• ಜಿಎಸ್ ಕೆ ಜಾಗತಿಕ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ
• ಜಾಗತಿಕವಾಗಿ ಪ್ರತಿ 3 ಜನರಲ್ಲಿ ಒಬ್ಬರು ಸರ್ಪಸುತ್ತಿನಿಂದ ಬಳಲುತ್ತಿದ್ದಾರೆ
• ಸರ್ಪಸುತ್ತು ನೋವು, ಸುಡುವಿಕೆ, ಇರಿತ ಮತ್ತು ಆಘಾತಗಳಂತಹ ನೋವಿನಿಂದ ಕೂಡಿರುತ್ತದೆ
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸರ್ಪಸುತ್ತು ಅಪಾಯದ ಬಗ್ಗೆ ನಡೆಸಿದ ಸಮೀಕ್ಷೆಯ ಅಂಕಿಅಂಶಗಳನ್ನು ಗ್ಲಾಕ್ಸೋಸ್ಮಿತ್ ಕ್ಲೈನ್ ಇಂದು ಬಿಡುಗಡೆ ಮಾಡಿದೆ. ಈ ಸಮೀಕ್ಷೆಗೆ ಸಂಸ್ಥೆಯು ಧನಸಹಾಯ ಮಾಡಿತ್ತು. 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಸರ್ಪಸುತ್ತು ಅಪಾಯ ಎದುರಾಗುತ್ತದೆ ಎಂಬು ದನ್ನು ಮತ್ತು ಈ ರೋಗದಿಂದ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಅದರ ಪರಿಣಾಮ ಜೀವನದ ಮೇಲೆ ಎಷ್ಟರಮಟ್ಟಿಗೆ ಆಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿರುವವರ ಸಂಖ್ಯೆ ಅತ್ಯಂತ ಕಡಿಮೆ ಇರುವುದನ್ನು ಸಮೀಕ್ಷೆ ಪತ್ತೆ ಮಾಡಿದೆ. 12 ಕ್ಕೂ ದೇಶಗಳ 50 ವರ್ಷ ಮೀರಿದ 3,500 ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಈ ಸರ್ಪಸುತ್ತುವಿನಿಂದ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಮಗೆ ಹೆಚ್ಚು ಅರಿವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಭಾರತದಲ್ಲಿ 500 ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ಪೈಕಿ 250 ಜನರು ಹಿಂದಿಯಲ್ಲಿ ಮತ್ತು 250 ಜನರು ಇಂಗ್ಲೀಷ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಪಸುತ್ತು ಜಾಗೃತಿ ಸಪ್ತಾಹ 2024 (26 ಫೆಬ್ರವರಿ 2024 ರಿಂದ 3 ಮಾರ್ಚ್ 2024 ರವರೆಗೆ) ನಡೆಯುತ್ತಿರುವ ಸಂದರ್ಭದಲ್ಲಿ ಈ ಸಮೀಕ್ಷೆ ಯ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸರ್ಪಸುತ್ತು ಮತ್ತು ಜೀವನಪರ್ಯಂತ ಇದರಿಂದ ಆಗುವ ಪರಿಣಾಮದ ಬಗ್ಗೆ ಜನರಲ್ಲಿ ಇರುವ ಅರಿವಿನ ಕೊರತೆ ಇರುವ ಹಿನ್ನೆಲೆಯಲ್ಲಿ ಅವರಲ್ಲಿ ಜಾಗೃತಿ ಮೂಡಿಸುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.
ಜಾಗತಿಕ ಮಟ್ಟದಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಕಂಡು ಬಂದ ಪ್ರಮುಖ ಅಂಶವೆಂದರೆ ಈ ಸರ್ಪಸುತ್ತಿನ ಅಪಾಯದ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ. ಅಂದರೆ ಶೇ.86 ರಷ್ಟು ಜನರು ಈ ರೋಗವನ್ನು ನಿರ್ಲಕ್ಷಿಸಿದ್ದಾರೆ. ಭಾರತದಲ್ಲಿ ಇಂಗ್ಲೀಷ್ ನಲ್ಲಿ ಪ್ರತಿಕ್ರಿಯೆ ನೀಡಿದವರ ಪೈಕಿ ಶೇ.81 ಮತ್ತು ಹಿಂದಿ ಮಾತನಾಡಿದವರಲ್ಲಿ ಶೇ.86 ರಷ್ಟು ಜನರು ಸರ್ಪಸುತ್ತಿನ ಅಪಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಜಾಗತಿಕವಾಗಿ ಶೇ.26 ರಷ್ಟು ಜನರಲ್ಲಿ 100 ಕ್ಕೆ ಒಬ್ಬರಿಗೆ ತಮ್ಮ ಜೀವನಪರ್ಯಂತ ಈ ಸರ್ಪಸುತ್ತಿನ ಅಪಾಯವಿದೆ ಎಂಬುದನ್ನು ತಿಳಿದಿದ್ದಾರೆ. ಸುಮಾರು ಐದನೇ (ಶೇ.17) ಜನರು 1000 ರಲ್ಲಿ 1 ಎಂದು ಭಾವಿಸುತ್ತಾರೆ. ಸುಮಾರು ಅರ್ಧದಷ್ಟು ಅಂದರೆ ಶೇ.49 ರಷ್ಟು ಜನರಲ್ಲಿ ಸರ್ಪಸುತ್ತುಗಳು ಬೆಳವಣಿಗೆಯ ಸಾಧ್ಯತೆ ಇಲ್ಲ ಎಂದು ನಂಬುತ್ತಾರೆ. ಹಿಂದಿ ಮಾತನಾಡುವವರಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ 5 ಮಂದಿ ಅಂದರೆ 1000 ವಯಸ್ಕರಲ್ಲಿ ಒಬ್ಬರಿಗೆ ಸರ್ಪಸುತ್ತು ಬೆಳೆಯುವ ಅಪಾಯವಿದೆ ಎಂದು ಶೇ.18 ರಷ್ಟು ಜನರು ನಂಬುತ್ತಾರೆ.
