Saturday, 14th December 2024

ಮುಸಲ್ಮಾನರು ಅಲ್ಪಸಂಖ್ಯಾತರಲ್ಲ

ವೀಕೆಂಡ್ ವಿತ್ ಮೋಹನ್

camohanbn@gmail.com

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ಜಾತಿ ಗಣತಿಯ ಚರ್ಚೆ ಶುರುವಾಗಿದೆ. ಬ್ರಿಟಿಷರ ಕಾಲದಲ್ಲಿ ನಡೆದಿದ್ದ ಜಾತಿಗಣತಿಯನ್ನಾ ಧರಿಸಿ ಭಾರತದ ವಿವಿಧ ಜಾತಿಗಳ ಜನಸಂಖ್ಯೆಯನ್ನು ಅಂದಾಜು ಮಾಡುತ್ತಾ ಬರಲಾಗಿತ್ತು. ಜಾತಿಗಣತಿ ಮಾಡುವ ಸಂಪೂರ್ಣ ಅಧಿಕಾರ ಕೇಂದ್ರ ಸರಕಾರದ ಬಳಿಯಲ್ಲಿರುವುದರಿಂದ, ರಾಜ್ಯ ಸರಕಾರಗಳು ಜಾತಿಗಣತಿ ಮಾಡುವುದಕ್ಕಾಗುವುದಿಲ್ಲ.

ಆದರೆ ಬೇರೆ ಬೇರೆ ಹೆಸರಿನಲ್ಲಿ ಹಿಂಬಾಗಿಲಿನ ಮೂಲಕ, ರಾಜಕೀಯ ಲಾಭಕ್ಕಾಗಿ ವಿವಿಧ ಜಾತಿಗಳ ಆರ್ಥಿಕ ಸಮೀಕ್ಷೆಗಳನ್ನು ಮಾಡಿಸುವುದು ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜ್ಯದಲ್ಲಿನ ವಿವಿಧ ಜಾತಿಗಳ ಆರ್ಥಿಕ ಸಮೀಕ್ಷೆಯನ್ನಾಧರಿಸಿದ ವರದಿಯನ್ನು ಕೆಲ ತಿಂಗಳ ಹಿಂದೆ ಬಹಿರಂಗಪಡಿಸಿದ್ದರು. ೨೦೧೫ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಸುಮಾರು ೧೫೦ ಕೋಟಿ ರುಪಾಯಿ ಖರ್ಚು ಮಾಡಿ ಕಾಂತರಾಜುರವರ ನೇತೃತ್ವದಲ್ಲಿ ವಿವಿಧ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ ಚಾಲನೆ ನೀಡಿತ್ತು.

೨೦೧೮ರಲ್ಲಿ ಆಯೋಗದ ಕರಡು ವರದಿ ಸಿದ್ಧವಾಗಿದ್ದರೂ ಕಾಂಗ್ರೆಸ್ ಸರಕಾರ ವಿಧಾನಸಭೆಯಲ್ಲಿ ಅದನ್ನು ಅಂಗೀಕರಿಸಿರಲಿಲ್ಲ. ಈಗ ಮತ್ತೊಮ್ಮೆ ಅವರ ವರದಿಯನ್ನು ಆಧರಿಸಿದ ವಿವಿಧ ಜಾತಿಗಳ ಆರ್ಥಿಕ ಸಮೀಕ್ಷೆಯನ್ನು ರಾಜ್ಯ ಹಿಂದುಳಿದ ವರ್ಗದ ಆಯೋಗದ ವತಿಯಿಂದ ಪಡೆದುಕೊಂಡಿದೆ. ಈ ವರದಿಯ ಅಂಕಿ-ಅಂಶಗಳು ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಸೋರಿಕೆಯಾಗಿದೆ ಎನ್ನಲಾಗುತ್ತಿರುವ ವಿವರಗಳು ಮುಸ್ಲಿಮರನ್ನು ರಾಜ್ಯದ
ಎರಡನೇ ದೊಡ್ಡ ಸಮುದಾಯವೆಂದು ಹೇಳುತ್ತಿವೆ. ಸೋರಿಕೆ ಯಾಗಿದೆ ಎನ್ನಲಾಗಿರುವ ಈ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಮುಸಲ್ಮಾನರ ಜನಸಂಖ್ಯೆ ೭೦ ಲಕ್ಷವೆಂದು ಹೇಳಲಾಗುತ್ತಿದೆ.

