ಬೇಕು. ಈ ವಿವರಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಾರ್ಚ್‌ 6ರೊಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಹೇಳಿದೆ.

ಪ್ರತಿಯೊಂದು ನಗದೀಕರಿಸಿದ ಬಾಂಡ್‌ ವಿವರ ನೀಡಬೇಕು. ನಿಗದಿತ 15 ದಿನಗಳೊಳಗೆ ನಗದೀಕರಿಸದ ಬಾಂಡ್‌ಗಳನ್ನು ವಾಪಸ್‌ ನೀಡಿ ಅದನ್ನು ಖರೀದಿಸಿ ದವರಿಗೆ ಹಣ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಚುನಾವಣಾ ಬಾಂಡ್‌ಗಳ ಕುರಿತ ಎಲ್ಲಾ ವಿವರಗಳನ್ನು ಮಾರ್ಚ್‌ 13ರೊಳಗಾಗಿ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.