ಇದೇ ಅಂತರಂಗ ಸುದ್ದಿ
vbhat@me.com
ಮೊನ್ನೆ ಅಂಕಣ ಬರೆಯುವಾಗ, ‘ಭೀಮ ಮತ್ತು ಹಿಡಿಂಬೆ ಮಗನಾದ ಘಟೋತ್ಕಚ’ ಎಂದು ಬರೆಯುವಾಗ, ಮನಸ್ಸಿನಲ್ಲಿ ಮೂವರು ಧುತ್ತನೆ ಎದುರಾದರು. ಆ ಮೂವರು ಯಾರೆಂದರೆ – ಘಟೋತ್ಕಚ, ಘಟೋದ್ಗಜ ಮತ್ತು ಘಟೋತ್ಕಜ. ಈ ಮೂವರಲ್ಲಿ ಯಾರು ಭೀಮ ಮತ್ತು ಹಿಡಿಂಬೆಯರ ಅಸಲಿ ಮಗ ಎಂಬ ಜಿಜ್ಞಾಸೆ ಕಾಡಲಾರಂಭಿಸಿತು. ಅಂದರೆ ಈ ಮೂರರಲ್ಲಿ ಸರಿಯಾದ ಪದ ಅಥವಾ ಹೆಸರು ಯಾವುದು? ಇಂಥ ಅನುಮಾನಗಳು ಕಾಡಲಾರಂಭಿಸಿದಾಗ, ಮೊದಲಾಗಿ
ದ್ದರೆ ನಾನು ನಿಘಂಟು ತಜ್ಞರಾದ ಪ್ರೊ.ವೆಂಕಟಸುಬ್ಬಯ್ಯನವರನ್ನು ಸಂಪರ್ಕಿಸುತ್ತಿದ್ದೆ. ಅವರ ನಿಧನದ ಬಳಿಕ ಇಂಥ ಅನುಮಾನಗಳನ್ನು ಪರಿಹರಿಸಲು ನೆರವಾಗುವವರು ನನ್ನ ಸ್ನೇಹಿತರಾದ ತರಗು ಪೇಟೆಯ ರದ್ದಿ ವ್ಯಾಪಾರಿ.
ಅವರು ಮೊದಲು ಓದುಗ ಮತ್ತು ನಂತರ ವ್ಯಾಪಾರಿ. ಯಾವುದೇ ಪದದ ಬಗ್ಗೆ ಕೇಳಿದರೂ ತಕ್ಷಣ ಅವರು ಇದು ಸರಿ, ಇದು ತಪ್ಪು ಅಂತ ಹೇಳುತ್ತಾರೆ. ಅವರು ಬೆಂಗಳೂರು ಪ್ರೆಸ್‌ನಲ್ಲಿ ಮೂವತ್ತು ವರ್ಷ ಪ್ರೂಫ್ ರೀಡರ್ ಆಗಿದ್ದರು. ಇಂಥ ಅನುಮಾನಗಳು ಎದ್ದಾಗ ಅವನ್ನು ಪರಿಹರಿಸಿಕೊಳ್ಳದೇ ಇರಬಾರದು. ಆ ನೆಪದಲ್ಲಿ ನಮ್ಮ ಅನುಮಾನಗಳು ಪರಿಹಾರ ವಾಗುತ್ತವೆ. ಆದರೆ ಯಾವ ಕಾರಣಕ್ಕೂ ನಮ್ಮ ಅನುಮಾನಗಳನ್ನು ಓದುಗರಿಗೆ ವರ್ಗಾಯಿಸಬಾರದು. ಕಾರಣ ಹೆಚ್ಚಿನ ಸಂಖ್ಯೆಯ ಓದುಗರು ನಾವು ಬರೆದಿದ್ದೇ ಸರಿ ಎಂದು ಭಾವಿಸುತ್ತಾರೆ. ಅಂದರೆ ತಪ್ಪು ಪ್ರಯೋಗವನ್ನೇ ನಾವು ಇತರರಿಗೂ ಹರಡಿದಂತಾಗುತ್ತದೆ. ಹೀಗಾಗಿ ನಮ್ಮ ಅನುಮಾನಗಳನ್ನು ನಾವು ಯಾವ ಕಾರಣಕ್ಕೂ ಸಾಂಕ್ರಾಮಿಕಗೊಳಿಸಬಾರದು.
ಘಟೋತ್ಕಚ, ಘಟೋದ್ಗಜ ಮತ್ತು ಘಟೋತ್ಕಜ ಪೈಕಿ ಯಾವುದು ಸರಿ ಎಂದು ರದ್ದಿ ವ್ಯಾಪಾರೀ ಸ್ನೇಹಿತರನ್ನು ಕೇಳಿದೆ. ‘ನನಗೂ ಅನುಮಾನ ಸಾರ್. ನಿಮ್ಮ ಪತ್ರಿಕೆಯಗುವ ಪ್ರಮಾದಗಳನ್ನು ಎತ್ತಿ ತೋರಿಸುತ್ತಾರಲ್ಲ, ನೀವು ಅವರ ಬಗ್ಗೆ ಆಗಾಗ ಬರೆಯುತ್ತೀರಲ್ಲ, ಅವರ ಇತ್ತೀಚಿನ ಪುಸ್ತಕದಲ್ಲಿ ಈ ಬಗ್ಗೆ ಬರೆದಿದ್ದಾರೆ, ನೋಡಿ, ಸಿಗಬಹುದು’ ಎಂದು ಅವರು ಹೇಳಿದರು. ‘ಯಾರು, ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ ಅವರಾ?’ ಎಂದು ಕೇಳಿದೆ. ಅದಕ್ಕೆ ಸ್ನೇಹಿತರು, ‘ಹೂಂ.. ಅವರೇ.. ಅವರ ಪುಸ್ತಕದಲ್ಲಿ ಈ ಬಗ್ಗೆ ಒಂದು ತಿಂಗಳ ಹಿಂದಷ್ಟೇ ನೋಡಿದ್ದೇನೆ. ಈ ಮೂರರ ಪೈಕಿ ಯಾವುದು ಸರಿ ಎಂದು ಈಗ ಸಂದೇಹ ಕಾಡುತ್ತಿದೆ, ನನಗೂ ವಯಸ್ಸಾಯಿತು’ ಎಂದರು.