ವಾಸ್ತವದಲ್ಲಿ, ಹೆಚ್ಚಿನ ವಯಸ್ಕರು ಈಗಾಗಲೇ ತಮ್ಮ 50 ನೇ ವಯಸ್ಸಿನಲ್ಲಿ ತಮ್ಮ ದೇಹದಲ್ಲಿ ಸರ್ಪಸುತ್ತುಗಳನ್ನು ಉಂಟುಮಾಡುವ ವೈರಸ್ ಅನ್ನು ಹೊಂದಿದ್ದಾರೆ. ಇದು ವಯಸ್ಸಾಗುತ್ತಿದ್ದಂತೆಯೇ ಮರು ಸಕ್ರಿಯಗೊಳ್ಳುವ ಸಾಧ್ಯತೆಗಳಿವೆ. ಚಿಕನ್ ಪಾಕ್ಸ್ ಗೆ ಕಾರಣವಾಗುವ ವರಿಸೆಲ್ಲಾ-ಝೊಸ್ಟರ್ ವೈರಸ್ (VZV) ಸರ್ಪಸುತ್ತು ಮರು ಸಕ್ರಿಯಗೊಳ್ಳಲು ಕಾರಣವಾಗುತ್ತದೆ. ಜನರಿಗೆ ವಯಸ್ಸಾದಂತೆ ಅವರಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯ ಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಇದು ಅವರಲ್ಲಿ ಸರ್ಪಸುತ್ತುಗಳು ಬೆಳವಣಿಗೆಯಾಗುವ ಅಪಾಯವನ್ನು ಹೆಚ್ಚು ಮಾಡುತ್ತದೆ.
ಸಮೀಕ್ಷೆಯ ಫಲಿತಾಂಶಗಳು ನೋವಿನ ಸರ್ಪಸುತ್ತುಗಳ ಬಗ್ಗೆ ಅರಿವಿನ ಕೊರತೆಯನ್ನು ತೋರಿಸುತ್ತದೆ. ಈ ರೋಗವು ಸಾಮಾನ್ಯವಾಗಿ ಎದೆ, ಹೊಟ್ಟೆ ಅಥವಾ ಮುಖದಲ್ಲಿ ನೋವಿನ ಗುಳ್ಳೆಗಳೊಂದಿಗೆ ದದ್ದುಗಳಾಗಿ ಕಂಡುಬರುತ್ತದೆ. ನೋವನ್ನು ಸಾಮಾನ್ಯವಾಗಿ ನೋವು, ಉರಿ, ಇರಿತ ಅಥವಾ ಆಘಾತವನ್ನುಂಟು ಮಾಡುತ್ತವೆ. ಜಾಗತಿಕವಾಗಿ 10 ವಯಸ್ಕರಲ್ಲಿ ಒಬ್ಬರಿಗೆ ಸರ್ಪಸುತ್ತುವಿನ ಸಾಮಾನ್ಯ ಲಕ್ಷಣಗಳು ತಿಳಿದಿಲ್ಲ. ಅಂದರೆ, ಶೇ.28 ರಷ್ಟು ಜನರು ಸರ್ಪಸುತ್ತು ಒಂದು ನಿರುಪದ್ರವ ರೋಗ ಎಂದು ಭಾವಿಸುತ್ತಾರೆ. ಭಾರತದಲ್ಲಿ ಇಂಗ್ಲೀಷ್ ಮಾತನಾಡಿದವರಲ್ಲಿ ಶೇ.55 ಮತ್ತು ಹಿಂದಿ ಮಾತನಾಡಿ ದವರಲ್ಲಿ ಶೇ.76 ರಷ್ಟು ಜನರು ಹೀಗೆಯೇ ನಂಬಿಕೆ ಇಟ್ಟಿದ್ದಾರೆ.