ಆದರೆ ಕಾಂತರಾಜು ವರದಿಯ ತಯಾರಿಕೆಯ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಸಮೀಕ್ಷೆಗಾಗಿ ಮನೆ ಮನೆಗೆ ತೆರಳಿ ಸಂಗ್ರಹಿಸಿರುವ ಮಾಹಿತಿಯ ಕಚ್ಚಾ ಪತ್ರಗಳು ಕಾಣೆಯಾಗಿವೆಯೆಂದು ಹೇಳಲಾಗುತ್ತಿದೆ. ಸೋರಿಕೆಯಾಗಿದೆ ಎನ್ನಲಾದ ಮಾಹಿತಿಗಳ ಪ್ರಕಾರ ಮುಸಲ್ಮಾನರು ಎರಡನೇ
ದೊಡ್ಡ ಸಮುದಾಯವಾದರೆ, ಹಲವು ಪ್ರಶ್ನೆಗಳಿಗೆ ಉತ್ತರಿಸ ಬೇಕಾದ ಸಮಯ ಬಂದಿದೆ. ಮೊಟ್ಟ ಮೊದಲನೆಯದಾಗಿ ಇಸ್ಲಾಂ ಒಂದು ಜಾತಿಯಲ್ಲ, ಒಂದು ಧರ್ಮ. ಇಸ್ಲಾಂ ಧರ್ಮದೊಳಗೆ ನೂರಾರು ಜಾತಿಗಳಿವೆ- ಪಠಾಣ್, ಶೇಖ್, ಖಾನ್, ಮಿರ್ಜಾ, ಅನ್ಸಾರಿ, ಚಿಕ್ವಾ, ಡರ್ಜಿ, ಇದ್ರಿಸಿ, ಖುರೈಷಿ, ಭತ್ಯರಾ, -ಖಿರ್, ದ-ಲಿ, ರಾಂಕಿ, ರಂಗ್ರೇಜ್, ಬಾಕೊ, ಭಿಷ್ಟಿ ಇತ್ಯಾದಿ. ಮುಸಲ್ಮಾನರ ಒಳಪಂಗಡಗಳನ್ನು ಪಟ್ಟಿ ಮಾಡುತ್ತಾ ಹೋದರೆ ಆಂಜನೇಯನ ಬಾಲದ
ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ.

ಸಂವಿಧಾನದಲ್ಲಿ ಜಾತಿ ಆಧರಿತ ಮೀಸಲಾತಿಗೆ ಅವಕಾಶವಿದೆಯೇ ಹೊರತು, ಧರ್ಮ ಆಧರಿತ ಮೀಸಲಾತಿಗೆ ಅವಕಾಶವಿಲ್ಲ. ಸೋರಿಕೆಯಾಗಿದೆಯೆಂದು ಹೇಳಲಾಗುತ್ತಿರುವ ವರದಿಯ ಪ್ರಕಾರ ಇಸ್ಲಾಂ ಧರ್ಮ ಎರಡನೇ ದೊಡ್ಡ ಸಮುದಾಯವಿರಬಹುದು. ಆದರೆ ಆ ಧರ್ಮದಲ್ಲಿರುವ ಅನೇಕ ಜಾತಿಗಳ
ಆರ್ಥಿಕ ಸಮೀಕ್ಷೆಯ ಬಗ್ಗೆ ಉಲ್ಲೇಖವಿಲ್ಲ. ಅದರ ಸಾಮಾನ್ಯ ವರ್ಗ, ಹಿಂದುಳಿದ ವರ್ಗ ಮತ್ತು ದಲಿತರ ಜನಸಂಖ್ಯೆಯ ಬಗ್ಗೆ ಎಲ್ಲಿಯೂ ಉಲ್ಲೇಖ ವಾಗಿಲ್ಲ.