ಕೊಕ್ಕಡ ಅವರ ‘ಸರಿಗನ್ನಡ-ಸರಿಕನ್ನಡ’ ಪುಸ್ತಕವನ್ನು ತಡಕಾಡಿದೆ. ಪುಟ ತಿರುವುತ್ತಿದ್ದಂತೆ ಸಿಕ್ಕಿತು. ಕೊಕ್ಕಡ ಅವರು ಬರೆದ ವಿವರಣೆ ಇಷ್ಟವಾಯಿತು. ಇದನ್ನು ಓದಿದರೆ ನಿಮಗೆ ಮುಂದೆಂದೂ ಈ ಅನುಮಾನ ಕಾಡಲಿಕ್ಕಿಲ್ಲ. ಮಹಾಭಾರತ ಕತೆಯಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಘಟೋತ್ಕಚನ ಪಾತ್ರವೂ ಒಂದು. ಈತ ಭೀಮ ಹಿಡಿಂಬೆಯರ ಮಗ. ಮನುಷ್ಯ ಹಾಗೂ ರಾಕ್ಷಸಿಯ ಸಂಬಂಧದಿಂದ ಹುಟ್ಟಿದವನು. ತಾಯಿ ರಾಕ್ಷಸಿ. ತಂದೆ ಹತ್ತು ಸಾವಿರ ಆನೆಗಳ ಬಲವುಳ್ಳ ಬಲಭೀಮ. ಇಂತಹ ಸಂಕರ ಶಿಶು ಅದೆಷ್ಟು ಪರಾಕ್ರಮಿ ಇರಬಹುದೆಂದು ಊಹಿಸಿ.
ವಿಷಯ ಅದಲ್ಲ, ಘಟೋತ್ಕಚನ ಹೆಸರಿನ ಬಗೆಗೆ ಕುತೂಹಲ. ‘ಘಟ’ ಮತ್ತು ‘ಉತ್ಕಚ’ ಎಂಬ ಎರಡು ಶಬ್ದಗಳು ಸೇರಿ ಆಗಿರುವ ಶಬ್ದ ಘಟೋತ್ಕಚ. ‘ಘಟ’ ಎಂದರೆ ‘ಮಣ್ಣಿನಪಾತ್ರೆ’. ಗುಡಾಣ ದಂತಹ ದೊಡ್ಡ ಆಕಾರದ ಮಣ್ಣಿನ ಪಾತ್ರೆ, ಮಣ್ಣಿನ ಬಿಂದಿಗೆ, ಅಥವಾ ತಾಳ ವಾದ್ಯಗಳಲ್ಲಿ ಬಳಕೆಯಾಗುವ ಮಣ್ಣಿನಿಂದ ಮಾಡಿದ ತಾಳ ವಾದ್ಯ. ನುಣ್ಣನೆಯ ಮೇಲ್ಪದರದ ದೊಡ್ಡ ಆಕಾರದ ಮಣ್ಣಿನ ಪಾತ್ರೆ ಘಟ. ‘ಕಚ’ ಎಂದರೆ ‘ತಲೆ ಕೂದಲು’. ‘ಉತ್ಕಚ’ ಎಂದರೆ ಎದ್ದು ನಿಂತ ತಲೆಕೂದಲು.
ಮಹಾಭಾರತದಲ್ಲಿ ಬರುವ ವರ್ಣನೆಯಂತೆ ಘಟೋತ್ಕಚನ ತಲೆಬೋರಲು ಹಾಕಿದ ತಾಳವಾದ್ಯ ಘಟದಂತಿತ್ತು. ಘಟದಂತಿ ರುವ ಅವನ ತಲೆಯಲ್ಲಿ ಕುರುಚಲು ಗಿಡಗಳಂತೆ ಎದ್ದು ನಿಂತ ವಿರಳ ಸಂಖ್ಯೆಯ ತಲೆಕೂದಲುಗಳಿದ್ದವು.
ಬಹುಶಃ ತಲೆಯ ನೆತ್ತಿಯ ಭಾಗದಲ್ಲಿ ಇದ್ದ ತಲೆಕೂದಲು ಆಗಸದತ್ತ ಮುಖ ಮಾಡಿ ಎದ್ದುನಿಂತಿತ್ತು. ಆದ್ದರಿಂದ ಅವನ ಹೆಸರು ಅನ್ವರ್ಥನಾಮವಾಗಿತ್ತು. (ಯಕ್ಷಗಾನ, ನಾಟಕ, ಚಲಚ್ಚಿತ್ರಾದಿ ಮಾಧ್ಯಮಗಳಲ್ಲಿ ಕಾರಣಾಂತರಗಳಿಂದ ಬೇರೆಯ ರೀತಿ ವೇಷ ಧರಿಸಿರಬಹುದು.) ‘ಘಟೋತ್ಕಚ’ನ ಹೆಸರನ್ನು ಕೆಲವರೋ ಹಲವರೋ ಘಟೋದ್ಗಜ ಎಂದು ಹೇಳುವವರನ್ನು ಕಾಣುತ್ತೇವೆ. ಹತ್ತು ಸಾವಿರ ಆನೆಗಳ ಬಲವುಳ್ಳ ಭೀಮನ ಮಗನೂ ಗಜಬಲವುಳ್ಳವನೆಂಬ ಭ್ರಮೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಕಚವನ್ನು ಗಜವನ್ನಾಗಿಸಿದರು. ಒಬ್ಬನು ಮಾಡಿದ ತಪ್ಪಿನ ಬಗೆಗೆ ಯೋಚಿಸದೇ ಅಂಧಾನುಕರಣೆಯಿಂದ ಘಟೋತ್ಕಚನನ್ನು
ಘಟೋದ್ಗಜನನ್ನಾಗಿ ಮಾಡಿದರು. ಘಟೋತ್ಕಚನಲ್ಲಿ ‘ಗಜ’ವಿಲ್ಲ ‘ಕಚ’ವಿದೆ ಎಂದು ನೆನಪಲ್ಲಿಟ್ಟುಕೊಳ್ಳೋಣ.
ಇನ್ನು ಕೆಲವರ ಬಾಯಲ್ಲಿ ಘಟೋದ್ಗಜ ಹೋಗಿ ಘಟೋತ್ಕಜ ಆದ. ಇದು ನಾಲಗೆಯ ಹೊರಳುವಿಕೆಯದ ಪರಿಣಾಮ. ಹೀಗಾಗಿ ಸರಿಯಾದ ಪ್ರಯೋಗ – ಘಟೋತ್ಕಚ. ಇನ್ನು ಮುಂದೆ ‘ಘಟೋತ್ಕಚ’ ಸಿಕ್ಕಿದಾಗ ಅವನನ್ನು ತಪ್ಪಾಗಿ ಕರೆಯುವ ಪ್ರಸಂಗ ಬರಲಿಕ್ಕಿಲ್ಲ!
