Saturday, 14th December 2024

ಮೊದಲ ಸಿಎಫ್‌ಒಐ ಆಗಿ ಕ್ಯಾಪ್ಟನ್ ಶ್ವೇತಾ ಸಿಂಗ್ ನೇಮಕ

ವದೆಹಲಿ: ಕ್ಯಾಪ್ಟನ್ ಶ್ವೇತಾ ಸಿಂಗ್ ಮೊದಲ ಮಹಿಳಾ ಮುಖ್ಯ ವಿಮಾನ ಕಾರ್ಯಾಚರಣೆ ಇನ್ಸ್ಪೆಕ್ಟರ್ (ಸಿಎಫ್‌ಒಐ) ಆಗಿ ನೇಮಕಗೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

ಆಡಳಿತಾತ್ಮಕ ಆಧಾರದ ಮೇಲೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ನಿಯಂತ್ರಕವು ಆಗಿನ ಸಿಎಫ್‌ಒಐ ಅನ್ನು ವಜಾಗೊಳಿಸಿದ ನಂತರ ಕ್ಯಾಪ್ಟನ್ ಸಿಂಗ್ ಅವರಿಗೆ ಕಳೆದ ತಿಂಗಳು ಸಿಎಫ್‌ಒಐನ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು.

ಕಡ್ಡಾಯ ಸಂದರ್ಶನದಲ್ಲಿ ಉತ್ತೀರ್ಣರಾದ ನಂತರ ಕ್ಯಾಪ್ಟನ್ ಶ್ವೇತಾ ಸಿಂಗ್ ಡಿಜಿಸಿಎಯ ವಿಮಾನ ಸುರಕ್ಷತಾ ವಿಭಾಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ಯಾ.ಸಿಂಗ್ ಈಗ ವಿಮಾನ ಸುರಕ್ಷತಾ ನಿರ್ದೇಶನಾಲಯದಲ್ಲಿ (ಎಫ್‌ಎಸ್ಡಿ) ಉನ್ನತ ಸ್ಥಾನದಲ್ಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.