ಜಾತಿ ಜಾತಿಗಳಲ್ಲಿ ಒಡೆದು ಹೋಗಿದೆಯೆಂದು ಹಿಂದೂ ಧರ್ಮವನ್ನು ಅಣಕಿಸುವವರು ಇಸ್ಲಾಂ ಧರ್ಮದಲ್ಲಿರುವ ನೂರಾರು ಜಾತಿಗಳ ಬಗ್ಗೆ ಮಾತನಾಡಬೇಕು. ಮುಸ್ಲಿಮರನ್ನು ಮತಬ್ಯಾಂಕಿಗಾಗಿ ಬಳಸುತ್ತಿರುವವರು ಪದೇ ಪದೆ ಅವರನ್ನು ಅಲ್ಪಸಂಖ್ಯಾತರೆಂದು ಕರೆಯುತ್ತಾರೆ. ಅಲ್ಪಸಂಖ್ಯಾ ತರ ಹೆಸರಿನಲ್ಲಿ ರಾಜಕೀಯ ಮಾಡಿ ಸರಕಾರಗಳು ಅನೇಕ ಯೋಜನೆಗಳನ್ನು ಅವರ ಕಲ್ಯಾಣಕ್ಕಾಗಿ ಜಾರಿಗೆ ತಂದಿವೆ. ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಕೇಳಿಬರುತ್ತಿರುವ ಆರ್ಥಿಕ ಸಮೀಕ್ಷಾ ವರದಿಗಳನ್ನು ಗಮನಿಸಿದರೆ ಮುಸಲ್ಮಾನರು ಅಲ್ಪಸಂಖ್ಯಾತರಾಗಿ ಉಳಿದಿಲ್ಲ.

ಭಾರತದ ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ.೧೨ಕ್ಕೆ ತಲುಪಿದೆಯೆಂದು ಹೇಳಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಅವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ಅವರನ್ನು ಅಲ್ಪ ಸಂಖ್ಯಾತರೆಂದು ಯಾಕೆ ಕರೆಯಬೇಕೆಂಬ ಚರ್ಚೆ ಶುರುವಾಗಿದೆ. ಮುಸಲ್ಮಾನರನ್ನು ಹೊರತುಪಡಿಸಿ ಹಲವಾರು ಅಲ್ಪ ಸಂಖ್ಯಾತರಿದ್ದಾರೆ. ಆದರೆ ಅವರ‍್ಯಾರೂ ಇವರಿಗೆ ಹೆಚ್ಚಾಗಿ ನೆನಪಿಗೆ ಬರುವುದಿಲ್ಲ. ಪಾರ್ಸಿಗಳ ಬಗ್ಗೆ ರಾಜ ಕಾರಣಿಗಳು ಎಂದೂ ಮಾತನಾಡುವುದಿಲ್ಲ, ಜೈನರ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಇವರ‍್ಯಾರದ್ದೂ ಹೆಚ್ಚಿನ ವೋಟ್‌ಬ್ಯಾಂಕ್ ಇಲ್ಲ.