ಖುಷಿಯನ್ನು ಹಂಚುವ ಕೆಲಸ
ಸುಮಾರು ಒಂದೂವರೆ ವರ್ಷಗಳ ಹಿಂದೆ, ‘ದೈನಿಕ್ ಭಾಸ್ಕರ್’ ಹಿಂದಿ ಪತ್ರಿಕೆಯಲ್ಲಿ ಅಂಕಣಕಾರರೊಬ್ಬರು ಬರೆದಿದ್ದರು. ಅದನ್ನು ನೀವೂ ಗಮನಿಸಿದ್ದಿರಬಹುದು. ನಿಮ್ಮ ಮಿತ್ರರ ಜನ್ಮದಿನದಂದು ಶುಭಾಶಯ ಕೋರಿದ್ದಕ್ಕೆ ಪ್ರತಿಯಾಗಿ ನಿಮ್ಮ ಶಾಲಾ-ಕಾಲೇಜು ಸ್ನೇಹಿತರನ್ನೊಳಗೊಂಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ತಕ್ಷಣಕ್ಕೆ ಪ್ರತಿ ಕ್ರಿಯೆ ಬರುವುದೇ ಇಲ್ಲ. ಬಹಳಷ್ಟು ಮಂದಿ ಗ್ರೂಪಿನ ಇನ್ನುಳಿದ ಸದಸ್ಯರ ಪ್ರತಿ ಶುಭಾಶಯಗಳು ಬರಲಿ ನಂತರ ನಾವು ಪ್ರತಿಕ್ರಿಯಿಸೋಣ ಎನ್ನುವ ಅಭಿಪ್ರಾಯದಲ್ಲಿರುತ್ತಾರೆ ಮತ್ತು ನೋಟಿಫಿಕೇಶನ್‌ಗಳನ್ನು ವೀಕ್ಷಿಸುತ್ತಲೇ ಇರುತ್ತಾರೆ. ಯರ್ಯಾರು ಹೇಗ್ಹೇಗೆ ವಿಶ್ ಮಾಡಿzರೆ ಎಂಬುದನ್ನು ಗಮನಿಸುತ್ತಲೇ ಇರುತ್ತಾರೆ.
ಬಹಳ ಕಡಿಮೆ ಸಂಖ್ಯೆಯ ಮಂದಿ ತಕ್ಷಣ ಧನ್ಯವಾದ ಹೇಳುತ್ತಾರೆ. ಕೆಲವೊಮ್ಮೆ ಒಂದೇ ಬಾರಿಗೆ ಹೆಚ್ಚು ಸಂದೇಶಗಳು ಬರುವುದು ಈ ಕಾದು ನೋಡುವ ಪ್ರಕ್ರಿಯೆಯ ಕಾರಣದಿಂದ. ಬಗೆಬಗೆಯ ಮನಃಸ್ಥಿತಿಯ ಬಗ್ಗೆ ಹೋಲ್ ಸೇಲ್ ಡಿಮಾಂಡ್ ಫಾರ್ ಹೆಪ್ಪಿನೆಸ್ ಎಂದು ಕರೆಯುತ್ತಾರೆ. ನೆನಪಿಸಿಕೊಳ್ಳಿ, ೬೦, ೭೦, ೮೦ರ ದಶಕಗಳಲ್ಲಿ ದೂರವಾಣಿ ಸಂಪರ್ಕವೂ ಅಷ್ಟಾಗಿ ಇರದಿದ್ದಾಗ ಮನೆಯಲ್ಲಿದ್ದ ಗೃಹಿಣಿಯರು, ನಿವೃತ್ತ ಅತ್ತೆ-ಮಾವಂದಿರು, ಮನೆಯಿಂದ ಹೊರಗಡೆ ಹೋಗಿರುವ ತಮ್ಮ ಪತಿರಾಯರ ಮತ್ತು ಶಾಲೆಗೆ ಹೋಗಿರುವ ಮಕ್ಕಳ ನಿರೀಕ್ಷೆ ಮಾಡುತ್ತಿದ್ದರು. ಹಳ್ಳಿಯಲ್ಲಿದ್ದ ಎಲ್ಲರೂ ಅಂಚೆಯಣ್ಣ ಬರುವುದನ್ನೇ ಎದುರು ನೋಡುತ್ತಿದ್ದರು.
ಪೋ ಮನ್ ಬಂದ ಕೂಡಲೇ ಆತನಿಂದ ಪತ್ರವನ್ನು ಪಡೆ ಯುವ ಮೊದಲಿಗ ತಾನಾಗಬೇಕು ಎಂದು ಮನೆಯಲ್ಲಿದ್ದ ನಿವೃತ್ತ ಅಪ್ಪ ಸದಾ ಮನೆಯ ಹೊರಗಿದ್ದು ಕಾಯುತ್ತಿದ್ದರು. ಮನೆಯ ಗೃಹಿಣಿ ಬಟ್ಟೆ ಒಣಗಿಸುವ ನೆಪದ, ಇನ್ನಾವುದೋ ಕಾರಣಕ್ಕೋ ಮನೆಯ ಹೊರಗಡೆಯೇ ಇದ್ದು ತನ್ನ ತವರುಮನೆಯ ಕಡೆಯಿಂದ ಪತ್ರವೇನಾದರೂ ಬಂದೀತೇ ಎಂಬ ನಿರೀಕ್ಷೆಯಲ್ಲಿ ಕೊರಳುದ್ದ ಮಾಡಿ ಕಾಯುತ್ತಿದ್ದಳು. ಅತ್ತೆ ಮೆಣಸು ಒಣ ಹಾಕುವ ನೆಪದಲ್ಲಿ ಅಂಗಳದ ಇದ್ದು ತನ್ನ ಪುತ್ರನ ಅಥವಾ ಪುತ್ರಿಯ ಪತ್ರವೇನಾದರೂ ಬಂದೀತೇ ಎಂದು ಕಾಯುತ್ತಿದ್ದಳು.
