ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಕಾಲ ಆರಂಭದಲ್ಲೇ ಅನಧಿಕೃತವಾಗಿ ವಿದ್ಯುತ್ ಕಡಿತದ ಕಾಟ ಶುರುವಾಗಿದೆ
ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದ್ದು, ಈ ವರ್ಷ ಗರಿಷ್ಠ 8,128 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಮಾಡಿದ್ದಾರೆ ಎನ್ನಲಾ ಗಿದ್ದು, ಇದು ಬಿಸಿಲಿನಿಂದ ಜನತೆ ತಮ್ಮನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫ್ಯಾನ್, ಎಸಿ, ಫ್ರಿಡ್ಜ್ ಬಳಕೆಯನ್ನು ಹೆಚ್ಚು ಬಳಕೆ ಮಾಡುತ್ತಿರುವುದನ್ನು ತೋರಿಸಿದೆ.
ಪ್ರತಿದಿನ 200 ರಿಂದ 250 ದಶಲಕ್ಷ ಯೂನಿಟ್ ನಷ್ಟಿದ್ದ ಬೇಡಿಕೆ 323 ದಶ ಲಕ್ಷಕ್ಕೆ ಹೆಚ್ಚಳವಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿನ ಜಲಶಾಯಗಳು ಕೂಡ ಬರಿದಾಗಿದ್ದು, ವಿದ್ಯುತ್ ಉತ್ಪದನದ ಮೇಲೆ ಕೂಡ ಗಂಭೀರ ಪರಿಣಾಮ ಬೀರಿದೆ.