ಮುಸಲ್ಮಾನರು ಅಲ್ಪಸಂಖ್ಯಾತ ರೆಂದು ಕರೆಸಿಕೊಂಡರೂ ಅವರ ಸಂಖ್ಯೆ ಇವರೆಲ್ಲರಿಗಿಂತಲೂ ಹೆಚ್ಚಿದೆ. ಆದರೂ ಅವರನ್ನು ಮಾತ್ರ ಅಲ್ಪಸಂಖ್ಯಾತ ರೆಂದು ಕರೆಯುತ್ತಾರೆ. ಬಾಲಿವುಡ್‌ನ ಮೂವರು ಖಾನ್‌ಗಳು ಮುಸಲ್ಮಾನರೇ; ಅಲ್ಪಸಂಖ್ಯಾತ ಧರ್ಮವನ್ನು ಪ್ರತಿನಿಧಿಸುವ ಇವರು ವರ್ಷಕ್ಕೆ ಸಾವಿರಾರು ಕೋಟಿಯ ವ್ಯವಹಾರವನ್ನು ಮಾಡುತ್ತಿದ್ದಾರೆ. ಇಷ್ಟೊಂದು ವ್ಯವಹಾರ ಮಾಡಿದರೂ ಇವರನ್ನು ಅಲ್ಪಸಂಖ್ಯಾತರೆಂದು ಕರೆಯುವುದು ವಿಪರ್ಯಾಸದ ಪರಮಾವಧಿ. ೧೯೪೭ರಲ್ಲಿ ಅಖಂಡ ಭಾರತದ ವಿಭಜನೆಯಾದಾಗ, ಪಾಕಿಸ್ತಾನಕ್ಕೆ ಹೋದ ಹಿಂದೂಗಳು ಇಂದಿಗೂ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಅಲ್ಲಿನ ಸರಕಾರ ಯಾವ ಸವಲತ್ತುಗಳನ್ನೂ ನೀಡುತ್ತಿಲ್ಲ. ಅವರನ್ನು ಎಷ್ಟು ಕೆಟ್ಟದಾಗಿ ನೋಡಿಕೊಳ್ಳುತ್ತಿದೆಯೆಂದರೆ ಪಾಕಿಸ್ತಾನದಲ್ಲಿ ನಮ್ಮ ಹಿಂದೂಗಳಿಗೆ ಸರಿಯಾದ ನೆಲೆಯಿಲ್ಲ.

ಬಾಯಿಬಿಟ್ಟು ಸರಕಾರದ ವಿರುದ್ಧ ಒಂದು ಮಾತನ್ನೂ ಆಡುವಂತಿಲ್ಲ. ತಮ್ಮ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಬಹಿರಂಗವಾಗಿ ಹೇಳಿಕೆಯನ್ನು ಕೊಡುವಂತಿಲ್ಲ. ಇಲ್ಲಿಯ ರೀತಿಯಲ್ಲಿ ಅಲ್ಲಿನ ಅಲ್ಪಸಂಖ್ಯಾತರನ್ನು ಹಿಂದೂ ದೇವಸ್ಥಾನ ಗಳಿಗೆ ಕಳುಹಿಸುವ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ.
ವ್ಯವಸ್ಥೆ ಬಿಡಿ, ಪಾಕಿಸ್ತಾನದಲ್ಲಿನ ಸಾವಿರಾರು ದೇವಸ್ಥಾನ ಗಳನ್ನು ಸರಕಾರಿ ಪ್ರಾಯೋಜಿತರೇ ನಾಶಮಾಡಿದ್ದಾರೆ. ಚೀನಾ ದೇಶ ಅಲ್ಪಸಂಖ್ಯಾತ ಮುಸಲ್ಮಾನರನ್ನು ಎಷ್ಟು ಹೀನಾಯವಾಗಿ ನೋಡಿಕೊಳ್ಳುತ್ತದೆಯೆಂದರೆ, ಅಲ್ಲಿ ಮಸೀದಿಯೊಂದನ್ನು ನಾಶ ಮಾಡಿ ಅದರ ಮೇಲೆ ಸಿನಿಮಾ ಥಿಯೇಟರ್ ಕಟ್ಟಿದ್ದಾರೆ. ಸರಕಾರದ ವಿರುದ್ಧ ತಿರುಗಿಬಿದ್ದ ಅಲ್ಪಸಂಖ್ಯಾತರನ್ನು ನೇಣಿಗೆ ಹಾಕಲಾಗುತ್ತದೆ. ಇಷ್ಟೆಲ್ಲಾ ಹೀನಾಯವಾಗಿ ನೋಡಿಕೊಳ್ಳುವ ಚೀನಾ ದೇಶದ ಪರವಾಗಿ ಹಲವು ಮುಸಲ್ಮಾನ್ ನಾಯಕರು ಮಾತನಾಡಿದ್ದಾರೆ.