ಇನ್ನು ಕೆಲಮನೆಗಳಲ್ಲಿ ವೃದ್ಧರು ತಮಗೆ ಬರುವ ಪಿಂಚಣಿಯ ಮನಿಯಾರ್ಡರಿಗಾಗಿ ಕಾದು ನಿಂತಿರುತ್ತಿದ್ದರು. ಹಳ್ಳಿಯ ರಸ್ತೆಯಲ್ಲಿ ಐದು-ಹತ್ತು ನಿಮಿಷ ಅಡ್ಡಾಡುವ ಪೋ ಮನ್ ಎಲ್ಲರನ್ನೂ ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿದ್ದ. ಪತ್ರ ಬಂದೊಡನೆ ಹಲವಷ್ಟು ಮಹಿಳೆಯರ ಕಣ್ಣಂಚಿನಲ್ಲಿ ನೀರು ಹನಿಗೂಡುವುದನ್ನು ನೋಡಿದ್ದಿರಬಹುದು. ಪತ್ರ ಓದುತ್ತಿದ್ದಂತೆ ಅವರು ಭಾವೋದ್ರೇಕಕ್ಕೆ ಒಳಗಾಗುತ್ತಿದ್ದರು. ಕೆಲವೊಮ್ಮೆ ಅಂಚೆಯಣ್ಣ ತರುತ್ತಿದ್ದ ಪತ್ರವನ್ನು ಓದಿ ಖುಷಿಯಾದ ಸೊಸೆ,
ಅತ್ತೆಯೊಂದಿಗಿನ ವೈಷಮ್ಯ ಮರೆತು ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದಳು. ಒಂದು ಪತ್ರ ಅದೆಷ್ಟು ಭಾವನೆಗಳನ್ನು ತಟ್ಟುತ್ತಿತ್ತು ಎಂಬುದು ಈಗ ಊಹಿಸುವುದು ಕೂಡ ಸಾಧ್ಯವಿಲ್ಲ.
ಕೆಲವೊಮ್ಮೆ ವಾರದಲ್ಲಿ ಒಂದು ದಿನವೂ ಪೋ ಮ್ಯಾನ್ ಬರುತ್ತಲೇ ಇರಲಿಲ್ಲ. ಆ ದಿನ, ಆ ವಾರ ಏನನ್ನೋ ಕಳೆದುಕೊಂಡ ಅನುಭವ. ಮನಸಿನಲ್ಲಿ ಸಂತಸವಿದ್ದರೂ ಏನೋ ಕೊರತೆಯ ಹನಿ ತೊಟ್ಟಿಕ್ಕುತ್ತಿತ್ತು. ಈಗ ನಾವು ೨೦೨೪ ಕ್ಕೆ ಬರೋಣ. ಪೋ ಮನ್ ಬಗ್ಗೆ ಯಾರೂ ನಿರೀಕ್ಷೆಯನ್ನೇ ಮಾಡುವುದಿಲ್ಲ. ಪೋ ಮನ್ ಅಂತ ಒಬ್ಬ ಮನುಷ್ಯ ಇದ್ದ ಎಂಬುದು ಈಗಿನವರಿಗೆ ಮರೆತು ಹೋಗಿದೆ. ಅದರಲ್ಲೂ ಕಳೆದ ಹದಿನೈದು ವರ್ಷಗಳ ಹಿಂದೆ ಹುಟ್ಟಿದವರಿಗೆ ಪೋಮನ್, ಪೋಬಾಕ್ಸ್ ಅಂದ್ರೆ ಏನು ಅಂತ ಕೇಳಬಹುದು. ಅವರಿಗೆ ಆನ್‌ಲೈನ್ ಡೆಲಿವರಿ ಬಾಯ್ಸ ಗೊತ್ತು.
ವಾಟ್ಸಾಪ್ ಬಂದು ಪೋ ಮನ್ ತರುತ್ತಿದ್ದ ನಿರೀಕ್ಷೆಗಳನ್ನೆಲ್ಲ ಸಾರಾಸಗಟಾಗಿ ಹೊಸಕಿ ಹಾಕಿದೆ. ನಮ್ಮಲ್ಲಿನ ಹಲವರು ತಕ್ಷಣಕ್ಕೆ ವಾಟ್ಸಾಪ್‌ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಕೆಲವೊಮ್ಮೆ ಎಲ್ಲರ ಮೆಸೇಜುಗಳು ಒಂದೇ ತೆರನಾಗಿರುತ್ತವೆ. ಹಲವರು ಗ್ರೂಪಿನಲ್ಲಿ ಹ್ಯಾಪಿ ಬರ್ಥಡೇ ಎಂದಷ್ಟೇ ಮೆಸೇಜ್ ಕಳಿಸಿದರೆ, ಎಲ್ಲಾ
ಕೆಲವರು ಮಾತ್ರ ತಮ್ಮ ಮಿತ್ರನ ಗುಣಗಾನ ಮಾಡಿ ಆತನೊಂದಿಗಿನ ಫೋಟೋ ಶೇರ್ ಮಾಡಿರುತ್ತಾರೆ. ಅದನ್ನು ಹಲವು ಬಾರಿ ಓದಿ ಖುಷಿ ಪಡುವವರೂ ಇದ್ದಾರೆ.
ನೀವು ಯಾರಿಗಾದರೂ ಖುಷಿ ಕೊಡಬೇಕೆಂದು ಬಯಸಿದರೆ, ವಾಟ್ಸಾಪ್‌ನಲ್ಲಿ ಕೇವಲ ಹ್ಯಾಪಿ ಬರ್ಥಡೇ ಎಂದಷ್ಟೇ ಮೆಸೇಜ್ ಕಳುಹಿಸಬೇಡಿ. ನಿಮ್ಮ ಮೆಸೇಜ್ ನಿಮ್ಮ ಮಿತ್ರರ ಮನಸ್ಸನ್ನು ಮುದಗೊಳಿಸುವ ರೀತಿಯಲ್ಲಿರಲಿ, ಚಿಲ್ಲರೆ ಖುಷಿಗಿಂತ ಹೆಚ್ಚಾಗಿ ಅವರಿಗೆ ಹೋಲ್ ಸೇಲ್ ಆಗಿ ಖುಷಿಯನ್ನು ಹಂಚುವ ಕೆಲಸವನ್ನು
ಮಾಡಬೇಕು. ಆತನ ಜನ್ಮದಿನವನ್ನು ನಾನು ಸ್ಮರಣೀಯವಾಗಿಸುವುದು ಹೇಗೆ ಎಂದು ಯೋಚಿಸಿ ಸಂದೇಶ ಕಳಿಸಬೇಕು. ಅಷ್ಟನ್ನಾದರೂ ಮಾಡಲು ಸಮಯ ಹೊಂದಿಸಿಕೊಳ್ಳಬೇಕು. ಅದು ಕಷ್ಟವೇ ನಲ್ಲ. ಇಲ್ಲದಿದ್ದರೆ ನಾವು ಟ್ರಾಫಿಕ್ ಜಾಮ್‌ನಲ್ಲಿರುವ ಹೊಗೆಯುಗುಳುವ ಒಂದು ಕೆಟ್ಟ ಲಾರಿ ಎಂದು ಅನಿಸಿಕೊಳ್ಳುತ್ತೇವೆ.