ಗ್ಲಾಕ್ಸೋಸ್ಮಿತ್ ಕ್ಲೈನ್ ಫಾರ್ಮಾಸಿಟಿಕಲ್ಸ್ ಇಂಡಿಯಾದ ಮೆಡಿಕಲ್ ಅಫೇರ್ಸ್ ನ ಕಾರ್ಯಕಾರಿ ಉಪಾಧ್ಯಕ್ಷೆ ಡಾ.ರಶ್ಮಿ ಹೆಗ್ಡೆ ಅವರು ಮಾತನಾಡಿ, “ಸಮೀಕ್ಷೆಯ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಸರ್ಪಸುತ್ತು ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳುತ್ತವೆ. ಸರ್ಪಸುತ್ತುಗಳು ವಯಸ್ಸಾದ ವಯಸ್ಕರ ದೈನಂದಿನ ಜೀವನದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ ಮತ್ತು ಅವರಲ್ಲಿ ಹೆಚ್ಚಿನ ಅಸ್ವಸ್ಥತೆ ಯನ್ನು ಉಂಟುಮಾಡಬಹುದು. ಈ ಸರ್ಪಸುತ್ತು ಜಾಗೃತಿ ಸಪ್ತಾಯದಲ್ಲಿ ಸರ್ಪಸುತ್ತಿನಿಂದ ಉಂಟಾಗುವ ಆರೋಗ್ಯ ಪರಿಸ್ಥಿತಿ ಮತ್ತು ಅದನ್ನು ತಡೆ ಗಟ್ಟುವ ಬಗೆ ಹೇಗೆ ಎಂಬುದರ ಬಗ್ಗೆ ತಮ್ಮ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ, ಸಲಹೆ ಸೂಚನೆಗಳನ್ನು ಪಡೆಯುವುದನ್ನು ಪ್ರೇರೇಪಿಸ ಲಾಗುತ್ತದೆ’’ ಎಂದರು.
ಸರ್ಪಸುತ್ತು ಬಂದಾಗ ಉಂಟಾಗುವ ದದ್ದುಗಳ ನಂತರ ವ್ಯಕ್ತಿಯು ಪೋಸ್ಟ್-ಹೆರ್ಪಿಟಿಕ್ ನರಶೂಲೆ (post-herpetic neuralgia (PHN)) ಯನ್ನು ಅನುಭವಿಸಬಹುದು. ಇದು ದೀರ್ಘಾವಧಿಯ ನರಗಳ ನೋವು ಅಂದರೆ, ಈ ನೋವು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಇರುತ್ತದೆ. ಕೆಲವೊಂದು ಸಂದರ್ಭದಲ್ಲಿ ಈ ನೋವು ವರ್ಷಗಳವರೆಗೂ ಮುಂದುವರಿಯಬಹುದಾಗಿದೆ. PHN ಸರ್ಪಸುತ್ತುಗಳ ಸಾಮಾನ್ಯ ತೊಡಕಾಗಿದೆ. ವಿವಿಧ ಅಧ್ಯಯನಗಳ ಪ್ರಕಾರ ಶೇ.5 ರಿಂದ 30 ರಷ್ಟು ಸರ್ಪಸುತ್ತು ಪ್ರಕರಣಗಳು ಸಂಭವಿಸುತ್ತವೆ. ಆದಾಗ್ಯೂ, ಸಮೀಕ್ಷೆಯ ಸಂಶೋಧನೆಗಳ ಪ್ರಕಾರ ಜಾಗತಿಕವಾಗಿ ಕೇವಲ ಶೇ.14 ರಷ್ಟು ಸರ್ಪಸುತ್ತು ರೋಗಲಕ್ಷಣಗಳು 6 ವಾರಗಳಿಗಿಂತ ಹೆಚ್ಚು ಕಾಲ ಇರುತ್ತವೆ ಎಂಬುದನ್ನು ನಂಬುತ್ತಾರೆ. ಭಾರತದಲ್ಲಿ ಇಂಗ್ಲೀಷ್ ನಲ್ಲಿ ಪ್ರತಿಕ್ರಿಯೆ ನೀಡಿರುವವರಲ್ಲಿ ಕೇವಲ ಶೇ. 8ರಷ್ಟು ಜನರು ಮತ್ತು ಹಿಂದಿ ಮಾತನಾಡುವವರಲ್ಲಿ ಶೇ.4 ರಷ್ಟು ಜನರು ಈ ಸರ್ಪಸುತ್ತು ರೋಗಲಕ್ಷಣಗಳು 6 ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ ಎಂದು ಭಾವಿಸುತ್ತಾರೆ.
ಜಿಎಸ್ ಕೆ ಸರ್ಪಸುತ್ತು ಜಾಗೃತಿ ಸಪ್ತಾಹ (26 ಫೆಬ್ರವರಿ 2024- 3 ಮಾರ್ಚ್ 2024) ಭಾಗವಾಗಿ ಹೊಸ ಸಮೀಕ್ಷೆಯ ಸಂಶೋಧನೆಗಳನ್ನು ಆರಂಭಿಸುತ್ತಿದೆ. ಇದು ಜಿಎಸ್ ಕೆ ನೇತೃತ್ವದ ಅಭಿಯಾನವು ಇಂಟರ್ ನ್ಯಾಷನಲ್ ಫೆಡರೇಶನ್ ಆನ್ ಏಜಿಂಗ್ (IFA) ಸಹಯೋಗದೊಂದಿಗೆ ಸರ್ಪಸುತ್ತು ಮತ್ತು ಅದರಿಂದ ಎದುರಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.