ದೇಶದಲ್ಲಿರುವ ಇಪ್ಪತ್ತು ಕೋಟಿ ಮುಸಲ್ಮಾನ ಅಲ್ಪಸಂಖ್ಯಾತರ ಮತಬ್ಯಾಂಕಿಗಾಗಿ ದೊಡ್ಡ ದೊಡ್ಡ ರಾಜಕಾರಣಿಗಳು ಅದ್ಯಾವ ರೀತಿಯ ನಾಟಕವಾಡುತ್ತಾರೆಂದರೆ, ಅವರು ಮಾಡುವ ತಪ್ಪುಗಳನ್ನು ಒಪ್ಪಲು ತಯಾರಿರುವುದಿಲ್ಲ. ಅಲ್ಪಸಂಖ್ಯಾತರು ಮಾಡಿದ್ದೇ ಸರಿಯೆಂಬಂತೆ ಅವರ
ಪರವಾಗಿ ನಿಲ್ಲುತ್ತಾರೆ. ಕಮ್ಯುನಿಸ್ಟರಂತೂ ಅಲ್ಪಸಂಖ್ಯಾತ ರನ್ನು ಉದ್ಧಾರ ಮಾಡಲು ಆಕಾಶದಿಂದ ಇಳಿದು ಬಂದಿರು ವವರಂತೆ ಬೀಗುತ್ತಾರೆ. ಓಲೈಕೆಯ ರಾಜಕಾರಣವು ಶುರು ವಾದದ್ದೇ ಅಲ್ಪಸಂಖ್ಯಾತರಿಂದ. ಅವರಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಕಾಂಗ್ರೆಸ್ ಪಕ್ಷ ತುದಿಗಾಲಿನಲ್ಲಿ
ನಿಂತಿರುತ್ತದೆ. ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಅಲ್ಪಸಂಖ್ಯಾತರಿಗೆ ಬೇಕಿರುವ ಶಿಕ್ಷಣ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.

ಇವರಿಗೆ ಸರಿಯಾದ ಶಿಕ್ಷಣ ನೀಡಿದರೆ ತಮ್ಮ ಮಾತು ಕೇಳುವುದಿಲ್ಲವೆಂದು ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು, ಹಾಗಾಗಿ ಇವರಿಗೆ ಸರಿಯಾದ ಶಿಕ್ಷಣ ನೀಡಲಿಲ್ಲ. ಅಬ್ದುಲ್ ಕಲಾಂರಂಥವರು ಅಲ್ಪಸಂಖ್ಯಾತರಾಗಿದ್ದುಕೊಂಡು ಭಾರತದ ದೊಡ್ಡ ವಿಜ್ಞಾನಿಯಾದರು. ಇಂಥ ಮಹಾನ್ ನಾಯಕನನ್ನು ಆದರ್ಶ ವ್ಯಕ್ತಿಯಾಗಿ ಸ್ವೀಕರಿಸುವ ಮುಸಲ್ಮಾನರು ಕೆಲವೇ ಮಂದಿ. ಅಬ್ದುಲ್ ಕಲಾಂ ಎಂದೂ ಅಲ್ಪಸಂಖ್ಯಾತ ಕೋಟಾ ದಡಿಯಲ್ಲಿ ವಿಜ್ಞಾನಿಯಾಗಲಿಲ್ಲ; ಮನೆ ಮನೆಗೆ ಪೇಪರ್ ಹಾಕಿ ಕಷ್ಟ ಪಟ್ಟು ಓದಿ ಇಸ್ರೋ ಸಂಸ್ಥೆಯನ್ನು ಸೇರಿ ಇಡೀ ದೇಶವೇ ಮೆಚ್ಚಿದಂಥ ವಿಜ್ಞಾನಿಯಾದರು.