ಲೆಸ್ ಈಸ್ ಮೋರ್
ಫಿನ್‌ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಯಲ್ಲಿರುವ ಕನ್ನಡತಿ ಗೌತಮಿ ಭಾಸ್ಕರ್ ಎನ್ನುವವರು ಇತ್ತೀಚೆಗೆ ನನಗೆ ಡೊಮಿನಿಕ್ ಬೆರ್ಟೊಲುಚ್ಚಿ ಬರೆದ ಔಛಿoo ಜಿo Iಟ್ಟಛಿ : ೧೦೧ UZqso ಠಿಟ oಜಿಞmಜ್ಛಿqs qsಟ್ಠ್ಟ ಜ್ಛಿಛಿ ಎಂಬ ಪುಸ್ತಕವನ್ನು ಕಳಿಸಿಕೊಟ್ಟಿದ್ದರು. ಹಸ್ತಾಕ್ಷರದ ಜತೆಗೆ ‘ನಿಮ್ಮ ವಿಮಾನ ಪ್ರಯಾಣದ ಖುಷಿಗಾಗಿ’ ಎಂಬ ಟಿಪ್ಪಣಿ ಬೇರೆ. ಒಂದೂವರೆ ಗಂಟೆಯಲ್ಲಿ ಓದಿ ಮುಗಿಸಬಹುದಾದ ಕೃತಿ.
ನಮ್ಮ ಜೀವನವನ್ನು ಸರಳಗೊಳಿಸುವ ನೂರಾ ಒಂದು ಅಂಶಗಳನ್ನು ಲೇಖಕ ಡೊಮಿನಿಕ್ ಬೆರ್ಟೊಲುಚ್ಚಿ ವಿವರಿಸಿದ್ದಾನೆ. ಬಹುತೇಕ ಸಂಗತಿಗಳು ಗೊತ್ತಿರುವಂಥವೇ. ಆದರೆ ಅದನ್ನು ಮತ್ತಷ್ಟು ಸರಳಗೊಳಿಸಿ ಹೇಳಿರುವುದು ವಿಶೇಷ. ಬೆರ್ಟೊಲುಚ್ಚಿ ಹೇಳಿದ ೧೦೧ ಅಂಶಗಳಲ್ಲಿ ಐದು ಸಂಗತಿಗಳನ್ನಷ್ಟೇ ಹೇಳುತ್ತೇನೆ. ಮೊದಲನೆಯದು, ಆಗಾಗ ವಿಂಡೋ ಶಾಪಿಂಗ್ ಮಾಡಿ. ಅಂದರೆ ಮಾಲ್‌ಗೆ ಹೋದಾಗ ಅಲ್ಲಿನ ವಸ್ತುಗಳನ್ನು ನೋಡಿ, ಆದರೆ ಖರೀದಿಸಬೇಡಿ.
ಟ್ಠ Z oಠಿಜ್ಝ್ಝಿ ಜಟ oeಟmmಜ್ಞಿಜ ಡಿಜಿಠಿeಟ್ಠಠಿ ಚ್ಠಿqsಜ್ಞಿಜ, ಚಿಛ್ಚಿZoಛಿ ಡಿeಛ್ಟಿಛಿ ಚ್ಠಿqsಜ್ಞಿಜ ಜಿo Z ಞZಠಿಠಿಛ್ಟಿ ಟ್ಛ ಛಿಛಿb, oeಟmmಜ್ಞಿಜ ಜಿo Z ಟ್ಠಿಛಿoಠಿಜಿಟ್ಞ ಟ್ಛ ಡಿZಠಿ. ಒಮ್ಮೊಮ್ಮೆ ಒಂದು ವಸ್ತುವನ್ನು ನೋಡುವುದರಲ್ಲಿ ಸಿಗುವ ಸಂತಸ, ಅದನ್ನು ಖರೀದಿಸಿದ ನಂತರ ಸಿಗಲಿಕ್ಕಿಲ್ಲ.
ನೋಡಿ ಖುಷಿಪಡುವುದೇ ಬೇರೆ, ಖರೀದಿಸುವುದರ ಸಂತಸವೇ ಬೇರೆ. ಶಾಪಿಂಗ್ ಟ್ರಿಪ್‌ನ್ನು ಎಂಜಾಯ್ ಮಾಡಬೇಕು ಅಂದ್ರೆ ಕಂಡ ವಸ್ತುವನ್ನು ಖರೀದಿ ಮಾಡಬೇಕೆಂದಿಲ್ಲ. ಖರೀದಿಸಿದ ಬಳಿಕ ಹಣ ಖರ್ಚಾಯಿತು ಎಂಬ ಬೇಸರ ನೆಲೆಸಬಹುದು. ಖರೀದಿಸದೇ ಇzಗ, ಹಣ ಹಾಗೆ ನಮ್ಮಲ್ಲಿಯೇ ಉಳಿದ ಮತ್ತು
ಅದನ್ನು ನೋಡಿದ ಖುಷಿ ಸಿಗಬಹುದು. ಎರಡನೆಯದು, ಯಾವುದೇ ಕೆಲಸವನ್ನು ಮಾಡಲು ತಡವಾಯಿತು ಎಂಬುದಿಲ್ಲ. ನಿಮಗೆ ಎಂಬತ್ತು ವರ್ಷವಾದಾಗ
ಜಿಮ್‌ಗೆ ಹೋಗಬಹುದು. ದೇಹ ದಂಡಿಸಲು ಆಗದಿದ್ದರೆ, ದೇಹ ದಂಡಿಸುವವರನ್ನು ನೋಡಬಹುದು. ಇದೂ ಒಂಥರಾ ವಿಂಡೋ ಶಾಪಿಂಗ್ ಥರಾನೇ. ಹೊಟ್ಟೆ ಕರಗಿಸಲು ಆಗದಿದ್ದರೆ, ಕಡಿಮೆ ಆಹಾರ ಸೇವಿಸುವುದನ್ನಾದರೂ ರೂಢಿಸಿಕೊಳ್ಳಬಹುದು.
