ಇಂಗ್ಲೆಂಡ್ ನೀಡಿದ 192 ರನ್‌ಗಳ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಬೆನ್ನಟ್ಟಿದ ಭಾರತ ಗೆದ್ದು ಬೀಗಿತು. ಯುವ ಪಡೆಯ ಜೊತೆ ರೋಹಿತ್ ಶರ್ಮಾ ಬಲಿಷ್ಠ ಇಂಗ್ಲೆಂಡ್ ಪಡೆಯನ್ನು ಮಣಿಸಿದೆ. ಶುಭಮನ್ ಗಿಲ್ ಮತ್ತು ಧ್ರುವ್ ಜುರೆಲ್ ತಾಳ್ಮೆಯ ಬ್ಯಾಟಿಂಗ್ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ್ದ ಜುರೆಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ಯುತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಭಾರತ ಸರಣಿ ಗೆಲ್ಲುತ್ತಿದ್ದಂತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದು, ಭಾರತ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸರಣಿಯಲ್ಲಿ ನಾಲ್ವರು ಆಟಗಾರರು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಆದರೂ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು.
ವೇಗದ ಬೌಲರ್ ಆಕಾಶ್ ದೀಪ್ ಅದ್ಭುತ ಬೌಲಿಂಗ್ ಮಾಡಿದರು ಮತ್ತು ಧ್ರುವ್ ಜುರೆಲ್ ಅವರು ತಮ್ಮ ಎರಡನೇ ಟೆಸ್ಟ್ ಪಂದ್ಯವನ್ನಷ್ಟೇ ಆಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಚೇಸಿಂಗ್‌ನಲ್ಲಿ ತಮ್ಮ ಪ್ರವೃತ್ತಿಯನ್ನು ನಿಗ್ರಹಿಸುವಲ್ಲಿ ಶುಭಮನ್ ಉತ್ತಮ ಮನೋಧರ್ಮವನ್ನು ತೋರಿಸಿದರು ಮತ್ತು ಪ್ರಮುಖ 50 ರನ್ ಗಳಿಸಿದರು. ಪಂದ್ಯ ಮತ್ತು ಸರಣಿಯು ನಮ್ಮದಾಗಿದೆ ಎಂದು ತುಂಬಾ ಸಂತೋಷವಾಗಿದೆ,” ಸಚಿನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.