‘ಇಂಥ ಮಹಾನ್ ಸಾಧಕರನ್ನು ಆದರ್ಶವಾಗಿ ಸ್ವೀಕರಿಸಿ’ ಎಂಬುದಾಗಿ ಅಲ್ಪ ಸಂಖ್ಯಾತರನ್ನು ಪ್ರತಿನಿಽಸುವ ನಾಯಕರು ಮುಸ್ಲಿಂ ಯುವಕರಿಗೆ ಎಂದಾದರೂ ಹೇಳಿದ್ದಾರೆಯೇ? ಅಲ್ಪ ಸಂಖ್ಯಾತರು ದೇವರ ಮತ್ತು ಧರ್ಮದ ಹೆಸರಿನಲ್ಲಿ ಮಾಡುವ ರಾಜಕೀಯಕ್ಕೆ ಬೆಂಬಲ, ಅಲ್ಪಸಂಖ್ಯಾತರು
ಹಬ್ಬಗಳ ಆಚರಣೆಗಳ ಹೆಸರಿನಲ್ಲಿ ಮಾಡುವ ರಾಜಕೀಯಕ್ಕೆ ಬೆಂಬಲ, ಒಟ್ಟಿನಲ್ಲಿ ಅವರು ಏನು ಮಾಡಿದರೂ ಸರಿಯೆಂಬ ಸಂದೇಶ ನೀಡುವ ಮೂಲಕ ಬಹುಸಂಖ್ಯಾತರಿಗೆ ಭಾರತ ದಲ್ಲಿ ಭಯ ಹುಟ್ಟಿಸಲಾಗುತ್ತದೆ.

ಮಧ್ಯಪ್ರಾಚ್ಯದಲ್ಲಿ ಬರುವ ಇಸ್ರೇಲ್ ದೇಶದ ಯೆಹೂದಿಗಳು ಇಡೀ ಪ್ರಾಂತ್ಯದಲ್ಲೇ ಅತ್ಯಲ್ಪಸಂಖ್ಯಾತರು. ಇಂಥ ಯೆಹೂದಿಗಳ ಸುತ್ತಲೂ ಇರುವ ಮುಸ್ಲಿಂ ದೇಶಗಳು ಅವರ ವಿರುದ್ಧ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿರುತ್ತವೆ. ಭಾರತದಲ್ಲಿ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಮುಸಲ್ಮಾನರಿಗೆ ಇಸ್ರೇಲಿನ ಯೆಹೂದಿಗಳ ಮೇಲೆ ಯಾಕೆ ಕರುಣೆಯಿಲ್ಲ? ಭಾರತದ ಎಷ್ಟು ಮುಸಲ್ಮಾನ್ ನಾಯಕರು, ಮುಲ್ಲಾಗಳು ಯೆಹೂದಿಗಳ ಪರವಾಗಿ ಮಾತನಾಡಿದ್ದಾರೆ? ಅವರಿಗಿಂತಲೂ ಹೆಚ್ಚಿನ ಶೋಷಣೆಗೊಳಗಾದವರೇ ಭಾರತದ ಮುಸಲ್ಮಾನರು? ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತ ರನ್ನು ಹೀನಾಯವಾಗಿ ನೋಡಿ ಕೊಳ್ಳುತ್ತಿದ್ದರೂ ಇವರಿಗೆ ನೋವಿರುವುದಿಲ್ಲ, ಅತ್ಯಲ್ಪ ಸಂಖ್ಯಾತರಾದ ಯೆಹೂದಿಗಳ ಮೇಲೆ ಇವರದ್ದೇ ಮುಸ್ಲಿಂ
ದೇಶಗಳು ಯುದ್ಧ ಮಾಡಹೊರಟರೂ ಇವರಿಗೆ ನೋವಿರುವುದಿಲ್ಲ.