ಮೂರನೆಯದು, ಇಂದು ಮಾಡಬೇಕಾದ ಕೆಲಸವನ್ನು ಇಂದೇ ಮಾಡಿ. ಆ ಕೆಲಸವನ್ನು ಬೇರೆಯವರು ಮಾಡುತ್ತಾರೆಂದರೆ ಬೇಕಾದರೆ ನಾಳೆಗೆ ಮುಂದೂಡಿ. ಆ ಕೆಲಸವನ್ನು ನಾಳೆಯೂ ನೀವೇ ಮಾಡುವವರಾದರೆ, ಇಂದೇ ಮಾಡಿ. ಗೋಡೆ ಗಡಿಯಾರ ನಿಂತು ಹೋಗಿದ್ದರೆ, ತಕ್ಷಣ ಸರಿ ಮಾಡಿ. ಮನೆಯ ಲೈಟ್ ಬಲ್ಬ
ಹಾಳಾಗಿದ್ದರೆ, ನೀವೇ ಇಂದು ಅದನ್ನು ತೆಗೆದು ಹೊಸ ಬಲ್ಬ ಹಾಕಿ. ಮನೆಯ ಚಾವಣಿ ಸೋರುತ್ತಿದ್ದರೆ ಬಿಸಿಲಿzಗಲೇ ಸರಿ ಮಾಡಿ. ನಾಲ್ಕನೆಯದು, ಹತ್ತು ಶರ್ಟುಗಳನ್ನು ಖರೀದಿಸುವ ಬದಲು, ಒಳ್ಳೆಯ ಬ್ರಾಂಡಿನ ಎರಡೇ ಶರ್ಟುಗಳನ್ನು ಖರೀದಿಸಿ. ನಿಮ್ಮಲ್ಲಿ ಎಷ್ಟಿವೆ ಎಂಬುದಕ್ಕಿಂತ, ಇರುವವು ಹೇಗಿವೆ ಎಂಬುದು ಮುಖ್ಯ. ತಲೆಯಲ್ಲಿರುವ ಕೂದಲುಗಳ ಪೈಕಿ ಎದ್ದು ಕಾಣುವುದು ಒಂದೇ ಬಿಳಿ ಕೂದಲು. ಐದನೆಯದು, ಮನೆಯಲ್ಲಿ ಫ್ರಿಜ್ ಇಲ್ಲದೇ ಬದುಕುವುದನ್ನು
ಅಭ್ಯಾಸ ಮಾಡಿಕೊಳ್ಳಿ. ಫ್ರೆಶ್ ಆಗಿರುವುದು ಬೇರೆ, ತಂಪಾಗಿ ಇರುವುದು ಬೇರೆ. ನೀವು ಸೇವಿಸುವುದು ಫ್ರೆಶ್ ಆಗಿರಬೇಕೆಂದರೆ ಕಡಿಮೆ ಖರೀದಿಸಿ. ಫ್ರಿಜ್‌ನಲ್ಲಿ ಶೇಖರಿಸುವಷ್ಟು ಖರೀದಿಸಬೇಡಿ. ನಿಮ್ಮ ಮನೆಯಲ್ಲಿ ಫುಟ್ಬಾಲ್ ಆಡಿ, ಸೈಕಲ್ ತುಳಿದು, ಮನೆಯೊಳಗೇ ಓಡಿ ಬರುವವರಿದ್ದರೆ ಅಂಥವರಿಗೆ ಫ್ರಿಜ್
ಬೇಕಾದೀತು. ಉಳಿದವರಿಗೆ ಅದರ ಅಗತ್ಯವಿಲ್ಲ.ಆqs ಛಿoo, eಟಟoಛಿ ಡಿಛ್ಝ್ಝಿ Zb bಟ ಜಿಠಿ qsಟ್ಠ್ಟoಛ್ಝ್ಛಿ.
ಪಕ್ಷ ಯಾವುದಾದರೇನು?
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ರಾಜಕಾರಣಿಗಳಲ್ಲಿ ಸಂಚಲನ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿರುವ ಕ್ಷೇತ್ರಗಳ ಸಂಖ್ಯೆ ೫೪೫. ಒಂದು ಕ್ಷೇತ್ರದಿಂದ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸ್ಪಽಸುತ್ತಾರೆ ಎಂದುಕೊಂಡರೆ, ದೇಶಾದ್ಯಂತ ೧೬೩೫ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳಬಹುದು.
ಆದರೆ ಪ್ರತಿ ಕ್ಷೇತ್ರದಲ್ಲಿ ಪ್ರತಿ ಪಕ್ಷದಿಂದ ಕನಿಷ್ಠ ಹತ್ತು ಮಂದಿ ಯಾದರೂ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕೆಲವರಿಗೆ ಯಾವ ಪಕ್ಷವಾದರೂ ಆದೀತು. ಇಂದು ಒಂದು ಪಕ್ಷದಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾದರೆ, ನಾಳೆ ಅವರು ಮತ್ತೊಂದು ಪಕ್ಷದಲ್ಲಿ
ಅಂಗಳದಲ್ಲಿ ಕಾಣುತ್ತಾರೆ. ಒಟ್ಟಾರೆ ಚುನಾವಣೆಗೆ ಸ್ಪರ್ಧಿಸಿ ಎಂಪಿಯಾಗಬೇಕು. ಅದಕ್ಕೆ ಎಷ್ಟು ಹಣ ಖರ್ಚು ಮಾಡಲು ಸಿದ್ಧ. ಸುಭಾಷ್ ಭರಣಿ ಎಂಬ ಮಾಜಿ
ಪೊಲೀಸ್ ಅಽಕಾರಿ ಒಂದೇ ದಿನ ಮೂರು ಪಕ್ಷಗಳ ನಾಯಕರ ಮನೆಯಲ್ಲಿ ಕಾಣಿಸಿಕೊಂಡಿದ್ದು ನೆನಪಾಗುತ್ತದೆ. ಭರಣಿ ಈಗ ಅಪ್ರಸ್ತುತರಾಗಿರಬಹುದು. ಆದರೆ
ಅವರ ಸಂತತಿ ಮುಂದುವರಿದಿದೆ. ಹಾಗಂತ ಭರಣಿ ಈ ಸಂತತಿಯನ್ನು ಹುಟ್ಟು ಹಾಕಿದವರೇನೂ ಅಲ್ಲ. ಇಂಥವರು ಎಲ್ಲ ಕಾಲದಲ್ಲೂ ಇರುತ್ತಾರೆ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಂದರೆ ಇವರೇ. ಕಾರಣ ಇವರಿಗೆ ಯಾವ ಪಕ್ಷವಾದರೂ ಆದೀತು. ಬಿಜೆಪಿಯಲ್ಲಿ ಇರುವವರೆಲ್ಲ ಮೂಲ ಬಿಜೆಪಿಗಳೇನೂ ಅಲ್ಲ. ಅವರು ಒಂದು ಕಾಲಕ್ಕೆ ಕಾಂಗ್ರೆಸ್ ಅಥವಾ ಜೆಡಿಎಸ್‌ನಲ್ಲಿದ್ದವರೇ. ಈ ಮಾತು ಉಳಿದ ಪಕ್ಷಗಳಲ್ಲಿ ಇದ್ದವರಿಗೂ ಅನ್ವಯ. ಇತ್ತೀಚೆಗೆ ಒಂದು ಕಾರ್ಟೂನ್ ನೋಡಿದೆ. ಅದರಲ್ಲಿ ಬರೆದಿತ್ತು -ಟಠಿಛಿ ಟ್ಟ ಆಒP Zb ಛ್ಝಿಛ್ಚಿಠಿ qsಟ್ಠ್ಟ ಟ್ಝb ಇಟ್ಞಜ್ಟಛಿoo IP. (ಹಳೆಯ ಕಾಂಗ್ರೆಸ್ ಸಂಸದರನ್ನು ಆರಿಸಲು ಬಿಜೆಪಿಗೆ ಮತ ನೀಡಿ). ಇದು ಪ್ರಜಾಪ್ರಭುತ್ವದ ಕ್ರೂರ ಅಣಕವಲ್ಲದೇ ಮತ್ತೇನು? ಆದರೆ ನಾವು ಇದನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಹೀಗಾಗಿ ಯಾರದ್ದೂ ತಪ್ಪಿಲ್ಲ.
ವಿಶ್ವವನ್ನು ಬದಲಿಸಿದ ಆಲೋಚನೆಗಳು
ಇಂದು ಜಗತ್ತಿನಲ್ಲಿ ಕಂಪ್ಯೂಟರ್ ಅನಿವಾರ್ಯವಾಗಿರುವುದು. ಅದಿಲ್ಲದೇ ಇಂದು ಬದುಕೇ ಇಲ್ಲ. ಅದು ಇಲ್ಲದ ಆಫೀಸುಗಳೇ ಇಲ್ಲ. ಈ ಕಾರಣಕ್ಕಾಗಿಯೇ ಮೈಕ್ರೋಸಾ- ಸಂಸ್ಥೆಯ ಬಿಲ್ ಗೇಟ್ಸ್ ಕಂಪ್ಯೂಟರುಗಳ ಬಗ್ಗೆ ಐ ಠಿeಜ್ಞಿh ಜಿಠಿ’o Zಜ್ಟಿ ಠಿಟ oZqs ಠಿeZಠಿ mಛ್ಟಿoಟ್ಞZ ಟಞmಠಿಛ್ಟಿo eZqಛಿ ಚಿಛ್ಚಿಟಞಛಿ ಠಿeಛಿ ಞಟoಠಿ ಛಿಞmಟಡಿಛ್ಟಿಜ್ಞಿಜ ಠಿಟಟ್ಝ ಡಿಛಿ’qಛಿ ಛಿqಛ್ಟಿ ಛಿZಠಿಛಿb. Seಛಿqs’ಛಿ ಠಿಟಟ್ಝo ಟ್ಛ ಟಞಞ್ಠ್ಞಜ್ಚಿZಠಿಜಿಟ್ಞ, ಠಿeಛಿqs’ಛಿ ಠಿಟಟ್ಝo ಟ್ಛ ಛಿZಠಿಜಿqಜಿಠಿqs, Zb ಠಿeಛಿqs Z ಚಿಛಿ oeZmಛಿb ಚಿqs ಠಿeಛಿಜ್ಟಿ oಛ್ಟಿ ಎಂದು ಹೇಳಿರುವುದು.
ಪ್ರತಿ ವಸ್ತು ಅಥವಾ ಪ್ರಾಡಕ್ಟ್ ಗಳ ಹಿಂದಿರುವುದು ಸರಳವಾದ, ಆದರೆ ಮಹಾನ್ ಎಂದು ಅಂದುಕೊಳ್ಳಬಹುದಾದ ಆಲೋಚನೆಗಳು. ಅದನ್ನು ರೂಪಿಸಲು ಬಹಳ ಕಷ್ಟವಾಗಿರಬಹುದು, ತಂತ್ರಜ್ಞರು ಬಹಳ ಕಷ್ಟಪಟ್ಟಿರಬಹುದು. ಆದರೆ ಅದನ್ನು ಉಪಯೋಗಿಸುವವರು ಮಾತ್ರ ಪುಣ್ಯವಂತರು. ಅವರಿಗೆ ಅದರ ಗೊಡವೆಯೇ
ಇಲ್ಲ. ಅದು ಸಿದ್ಧವಾಗಿ ಬರುವ ಹೊತ್ತಿಗೆ ಎಲ್ಲವೂ ಸ್ಪಟಿಕದಷ್ಟು ಸ್ಪಷ್ಟ. ಅವೆಲ್ಲವುಗಳ ಹಿಂದೆ ಇರುವುದು ಮಹಾನ್ ಆದರೆ ಬಳಕೆಗೆ ಅತ್ಯಂತ ಸುಲಭವೆನಿಸುವ ಸಂಗತಿಗಳು. ಇಪ್ಪತ್ತೈದು ವರ್ಷಗಳ ಹಿಂದೆ, ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಾಗ, ಅದರ ಸ್ಕ್ರೀನ್ ಚಿಕ್ಕದಾಗಿತ್ತು, ದೇಹ ದೊಡ್ಡದಾಗಿತ್ತು. ಅದರ ಬಹುಪಾಲು ಕೀಬೋರ್ಡ್ ಆಕ್ರಮಿಸಿತ್ತು. ಜತೆಗೆ ಅರ್ಧ ಇಟ್ಟಿಗೆಯಷ್ಟು ಭಾರ!