ಭಾರತದಂಥ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಗೆಂದೇ ಪ್ರತ್ಯೇಕ ಯೋಜನೆಗಳನ್ನು ನೀಡಿ ಚೆನ್ನಾಗಿ ನೋಡಿಕೊಂಡರೂ ಇವರಿಗೆ ಭಾರತದ ಮೇಲೆ ವ್ಯಾಮೋಹ ಕಡಿಮೆ. ಸರಕಾರಗಳು ನೀಡುವ ಬಡವರ ಪರ ಯೋಜನೆಗಳಲ್ಲಿ ಅತಿ ಹೆಚ್ಚಿನ ಫಲಾನುಭವಿಗಳು ಅಲ್ಪಸಂಖ್ಯಾತ ಮುಸಲ್ಮಾನರು.
ಅವರಿಗೆ ಯಾವ ಸರಕಾರವು ತಮಗೆ ಯೋಜನೆಗಳನ್ನು ನೀಡುತ್ತಿದೆಯೆಂಬ ತಿಳಿವಳಿಕೆಯು ಇರುವುದಿಲ್ಲ. ಆದರೆ ಸರಕಾರದ ಎಲ್ಲಾ ಯೋಜನೆಗಳೂ ಬೇಕೇ ಬೇಕು. ಮತ ಬ್ಯಾಂಕ್‌ನಿಂದ ಶುರುವಾದ ಅಲ್ಪಸಂಖ್ಯಾತ ಮುಸಲ್ಮಾನರ ರಾಜಕೀಯ ದಿನಗಳೆದಂತೆ ಬೇರೆಯದ್ದೇ ರೂಪ ಪಡೆದು ಕೊಳ್ಳುತ್ತಿದೆ.

ಮೊದಮೊದಲು ಸರಕಾರದ ವಿವಿಧ ಯೋಜನೆ ಗಳ ಮೂಲಕ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದ ಕಾಂಗ್ರೆಸ್‌ನಂಥ ರಾಜಕೀಯ ಪಕ್ಷಗಳು, ಈಗ ಯಾವ ಮಟ್ಟಕ್ಕಿಳಿದಿವೆಯೆಂದರೆ ಅಲ್ಪಸಂಖ್ಯಾತರು ಮಾಡಿದ್ದೆಲ್ಲ ವನ್ನೂ ಸರಿಯೆಂದು ರಾಜಾರೋಷವಾಗಿ ಹೇಳಲು ಶುರು ಮಾಡಿವೆ. ಪೊಲೀಸ್ ಸ್ಟೇಷನ್ ಸುಟ್ಟರೆ ಅದಕ್ಕೊಂದು ಕೋಮುಗಲಭೆಯ ಬಣ್ಣ ಕಟ್ಟುತ್ತಾರೆ. ಅವರ ಮೇಲೆ ದೂರುನೀಡಲು ಮುಂದೆ ಬರುವುದಿಲ್ಲ. ಪೌರತ್ವ ತಿದ್ದುಪಡಿ
ಕಾಯ್ದೆಯ ವಿಚಾರದಲ್ಲಿ ದೇಶದಾದ್ಯಂತ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಈ ಸುದ್ದಿಗಳನ್ನು ನಂಬಿಕೊಂಡು ಅಲ್ಪಸಂಖ್ಯಾತರು ಬೀದಿಗಿಳಿದು ಸರಕಾರದ ವಿರುದ್ಧ ಹೋರಾಡುತ್ತಾರೆ.

ಕೊನೆಯಲ್ಲಿ ಅವರನ್ನು ಅನಕ್ಷರಸ್ಥರೆಂದು ಹೇಳಿ ಅವರ ಪರವಾಗಿ ನಿಲ್ಲುತ್ತಾರೆ. ಮಿತಿಮೀರಿದ ರಾಜಕೀಯ ದುರುದ್ದೇಶಗಳಿಗೆ ಇವರ ಹೆಸರನ್ನು ಬಳಸಿಕೊಂಡು ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಕಟ್ಟಿ ರಕ್ಷಿಸಲಾಗುತ್ತಿದೆ. ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ನಿಜವಾಗಿಯೂ ತೊಂದರೆಗೊಳ ಗಾಗುತ್ತಿರುವವನು ಹಿಂದೂ ಧರ್ಮದವನೇ ಹೊರತು ಮುಸಲ್ಮಾನನಲ್ಲ. ಮುಸಲ್ಮಾನರ ಜನಸಂಖ್ಯೆಯ ನ್ನಾಧರಿಸಿ ಅವರನ್ನು ನಿಜವಾಗಿಯೂ ಅಲ್ಪಸಂಖ್ಯಾತರೆಂದು ಕರೆಯಬೇಕೆ? ಎಂಬ ಚರ್ಚೆಯಾಗಬೇಕಿದೆ.