ಆಪಲ್ ಸಂಸ್ಥೆ ಮಾಡಿದ ಮ್ಯಾಜಿಕ್ ಬಹಳ ಸರಳವಾಗಿತ್ತು. ಅದು ಮೊಬೈಲಿನ ಒಂದು ಪಾರ್ಶ್ವ ಅಥವಾ ಮುಖವನ್ನು ಪರದೆಯನ್ನಾಗಿ ಮಾಡಿಬಿಟ್ಟಿತು. ಹೀಗಾಗಿ ಇಮೇಜುಗಳು ಸಹಜವಾಗಿ ದೊಡ್ಡದಾಗಿ ಕಾಣಿಸಲಾರಂಭಿಸಿದವು. ಈ ಪರದೆ ಟಚ್ ಸ್ಕ್ರೀನ್ ಸಹ ಆಗಿತ್ತು. ಅಂದರೆ ಕೀ ಬೋರ್ಡ್ ಮಾಯವಾಗಿತ್ತು. ಕೀ ಬೋರ್ಡ್ ಇಲ್ಲದೆಯೂ ಮೊಬೈಲ್ ಫೋನನ್ನು ರೂಪಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು. (ಈ ತಂತ್ರಜ್ಞಾನವನ್ನು ಮೊದಲು ಜಾರಿಗೊಳಿಸಿದ್ದು ಮೊಟೊರೊಲಾ ಎನ್ನುವವರಿzರೆ, ಇರಲಿ) ಅಲ್ಲಿಯ ತನಕ, ಮೊಬೈಲ್ ಅಂದ್ರೆ ಕೀ ಬೋರ್ಡ್ ಇರಲೇಬೇಕು ಎಂಬ ನಿಯಮ ಪಾಲನೆ ಜಾರಿಯಲ್ಲಿತ್ತು. ಟಚ್ ಸ್ಕ್ರೀನ್ ತಂತ್ರಜ್ಞಾನ ಒಮ್ಮೆಗೆ ಇನ್ನಿತರ ಹತ್ತಾರು ಸೌಲಭ್ಯ(ಫೀಚರ್)ಗಳನ್ನು ಮೊಬೈಲಿಗೆ ಜೋಡಿಸಿದವು. ಅಲ್ಲಿ ತನಕ ಕೇವಲ ಫೋನ್ ಆಗಿ ಬಳಕೆಯಾಗುತ್ತಿದ್ದ ಆ ಉಪಕರಣ, ಹತ್ತು-ಹಲವು ಬೇರೆ ಉಪಕರಣಗಳನ್ನು ಆಪೋಶನ ಮಾಡಿ, ಬ್ರಹ್ಮರಾಕ್ಷಸನಂತೆ ಬೆಳೆದುಬಿಟ್ಟಿತು.
‘ಮೊಬೈಲ್ ಫೋನ್’ ಹೋಗಿ ಮೊಬೈಲ್ ಆಯಿತು. ಹತ್ತಾರು ಫೀಚರುಗಳ ಮಧ್ಯೆ ಫೋನ್ ಕೂಡ ಒಂದು ಅಂಶವಾಯಿತು. ಟಿವಿ, ಟೇಪ್ ರೆಕಾರ್ಡರ್, ಮ್ಯೂಸಿಕ್ ಪ್ಲೇಯರ್, ಸ್ಪೀಕರ್, ಕಂಪಾಸ್, ಅಲಾರ್ಮ್, ವಾಚ್… ಹೀಗೆ ಅವೆಷ್ಟೋ ಉಪಕರಣಗಳನ್ನು ಇಂದು ಮೊಬೈಲ್ ತಿಂದು ಹಾಕಿಬಿಟ್ಟಿದೆ. ಕೈಯಲ್ಲಿ ಮೊಬೈಲ್ ಇದ್ದರೆ ಮತ್ತೇನೂ ಬೇಕಿಲ್ಲ. ಬೇರೆ ಇದ್ದರೂ ಮೊಬೈಲನ್ನೇ ಹಿಡಿದು ಕುಳಿತುಕೊಳ್ಳುವುದು ಈ ಕಾರಣಕ್ಕೆ. ಟಚ್ ಸ್ಕ್ರೀನ್ ಎಂಬ ಸರಳ ಉದ್ದೇಶದ ಮಾಯಾ ಪರದೆ
ಚಮತ್ಕಾರವನ್ನೇ ಮಾಡಿಬಿಟ್ಟಿತು. ಅದೇ ನಂತರ ಐಪ್ಯಾಡ್, ಐವಾಚ್‌ನಂಥ ಗ್ಯಾಜೆಟ್ಟುಗಳ ಹುಟ್ಟಿಗೂ ಕಾರಣವಾಯಿತು.
ಆಛ್ಝಿಜಿಛಿqಛಿ ಜಿಠಿ ಟ್ಟ ಟಠಿ, ಐ’ಞ Z ಚಿಜಿಠಿ ಞoqs ಡಿಜಿಠಿe ಠಿಛ್ಚಿeಟ್ಝಟಜqs. ಐಠಿ’o mಟಚಿZಚ್ಝಿqs ಡಿeqs ಐ’ಞ oಟ ಛ್ಡ್ಚಿಜಿಠಿಛಿb Zಚಿಟ್ಠಠಿ ಠಿeಛಿ ಠಿಟ್ಠ್ಚeoಛಿಛ್ಞಿ – ಛಿqಛ್ಞಿ Z ಜಿbಜಿಟಠಿ Z oಛಿ ಜಿಠಿ! ಎಂಬ ಟೆಕ್ ಗುರು ನಿಕೊಲಸ್ ನಿಗ್ರೋಪಾಂಟೆ ಹೇಳಿದ ಮಾತು ಅಪ್ಪಟ ಸತ್ಯ. ಇಂದು ಟಚ್ ಸ್ಕ್ರೀನ್ ಇಲ್ಲದ ಉಪಕರಣಗಳೇ ಇಲ್ಲ. ಅದರಲ್ಲೂ ಗೃಹಬಳಕೆಯ ಉಪಕರಣಗಳಲ್ಲಿ ಅದು ತೀರಾ ಸಾಮಾನ್ಯ. ಒಂದು ಸರಳ, ಸೃಜನಶೀಲ ಐಡಿಯಾ, ನಮ್ಮ ಬದುಕನ್ನು ಹಸನುಗೊಳಿಸಿದ ರೀತಿ ಮಾತ್ರ ಅನನ್ಯ.